ಮಾರುಕಟ್ಟೆಯಲ್ಲಿ ಬಂಗಾರದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಎಂಬ ಆಸೆ ತೋರಿಸಿ ಫೇಸ್‌ಬುಕ್‌ನ ಅಪರಿಚಿತ ವ್ಯಕ್ತಿಯೊಬ್ಬ ನಗರದ ವೈದ್ಯರೊಬ್ಬರಿಗೆ ಸುಮಾರು 2.40 ಕೋಟಿ ರೂ. ವಂಚನೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ. ವಂಚಕನು ವಾಟ್ಸ್‌ಆಪ್‌ನಲ್ಲಿ ಕಳುಹಿಸಿದ ಲಿಂಕ್ ಮೂಲಕ ಸಿಎಂಸಿ ಮಾರ್ಕೆಟ್ ವೆಬ್‌ಸೈಟ್‌ನಲ್ಲಿ ಕಳೆದ ಫೆ.18ರಿಂದ ಮೇ 15ರವರೆಗೆ ಒಟ್ಟು 2,40,92,150 ರೂ. ವೈದ್ಯರು ಹೂಡಿಕೆ ಮಾಡಿದ್ದಾರೆ. ನಾನಾ ಬ್ಯಾಂಕ್ ಖಾತೆಗಳಿಗೆ ಒಟ್ಟು 17 ಬಾರಿ ಹಣ ವರ್ಗಾವಣೆ ಮಾಡಿರುವ ವೈದ್ಯ, ಮಾರ್ಚ್ 11ರಂದು 5 ಲಕ್ಷ ರೂ. ವಿತ್ ಡ್ರಾ ಮಾಡಿದ್ದಾರೆ. ಬಳಿಕ ಹಣ ವಿತ್ ಡ್ರಾ ಮಾಡಲು ನಡೆಸಿದ ಹತ್ತಾರು ಪ್ರಯತ್ನಗಳು ವಿಫಲವಾದವು. ಅನುಮಾನಗೊಂಡ ವೈದ್ಯ ಮೇ 17ರಂದು ‘1930’ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದಾರೆ.ಈ ಕುರಿತು ದಾವಣಗೆರೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

