Breaking News

Breaking News

ಪಾಕ್ ಪರ ಬೇಹುಗಾರಿಕೆ: ಗುಜರಾತ್ ಆರೋಗ್ಯ ಕಾರ್ಯಕರ್ತನ ಬಂಧನ!!

ಗುಜರಾತ್ ಭಯೋತ್ಪಾದನಾ ನಿಗ್ರಹ ಪಡೆ(ಎಟಿಎಸ್), ಪಾಕಿಸ್ತಾನ ಪರ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಸೂಕ್ಷ್ಮ ಗಡಿ ಜಿಲ್ಲೆಯಾದ ಕಚ್‌ನ ಆರೋಗ್ಯ ಕಾರ್ಯಕರ್ತನನ್ನು ಬಂಧಿಸಿದೆ.ಇದರೊಂದಿಗೆ ಕೇವಲ ಎಂಟು ತಿಂಗಳಲ್ಲಿ ಗುಜರಾತ್‌ನಲ್ಲಿ ಮೂರನೇ ಉನ್ನತ ಮಟ್ಟದ ಗೂಢಚಾರ ಬಂಧನ ಇದಾಗಿದ್ದು, ರಾಷ್ಟ್ರೀಯ ಭದ್ರತಾ ಸಂಸ್ಥೆಗಳನ್ನು ಆತಂಕಕ್ಕೀಡು ಮಾಡಿದೆ.ಇತ್ತೀಚೆಗೆ ಪೂರ್ಣಗೊಂಡ ಮಿಲಿಟರಿ ಸೌಲಭ್ಯಗಳ ಚಿತ್ರಗಳು ಸೇರಿದಂತೆ ಸೂಕ್ಷ್ಮ ವಿಷಯಗಳನ್ನು ಸೋರಿಕೆ ಮಾಡಲು ತರಬೇತಿ ನೀಡಲಾಗಿದೆ ಎಂದು ಎಟಿಎಸ್ ಪ್ರಕಟಣೆಯಲ್ಲಿ ತಿಳಿಸಿದೆ.

Read More »

ಗ್ರಾಹಕರ ಆಯೋಗದಿಂದ ಮಂಜುನಾಥನ ಶನಿದೋಷ ಪರಿಹಾರ: ಹುಬ್ಬಳ್ಳಿಯಲ್ಲಿ ವನಹಳ್ಳಿ ವನವಾಸ ಅಂತ್ಯ!!

ಡೆವಲಪರ್ ಜೊತೆ ಹೋರಾಟದಲ್ಲಿ ಜಯಸಿದ ಮಂಜುನಾಥ... ಬಡವರ ಕಣ್ಣನೀರು ಒರೆಸುವ ಪೊಲೀಸ್ ಈ ಮಂಜುನಾಥ…. ಸತ್ಯವಂತರಿಗೆ ನ್ಯಾಯ ಯಾವತ್ತು ಕೈ ಬಿಡಲ್ಲ ಅನ್ನೊದಕ್ಕೆ ಈ ಪ್ರಕರಣ ಸಾಕ್ಷಿ….. ಹುಬ್ಬಳ್ಳಿ : ಪೊಲೀಸ್ ಪೇದೆಗೆ ನ್ಯಾಯ ಒದಗಿಸಿದ “ಗ್ರಾಹಕರ ಆಯೋಗ” .ಹುಬ್ಬಳ್ಳಿಯಲ್ಲಿ ಪೋಲೀಸ ಪೇದೆಯಾಗಿ ಕೆಲಸ ಮಾಡುತ್ತಿರುವ ಮಂಜುನಾಥ ವನಹಳ್ಳಿಯವರು 2022ರಲ್ಲಿ ಹುಬ್ಬಳ್ಳಿಯ ಅಮರಗೋಳದಲ್ಲಿ ರಾಜೇಶ್ವರಿ ಡೆವಲೆಪರ್ಸರವರಿಂದ ರೂ.13,37,462 ಗೆ ಸೈಟ್ ಖರೀದಿಸಿದ್ದರು. ಎನ್.ಎ ವಗೈರಾ ಆದ ಮೇಲೆ ಅಪೋಸಿಟ್ ಪಾರ್ಟಿ …

Read More »

ಬಾಗಲಕೋಟ :ಬಾಯ್ಲರ್ ಸ್ಫೋಟಗೊಂಡು ಕಾರ್ಮಿಕ ಸ್ಥಳದಲ್ಲೇ ಸಾವು.!

ಅಡುಗೆ ಎಣ್ಣೆ ಮಿಲ್ ನಲ್ಲಿ ಬಾಯ್ಲರ್ ಸ್ಫೋಟಗೊಂಡು ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ.ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ರಫಿಕ್ ಸೈಯದ್ ಕುಡುಚಿ (35) ಮೃತಪಟ್ಟಿದ್ದಾರೆ.ಜಮಖಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Read More »

ಮಂಡ್ಯ: ಮನೆ ಕಳ್ಳತನ ₹48 ಲಕ್ಷ ಮೌಲ್ಯದ ಚಿನ್ನಾಭರಣ ವಶ.

ಮಹಿಳೆಯರಿಂದ ಚಿನ್ನಾಭರಣ ದೋಚಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಅಂದಾಜು ₹48 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು, ಕಾರು, ಸ್ಕೂಟರ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ವಿಜಯನಗರದ ಜೆ.ಸಯ್ಯದ್‌ ಅಹಮದ್‌ (43) ಮತ್ತು ಬೆಂಗಳೂರಿನ ಕೆ.ಆರ್‌.ಪುರಂ, ದೇವಸಂದ್ರದ ತಸ್ಲೀಂ ಪಾಷಾ (43) ಈ ಇಬ್ಬರನ್ನು ಮಳವಳ್ಳಿ ಗ್ರಾಮಾಂತರ ಠಾಣೆಯ …

Read More »

ಬೆಳ್ತಂಗಡಿ :ಠೇವಣಿ ಇಟ್ಟಿದ್ದ 40 ಕೋಟಿ ರೂ. ನಷ್ಟು ಹಣ ವಾಪಸ್‌ ನೀಡದೆ ವಂಚನೆ!

ಸಂತೆಕಟ್ಟೆ ಸಮೀಪ ಮುಖ್ಯ ಶಾಖೆ ಹೊಂದಿರುವ ಶ್ರೀ ರಾಮ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಸುಮಾರು 40 ಕೋಟಿ ರೂ. ನಷ್ಟು ಹಣವನ್ನು ವಾಪಸ್‌ ನೀಡದೆ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು. ಈ ಬಗ್ಗೆ 2021ರಿಂದ 2024ರ ವರೆಗೆ ಸೊಸೈಟಿಯಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದ 14 ಜನರ ಮೇಲೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೊಡ್ಡ ಮೊತ್ತದ ಹಗರಣ ವಾಗಿರುವ ಕಾರಣ ತನಿಖೆಯ ಹೊಣೆಗಾರಿಕೆ ಸಿಐಡಿ ವಿಭಾಗಕ್ಕೆ …

Read More »

ಬೆಂಗಳೂರು : ಪತ್ನಿಯ ಮೇಲೆ ಟಾಯ್ಲೆಟ್ ಆಸಿಡ್ ಸುರಿದ ಪತಿ!!

ಫೋನ್ ವಾಲ್ಯೂಮ್ ಕಡಿಮೆ ಮಾಡಲು ಹೇಳಿದ್ದಕ್ಕೆ ಕುಡಿದ ಮತ್ತಿನಲ್ಲಿದ್ದ ಗಂಡನ ಮೇಲೆ ಮಹಿಳೆಯೊಬ್ಬಳ ಸುರಿದ ಘಟನೆ ಮೇ 19 ರಂದು ನಡೆದಿದ್ದು, ಬೆಂಗಳೂರಿನ ಎನ್‌ಎಂಎಚ್ ಲೇಔಟ್ ಪ್ರದೇಶದಲ್ಲಿ ನಡೆದಿತ್ತು.ಸಂತ್ರಸ್ತೆ ನೋವಿನಿಂದ ಕಿರುಚಿದಾಗ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ನೆರೆಹೊರೆಯವರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಯ ಪತಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ‘ವಿವರವಾದ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲೇ …

Read More »

ಬೈಂದೂರು: 200 ಚೀಲ ಅಡಿಕೆ ಕಳವು!

ಮಸೂದ್ ಪಟೇಲ್ ಎಂಬವರು ಸುಮಾರು 200 ಚೀಲ ಒಣಗಿಸಿದ ಸಿಪ್ಪೆಅಡಿಕೆಯನ್ನು ಪ್ಯಾಸ್ಟಿಕ್ ಚೀಲದಲ್ಲಿ ಹಾಕಿ ಚೀಲ ಮಾಡಿ ಗೋಡೌನ್‌ನಲ್ಲಿ ಇಟ್ಟಿದ್ದು, ಮೇ 15ರಿಂದ ಮೇ 22ರ ಮಧ್ಯಾವದಿಯಲ್ಲಿ ಗೋಡೌನ್ ಬೀಗ ಮುರಿದು ಒಳನುಗ್ಗಿದ ಕಳ್ಳರು, 200 ಚೀಲ ಒಣಗಿಸಿದ ಸಿಪ್ಪೆಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ದಾವಣಗೆರೆ :ಬಸ್‌ ಪಲ್ಟಿ; 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ!!

ಹುಲಿಕಟ್ಟಿ ಗ್ರಾಮದ ಬಳಿ ಸಾರಿಗೆ ಬಸ್‌ ಪಲ್ಟಿ ಹೊಡೆದು 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್‌ ದಾವಣಗೆರೆಯಿಂದ ಹಾಲೇಕಲ್ ಗ್ರಾಮಕ್ಕೆ ಸಂಚರಿಸುತ್ತಿತ್ತು.ಗಾಯಾಳುಗಳನ್ನು ಅಣಜಿ ಆಸ್ಪತ್ರೆ, ಜಿಲ್ಲಾ ಚಿಗಟೇರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

Read More »

ಹಾಸನ: ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು!

ಬೇಸಿಗೆ ರಜೆ ಕಳೆಯಲು ಸಹೋದರರಾದ ಯಶ್ವಂತ್, ನೂತನ್ ಹಾಗೂ ಚಿಕ್ಕಪ್ಪನ ಮಗ ಬೀರೇಶ್, ಪಕ್ಕದ ಅಣತಿ ಗ್ರಾಮದ ಕೆರೆಗೆ ಈಜಲು ತೆರಳಿದ್ದರು.ಆಳವಾದ ಕೆರೆಗೆ ಇಳಿಯುತ್ತಿದ್ದಂತೆ ನೂತನ್ ಹಾಗೂ ಬೀರೇಶ್ ಮುಳುಗಿದ್ದಾರೆ. ಯಶ್ವಂತ್‌ಗೆ ಈಜು ಬಾರದ ಕಾರಣ, ಕಣ್ಣೆದೆರು ಅವರು ಮುಳುಗುತ್ತಿದ್ದರೂ ರಕ್ಷಿಸಲು ಸಾಧ್ಯವಾಗಿಲ್ಲ.ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಮೃತದೇಹಗಳನ್ನು ಹೊರತೆಗೆದರು. ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ನುಗ್ಗೇಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

Read More »

ಹೈದ್ರಾಬಾದ್ :ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ!

ಪೋಷಕರೊಂದಿಗೆ ಬಾಲಕಿ ಸಂಬಂಧಿಕರ ಮನೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದಾಗ ಆಕೆಯನ್ನು ನಂಬಿಸಿ ಕರೆದೊಯ್ದ ದುರುಳ, ಅತ್ಯಾಚಾರವೆಸಗಿ ಬಳಿಕ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ.ಪೋಷಕರು ಬಾಲಕಿ ಕಾಣದಿದ್ದಾಗ ಆತಂಕಗೊಂಡು ಹುಡುಕಾಟ ನಡೆಸಿದಾಗ ಮನೆಯಬಳಿ ಪೊದೆಯಲ್ಲಿ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಪ್ರಕರಣ ಸಂಬಂಧ ರಹಮತ್ ಉಲ್ಲಾ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.

Read More »