BigTv News
May 26, 2025
Breaking News
ಪುಣೆಗೆ ತೆರಳುತ್ತಿದ್ದ ಟ್ಯಾಂಕರ್ ಒಂದು ಮಂಜಿನಿಂದ ಆವೃತವಾದ ತಮ್ಹಿನಿ ಘಾಟ್ ಪ್ರದೇಶದ ಡೊಂಗರ್ವಾಡಿ ಗ್ರಾಮದ ಬಳಿ ಮಗುಚಿ ಬಿದ್ದಿರುವಂತಹ ಆಘಾತಕಾರಿ ಘಟನೆ ನಡೆದಿದೆ. ಟ್ಯಾಂಕರ್‌ನಲ್ಲಿ ಸುಮಾರು 28,000 ಲೀಟರ್ ಹೈಡ್ರೋಕ್ಲೋರಿಕ್ ಆಮ್ಲವನ್ನು ಹೊತ್ತೊಯ್ಯಲಾಗುತ್ತಿತ್ತು ಎಂದು ತಿಳಿದು ಬಂದಿದೆ.ಸದ್ಯ ಅದೇ ದಾರಿಯಲ್ಲಿ ಹೋಗುತ್ತಿದ್ದ ಬಸ್ ಅಪಘಾತವನ್ನು ಗಮನಿಸಿ ತಕ್ಷಣ ಟ್ಯಂಕರ್ ಚಾಲಕನನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಅಪಘಾತದಲ್ಲಿ ಚಾಲಕನ ಬೆರಳುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಟ್ಯಾಂಕರ್‌ನಲ್ಲಿದ್ದ ಅಪಾರ ಪ್ರಮಾಣದ ಹೈಡ್ರೋಕ್ಲೋರಿಕ್ ಆಮ್ಲವು ಆಳವಾದ ಕಣಿವೆಗೆ …
Read More »
BigTv News
May 26, 2025
Breaking News, Crime
ಆರ್ಡರ್ ಡೆಲಿವರಿ ವೇಳೆ ಪಕ್ಕದ ಮನೆಯ ವಿಳಾಸ ಇತ್ತು. ಈ ವೇಳೆ ಮಹಿಳೆಗೆ ಯಾಕೆ ತಪ್ಪಾದ ವಿಳಾಸ ನೀಡಿದಿರಿ ಎಂದು ಕೇಳಿದೆ. ಆಗ ಶಶಾಂಕ್ ಎಂಬಾತ ಹೊರಬಂದು ನನ್ನ ಜೊತೆ ಗಲಾಟೆ ಮಾಡಿದ್ದಾನೆ. ಇದರಿಂದ ನಾನು ಕೋಪಗೊಂಡು ಹಲ್ಲೆ ಮಾಡಿದ್ದಾಗಿ ವಿಷ್ಣುವರ್ಧನ್ ಹೇಳಿದ್ದಾನೆ.ವಿಷ್ಣುವರ್ಧನ್ ಶಶಾಂಕ್ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಶಶಾಂಕ್ ಕಣ್ಣಿಗೆ ಗಂಭೀರವಾದ ಗಾಯವಾಗಿದೆ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ವಿಷ್ಣುವರ್ಧನ್‌ನನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ
Read More »
BigTv News
May 26, 2025
Breaking News, Crime
ಅನೈತಿಕ ಸಂಬಂಧದ ಬಗ್ಗೆ ತಿಳಿದಿದ್ದರಿಂದ ಸುದರ್ಶನ್, ಈ ಕುರಿತು ಪತ್ನಿಗೆ ಎಚ್ಚರಿಕೆ ನೀಡಿದ್ದ. ತಮ್ಮ ಸಂಬಂಧಕ್ಕೆ ಅಡ್ಡಯಾದ ಈತನನ್ನು ಕೊಲ್ಲಲು ಸುದರ್ಶನ್‌ಗೆ ನಿದ್ರೆ ಮಾತ್ರೆ ನೀಡಿದ್ದಾಳೆ. ಸುದರ್ಶನ್ ಗಾಢ ನಿದ್ರೆ ಹೋದಾಗ ಪ್ರಿಯಕರ ಶಿವರಾಜ್ ಜೊತೆ ಸೇರಿ ಸುದರ್ಶನ್‌ನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ಅಸಹಜ ಸಾವಿನ ಬೆನ್ನು ಬಿದ್ದ ಪೊಲೀಸರಿಗೆ ಈ ಅನೈತಿಕ ಸಂಬಂಧದ ಸುಳಿವು ಸಿಕ್ಕಿದ್ದು, ಪ್ರಕರಣವನ್ನು ಭೇದಿಸಿದ್ದಾರೆ. ಪತ್ನಿ ಕಮಲ, ಆಕೆಯ ಪ್ರಿಯಕರ ಎಸ್ ಶಿವರಾಜ್ …
Read More »
BigTv News
May 26, 2025
Breaking News, Crime
ರೈಲ್ವೆ ನಿಲ್ದಾಣದ ಹತ್ತಿರ ಪಿಎಸ್‌ಎಸ್‌ಕೆ ಪ್ರೌಢಶಾಲೆ ಮುಂಭಾಗ ಅಪರಿಚಿತ ವ್ಯಕ್ತಿಯೊಬ್ಬ ಭಾನುವಾರ ಮಚ್ಚಿನಿಂದ ತನ್ನ ಕತ್ತನ್ನೇ ಕತ್ತರಿಸಿಕೊಂಡ ಘಟನೆ ನಡೆದಿದೆ.ಇದಕ್ಕೂ ಮೊದಲು ಈತ ಪಾಂಡವಪುರ ರೈಲ್ವೆ ಮೇಲ್ಸೆತುವೆಯಿಂದ ಕೆಳಗೆ ಹಾರಿದ್ದ ಎಂದು ಸ್ಥಳೀಯರು ತಿಳಿಸಿದರು.ಆಂಬುಲೆನ್ಸ್ ಮೂಲಕ ಇಲ್ಲಿನ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Read More »
BigTv News
May 26, 2025
Breaking News
ಗಾಜಿಯಾಬಾದ್ನ ಮಸೂರಿಯಲ್ಲಿರುವ ಗ್ರಾಮದಲ್ಲಿರುವ ಖಾದಿರ್ ಅವರ ನಿವಾಸಕ್ಕೆ ಪೊಲೀಸ್ ತಂಡವು ಅವರನ್ನು ಬಂಧಿಸಲು ಹೋಗಿತ್ತು. ದಾಳಿ ಪ್ರಾರಂಭವಾದ ತಕ್ಷಣ, ಜನಸಮೂಹವು ಪ್ರತಿಕೂಲವಾಗಿ ತಿರುಗಿ ಕಲ್ಲು ತೂರಾಟವನ್ನು ಪ್ರಾರಂಭಿಸಿತು.ಆರೋಪಿಗಳ ಪ್ರಕಾರ, ಗುಂಪಿನ ಸದಸ್ಯರು ಗುಂಡು ಹಾರಿಸಿದರು, ಇದರಲ್ಲಿ ನೋಯ್ಡಾದ ಹಂತ-2 ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿದ್ದ ಕಾನ್ಸ್ಟೆಬಲ್ ಸೌರಭ್ ಮೇಲೆ ಗುಂಡು ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
Read More »
BigTv News
May 25, 2025
Breaking News
ಚಿಕ್ಕಮಗಳೂರಿನಲ್ಲಿ ಗಾಳಿ-ಮಳೆ ಅಬ್ಬರ ಮುಂದುವರಿದಿದ್ದು, ಭಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರ ಕಾರು ಪಲ್ಟಿಯಾದ ಘಟನೆ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಗ್ರಾಮದಲ್ಲಿ ನಡೆದಿದೆ.ಕಾರು ಪಲ್ಟಿಯಾಗಿ ಹೇಮಾವತಿ ನದಿಯ ಉಪನದಿಯ ಹಳ್ಳಕ್ಕೆ ಬಿದ್ದಿದ್ದು, ಕೂಡಲೇ ಸ್ಥಳೀಯರು ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಸಮಾಜ ಸೇವಕ ಆರೀಫ್ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಹಳ್ಳಕ್ಕೆ ಇಳಿದು ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ …
Read More »
BigTv News
May 25, 2025
Breaking News
ಎಡೆಬಿಡದೆ ಸುರಿಯುವ ಮಳೆಯಲ್ಲೇ ಚಲಿಸುತ್ತಿದ್ದ ಕಾರಿನ ಬೋನೆಟ್‌ನಲ್ಲಿ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವ ಕಾರಿನಲ್ಲಿದ್ದವರು ಇಳಿದು ಅಪಾಯದಿಂದ ಪಾರಾದರು ಎಂದು ತಿಳಿದು ಬಂದಿದೆ.ಆದರೆ, ಕಾರು ಭಾಗಶ: ಬೆಂಕಿಗೆ ಆಹುತಿಯಾಗಿದೆ.
Read More »
BigTv News
May 25, 2025
Breaking News, Crime
ಭಾನುವಾರದ ರಜೆ ಇರುವ ಕಾರಣ ಇಂದು ಸಿಬ್ಬಂದಿ ರಜೆ ಇರುತ್ತಾರೆ ಎಂದು ಖತರ್ನಾಕ್ ಪ್ಲ್ಯಾನ್ ಮಾಡಿಯೇ ಕಳ್ಳರು ಕೃತ್ಯ ಎಸಗಿದ್ದಾರೆ.ಮೊದಲಿಗೆ ಕೆನರಾ ಬ್ಯಾಂಕ್ ಮುಂಭಾಗದ ಬಾಗಿಲಿನ ಕೀ ಮುರಿದು ಒಳ ಹೋಗಿದ್ದಾರೆ. ಬಳಿಕ ಕೃತ್ಯ ಎಸಗಿದ್ದಾರೆ. ಏನೇನೂ ಕಳ್ಳತನ ನಡೆದಿದೆ ಎಂದು ಇನ್ನೂ ತಿಳಿದು ಬಂದಿಲ್ಲ.ಬ್ಯಾಂಕ್ ಕಳ್ಳತನ ವಾದ ಕಾರಣ ಸ್ಥಳಕ್ಕೆ ಬ್ಯಾಂಕ್ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದರು. ಸ್ಥಳದಲ್ಲಿ ಶ್ವಾನದಳದ ಸಿಬ್ಬಂದಿ ಹಾಗೂ ಪೋಲಿಸರಿಂದ ಪರಿಶೀಲನೆ ನಡೆದಿದೆ. ಹಾಗೂ ಬ್ಯಾಂಕ್ …
Read More »
BigTv News
May 25, 2025
Breaking News, Crime
ಬೆಳಗಿನ ಜಾವ ಮಠಕ್ಕೆ ಬಂದಿರುವ ಅಪರಿಚಿತ ಮಹಿಳೆಯೊಬ್ಬಳು ಮಠದ ಕಿಟಕಿಯಿಂದ ಚಪ್ಪಲಿ ಎಸೆದು ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾಳೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆಾದಲ್ಲಿ ಸೆರೆಯಾಗಿದೆ.ಘಟನೆಯಿಂದ ಭಕ್ತರ ಮನಸ್ಸಿಗೆ ಧಕ್ಕೆಯುಂಟಾಗಿದ್ದು, ರಾಯರ ಮಹಾತ್ಮೆಯ ಬಗ್ಗೆ ಚರಿತ್ರೆಗಳು ಮತ್ತು ಭಕ್ತರ ಅನುಭವಗಳು ಇಂದಿಗೂ ಸ್ಫೂರ್ತಿಯಾಗಿರುವಾಗ ಇಂತಹ ಕೃತ್ಯವು ಸಮಾಜದಲ್ಲಿ ಆತಂಕ ಉಂಟುಮಾಡಿದೆ. ಸ್ಥಳೀಯರು ಈ ಘಟನೆಯನ್ನು ಖಂಡಿಸಿ, ಮಠದ ಪಾವಿತ್ರ್ಯತೆಯನ್ನು ಕಾಪಾಡಲು ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯಿಸಿದ್ದಾರೆ.
Read More »
BigTv News
May 25, 2025
Breaking News, Crime
ಜಮೀನಿನಲ್ಲಿ ಮರಳು ಮತ್ತು ಕಲ್ಲಿನ ಚೂರುಗಳನ್ನು ರಾಶಿ ಹಾಕುವ ಬಗ್ಗೆ ಧೀರ್ಘ ಕಾಲದಿಂದ ಇದ್ದ ವಿವಾದ ಮೂವರು ಸಹೋದರರ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಶನಿವಾರ ಬಿಹಾರದ ಬಕ್ಸರ್ ನ ಅಹಿಯಾಪುರ ಗ್ರಾಮದಲ್ಲಿ ನಡೆದಿದೆ.ಈ ದಾಳಿಗೆ ಬಳಸಿದ ಕಾರು ಜಿಲ್ಲಾ ಮಂಡಳಿಯ ಮಾಜಿ ಸದಸ್ಯರೊಬ್ಬರಿಗೆ ಸೇರಿದ್ದು, ಈ ಗುಂಡಿನ ಕಾಳಗದಲ್ಲಿ ರಾಜಕೀಯ ಕೈವಾಡದ ಶಂಕೆ ಇದೆ. ಹರಳು ಮತ್ತು ಮರಳು ರಾಶಿ ಹಾಕುವ ಸಂಬಂಧ ಘರ್ಷಣೆ ನಡೆದಿದೆ ಎಂದು ಪೊಲೀಸ್ ತನಿಖೆಯಿಂದ …
Read More »