ಡೆವಲಪರ್ ಜೊತೆ ಹೋರಾಟದಲ್ಲಿ ಜಯಸಿದ ಮಂಜುನಾಥ...
ಬಡವರ ಕಣ್ಣನೀರು ಒರೆಸುವ ಪೊಲೀಸ್ ಈ ಮಂಜುನಾಥ….
ಸತ್ಯವಂತರಿಗೆ ನ್ಯಾಯ ಯಾವತ್ತು ಕೈ ಬಿಡಲ್ಲ ಅನ್ನೊದಕ್ಕೆ ಈ ಪ್ರಕರಣ ಸಾಕ್ಷಿ…..
ಹುಬ್ಬಳ್ಳಿ : ಪೊಲೀಸ್ ಪೇದೆಗೆ ನ್ಯಾಯ ಒದಗಿಸಿದ “ಗ್ರಾಹಕರ ಆಯೋಗ” .ಹುಬ್ಬಳ್ಳಿಯಲ್ಲಿ ಪೋಲೀಸ ಪೇದೆಯಾಗಿ ಕೆಲಸ ಮಾಡುತ್ತಿರುವ ಮಂಜುನಾಥ ವನಹಳ್ಳಿಯವರು 2022ರಲ್ಲಿ ಹುಬ್ಬಳ್ಳಿಯ ಅಮರಗೋಳದಲ್ಲಿ ರಾಜೇಶ್ವರಿ ಡೆವಲೆಪರ್ಸರವರಿಂದ ರೂ.13,37,462 ಗೆ ಸೈಟ್ ಖರೀದಿಸಿದ್ದರು. ಎನ್.ಎ ವಗೈರಾ ಆದ ಮೇಲೆ ಅಪೋಸಿಟ್ ಪಾರ್ಟಿ ಡೆವಲಪರ ದೂರುದಾರರಿಗೆ ಖರೀದಿ ಕ್ರಯ ಪತ್ರ ನೋಂದಣಿ ಮಾಡಿ ಕೊಡದೇ ಅವರು ಕೊಟ್ಟಿದ್ದ ರೂ.6,60,000 ಹಣವನ್ನು ದೂರುದಾರರಿಗೆ ಹಿಂದಿರುಗಿಸಿದ್ದರು. ಅಪೋಸಿಟ್ ಪಾರ್ಟಿ, ಡೆವಲಪರರವರ ತನಗೆ ಎದುರುದಾರರಿಂದ

ಸೈಟ್ ಖರೀದಿ ಮಾಡಿಸಿಕೊಟ್ಟು ನ್ಯಾಯ ಒದಗಿಸುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ.05/03/2024 ರಂದು ದೂರನ್ನು ಸಲ್ಲಿಸಿದ್ದರು. ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರನಿಂದ ರೂ.6,60,000 ಮುಂಗಡ ಹಣ ಪಡೆದುಕೊಂಡರು. ಆದರೆ ಅಪೋಸಿಟ್ ಪಾರ್ಟಿ ಡೆವಲಪರರವರು ದೂರುದಾರರಿಗೆ ಕ್ರಯ ಪತ್ರ ನೋಂದಣಿ ಮಾಡಿಕೊಡದೇ ಅವರ ಮುಂಗಡ ಹಣವನ್ನು ವಾಪಸ್ಸು ಕೊಟ್ಟಿರುವುದು ಗ್ರಾಹಕರ ರಕ್ಷಣಾ ಕಾಯಿದೆಯಡಿ ಹೌಸಿಂಗ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ತೀರ್ಪು ನೀಡಿದ 15 ದಿವಸದೊಳಗಾಗಿ ಡೆವಲಪರ ದೂರುದಾರರಿಗೆ ಖರೀದಿ ಒಪ್ಪಂದದ ಪ್ಲಾಟ್‍ನಂ.24 ನ್ನು ನೊಂದಣಿ ಮಾಡಿಕೋಡಬೇಕು. ಆ ರೀತಿ ಮಾಡಿ ಕೊಡಲು , ಡೆವಲಪರ ಒಪ್ಪದಿದ್ದಲ್ಲಿ ದೂರುದಾರರು ಆಯೋಗದ ನೆರವು ಪಡೆದು ಕೋರ್ಟ ಆಯುಕ್ತರನ್ನು ನೇಮಿಸಿಕೊಂಡು ಖರೀದಿ ಕ್ರಯ ರೂ. 1 ಲಕ್ಷ ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ 10 ಸಾವಿರ ಕೊಡುವಂತೆ ಆಯೋಗ ಡೆವಲಪರಗೆ ನಿರ್ದೇಶಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

