Breaking News

Breaking News

ಶಾಲೆಯ ಬಳಿ ನೀರಿನ ಟ್ಯಾಂಕ್ ಕುಸಿದು ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು!

ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಲಾಗಿದೆ ಎಂದು ಕಾಸಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅವಿನಾಶ್ ಮಂಡ್ಲೆ ತಿಳಿಸಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನೀರಿನ ಟ್ಯಾಂಕ್ ಕುಸಿದು 12 ರಿಂದ 13 ವರ್ಷದೊಳಗಿನ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

Read More »

ಹುಬ್ಬಳ್ಳಿ:ಹೊಸೂರು ಬಸ್ ನಿಲ್ದಾಣದಿಂದ ಹೊರಡುವ ಕೆಲವು ಬಸ್ಸುಗಳ ಅಂಕಣಗಳಲ್ಲಿ ತಿದ್ದುಪಡಿ.

ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಹೊರಡುತ್ತಿದ್ದ ಉಪನಗರ ಸಾರಿಗೆ ಬಸ್ಸುಗಳನ್ನು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿಯ ನೂತನ ನಗರ-ಉಪನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿರುವ ಹಿನ್ನೆಲೆಯಲ್ಲಿ ಲಭ್ಯ ಸ್ಥಳವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುವ ಹಾಗೂ ಪ್ರತ್ಯೇಕವಾಗಿ ಪ್ರಯಾಣಿಕರು ಇಳಿಯುವ ಸ್ಥಳವನ್ನು ಕಲ್ಪಿಸುವ ನಿಟ್ಟಿನಲ್ಲಿ ಹೊಸೂರು ಬಸ್ ನಿಲ್ದಾಣದಿಂದ ಹೊರಡುವ ಕೆಲವು ಮಾರ್ಗಗಳ ಬಸ್ಸುಗಳ ಅಂಕಣಗಳನ್ನು ಮರು ಹೊಂದಾಣಿಕೆ ಮಾಡಲಾಗಿದೆ‌ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ …

Read More »

ಚಿಕ್ಕೋಡಿ:ಮರಕ್ಕೆ ಪಿಕಪ್ ವಾಹನ ಡಿಕ್ಕಿ,ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು.

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಪಿಕಪ್ ವಾಹನ ಡಿಕ್ಕಿ ಹೊಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಜರುಗಿದೆ.ಕೂಲಿ ಕಾರ್ಮಿಕರನ್ನ ವಾಪಾಸು ಕರೆತರುವಾಗ ಈ ಘಟನೆ ಜರುಗಿದೆ. ಸುಮಾರು 12 ಜನ ಕೂಲಿಕಾರ್ಮಿಕರು ಪ್ರಯಾಣಿಸುತ್ತಿದ್ದ ಪಿಕ್‌ಅಪ್ ವಾಹನ ಇದಾಗಿದ್ದು, ಮೂವರಿಗೆ ಗಂಭೀರಗಾಯವಾಗಿದೆ. ಗಾಯಗೊಂಡ ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಐಗಳಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ

Read More »

ಬಾಹ್ಯಾಕಾಶದಿಂದ ನಿರ್ಗಮಿಸಿದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಭೂಮಿಗೆ ತಲುಪಲು ಕ್ಷಣಗಣನೆ

ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಅಮೆರಿಕದ ಗಗನಯಾತ್ರಿಗಳನ್ನು ಮಂಗಳವಾರ ಸಂಜೆ ಭೂಮಿಗೆ ಹಿಂತಿರುಗಿಸಲಾಗುವುದು ಎಂದು ನಾಸಾ ತಿಳಿಸಿದೆ. ಕಳೆದ ಗಗನಯಾತ್ರಿಗೆ ಭೂಮಿಗೆ ಬಂದ ಬಳಿಕ ಇಲ್ಲಿಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳಲು ಬಾಹ್ಯಾಕಾಶ ಸಂಸ್ಥೆಗಳು ಪುನರ್ವಸತಿ ಕೇಂದ್ರ ತೆರೆಯುತ್ತವೆ. ಅದರ ಅಡಿಯಲ್ಲಿ ಹಿಂದಿರುಗುವ ಗಗನಯಾತ್ರಿಗಳಿಗೆ ಭೂಮಿ ಮೇಲೆ ಒಗ್ಗಿಕೊಳ್ಳಲು ಬೇಕಾದ ರೀತಿ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗಿದೆ. ಅವರಲ್ಲಿ ಆ ಕೇಂದ್ರದಲ್ಲಿ ಇಟ್ಟು, ಆರೋಗ್ಯದ ಮೇಲೆ ಮತ್ತೇ ಅವರನ್ನು ಹೊರತರಲಾಗುತ್ತದೆ ಎಂದು ತಿಳಿದುಬಂದಿದೆ.

Read More »

ಎಕ್ಸ್‌ಟೆನ್ಶನ್‌ನಲ್ಲಿ ನವಜಾತ ಶಿಶುವ ಮೃತದೇಹ ಪತ್ತೆ!ಹೊಕ್ಕುಳಬಳ್ಳಿಯನ್ನು ಸಹ ಕತ್ತರಿಸಿಲ್ಲ

ಹಾಸನ ನಗರದ ಪ್ರಮುಖ ವಸತಿ ಪ್ರದೇಶಗಳಲ್ಲಿ ಒಂದಾದ ಕುವೆಂಪುನಗರ ಎಕ್ಸ್‌ಟೆನ್ಶನ್‌ನಲ್ಲಿ ನವಜಾತ ಶಿಶುವೊಂದು ಚರಂಡಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ. ಮಗುವನ್ನು ಯಾರು ಬಿಟ್ಟು ಹೋಗಿದ್ದಾರೆ ಎಂಬುದು ತಿಳಿದಿಲ್ಲ. ನವಜಾತ ಶಿಶುವಿನ ಹೊಕ್ಕುಳಬಳ್ಳಿಯನ್ನು ಸಹ ಕತ್ತರಿಸಲಾಗಿಲ್ಲ.ಅಪರಾಧಿ ನೆರೆಯ ರಾಜ್ಯಗಳಿಂದ ವಲಸೆ ಬಂದ ಕುಟುಂಬಗಳಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಶವವನ್ನು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ.

Read More »

ಕೊಳ್ಳೇಗಾಲ: ವಿದ್ಯುತ್ ಕಂಬ ಏರಿದ ಯುವಕ ವಿದ್ಯುತ್ ತಗಲಿ ಸಾವು.

ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಚಿಕ್ಕದೇವಸ್ಥಾನ ಬೀದಿ ನಿವಾಸಿ ಮಸಣಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಕೊಳ್ಳೇಗಾಲ ಪಟ್ಟಣದ ಲಿಂಗಾಣಪುರ ಹೊರ ವಲಯದ ಜಮೀನಲ್ಲಿ ಹಾದು ಹೋಗಿರುವ 63 ಕೆವಿ ವಿದ್ಯುತ್ ಟವರ್ ಲೈನ್ ತಂತಿ ಹಿಡಿದು ಮಂಗಳವಾರ ಬೆಳಗ್ಗೆ ಆತ್ಮಹತ್ಯೆ ‌ಮಾಡಿಕೊಂಡಿದ್ದಾನೆ. ಕೊಳ್ಳೇಗಾಲ ಪಟ್ಟಣ ಪೊಲೀಸರು ಹಾಗೂ ಗ್ರಾಮಾಂತರ ಠಾಣಾ ಪೊಲೀಸರು‌ ಹಾಗೂ ಸೆಸ್ಕ್ ಅಧಿಕಾರಿಗಳು ಹಾಗೂ ಲೈನ್ ಮ್ಯಾನ್​ಗಳು, ಅಗ್ನಿ ಶಾಮಕದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕೆಳಗೆ ಇಳಿಯುವಂತೆ …

Read More »

ಕಲಬುರ್ಗಿ:ಲಾರಿ ಹರಿದು 5 ವರ್ಷದ ಬಾಲಕ ದುರ್ಮರಣ!

ಲಾರಿಯೊಂದು ಬಾಲಕ ಮೇಲೆ ಹರಿದು ಸ್ಥಳದಲ್ಲೇ 5 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಕಲಬುರ್ಗಿಯ ಮಳಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಡೆದಿದೆ.ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಅಲೂರ ಗ್ರಾಮದ ಕೂಲಿ ಕಾರ್ಮಿಕನ ಮಗು ಅಯ್ಯಪ್ಪ ಬಸವರಾಜ ಮೃತಪಟ್ಟಿರುವ ಬಾಲಕ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಚಿತ್ತಾಪುರ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ ನಡೆಸುತ್ತಿದ್ದಾರೆ.

Read More »

ಒಣಹುಲ್ಲಿನ ಪಕ್ಕವೇ ಆಟವಾಡುತ್ತಿದ್ದ ನಾಲ್ವರು ಮಕ್ಕಳು ಬೆಂಕಿಹತ್ತಿ ಸಾವನಪ್ಪಿದ ಮಕ್ಕಳು.

ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಗೀತಿಲಿಪಿ ಗ್ರಾಮದಲ್ಲಿ ಒಣಹುಲ್ಲು ಇದ್ದ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ,ಅಲ್ಲೇ ಪಕ್ಕದಲ್ಲಿ ಆಟವಾಡುತ್ತಿದ್ದ 4 ಮಕ್ಕಳು ಸಜೀವ ದಹನವಾಗಿದ್ದಾರೆ.ಮಕ್ಕಳ ಶವಗಳನ್ನು ಹೊರತೆಗೆಯಲಾಗಿದೆ. ಆ ಶವಗಳು ಸಂಪೂರ್ಣವಾಗಿ ಕರಕಲಾಗಿ ಹೋಗಿವೆ. ಪ್ರಸ್ತುತ ಬೆಂಕಿ ದುರಂತಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ.ಬೆಂಕಿಯ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.

Read More »

ಅಕ್ರಮ:ಶ್ರೀಗಂಧ ಕಡಿದು ಇಬ್ಬರು ಪರಾರಿ, ಒಬ್ಬನ ಬಂಧನ

ಧುಂಡಶಿ ವಲಯದಲ್ಲಿ ಕಾಯ್ದಿಟ್ಟ ಅರಣ್ಯದ ಶ್ರೀಗಂಧ ನೆಡುತೋಪನಲ್ಲಿ ಅಕ್ರಮವಾಗಿ ಗಿಡಗಳನ್ನು ಕಡಿದು ಸಾಗಾಣಿಕೆ ಮಾಡುತ್ತಿದ್ದ ಮೂವರು ಆರೋಪಿಗಳ ಪೈಕಿ ಇಬ್ಬರು ಪರಾರಿಯಾಗಿದ್ದು ಒಬ್ಬ ಆರೋಪಿ ನಾಗಪ್ಪ ರಾಮಪ್ಪ ಇಳಿಗೇರ ಎಂಬಾತನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಶಿಗ್ಗಾಂವ ಶಾಖೆಯ ಉಪ ವಲಯ ಅರಣ್ಯಾಧಿಕಾರಿಗಳಾದ ಪಿ.ಡಿ.ಮಣಕೂರ ಹಾಗೂ ಧುಂಡಶಿ ವಲಯದ ಗಸ್ತು ಅರಣ್ಯ ಪಾಲಕರಾದ ಗಣಪತಿ ಶಿವಣ್ಣನವರ,ಯಂಕಪ್ಪ ಹೊಸುರ, ಮಹೇಶ ಕಲ್ಲಮ್ಮನವರ, ಮೋಹನ ಶಾಮನೂರ, ಪ್ರಕಾಶಕುಮಾರ ಬಂಕಾಪುರ ಭಾಗವಹಿಸಿದ್ದರು.

Read More »

ಮಹಿಳೆಯ ಮಾಂಗಲ್ಯ ಸರ ಕದ್ದು ಪತಿಯ ತಲೆಯನ್ನು ಕಲ್ಲಿನಿಂದ ಜಜ್ಜಿದ ದುಷ್ಕರ್ಮಿಗಳು.

ಮಹಾರಾಷ್ಟ್ರದಲ್ಲಿ ದುಷ್ಕರ್ಮಿಗಳು ಮಹಿಳೆಯೊಬ್ಬರ ಮಾಂಗಲ್ಯ ಸರ ಕದ್ದು, ಪತಿಗೆ ಕಲ್ಲಿನಿಂದ ಜಜ್ಜಿರುವ ಘಟನೆ ವರದಿಯಾಗಿದೆ. ಪತ್ನಿಯ ಸರ ಕದ್ದವನ್ನು ಬೆನ್ನಟ್ಟುತ್ತಿರುವಾಗ ದುಷ್ಕರ್ಮಿಗಳು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು, ಕಲ್ಲಿನಿಂದ ತಲೆಯನ್ನು ಜಜ್ಜಿ ಪರಾರಿಯಾಗಿದ್ದಾರೆ.ಎರಡು ಪಿಸ್ತೂಲ್‌ಗಳು, 10 ಗುಂಡುಗಳು, ಎರಡು ಚೀಲಗಳಲ್ಲಿ ಲೂಟಿ ಮಾಡಿದ ಆಭರಣಗಳು ಮತ್ತು ಪಲ್ಸರ್ ಮೋಟಾರ್‌ಸೈಕಲ್ ಅನ್ನು ವಶಪಡಿಸಿಕೊಂಡಿದ್ದೇವೆ. ಇತರ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

Read More »