Breaking News

ಬ್ಯಾಂಕ್​ ಮ್ಯಾನೇಜರ್ ಬ್ಯಾಂಕ್​ಗೆ ಕನ್ನ..

ಗ್ರಾಮೀಣ ಬ್ಯಾಂಕ್​ವೊಂದರಲ್ಲಿ ಗ್ರಾಹಕರು ಕೋಟ್ಯಂತರ ಹಣ ಹೂಡಿಕೆ ಮಾಡಿದ್ದರು. ತಮ್ಮ ಜಮೀನು ಮಾರಿ ಅದರಿಂದ ಬಂದ ಹಣವನ್ನ ಬ್ಯಾಂಕ್​ನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿದ್ದರು. ನಮ್ಮ ಹಣ ಸೇಫ್​ ಎಂದುಕೊಂಡಿದ್ದ ಗ್ರಾಹಕರಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ, ಬ್ಯಾಂಕ್​ ಮ್ಯಾನೇಜರ್ ಬ್ಯಾಂಕ್​ಗೆ ಕನ್ನ ಹಾಕಿ ಪರಾರಿಯಾಗಿದ್ದಾರೆ. ಗಣೇಶ್ ಬಾಬು ಹೀಗೆ ಹಣ ಆರ್​​ಟಿಜಿಎಸ್​ ಮಾಡಿ ಪರಾರಿಯಾದ ಆರೋಪಿ. ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಕರ್ನಾಟಕ ಗ್ರಾಮೀಣ ಬ್ಯಾಂಕ್​ ಮ್ಯಾನೇಜರ್ ತನ್ನ ಬ್ಯಾಂಕ್​ಗೆ ಕನ್ನ ಹಾಕಿ ಎಸ್ಕೇಪ್​​ ಆಗಿದ್ದಾರೆ. ಹಲವಾರು ವರ್ಷಗಳ ಹಿಂದೆ ಚನ್ನರಾಯಪಟ್ಟಣದಲ್ಲಿ ಕರ್ನಾಟಕ ಬ್ಯಾಂಕ್ ಸ್ಥಾಪನೆಯಾಗಿದೆ. ಈ ಭಾಗದ ಗ್ರಾಮೀಣ ಬ್ಯಾಂಕ್​ಗೆ ಸಾಕಷ್ಟು ಹಳ್ಳಿಗಳ ಜನರು ಹಾಲು ಮಾರಾಟದ ಹಣದಿಂದ ಹಿಡಿದು, ಕೃಷಿ ಹಣ ಹೂಡಿಕೆ ಮಾಡಿದ್ದಾರೆ.

Share News

About BigTv News

Check Also

ಎನಿ ಕಂಡೀಶನ್… ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ ಎಂಟ್ರಿ! ಬೆಳಗ್ಗೆಯೇ ಅಧಿಕಾರ ಸ್ವೀಕಾರ…!

ಭೂಷಣ್ ಬೋರ್ಸೆ ಹೆಗಲಿಗೆ ಅವಳಿ ನಗರದ ಖಾಕಿ ಹೊಣೆ! ನಾಳೆಯಿಂದ ಹುಬ್ಬಳ್ಳಿ–ಧಾರವಾಡಕ್ಕೆ ಹೊಸ ಕಮಿಷನರ್! ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ …

Leave a Reply

Your email address will not be published. Required fields are marked *