Breaking News

Breaking News

ಹೊಸದಿಲ್ಲಿ :ಬಸ್ ಚಲಾಯಿಸುತ್ತಿದ್ದಾಗ ಚಾಲಕನಿಗೆ ಹೃದಯಾಘಾತ!!

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಬಸ್ ಚಲಾಯಿಸುತ್ತಿದ್ದಾಗ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ವೇಳೆ ನಿರ್ವಾಹಕ ಬಸ್‌ ನಿಲ್ಲಿಸಿ ಸಂಭಾವ್ಯ ಅಪಘಾತವನ್ನು ತಪ್ಪಿಸಿದ್ದಾರೆ.ಬಸ್ ಕನಕಂಪಟ್ಟಿ ದಾಟುತ್ತಿದ್ದಂತೆ ಚಾಲಕ ಪ್ರಭು ಕಂಡಕ್ಟರ್‌ಗೆ ಕರೆ ಮಾಡಿ ನನಗೆ ಜೋರಾಗಿ ಎದೆ ನೋಯುತ್ತಿದೆ ಎಂದು ಹೇಳಲು ಪ್ರಯತ್ನಿಸಿದರು. ಆದರೆ ಕಂಡೆಕ್ಟರ್ ಪ್ರತಿಕ್ರಿಯಿಸುವ ಮೊದಲೇ ಪ್ರಭು ಕುಸಿದು ಬಿದ್ದರು. ಹೃದಯಾಘಾತವಾಗಿ ಕುಸಿದು ಬಿದ್ದ ಚಾಲಕನಿಗೆ ಕಂಡಕ್ಟರ್ ಮತ್ತು ಪ್ರಯಾಣಿಕರು ಸಹಾಯಕ್ಕೆ ಧಾವಿಸುವುದು. ಕಂಡೆಕ್ಟರ್ ಬ್ರೇಕ್ ಹಿಡಿದು ಬಸ್‌ …

Read More »

ಬೆಳಗಾವಿ: 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ, ಸ್ವಾಮೀಜಿ ಬಂಧನ!

ಸ್ವಾಮೀಜಿಯಿಂದ 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ ಹಿನ್ನಲೆ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿಯ ರಾಮಮಂದಿರ ಲೋಕೇಶ್ವರ ಮಹಾರಾಜ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಾಲಕಿಯ ತಂದೆ-ತಾಯಿಯೇ ಬಾಲಕಿಯನ್ನು ವಾರಗಟ್ಟಲೇ ಮಠದಲ್ಲೇ ಬಿಟ್ಟು ಹೋಗುತ್ತಿದ್ದರು. ಅದನ್ನೇ ಸ್ವಾಮೀಜಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಮಠದಲ್ಲಿ ಸಾಕಷ್ಟು ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿದ್ದ ಆರೋಪ ಕೂಡ ಇದೆ. 2021ರಲ್ಲಿ ಸ್ವಾಮೀಜಿಗೆ ಧರ್ಮದೇಟು ನೀಡಿ ಗ್ರಾಮಸ್ಥರು ಬುದ್ಧಿವಾದ ಹೇಳಿದ್ದರು. ಇದೀಗ ಅತ್ಯಾಚಾರ ಆರೋಪ ಹಿನ್ನಲೆಸ್ವಾಮೀಜಿಯಿಂದ 17 ವರ್ಷದ …

Read More »

ಬೆಂಗಳೂರು :ಕಲ್ಲು ತುಂಬಿದ್ದ ಟ್ರಕ್ ಪಲ್ಟಿ, ಲಾರಿ ಚಾಲಕ ಸಾವು!

ಕೊಡಿಗೇಹಳ್ಳಿ ಫ್ಲೈ ಓವರ್ ಮೇಲೆ ಈ ಡೆಡ್ಲಿ ಆಯಕ್ಸಿಡೆಂಟ್​​ ನಡೆದಿದೆ. 10 ವ್ಹೀಲರ್ ಓಪನ್ ಬಾಡಿ ವಾಹನ, ಕಸದ ಲಾರಿ ಮತ್ತು ಎರ್ಟಿಗಾ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಪರಿಣಾಮ ರಸ್ತೆ ಮೇಲೆಯೇ ಕಲ್ಲು ತುಂಬಿದ್ದ ಟ್ರಕ್ ಪಲ್ಟಿ ಹೊಡೆದಿದೆ.10 ವ್ಹೀಲರ್ ಓಪನ್ ಬಾಡಿ ವಾಹನ, ಕಸದ ಲಾರಿ ಮತ್ತು ಎರ್ಟಿಗಾ ಕಾರಿನ ಮಧ್ಯೆ ನಡೆದ ಅಪಘಾತದಲ್ಲಿ ಇಬ್ಬರಿಗೆ ಗಾಯವಾಗಿದ್ದು, ಓರ್ವ ಸಾವನಪ್ಪಿದ್ದಾನೆ. ಕಸದ ಲಾರಿ ಚಾಲಕ ಫಯಾಜ್ ಅಹಮ್ಮದ್ …

Read More »

ವಿಜಯಪುರ : ಮದುವೇಲಿ ಡ್ಯಾನ್ಸ್ ಮಾಡುತ್ತಲೇ ‘ಹೃದಯಾಘಾತದಿಂದ’ ಕುಸಿದು ಬಿದ್ದು ಯುವಕ ಸಾವು!

ಹೃದಯಾಘಾತದಿಂದ ಯುವಕನೊರ್ವ ಸಾವನ್ನಪ್ಪಿದ್ದಾನೆ. ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಲೆ ಕುಸಿದು ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ವಿಜಯಪುರದ ಚಪ್ಪರಬಂದ ಕಾಲೋನಿಯಲ್ಲಿ ನಡೆದಿದೆ.ವಿಜಯಪುರದ ಚಪ್ಪರ ಬಂದ ಕಾಲೋನಿಯಲ್ಲಿ ಈ ಒಂದು ದುರಂತ ನಡೆದಿದೆ. ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗಲೇ ಮೊಹಮದ್ ಪೈಗಂಬರ್ ಗಂಗನಹಳ್ಳಿ (28) ಎಂಬ ಯುವಕ ಸಾವನ್ನಪ್ಪಿದ್ದಾನೆ. ಎಲ್ಲರ ಎದುರೇ ಕುಸಿದು ಬಿದ್ದು ಮೊಹಮ್ಮದ್ ಸಾವನಪ್ಪಿದ್ದಾನೆ. ಮೃತ ಮೊಹಮ್ಮದ್ ಅಲ್ಯೂಮಿನಿಯಂ ವರ್ಕ್ಸ್ ಕೆಲಸ ಮಾಡುತ್ತಿದ್ದ. ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ …

Read More »

ಬೆಳಗಾವಿ: ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಂಗ್ಲಿಯಲ್ಲಿ ಗ್ಯಾಂಗ್ ರೇಪ್!

ಮಹಾರಾಷ್ಟ್ರದ ಸಾಂಗ್ಲಿ ನಗರದಲ್ಲಿ ಬೆಳಗಾವಿ ಮೂಲದ ವೈದ್ಯಕೀಯ ವಿದ್ಯಾರ್ಥಿನಿಗೆ ತಂಪು ಪಾನೀಯದಲ್ಲಿ ಮತ್ತು ಬರುವ ಮಾತ್ರೆ ನೀಡಿ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.ಸೊಲ್ಲಾಪುರದ ವಿನಯ ವಿಶ್ವೇಶ ಪಾಟೀಲ(22, ಪುಣೆಯ ಸರ್ವಜ್ಞ ಸಂತೋಷ ಗಾಯಕವಾಡ (20) ಹಾಗೂ ಸಾಂಗಲಿಯ ತನ್ಮಯ ಸುಕುಮಾರ ಪೆಡ್ನೇಕರ (30) ಎಂಬಾತರನ್ನು ಬಂಧಿಸಲಾಗಿದೆ.ಯುವತಿಗೆ ತಂಪು ಪಾನೀಯಲ್ಲಿ ಮತ್ತು ಬರುವ ಮಾತ್ರೆ ಕೊಟ್ಟು ಕುಡಿಸಿದ್ದಾರೆ. ನಂತರ ಮೂವರು ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಸ್ವಲ್ಪ ಸಮಯದ …

Read More »

ವಿವಿಧ ರೂಪದಲ್ಲಿ ಜನರನ್ನು ಕಾಡಲಿದೆ ಮಹಾಮಾರಿ ‘ಕೊರೊನಾ’ : ಕೋಡಿಶ್ರೀ ಸ್ಪೋಟಕ ಭವಿಷ್ಯ.!

ಮಹಾಮಾರಿ ಕೊರಾನಾ ಸೋಂಕು ಹೆಚ್ಚಳವಾಗುತ್ತಿದೆ. ಅಲ್ಲಲ್ಲಿ ಸಾವು-ನೋವುಗಳು ಸಂಭವಿಸುತ್ತಿವೆ. ಇದರ ಬೆನ್ನಲ್ಲೇ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.ಜಗತ್ತಿಗೆ ವಾಯು, ಜಲದಿಂದ ಐದು ವರ್ಷಗಳ ಕಾಲ ಗಂಡಾಂತರವಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಹಿಮಾಲಯ ಕರಗಿ ದೆಹಲಿವರೆಗೆ ತಲುಪಿದೆ. ಮೇಘ ಸ್ಫೋಟವಾಗುವ ಸಾಧ್ಯತೆ ಇದೆ, ಭೂಕಂಪಗಳಾಗುವ ಸಾಧ್ಯತೆ ಇದೆ ಎಂದರು.ಇನ್ನು ಮತೀಯ ಗಲಭೆ ಹೆಚ್ಚಾಗಲಿದೆ. ಯುದ್ಧದ ಭೀತಿ ಮತ್ತೆ ಆರಂಭವಾಗಲಿದೆ. ಜನರಲ್ಲಿ ಅಶಾಂತಿ ಇದೆ. ಕೆಲ ದೇಶಗಳು …

Read More »

ಹಾಸನ :ಕಾಡಾನೆ ದಾಳಿ,ಮಹಿಳೆ ಸಾವು!

ಅಂಕಿಹಳ್ಳಿ ಗ್ರಾಮದಲ್ಲಿನ ಕರುಣ್ ಎಂಬುವವರ ಕಾಫಿ ತೋಟದ 12 ಮಂದಿ ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿದ್ದರು.ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ಕೂಡಲೇ ಎಚ್ಚೆತ್ತ ಕಾರ್ಮಿಕರು ಅಲ್ಲಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಚಂದ್ರಮ್ಮ ಓಡಲು ಆಗದೆ ಕೆಳಕ್ಕೆ ಬಿದ್ದಿದ್ದಾರೆ, ಈ ವೇಳೆ ಕಾಡಾನೆ ದಾಳಿ ಮಾಡಿದೆ.ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More »

ಮೈಮೇಲೆ ಕಸದ ರಾಶಿ ಸುರಿದ ಪೌರ ಸಿಬ್ಬಂದಿ; ಮರದಡಿ ನಿದ್ದೆ ಮಾಡುತ್ತಿದ್ದ ವ್ಯಕ್ತಿ ಸಾವು!

ಮರದಡಿ ನಿದ್ದೆ ಮಾಡುತ್ತಿದ್ದ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಮೇಲೆ ಪೌರ ಸಿಬ್ಬಂದಿ ಕಸದ ರಾಶಿ ಸುರಿದ ಪರಿಣಾಮ ನಿದ್ರಿಸುತ್ತಿದ್ದ ವ್ಯಕ್ತಿ ಕಸದ ರಾಶಿಯಡಿ ಸಿಲುಕಿ ಮೃತಪಟ್ಟ ಅಪರೂಪದ ಘಟನೆ ಉತ್ತರ ಪ್ರದೇಶದ ಬರೇಲಿ ನಗರದಲ್ಲಿ ನಡೆದಿದೆ.ಬರೇಲಿ ನಗರದ ಬರದಾರಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದು ಅಸಹಜ ಸಾವು ಎನ್ನುವುದನ್ನು ಅಟಾಪ್ಸಿ ವರದಿ ದೃಢಪಡಿಸಿದೆ. ಇದು ನಿರ್ಲಕ್ಷ್ಯದ ಪ್ರಕರಣ ಎಂದು ಸರ್ಕಲ್ ಅಧಿಕಾರಿ …

Read More »

ರಾಯಚೂರು: ಸರಕಾರಿ ಬಸ್-ಲಾರಿ ಢಿಕ್ಕಿ; 16 ಜನರಿಗೆ ಗಾಯ!

ಸಿಂಧನೂರು ನಗರದ ಪಿಡಬ್ಲ್ಯೂ ಕ್ಯಾಂಪ್ ನ ಆಕ್ಸ್‌ಫರ್ಡ್‌ ಕಾಲೇಜು ಬಳಿ ಸಾರಿಗೆ ಬಸ್ ಮತ್ತು ಅಕ್ಕಿ ಸಾಗಿಸುತ್ತಿದ್ದ ಲಾರಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಬಸ್ ನಲ್ಲಿದ್ದ 16 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.ಗಾಯಾಳುಗಳನ್ನು ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರನ್ನು ಶಾಂತಿ ಆಸ್ಪತ್ರೆ ಹಾಗೂ ರೇಣುಕಾ ಹಾಸ್ಪಿಟಲ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ ತಿಳಿಸಿದ್ದಾರೆ.

Read More »

ತುಮಕೂರು : ಜಮೀನಿಗಾಗಿ ದೊಡ್ಡಪ್ಪನ್ನೇ ಚಾಕುವಿನಿಂದ ಕೊಂದ ಯುವಕ!

ಜಮೀನು ವಿಚಾರವಾಗಿ ಜಗಳ ನಡೆದು ಈ ಒಂದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಘಟನಾ ಸ್ಥಳಕ್ಕೆ ತುಮಕೂರು ಎಸ್ ಪಿ ಅಶೋಕ ವೆಂಕಟ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಒಂದು ಕೊಲೆಯು ಸಿಎಸ್ ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.ಕೊಲೆಯಾದ ವ್ಯಕ್ತಿಯನ್ನು ಕರೀಂ (50) ಎಂದು ತಿಳಿದುಬಂದಿದ್ದು, ಕರೀಂನನ್ನು ಕೊಲೆಗೈದು ತಮ್ಮನ ಮಗ ಆಫ್ರಿದ್ (25) ಪರಾರಿಯಾಗಿದ್ದಾನೆ.

Read More »