Breaking News

Breaking News

ಯಾದಗಿರಿ :ವಾಹನದಲ್ಲಿ ಉಸಿರು ಗಟ್ಟಿ 30 ಕುರಿಗಳ ಸಾವು.

ಯಲ್ಲೇರಿ ಗ್ರಾಮದ ಕುರಿಗಾಹಿನೊರ್ವ ಗ್ರಾಮದಿಂದ ವಿಜಯಪುರ ಕಡೆಗೆ ಇಂದು ಸಾಗಾಣಿಕೆ ಮಾಡುವಾಗ ಗುಂಡುಗುರ್ತಿ ಸಮೀಪ ಉಸಿರು ಗಟ್ಟಿ 30 ಕುರಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.ಸ್ಥಳಕ್ಕೆ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಪ್ರಾಧ್ಯಾಪಕನಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ, ವಿಡಿಯೋ ವೈರಲ್.

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಡಿಗ್ರಿ ಕಾಲೇಜಿನ ಹಿರಿಯ ಪ್ರಾಧ್ಯಾಪಕನ ವಿರುದ್ಧ ಕಳೆದ 20 ವರ್ಷಗಳಿಂದ ಮಹಿಳಾ ವಿದ್ಯಾರ್ಥಿಗಳ ಮೇಲೆ ಲೈಂಗಿಕ ಕಿರುಕುಳ ಮತ್ತು ಶೋಷಣೆ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ವಿದ್ಯಾರ್ಥಿನಿ ಪ್ರಾಧ್ಯಾಪಕರ ಚೇಷ್ಟೆಯ ವರ್ತನೆಗಳ ಫೋಟೋಗಳು ಮತ್ತು ವೀಡಿಯೊ ತುಣುಕುಗಳನ್ನು ಕಳುಹಿಸಿದಳು.ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಇನ್ನು ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಸಂತ್ರಸ್ತರನ್ನು ಗುರುತಿಸಿ, ಅವರ ಹೇಳಿಕೆ ದಾಖಲಿಸಲು ಪ್ರಯತ್ನಿಸುತ್ತಿದ್ದೇವೆ …

Read More »

ಬೆಂಗಳೂರು:ಜೆಸಿಬಿ ಡಿಕ್ಕಿಯಾಗಿ ವಿದ್ಯುತ್ ಕಂಬ ಮುರಿದುಬಿದ್ದು ಸ್ಥಳದಲ್ಲೇ ಇಬ್ಬರು ಮಹಿಳೆಯರು ಸಾವು.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಮತಿ ಮತ್ತು ಸೋನಿ ಎಂಬುವವರು ಮೃತಪಟ್ಟಿದ್ದಾರೆ. ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ವಿದ್ಯುತ್ ಕಂಬಕ್ಕೆ ಜೆಸಿಬಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಜೆಸಿಬಿ ಡಿಕ್ಕಿಯಾಗಿ ವಿದ್ಯುತ್ ಕಂಬ ಮುರಿದುಬಿದ್ದಿದ್ದು, ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಸದ್ದುಗುಂಟೆ ಪಾಳ್ಯದಲ್ಲಿ ನಡೆದಿದೆ.ಇಬ್ಬರು ತಮ್ಮ ಮಕ್ಕಳನ್ನು ಟ್ಯೂಷನ್ ನಿಂದ ಮನೆಗೆ ಕರೆದುಕೊಂಡು ಬರುವಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬೈಯಪ್ಪನಹಳ್ಳಿ …

Read More »

ಹೆಂಡತಿ ಹೆರಿಗೆಗೆ ಹೋಗಿದ್ದಾಗಲೇ ಸಾವಿನ ಮನೆ ಸೇರಿದ ಪಿಸಿ!ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಮುಬಾರಕ್ ಸಿಕಿಂದರ್ ಮುಜಾವರ್ ಎಂಬ ಪೊಲೀಸ್‌ ಹೆಡ್‌ ಕಾನ್‌ಸ್ಟೇಬಲ್‌ ಒಬ್ಬರು ಬೆಂಗಳೂರಿನ ಆಡುಗೋಡಿಯಲ್ಲಿ ಶೀತಲಗೊಂಡಿರೋ ಕಟ್ಟಡದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಬಾಡಿ ವಾಸನೆ ಬಂದ ಕಾರಣ ಘಟನೆ ಇಂದು ಬೆಳಕಿಗೆ ಬಂದಿದ್ದು, ಕಳೆದ ಒಂದೂವರೆ ತಿಂಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.ಆನ್‌ಲೈನ್‌ ಗೇಮಿಂಗ್‌ನಿಂದಲೂ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಆತ್ಮಹ*ತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ನೋಟ್‌ ಪತ್ತೆಯಾಗಿಲ್ಲ …

Read More »

ಅಪ್ರಾಪ್ತ ಯುವತಿ ಮೇಲೆ ಮೆಜೆಸ್ಟಿಕ್ ಹಣ್ಣು ವ್ಯಾಪಾರಿಯಿಂದ ಬಲತ್ಕಾರ.

ತಾಯಿ ಜತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದಿದ್ದ ಅಪ್ರಾಪ್ತೆಯನ್ನು ಪುಸಲಾಯಿಸಿ ತಿರುಪತಿಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದಡಿ ಹಣ್ಣು ವ್ಯಾಪಾರಿಯೊಬ್ಬನ ವಿರುದ್ಧ ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಆರೋಪಿಯ ಆಕೆಯನ್ನು ಪುಸಲಾಯಿಸಿ ತಿರುಪತಿಗೆ ಕರೆದೊಯ್ದು ದೇವರ ದರ್ಶನ ಮಾಡಿಸಿ ಬಳಿಕ ಮೂರು ದಿನ ಲಾಡ್ಜ್‌ನಲ್ಲಿ ಇದ್ದುಕೊಂಡು ಅತ್ಯಾಚಾರ ಮಾಡಿದ್ದಾನೆ. ಮಾ.16ರಂದು ಅಪ್ರಾಪ್ತೆಯನ್ನು ಬೆಂಗಳೂರಿಗೆ ಕರೆತಂದು ಬಿಟ್ಟಿದ್ದಾನೆ. ಬಳಿಕ ನೇರ ಮನೆಗೆ ತೆರಳಿದ ಅಪ್ರಾಪ್ರೆಯನ್ನು ತಾಯಿ ಪ್ರಶ್ನಿಸಿದಾಗ, …

Read More »

ಮುಂದಿನ ಎರಡು ದಿನಗಳ ಕಾಲ ಕರ್ನಾಟಕದ ಈ ನಾಲ್ಕು ಜಿಲ್ಲೆಗಳಲ್ಲಿ ಮಳೆಯೋ ಮಳೆ!

ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಆದ್ರೆ ಬೆಂಗಳೂರಿಗೆ ಬಿಸಿಲ ಕಾವು ಹೆಚ್ಚಲಿದೆ. ಮಾರ್ಚ್ 18 ಮತ್ತು 19 ರಂದು ಪ್ರತ್ಯೇಕ ಪ್ರದೇಶಗಳಿಗೆ ಶಾಖದ ಅಲೆಯ ಎಚ್ಚರಿಕೆಯೂ ಇದೆ. ದಕ್ಷಿಣ ಒಳನಾಡಿನಲ್ಲಿ ಮುಂದಿನ ದಿನ ಯಾವುದೇ ಪ್ರಮುಖ ಬದಲಾವಣೆಗಳು ಕಂಡುಬರುವುದಿಲ್ಲ.ಬೇಸಿಗೆಯಲ್ಲಿ ತಾಪಕ್ಕೆ ತಂಪೆರೆಯಲು ವರುಣ ಕೂಡ ಬರ್ತಿದ್ದಾನೆ. ಮುಂದಿನ ಎರಡು ದಿನಗಳ ಕಾಲ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ ಯಾಗುವ ಸಾಧ್ಯತೆ ಇದೆ …

Read More »

ಟಾಟಾ ಏಸ್ ವಾಹನ ಪಲ್ಟಿ ಪರಿಣಾಮ ಸುಮಾರು 15ಕ್ಕೂ ಅಧಿಕ ಮಂದಿಗೆ ಗಾಯ

ಅಣ್ಣರೂಕೇರಿ ಗ್ರಾಮದಿಂದ ಚಿಕ್ಕದೇವಮ್ಮನ ಬೆಟ್ಟಕ್ಕೆ ಸುಮಾರು ಇಪ್ಪತ್ತು ಮಂದಿಯನ್ನು ತುಂಬಿಕೊಂಡು ತೆರಳುತಿದ್ದ ವೇಳೆ ಟಾಟಾ ಏಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗಕ್ಕೆ ಪಲ್ಟಿಯಾಗಿದೆ.ಅಪಘಾತದ ಮಾಹಿತಿ ಅರಿತ ಕೂಡಲೇ ಸ್ಥಳಕ್ಕೆ ಬಂದು ಸ್ಥಳೀಯರು ಪೊಲೀಸರ ಸಹಾಯದಿಂದ ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೂ ತಲೆ ಹಾಗೂ ಕೈ ಕಾಲಿಗೆ ತೀವ್ರ ಗಾಯವಾದ ನಾಲ್ಕು ಮಂದಿಯನ್ನು ಮೈಸೂರಿಗೆ ರವಾನೆ ಮಾಡಲಾಗಿದ್ದು, ಹತ್ತಕ್ಕೂ …

Read More »

ಏಕಾಏಕಿ ಮನೆಯ ಮೇಲ್ಛಾವಣಿ ಕುಸಿತ ಮನೆಯಲ್ಲಿದ್ದ ನಾಲ್ವರು ಬಚಾವ್!

ಮಹದೇವಪ್ಪ ಕುಲಕರ್ಣಿ ಎಂಬವರ ಮನೆ ಮೇಲ್ಛಾವಣಿ ಕುಸಿದಿದೆ. ಪವಾಡ ಎಂಬಂತೆ ಮನೆಯಲ್ಲಿದ್ದ ಮಹದೇವಪ್ಪ ಪತ್ನಿ ಲಲಿತಮ್ಮ ಹಾಗೂ ಇಬ್ಬರು ಮಕ್ಕಳಾದ ಪ್ರಶಾಂತ, ಶಂಕ್ರು ಬಚಾವ್‌ ಆಗಿದ್ದಾರೆ.ಘಟನಾ ಸ್ಥಳಕ್ಕೆ ಪಿಡಿಓ, ಹಾಗೂ ನಾಡ ಕಾರ್ಯಾಲಯ ಅಧಿಕಾರಿಗಳು, ಪಶು ವೈದ್ಯರು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಜಿಲ್ಲೆಯ ಮುಂಡರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಚಿಕ್ಕೋಡಿಯಲ್ಲಿ ಕಾರ ಅಪಗಾತ ಮೂವರು ಸಾವು.

ಮಹಾರಾಷ್ಟ್ರ ದ ಸಾಂಗ್ಲಿ ನಗರದ ಕೋಳಿ ಕುಟುಂಬದವರು ಕರ್ನಾಟಕದ ಸವದತ್ತಿ ಎಲ್ಲಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆ ಮದ್ಯ ಮಾರ್ಗದಲ್ಲಿ ಸಂಭವಿಸಿದೆ.ಚಾಲಕ ಸೇರಿ ಮೂವರು ಗಂಭೀರ ಗಾಯಗೊಂಡಿದ್ದು, ಮೂವರನ್ನೂ ಚಿಕ್ಕೋಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಕಲಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Read More »

ಉತ್ತರ್ ಪ್ರದೇಶ್ : ಗ್ಲಿಸರಿನ ಅನಿಲ ಸೋರಿಕೆ: ಸ್ನಾನಗೃಹದಲ್ಲಿ ದಂಪತಿ ಸಾವು

ಗರ್ಹ್ ಮುಕ್ತೇಶ್ವರದಲ್ಲಿ ತಮ್ಮ ಮನೆಯ ಸ್ನಾನಗೃಹದಲ್ಲಿ ದಂಪತಿ ಸಾವನ್ನಪ್ಪಿದ್ದಾರೆ. ಈ ಘಟನೆ ಮಾರ್ಚ್ 14 ರ ಶುಕ್ರವಾರ ಸಂಜೆ ಗರ್ಹ್ ಮುಕ್ತೇಶ್ವರದ ಛೋಟಾ ಬಜಾರ್ ಪ್ರದೇಶದಲ್ಲಿ ನಡೆದಿದೆ. ಗೀಸರ್‌ನಿಂದ ಅನಿಲ ಸೋರಿಕೆಯಾಗಿ ದಂಪತಿ ಸತ್ತಿದ್ದಾರೆ.ಸ್ನಾನಗೃಹದ ಒಳಗೆ ಗ್ಯಾಸ್ ಗೀಸರ್‌ಗಳನ್ನು ಇರಿಸುವುದರಿಂದ ಆಮ್ಲಜನಕ ಕಡಿಮೆ ಆಗುತ್ತೆ ಮತ್ತು ವಿಷಕಾರಿ ಅನಿಲ ತುಂಬಿಕೊಳ್ಳುತ್ತೆ” ಅಂತಾ ಡಾ. ಮಣಿ ಹೇಳಿದ್ದಾರೆ. ಗೀಸರ್‌ನಿಂದ ಅನಿಲ ಸೋರಿಕೆಯಾದಾಗ ದಂಪತಿಗೆ ಗೊತ್ತಾಗಿಲ್ಲ ಮತ್ತು ಅದನ್ನು ಸೇವಿಸಿದ ನಂತರ ಪ್ರಜ್ಞೆ …

Read More »