BigTv News
May 25, 2025
Breaking News
ಅಯ್ಯನಬಾವಿ ಗ್ರಾಮದಲ್ಲಿ ಶನಿವಾರ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ, ತೀವ್ರವಾಗಿ ಗಾಯಗೊಂಡಿದ್ದ 6 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.ಮಹಲಿಂಗಯ್ಯ ಮತ್ತು ಭಾಗ್ಯಮ್ಮ ದಂಪತಿಯ ಮಗಳು ನವ್ಯಾ ಮೃತ ಬಾಲಕಿ.ತಲೆ ಹಾಗೂ ಹೊಟ್ಟೆಯ ಭಾಗವನ್ನು ಕಚ್ಚಿ ಎಳೆದಾಡಿವೆ. ಮುಖ ಹಾಗೂ ಕೈ ಕಾಲು, ತೊಡೆ ಭಾಗವನ್ನು ಕಿತ್ತು ಹಾಕಿವೆ.ರಕ್ತದ ಮಡುವಿನಲ್ಲಿ ಚೀರಾಡುತ್ತಿದ್ದ ಬಾಲಕಿಯನ್ನು ಕಂಡ ಸಾರ್ವಜನಿಕರು ನಾಯಿಗಳನ್ನು ಓಡಿಸಿ, ಆಕೆಯನ್ನು ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದರಿಂದ …
Read More »
BigTv News
May 24, 2025
Breaking News, Crime
ಮಾನಸಿಕ ಅಸ್ವಸ್ಥ ಯುವತಿಯನ್ನು ಜಿಲ್ಲಾ ಕಾರಾಗೃಹದ ಆವರಣದೊಳಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ ಆರೋಪದಲ್ಲಿ ಇಬ್ಬರು ವಾರ್ಡರ್ ಗಳನ್ನು ಬಂಧಿಸಿರುವ ಘಟನೆ ಅಸ್ಸಾಮಿನ ಶ್ರೀಭೂಮಿ ಜಿಲ್ಲೆಯಲ್ಲಿ ನಡೆದಿದೆ.ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು, ಮುಂದಿನ ತನಿಖೆಯು ನಡೆಯುತ್ತಿದೆ. ಮಾನಸಿಕ ಅಸ್ವಸ್ಥೆಯಾಗಿರುವ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆ ಬೀದಿಯಲ್ಲಿ ಒಂಟಿಯಾಗಿದ್ದಳು ಎಂದು ಶಂಕಿಸಲಾಗಿದ್ದು, ಆರೋಪಿಗಳು ಇದರ ಲಾಭ ಪಡೆದಿದ್ದರು ಎಂದು ಎಎಸ್‌ಪಿ ಪ್ರಣವಜ್ಯೋತಿ ಕಲಿಟಾ ತಿಳಿಸಿದರು
Read More »
BigTv News
May 24, 2025
Breaking News
ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.ಇಬ್ಬರು ನಗರದ ಮೆಳೇಕೋಟೆಯವರು. ಕುಣಿಗಲ್ ಕಡೆಯಿಂದ ಬರುವಾಗ ಅವಘಡ ಸಂಭವಿಸಿದೆ. ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಏಜಾಜ್ ಶೇಖ್ (38) ಮೃತರು. ಅಜ್ಮತ್ ಉಲ್ಲಾ (40) ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Read More »
BigTv News
May 24, 2025
Breaking News, Crime
ಕಾಮಾಂಧರು ಇದೀಗ ಪ್ರಾಣಿಗಳನ್ನು ಸಹ ಬಿಡುತ್ತಿಲ್ಲ. ಹೌದು ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕುದುರೆ ಸವಾರಿ ಅಕಾಡೆಮಿಯಲ್ಲಿ ಕುದುರೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.ನಾಗ್ಪುರದ ಗಿಟ್ಟಿಖಾದನ್ ಪ್ರದೇಶದ ಕುದುರೆ ಸವಾರಿ ಅಕಾಡೆಮಿಯಲ್ಲಿ ಈ ಘಟನೆ ನಡೆದಿದೆ.ರಾತ್ರಿ ವೇಳೆ ಅಕ್ರಮವಾಗಿ ಅಕಾಡೆಮಿ ಪ್ರವೇಶಿಸಿದ ಆರೋಪಿ ಕುದುರೆಯೊಂದರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ದೃಢಪಟ್ಟಿದೆ..ಘಟನೆ ಸಂಬಂಧ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು …
Read More »
BigTv News
May 24, 2025
Breaking News
ರಸ್ತೆ ಬದಿಯ ಕಲ್ಲಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಸೊಣ್ಣಮಾರನಹಳ್ಳಿ ಬಳಿ ನಡೆದಿದೆ.ಕೊನಘಟ್ಟ ಮೂಲದ ಮಣಿಕುಮಾರ್ (30) ಮೃತ ದುರ್ದೈವಿ. ರಸ್ತೆ ತಿರುವಿನಲ್ಲಿ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.ಮೃತನ ಶವವನ್ನು ದೊಡ್ಡಬಳ್ಳಾಪುರ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ
Read More »
BigTv News
May 24, 2025
Breaking News
ಪರಸ್ಪರ ಎರಡು ಬೈಕುಗಳು ಡಿಕ್ಕಿಯಾಗಿ ಹೊತ್ತಿ ಉರಿದಿವೆ ಈ ವೇಳೆ ಮೈ ಮೇಲೆ ಪೆಟ್ರೋಲ್ ಬಿದ್ದು ಬೆಂಕಿ ತೆಗೆದುವಾಗಿ ದಹನಗೊಂಡಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಕಾಳಗಿ ಪಟ್ಟಣದ ಕೊಡದೂರಿನಲ್ಲಿ ನಡೆದಿದೆ.ಕಲ್ಬುರ್ಗಿ ಜಿಲ್ಲೆಯ ಕಾಳಗಿ ಪಟ್ಟಣದ ಕೊಡದೂರಿನಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಅವಘಡದಲ್ಲಿ ಬೈಕ್ ಸವಾರ ದಶರತ್ ಮಡಿವಾಳ (28) ಸಜೀವ ದಹನ ಹೊಂದಿದ್ದಾರೆ. ಪರಸ್ಪರ ಬೈಕ್ ಗಳು ಡಿಕ್ಕಿ ಆದ ಪರಿಣಾಮ ಮೈ ಮೇಲೆ ಪೆಟ್ರೋಲ್ ಬಿದ್ದು ದಶರಥ …
Read More »
BigTv News
May 24, 2025
Breaking News
ಸೋದರ ಮಾವನ ಮಗಳು ತನ್ನನ್ನು ವಿವಾಹವಾಗಲು ನಿರಾಕರಸಿದಳು ಎಂಬ ಕಾರಣಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಜ್ಜವಾರ ಗ್ರಮದಲ್ಲಿ ನಡೆದಿದೆ.ನಿನ್ನೆ ಆಕೆಯ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮನೆಗೆ ಹೋಗಿ ಶುಭಕೋರಿ ಬಂದಿದ್ದ. ಈ ವೇಳೆ ಆಕೆಯನ್ನು ಮದುವೆಯಾಗುವುದಾಗಿ ಕೇಳಿದ್ದ. ಅದಕ್ಕೆ ಯುವತಿ ಹಾಗೂ ಆಕೆಯ ತಂದೆ-ತಾಯಿ ನಿರಾಕರಿಸಿದ್ದಾರೆ.ಬೇಸರದಿಂದ ಮನೆಗೆ ಬಂದವವನು ಬೆಳಗಾಗುವಷ್ಟರಲ್ಲಿ ನೇಣಿಗೆ ಕೊರಳೊಡ್ಡಿದ್ದಾನೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Read More »
BigTv News
May 24, 2025
Breaking News
ಕಲ್ಗಣೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶ್ರುತಿ ಕೆಲ ತಿಂಗಳುಗಳಿಂದ ಮಾನಸಿಕ ಖಿನ್ನತೆ ಒಳಗಾಗಿದ್ದರು.ಶನಿವಾರ ಮನೆಯಲ್ಲಿಯೇ ವಿಷ ಕುಡಿದಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಕಲೇಶಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »
BigTv News
May 24, 2025
Breaking News, Crime
ಗುಜರಾತ್ ಭಯೋತ್ಪಾದನಾ ನಿಗ್ರಹ ಪಡೆ(ಎಟಿಎಸ್), ಪಾಕಿಸ್ತಾನ ಪರ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಸೂಕ್ಷ್ಮ ಗಡಿ ಜಿಲ್ಲೆಯಾದ ಕಚ್‌ನ ಆರೋಗ್ಯ ಕಾರ್ಯಕರ್ತನನ್ನು ಬಂಧಿಸಿದೆ.ಇದರೊಂದಿಗೆ ಕೇವಲ ಎಂಟು ತಿಂಗಳಲ್ಲಿ ಗುಜರಾತ್‌ನಲ್ಲಿ ಮೂರನೇ ಉನ್ನತ ಮಟ್ಟದ ಗೂಢಚಾರ ಬಂಧನ ಇದಾಗಿದ್ದು, ರಾಷ್ಟ್ರೀಯ ಭದ್ರತಾ ಸಂಸ್ಥೆಗಳನ್ನು ಆತಂಕಕ್ಕೀಡು ಮಾಡಿದೆ.ಇತ್ತೀಚೆಗೆ ಪೂರ್ಣಗೊಂಡ ಮಿಲಿಟರಿ ಸೌಲಭ್ಯಗಳ ಚಿತ್ರಗಳು ಸೇರಿದಂತೆ ಸೂಕ್ಷ್ಮ ವಿಷಯಗಳನ್ನು ಸೋರಿಕೆ ಮಾಡಲು ತರಬೇತಿ ನೀಡಲಾಗಿದೆ ಎಂದು ಎಟಿಎಸ್ ಪ್ರಕಟಣೆಯಲ್ಲಿ ತಿಳಿಸಿದೆ.
Read More »
Shaikh BigTv
May 24, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಡೆವಲಪರ್ ಜೊತೆ ಹೋರಾಟದಲ್ಲಿ ಜಯಸಿದ ಮಂಜುನಾಥ... ಬಡವರ ಕಣ್ಣನೀರು ಒರೆಸುವ ಪೊಲೀಸ್ ಈ ಮಂಜುನಾಥ…. ಸತ್ಯವಂತರಿಗೆ ನ್ಯಾಯ ಯಾವತ್ತು ಕೈ ಬಿಡಲ್ಲ ಅನ್ನೊದಕ್ಕೆ ಈ ಪ್ರಕರಣ ಸಾಕ್ಷಿ….. ಹುಬ್ಬಳ್ಳಿ : ಪೊಲೀಸ್ ಪೇದೆಗೆ ನ್ಯಾಯ ಒದಗಿಸಿದ “ಗ್ರಾಹಕರ ಆಯೋಗ” .ಹುಬ್ಬಳ್ಳಿಯಲ್ಲಿ ಪೋಲೀಸ ಪೇದೆಯಾಗಿ ಕೆಲಸ ಮಾಡುತ್ತಿರುವ ಮಂಜುನಾಥ ವನಹಳ್ಳಿಯವರು 2022ರಲ್ಲಿ ಹುಬ್ಬಳ್ಳಿಯ ಅಮರಗೋಳದಲ್ಲಿ ರಾಜೇಶ್ವರಿ ಡೆವಲೆಪರ್ಸರವರಿಂದ ರೂ.13,37,462 ಗೆ ಸೈಟ್ ಖರೀದಿಸಿದ್ದರು. ಎನ್.ಎ ವಗೈರಾ ಆದ ಮೇಲೆ ಅಪೋಸಿಟ್ ಪಾರ್ಟಿ …
Read More »