BigTv News
May 20, 2025
Breaking News, Crime
ರಾಚಯ್ಯ ನಗರದ ಹತ್ತಿರವಿರುವ ಫಾರ್ಮ್ಹೌಸ್ನಲ್ಲಿ ಸಾಕಿದ ಟಗರುಗಳ ಮೇಲೆ ಭಾನುವಾರ ಸಂಜಡ ಬೀದಿ ನಾಯಿಗಳು ದಾಳಿ ನಡೆಸಿದ್ದು, ಬೀರಪ್ಪ ಹನಮಪ್ಪ ಗೊಗೇರಿಯವರಿಗೆ ಸೇರಿದ 7 ಟಗರುಗಳು ಮೃತಪಟ್ಟಿವೆ. ಐದು ಟಗರುಗಳು ಗಂಭೀರ ಗಾಯಗೊಂಡಿವೆ.ತೀವ್ರ ಗಾಯಗೊಂಡ ಟಗರುಗಳಿಗೆ ತಾಲ್ಲೂಕು ಪಶುವೈದ್ಯಾಧಿಕಾರಿ ಡಾ.ಸಂತೋಷ ಫಾರ್ಮ್ಹೌಸ್ಗೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ.ಬೀದಿ ನಾಯಿಗಳ ದಾಳಿಯಿಂದ 7 ಟಗರು ಸಾವನ್ನಪ್ಪಿ, ಕೆಲವು ಟಗರುಗಳು ಗಾಯಗೊಂಡಿವೆ. ಇದರಿಂದ ₹1 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಬೀದಿ ನಾಯಿಗಳ ದಾಳಿಯಿಂದ …
Read More »
BigTv News
May 20, 2025
Breaking News, Crime
ನಿಖಿಲ್ ಸೋಮವಂಶಿ ಅವರ ಮೃತದೇಹವು ಮೇ 8ರಂದು ಬೆಂಗಳೂರಿನ ಅಗರ ಕೆರೆಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಬೆಂಗಳೂರು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ರೆಡ್ಡಿಟ್ ಮತ್ತು ಕೆಲವು ಮಾಧ್ಯಮ ವರದಿಗಳ ಪ್ರಕಾರ, ಕ್ರುಟ್ರಿಮ್ ಸಂಸ್ಥೆಯ ಹೆಸರೇಳಲು ಇಚ್ಛಿಸದ ನಿಖಿಲ್ ಅವರ ಸಹೋದ್ಯೋಗಿಗಳು ಅಮೆರಿಕ ಮೂಲದ ವ್ಯವಸ್ಥಾಪಕರ ಕಿರುಕುಳ ಮತ್ತು ಅಪಾಯಕಾರಿ ಕೆಲಸದ ವಾತಾವರಣದಿಂದಾಗಿ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.ಸಹೋದ್ಯೋಗಿಗಳ ಆರೋಪದ ಪ್ರಕಾರ, ಅಮೆರಿಕ ಮೂಲದ ವ್ಯವಸ್ಥಾಪಕ ರಾಜ್ಕಿರಣ್ ಪಾನುಗಂಟಿ ಅವರು …
Read More »
BigTv News
May 20, 2025
Breaking News, Crime
ಕಾರ್ಯಕ್ರಮವೊಂದರಲ್ಲಿ ಸಂಗೀತ ನುಡಿಸುವ ವಿಚಾರದಲ್ಲಿ ನಡೆದ ಜಗಳದಲ್ಲಿ 18 ವರ್ಷದ ಬಾಲಕನೊಬ್ಬ ಚಾಕು ಇರಿತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ವಾಯುವ್ಯ ದೆಹಲಿಯಲ್ಲಿ ನಡೆದಿದೆ.ಕಾರ್ಯಕ್ರಮವೊಂದರಲ್ಲಿ ಸಂಗೀತ ನುಡಿಸುವ ವಿಚಾರದಲ್ಲಿ ಸೇನ್ ಮತ್ತು ಹುಡುಗರ ಗುಂಪಿನ ನಡುವೆ ಸಣ್ಣಪುಟ್ಟ ವಾಗ್ವಾದ ನಡೆದಿತ್ತು.ಮರುದಿನ ಪ್ರತೀಕಾರವಾಗಿ ಹುಡುಗರ ಗುಂಪು ಅವನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ನಾಲ್ವರು ಬಾಲಾಪರಾಧಿಗಳನ್ನು ಬಂಧಿಸಲಾಗಿದ್ದು, ದಾಳಿಗೆ ಬಳಸಿದ ಆಯುಧವನ್ನು ಇನ್ನೂ ವಶಪಡಿಸಿಕೊಳ್ಳಲಾಗಿಲ್ಲ ಎಂದು …
Read More »
BigTv News
May 20, 2025
Breaking News, Crime
ಪಾಕಿಸ್ತಾನದ ಮೇಲೆ ಭಾರತ ದಾಳಿಯ ಬೆನ್ನಲ್ಲೇ ಉಡುಪಿ ಜಿಲ್ಲೆಯ ಪಾದೂರು ತೈಲ ಸಂಗ್ರಹಾಲಯದ ಮೇಲೆ ಡ್ರೋನ್ ದಾಳಿ ನಡೆದಿದೆ. ಸಂಜೆ 4 ಗಂಟೆಯ ಸುಮಾರಿಗೆ ಈ ದಾಳಿ ನಡೆದಿದ್ದು, ತೈಲ ಸಂಗ್ರಹಾಲಯದ ಒಳಗೆ ಹಾಗೂ ಹೊರ ಭಾಗಕ್ಕೆ ಹಾನಿಯಾಗಿದೆ.ಕೂಡಲೇ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿಯನ್ನು ನೀಡಲಾಗಿತ್ತು. ದಾಳಿಯ ಬೆನ್ನಲ್ಲೇ ಐಎಸ್ಪಿಆರ್ಎಲ್ನ ಅಗ್ನಿಶಾಮಕ ವಾಹನ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿತ್ತು. ಅಷ್ಟೇ ಅಲ್ಲಾ, ಅದಾನಿ …
Read More »
BigTv News
May 20, 2025
Breaking News, Crime
ಮಕ್ಕಳಾಗಲಿಲ್ಲವೆಂದು ಕೊರಗುತ್ತಿದ್ದ ಅವರಿಗೆ 13 ವರ್ಷದ ಹಿಂದೆ ರಸ್ತೆ ಬದಿಯಲ್ಲಿ 3 ದಿನದ ಹೆಣ್ಣುಮಗುವೊಂದು ಸಿಕ್ಕಿತ್ತು. ಕಾನೂನುಪ್ರಕಾರವೇ ಆ ಮಗುವನ್ನು ದತ್ತು ಪಡೆದ ಅವರು ಆ ಅನಾಥ ಮಗುವಿಗೆ ತಾಯಿಯಾದರು. ಅಮ್ಮನಿಗೆ ಬೇಡವಾಗಿ ಬಿದ್ದಿದ್ದ ಆ ಹೆಣ್ಣು ಶಿಶುವಿನ ಜೀವನಕ್ಕೆ ಆಧಾರವಾದರು. ಒಳ್ಳೆಯ ಶಾಲೆಗೆ ಸೇರಿಸಿ ಉತ್ತಮ ಶಿಕ್ಷಣವನ್ನೂ ಕೊಡಿಸಿದರು. 13 ವರ್ಷದ ಆಕೆ ಈಗ 8ನೇ ಕ್ಲಾಸ್ ಓದುತ್ತಿದ್ದಳು. ಮನೆಯಲ್ಲಿ ಎಷ್ಟೇ ಒಳ್ಳೆಯ ಸಂಸ್ಕಾರ ಹೇಳಿಕೊಟ್ಟರೂ ಮನೆಯಿಂದ ಹೊರಗೆ …
Read More »
BigTv News
May 20, 2025
Breaking News, Crime
ಮಹಾರಾಷ್ಟ್ರದ ಮುಂಬೈನ ಮಲಾಡ್ನ ಮಾಲ್ವಾನಿ ಪ್ರದೇಶದಲ್ಲಿ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ. ಗಂಡನಿಂದ ದೂರವಾಗಿದ್ದ ಮಹಿಳೆಯ ಎರಡು ವರ್ಷದ ಮಗಳ ಮೇಲೆ ಆಕೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯುವಕನೇ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ.ಈ ಆರೋಪದ ಮೇಲೆ ಪೊಲೀಸರು ಮಹಿಳೆ ಮತ್ತು ಆಕೆಯ 19 ವರ್ಷದ ಪ್ರಿಯಕರನನ್ನು ಬಂಧಿಸಿದ್ದಾರೆ. ತಾಯಿಯ ಮುಂದೆ ಆಕೆಯ ಎರಡು ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ …
Read More »
BigTv News
May 19, 2025
Breaking News
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಚಿತ್ರದುರ್ಗ ನಗರದ ಸಂತೆ ಮೈದಾನದ ಹತ್ತಿರ ಜಿಲ್ಲಾ ಮಟ್ಟದ ತಂಬಾಕು ತನಿಖಾ ತಂಡವು ತಂಬಾಕು ಉತ್ಪನ್ನಗಳ ಮಾರಾಟಗಾರರ ಅಂಗಡಿಗಳಿಗೆ ದಾಳಿ ಮಾಡಿ ದಂಡ ವಿಧಿಸಿದೆ.ಯುವಜನತೆಯು ಅತೀ ಹೆಚ್ಚಾಗಿ ತಂಬಾಕಿನ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಾಗಿ ಯುವಕರೇ ಬಲಿಯಾಗುತ್ತಿದ್ದಾರೆ ಎಂದು ಯುವಕರಿಗೆ ಮತ್ತು ಅಂಗಡಿ ಮಾಲೀಕರಿಗೆ ತಿಳಿಸುತ್ತಾ ತಂಬಾಕು ಕಾರ್ಯಾಚರಣೆ ನಡೆಸಿದರು.ಸೆಕ್ಷನ್-4 ಅಡಿಯಲ್ಲಿ 29 ಕೇಸುಗಳನ್ನು ದಾಖಲಿಸಿ ರೂ. 3250 …
Read More »
BigTv News
May 19, 2025
Breaking News, Crime
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತನಗಳ್ಳಿ ಗ್ರಾಮದಲ್ಲಿ ಮನೆ ಮುಂದೆ ಕಟ್ಟಿದ್ದ ಹಸುಗಳು ಕಳ್ಳತನವಾಗಿವೆ. ಗ್ರಾಮದ ಕೃಷ್ಣಪ್ಪ ಎಂಬುವರಿಗೆ ಸೇರಿದ 12 ಹಸುಗಳಲ್ಲಿ ಮೂರು ಹಸುಗಳನ್ನು ಕದಿಯಲಾಗಿದೆ. ಈ ಮೂರು ಹಸುಗಳಲ್ಲಿ, ಒಂದು ಹಸು ಇನ್ನೇರಡು ತಿಂಗಳಲ್ಲಿ ಕರು ಹಾಕುತ್ತಿತ್ತು. ಇನ್ನೆರಡು ಹಸುಗಳಿಂದ ಮನೆ ನಡೆಸುವಷ್ಟು ಆದಾಯ ಬರುತ್ತಿತ್ತು. ಇತಂಹ ಹಸುಗಳನ್ನು ಖತರ್ನಾಕ್ ಕಳ್ಳರು ಕದ್ದಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
May 19, 2025
Breaking News, Crime
ಬೈಕ್ ಖರೀದಿ ನೆಪದಲ್ಲಿ ಆನ್ಲೈನ್ನಲ್ಲಿ ಬೈಕ್ ಬುಕ್ ಮಾಡಿ ನಂತರ ಟೆಸ್ಟ್ ಡ್ರೈವ್ ಹೆಸರಲ್ಲಿ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ ಅಲಿಯಾಸ್ ಓಎಲ್ಎಕ್ಸ್ ಪ್ರದೀಪ್ ಬಂಧಿತ ಆರೋಪಿ.ಪ್ರದೀಪ್ನನ್ನು ಬಂಧಿಸಿ ವಿಚಾರಣಗೆ ಒಳಪಡಿಸಿದಾಗಿ ಹಲವು ಸಂಗತಿ ಬಾಯಿ ಬಿಟ್ಟಿದ್ದಾನೆ. ಓಎಲ್ಎಕ್ಸ್ ನಲ್ಲಿ ಬೈಕ್ ಮಾರಾಟಗಾರರನ್ನು ಹುಡುಕುತ್ತಿದ್ದನು. ಟೆಸ್ಟ್ ಡ್ರೈವ್ಗೆ ಬೈಕ್ ಪಡೆಯುವ ವೇಳೆ ದಾಖಲೆಗಳನ್ನು ಪರಿಶೀಲಿಸುತ್ತೇನೆಂದು ಅಸಲಿ ದಾಖಲೆಗಳನ್ನು ಪಡೆಯುತ್ತಿದ್ದನು. ದುಡ್ಡು ಕೊಡುವ ರೀತಿಯಲ್ಲಿ ಬಿಲ್ಡಪ್ ಕೊಟ್ಟು, …
Read More »
BigTv News
May 19, 2025
Breaking News, Crime
ಕೊಸ್ಟರಿಕಾದಲ್ಲಿ ಬೆಕ್ಕಿನ ಸಹಾಯದ ಮೂಲಕ ಡ್ರಗ್ಸ್ ಸಾಗಿಸಲು ಪ್ರಯತ್ನ ಮಾಡಲಾಗಿದೆ.ಪೆಡ್ಲರ್ ಗಳು ಕಿಲಾಡಿ ಐಡಿಯಾ ಬಳಸಿ ಮಾದಕ ದ್ರವ್ಯಗಳನ್ನು ಸಾಗಿಸುತ್ತಾರೆ.ಜೈಲಿನೊಳಗೆ ಡ್ರಗ್ಸ್ ಹೊತ್ತು ಸಾಗುತ್ತಿದ್ದ ಬೆಕ್ಕನ್ನು ಪೊಲೀಸರು ಪತ್ತೆ ಮಾಡಿದ್ದಾರೆ.ಬೆಕ್ಕಿನ ಚರ್ಮದ ಮಧ್ಯೆ 235 ಗ್ರಾಂ ಗಾಂಜಾ ಹಾಗೂ 67 ಗ್ರಾಂ ಕೊಕೇನ್ ಸಾಗಿಸಲಾಗಿದೆ. ಸಂದೇಹ ಬಂದು ಪೊಲೀಸರು ಕಾರ್ಯಚರಣೆ ನಡೆಸಿದ್ದು, ಬೆಕ್ಕಿನ ಮೂಲಕ ಡ್ರಗ್ಸ್ ಅನ್ನು ಕೈದಿಗಳಿಗೆ ಸಾಗಿಸಲಾಗುತ್ತಿದ್ದ ವಿಚಾರ ಗೊತ್ತಾಗಿದೆ.ಕೆಲವು ಟ್ರೈನ್ ಆಗಿರೋ ಬೆಕ್ಕನ್ನು ಬಳಸಿ ಪೆಡ್ಲರ್ …
Read More »