BigTv News
May 22, 2025
Breaking News, Crime
ರಾಜಧಾನಿಯಲ್ಲಿ ಭಯೋತ್ಪಾದಕ ದಾಳಿ ನಡೆಸುವ ಐಎಸ್‌ಐ ಸಂಚನ್ನು ಭಾರತದ ಗುಪ್ತಚರ ಏಜೆನ್ಸಿಗಳು ವಿಫಲಗೊಳಿಸಿವೆ. ಮೂರು ತಿಂಗಳ ಯೋಜಿತ ಕಾರ್ಯಾಚರಣೆಯಲ್ಲಿ ಐಎಸ್‌ಐ ಯತ್ನವನ್ನು ವಿಫಲಗೊಳಿಸಿ, ದಾಳಿ ನಡೆಸಲು ತೀವ್ರ ತರಬೇತಿ ಪಡೆದ ಇಬ್ಬರನ್ನು ಬಂಧಿಸಲಾಗಿದೆ.ದಾಳಿ ನಡೆಸುವ ಹೊಣೆ ಹೊತ್ತಿದ್ದ ಪಾಕಿಸ್ತಾನದ ಅನ್ಸಾರುಲ್ ಮಿಯಾ ಅನ್ಸಾರಿ ಕೂಡಾ ಬಂಧಿತರಲ್ಲಿ ಸೇರಿದ್ದಾನೆ. ಈತ ಭಾರತ ಸಶಸ್ತ್ರ ಪಡೆಗಳ ಬಗ್ಗೆ ಸೂಕ್ಷ್ಮ ಮಾಹಿತಿಗಳನ್ನು ಕಲೆ ಹಾಕುತ್ತಿದ್ದ ಎನ್ನಲಾಗಿದೆ.ರಾಂಚಿ ನಿವಾಸಿ ಅಖ್ಲಾಕ್ ಆಝಮ್ ಎಂಬಾತ ಕೂಡಾ ಇದರಲ್ಲಿ …
Read More »
BigTv News
May 22, 2025
Breaking News, Crime
ಕಿಲಾಡಿ ಸ್ಟಾರ್ ಹಾಗೂ ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ಸಹ ಕಲಾವಿದೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದಂತೆ ನಟ ತಲೆಮರೆಸಿಕೊಂಡಿದ್ದಾನೆ. ಆರೋಪಿ ಮನುಗಾಗಿ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಇದೀಗ ಹುಡುಕಾಟ ನಡೆಸುತ್ತಿದ್ದಾರೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.ಕುಲದಲ್ಲಿ ಕೀಳ್ಯಾವೋದು ಸಿನಿಮಾ’ ನಾಳೆ ರಿಲೀಸ್ ಆಗಬೇಕಿದ್ದು, ಇದರ ನಡುವೆ ನಟ ಮಡೆನೂರು ಮನು ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ.
Read More »
BigTv News
May 22, 2025
Breaking News
ವಿನಯ್ ಅವರು, ಗಿಡ್ಡಯ್ಯ ಅವರೊಂದಿಗೆ ತಮ್ಮ ತೋಟದಲ್ಲಿ ಗೊಬ್ಬರ ಹಾಕುತ್ತಿದ್ದ ವೇಳೆ, ಎರಡು ಕರಡಿಗಳು ಏಕಕಾಲದಲ್ಲಿ ದಾಳಿ ನಡೆಸಿವೆ. ದಾಳಿಯಿಂದ ಇಬ್ಬರಿಗೂ ತಲೆ, ಬೆನ್ನು ಮತ್ತು ಕೈಕಾಲುಗಳಲ್ಲಿ ಗಂಭೀರ ಗಾಯಗಳಾಗಿವೆ.ಇವರಿಬ್ಬರ ಕಿರುಚಾಟ ಕೇಳಿ ಅಕ್ಕಪಕ್ಕದ ತೋಟದವರು ಬಂದು ಕಿರುಚಾಡಿದ ಬಳಿಕ ಕರಡಿಗಳು ಕಾಫಿ ತೋಟದೊಳಗೆ ಕಣ್ಮರೆಯಾಗಿವೆ. ಮಳೆಯಾಗುತ್ತಿದ್ದರಿಂದ ಮಂಜು ಮುಸುಕಿದ ವಾತಾವರಣವಿದ್ದು, ಕರಡಿಗಳು ಸಮೀಪಕ್ಕೆ ಬರುವವರೆಗೂ ಕಾಣಿಸಿಕೊಳ್ಳದೆ ಇದ್ದುದರಿಂದ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಗಾಯಗೊಂಡಿದ್ದ ಇಬ್ಬರನ್ನೂ ತಕ್ಷಣವೇ ಎಂಜಿಎಂ ಆಸ್ಪತ್ರೆಗೆ …
Read More »
BigTv News
May 22, 2025
Breaking News, Crime
ಮದ್ಯವ್ಯಸನಿಯಾಗಿದ್ದ ಮಣಿಕಂದನ್ ಸದಾ ಕುಡಿದ ಅಮಲಿನಲ್ಲಿ ಇರುತ್ತಿದ್ದ. ನಿನ್ನೆ ರಾತ್ರಿ ಕೂಡ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬಂದಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಮಣಿಕಂದನ್ ತಾಯಿ ಓಮನಾ ಜೊತೆ ಜಳಗ ತೆಗೆದಿದ್ದು, ಆಕೆಯನ್ನು ಮನಬಂದಂತೆ ಒದ್ದು, ತುಳಿದು ಹಾಕಿದ್ದಾನೆ.ಮಗನಿಂದ ತುಳಿತಕ್ಕೊಳಗಾಗಿ ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದ ಓಮನಾಳನ್ನು ಸ್ಥಳೀಯರು ಕೂಡಲೇ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ದುರಾದೃಷ್ಟವಶಾತ್ ರಾತ್ರಿ 11 ಗಂಟೆ ಸುಮಾರಿಗೆ ಚಿಕಿತ್ಸೆ ಫಲಿಸದೇ ಓಮನಾ …
Read More »
BigTv News
May 22, 2025
Breaking News
ಮೂಡಲಗಿರಿಯಪ್ಪ ಹಾಗೂ ರಮೇಶ್ ಅವರು ಕೋರಮಂಗಲ 5ನೇ ಬ್ಲಾಕ್‌ನಲ್ಲಿ ಬುಧವಾರ ಮಧ್ಯಾಹ್ನ 2.45ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು.ಆಗ ಮರದ ಕೊಂಬೆ ಬಿದ್ದು, ಇಬ್ಬರೂ ಗಾಯಗೊಂಡಿದ್ದರು. ಸ್ಥಳೀಯರು ಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಗಿರಿಯಪ್ಪ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
May 22, 2025
Breaking News, Crime
ಶಾಲಾ ಪ್ರಾಂಶುಪಾಲೆ ತನ್ನ ಪತಿಯನ್ನು ಕೊಲೆ ಮಾಡಿದ್ದು, ಈ ಕ್ರೂರ ಕೃತ್ಯದಲ್ಲಿ ತನ್ನ ಮೂವರು ವಿದ್ಯಾರ್ಥಿಗಳನ್ನು ಶಾಮೀಲುಗೊಳಿಸಿರುವುದು ಆಘಾತ ಮೂಡಿಸಿದೆ.ಯವತ್ಮಾಲ್ ನಗರದ ಬಳಿಯ ಚೌಸಾಲಾ ಅರಣ್ಯ ಪ್ರದೇಶದಲ್ಲಿ ಸುಟ್ಟು ಕರಕಲಾದ ದೇಹವೊಂದು ಪತ್ತೆಯಾದಾಗ ಈ ಪ್ರಕರಣ ಬೆಳಕಿಗೆ ಬಂದಿತು. ತನಿಖೆಯ ನಂತರ, ಪೊಲೀಸರು ಆ ದೇಹವನ್ನು ಸನ್‌ರೈಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಶಿಕ್ಷಕ ಶಾಂತನು ದೇಶಮುಖ್ ಎಂದು ಗುರುತಿಸಿದ್ದಾರೆ. ಈ ಕೊಲೆಯ ಹಿಂದಿನ ಆಘಾತಕಾರಿ ತಿರುವು ಎಂದರೆ, ಕೊಲೆಯನ್ನು ಹೊರಗಿನವರು …
Read More »
BigTv News
May 22, 2025
Breaking News
ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಗ್ಯಾಸ್ ಟ್ಯಾಂಕರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಗಡ್ಡವಾಗಿ ಮಗುಚಿ ಬಿದ್ದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ.ಘಟನೆಯಿಂದ ಯಾವುದೇ ಅನಿಲ ಸೋರಿಕೆಯಾಗದ ಕಾರಣ ಹೆದ್ದಾರಿಯಲ್ಲಿನ ವಾಹನ ಸಂಚಾರಕ್ಕೆ ಯಾವುದೇ ಅಡೆತಡೆಯುಂಟಾಗಿಲ್ಲ. ಶಿರಾಡಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇದು ಮೂರನೇ ಅಪಘಾತವಾಗಿದೆ.ಗಾಯಾಳು ಚಾಲಕನನ್ನು ಬಬ್ಲಿ ಯಾದವ್ ಎಂದು ಗುರುತಿಸಲಾಗಿದೆ.ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Read More »
BigTv News
May 22, 2025
Breaking News
ಟೋಲ್ ಪ್ಲಾಜಾ ಮೂಲಕ ಹಾದು ಹೋಗುವಾಗ ಲಾರಿಯೊಂದರ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡು ಸ್ಥಳದಲ್ಲೇ ಹೊತ್ತಿ ಉರಿದ ಆಘಾತಕಾರಿ ಘಟನೆ ಬೆಳಗಾವಿಯಲ್ಲಿ ನಡೆದಿದೆ.ನಿಪ್ಪಾಣಿ ಪಟ್ಟಣದ ಹೊರವಲಯದಲ್ಲಿರುವ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-48ರ ಕೋಗನೊಳ್ಳಿ ಟೋಲ್ ಪ್ಲಾಜಾದಲ್ಲಿ ಈ ಘಟನೆ.ಲಾರಿ ಪಾಸ್ ಆಗುವ ವೇಳೆ ಡೀಸೆಲ್ ಟ್ಯಾಂಕ್ ಬಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿತು. ಈ ವೇಳೆ ಹಣ ಸಂಗ್ರಹ ಮಾಡುವ ಎರೆಡು ಕ್ಯಾಬಿನ್ಗೆ ಅಗ್ನಿ ಆವರಿಸಿಕೊಂಡಿತು.ಲಾರಿ ಹೊತ್ತಿ ಉರಿಯುತ್ತಿದ್ದ ದೃಶ್ಯವನ್ನು ಹೆದ್ದಾರಿಯಲ್ಲಿ ಹೋಗುತ್ತಿದ್ದ ಪ್ರಯಾಣಿಕರೊಬ್ಬರು …
Read More »
BigTv News
May 22, 2025
Breaking News, Crime
ಮಾರುಕಟ್ಟೆಯಲ್ಲಿ ಬಂಗಾರದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಎಂಬ ಆಸೆ ತೋರಿಸಿ ಫೇಸ್‌ಬುಕ್‌ನ ಅಪರಿಚಿತ ವ್ಯಕ್ತಿಯೊಬ್ಬ ನಗರದ ವೈದ್ಯರೊಬ್ಬರಿಗೆ ಸುಮಾರು 2.40 ಕೋಟಿ ರೂ. ವಂಚನೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ. ವಂಚಕನು ವಾಟ್ಸ್‌ಆಪ್‌ನಲ್ಲಿ ಕಳುಹಿಸಿದ ಲಿಂಕ್ ಮೂಲಕ ಸಿಎಂಸಿ ಮಾರ್ಕೆಟ್ ವೆಬ್‌ಸೈಟ್‌ನಲ್ಲಿ ಕಳೆದ ಫೆ.18ರಿಂದ ಮೇ 15ರವರೆಗೆ ಒಟ್ಟು 2,40,92,150 ರೂ. ವೈದ್ಯರು ಹೂಡಿಕೆ ಮಾಡಿದ್ದಾರೆ. ನಾನಾ ಬ್ಯಾಂಕ್ ಖಾತೆಗಳಿಗೆ ಒಟ್ಟು 17 ಬಾರಿ ಹಣ ವರ್ಗಾವಣೆ ಮಾಡಿರುವ …
Read More »
BigTv News
May 22, 2025
Breaking News
ಹುಣಸೂರು ತಾಲೂಕಿನ ಗಾವಡಗೆರೆ ಪಬ್ಲಿಕ್ ಸ್ಕೂಲ್‌ನ ಪ್ರೌಢಶಾಲಾ ಶಿಕ್ಷಕ ಕುಮಾರ್(49) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರಿಗೆ ಪತ್ನಿ, ಇಬ್ಬರು ವೈದ್ಯ ಮಕ್ಕಳಿದ್ದಾರೆ.ಕುಮಾರ್‌ಗೆ ಎದೆನೋವು ಕಾಣಿಸಿಕೊಡಿದ್ದ ಅವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಸ್ವಗ್ರಾಮ ತಾಲೂಕಿನ ಕಳ್ಳಿಕೊಪ್ಪಲಿನಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಿತು
Read More »