admin
February 10, 2022
Breaking News, ಕರ್ನಾಟಕ
ಬೇಲೂರು: ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸರ್ವೋದಯ ಕಾಲೇಜಿನಲ್ಲಿ 4 ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಉಮೆಯಾನಿ (30) ಮಂಗಳವಾರ ರಾತ್ರಿ ತಮ್ಮ ತಾಯಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರಿನವರಾದ ಉಮೆಯಾನಿ ಕಳೆದ ಒಂದು ವರ್ಷದಿಂದ ಬೇಲೂರಿನ ವೈಡಿಡಿ ಪ್ರಥಮದರ್ಜೆ ಕಾಲೇಜು ಹಾಗೂ ಸರ್ವೋದಯ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಸರ್ಕಾರ ಉಪನ್ಯಾಸಕರ ಆಯ್ಕೆಗಾಗಿ ಆನ್‍ಲೈನ್‍ನಲ್ಲಿ …
Read More »
admin
February 8, 2022
Breaking News, ಕರ್ನಾಟಕ
ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿವಾದ ಕುರಿತ ಅರ್ಜಿಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿದೆ.ಸೋಮವಾರ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ. ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸರಕಾರ ಪರ ವಕೀಲರು ಮತ್ತು ಅರ್ಜಿ ಪರ ವಾದಗಳನ್ನುಅಲಿಸಿದ ನ್ಯಾಯಮೂರ್ತಿಗಳು, ನಾಳೆ ಮಧ್ಯಂತರ ಅರ್ಜಿದಾರರ ವಿಚಾರಣೆ ಸಲ್ಲಿಸಿದೆ.
Read More »
admin
February 8, 2022
Breaking News, ಕರ್ನಾಟಕ
ಬನ್ನೂರು: ವಿವಿಧ ಪ್ರಾಣಿ, ಪಕ್ಷಿ, ಹಣ್ಣು, ವಸ್ತುಗಳು, ವಾಹನಗಳು ಹಾಗೂ ದೇಹದ ವಿವಿಧ ಭಾಗಗಳನ್ನು ಗುರುತಿಸುವ ಮೂಲಕ ಪಟ್ಟಣದ ನಿವಾಸಿ ಗಿರೀಶ್ ಹಾಗೂ ಗಗನ ದಂಪತಿ ಪುತ್ರ ವೈಭವ್ (2) ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಆಯ್ಕೆಯಾಗಿದ್ದಾನೆ. ಈ ಪೋರ ವರ್ಣಮಾಲೆ ಹಾಗೂ ವಿವಿಧ ಯೋಗದ ಭಂಗಿಗಳನ್ನೂ ಗುರುತಿಸುತ್ತಾನೆ. ಬಾಲಕನ ಸ್ಮರಣಶಕ್ತಿ ಹೆಚ್ಚಾಗಿದೆ. ಈತನ ಪ್ರತಿಭೆಯನ್ನು ಕಂಡ ಪೋಷಕರು ವಿಡಿಯೊ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸಲ್ಲಿಸಿದ್ದರು. ಈಗ …
Read More »
admin
February 5, 2022
Breaking News, SPECIAL NEWS, ಕರ್ನಾಟಕ
ಕಲಘಟಗಿ : ರಂಗಾಯಣವು ಕಾಲೇಜು ಯುವಕರಲ್ಲಿ ರಂಗಕಲೆ ಆಸಕ್ತಿ ಮೂಡಿಸಲು ಇಂತಹ ತರಬೇತಿಗಳನ್ನು ಸಂಘಟಿಸಲಾಗಿದೆ. ಇದರಿಂದ ವ್ಯಕ್ತಿತ್ವ ವಿಕಸನದ ಜೊತೆಗೆ ವೇದಿಕೆಯ ಬಯ ತೊಡೆದುಹಾಕಲು ಅನುಕೂಲವಾಗುತ್ತದೆ ಮತ್ತು ರಂಗಾಯಣವು ಪ್ರತಿವಾರ ವಾರಾಂತ್ಯ ನಾಟಕಗಳನ್ನು ಆಯೋಜಿಸಿ ಕಲೆ ಸಾಹಿತ್ಯ ಸಾಂಸ್ಕೃತಿಕ ವಲಯದಲ್ಲಿ ತನ್ನದೆ ಚಾಪು ಮೂಡಿಸುತ್ತಿದೆ ಎಂದು ರಂಗಾಯಣ ನಿರ್ದೇಶಕರಾದ ರಮೇಶ ಪರವಿನಾಯ್ಕರ ಮಾತನಾಡಿದರು. ಕಲಘಟಗಿಯ ಗುಡ್ ನ್ಯೂಜ್ ಕಲಾ ಹಾಗೂ ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸರಕಾರದ ರಂಗಾಯಣ …
Read More »
admin
February 4, 2022
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು: ಫೆಬ್ರವರಿ 7 ರಂದು ಓಬವ್ವ ಆತ್ಮರಕ್ಷಣೆ ಕಲೆ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ರಾಜ್ಯ ಸರ್ಕಾರ ಪರಿಚಯಿಸುತ್ತಿರುವ ಓಬವ್ವ ಆತ್ಮರಕ್ಷಣೆ ಕಲೆ ಯೋಜನೆಯನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಜಾರಿಗೊಳಿಸಲಾಗಿದೆ. ಪ್ರಾಯೋಗಿಕವಾಗಿ 100 ವಸತಿ ಶಾಲೆಗಳಲ್ಲಿ ಕರಾಟೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆಯುವ ಮಕ್ಕಳಿಗೆ ಇಲಾಖೆ ವತಿಯಿಂದ ಸಮವಸ್ತ್ರ ನೀಡಲಾಗುವುದು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ತರಬೇತಿ ನೀಡಲಾಗುವುದು.
Read More »
admin
February 4, 2022
Breaking News, ಕರ್ನಾಟಕ
ನೆಲಮಂಗಲ: ಕೌಟುಂಬಿಕ ಕಲಹದಿಂದ ನೊಂದಿದ್ದ ವ್ಯಕ್ತಿಯೊಬ್ಬ ಮದ್ಯದೊಂದಿಗೆ ವಿಷ ಬೆರೆಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಕೈಗಾರಿಕಾ ಪ್ರದೇಶದ ಬಳಿ ಈ ಘಟನೆ ನಡೆದಿದೆ. ಮಾಗಡಿಯ ಸಿಡಿಗನಹಳ್ಳಿ ಮೂಲದ ಆನಂದ್ ಕುಮಾರ್ (39) ಆತ್ಮಹತ್ಯೆ ಮಾಡಿಕೊಂಡಿದ್ದ ವಿವಾಹಿತ. ತೋಟನಹಳ್ಳಿಯ ಹೆಂಡತಿ ಮನೆಯಲ್ಲೇ ವಾಸವಿದ್ದ ಆನಂದ್, ಕೌಟುಂಬಿಕ ಕಲಹದಿಂದ ತೀವ್ರವಾಗಿ ನೊಂದಿದ್ದರು. ಇದೇ ಕಾರಣಕ್ಕೆ ಅವರು ತ್ಯಾಮಗೊಂಡ್ಲು ಕೈಗಾರಿಕಾ ಪ್ರದೇಶದಲ್ಲಿ ಮದ್ಯದೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ …
Read More »
admin
February 2, 2022
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು: ರಾಜ್ಯದಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಆದರೆ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಭೀತಿಗೆ ಕಾರಣವಾಗಿದೆ. ಕಳೆದ ಹತ್ತು ದಿನದಲ್ಲಿ ಕೊರೊನಾ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ಜನವರಿ 22 ರಿಂದ 31ರ ವರೆಗೆ ಕರ್ನಾಟಕದಲ್ಲಿ ಸುಮಾರು 461 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 39 ಮಂದಿ ಚಿಕತ್ಸೆಗೆ ಮುನ್ನವೇ ಕೊರೊನಾಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. 39 ಸಾವಿನ ಪೈಕಿ, 32 ಮಂದಿ ಮನೆಯಲ್ಲೇ ಸಾವಿಗೀಡಾಗಿದ್ದಾರೆ. ಇನ್ನು 7 ಮಂದಿ …
Read More »
admin
February 2, 2022
Breaking News, ಕರ್ನಾಟಕ
ದಾಬಸ್‌ಪೇಟೆ: ಸೋಂಪುರ ಹೋಬಳಿಯ ಎಡೇಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಬೆಂಗಳೂರು-ತುಮಕೂರು ರಸ್ತೆಯಲ್ಲಿ ಐರಾವತ ಬಸ್, ಲಾರಿ ಹಾಗೂ ಕಾರಿನ ನಡುವೆ ಸರಣಿ ಅಪಘಾತ ಜ.30 ರಂದು ನಡೆದಿತ್ತು. ಮಧ್ಯಾಹ್ನ 2ರ ವೇಳೆಗೆ ಎಡೇಹಳ್ಳಿ ಬಳಿ ರಸ್ತೆಬದಿಗೆ ನಿಂತಿದ್ದ ಸಕ್ಕರೆ ಮೂಟೆಗಳ ತುಂಬಿದ್ದ ಲಾರಿಗೆ ಹಿಂಬದಿಯಿಂದ ಐರಾವತ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ನ ಮುಂಭಾಗ ಪೂರ್ಣವಾಗಿ ಜಖಂಗೊಂಡಿದ್ದು ಅದೃಷ್ಟವಷಾತ್ ಬಸ್‌ನಲ್ಲಿದ್ದವರು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ …
Read More »
admin
February 2, 2022
Breaking News, ಕರ್ನಾಟಕ
ರೋಣ: ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆ ಹೋದವರೂ ರಸ್ತೆ ಅಪಘಾತದಲ್ಲಿ ಮಸಣ ಸೇರಿದ ದಾರುಣ ಘಟನೆ ತಾಲೂಕಿನ ಹಿರೇಹಾಳ ಮತ್ತು ಬಾದಾಮಿ ತಾಲೂಕಿನ ಜಾಲಿಹಾಳ ಮಧ್ಯೆ ಭಾನುವಾರ ರಾತ್ರಿ ನಡೆದಿದೆ. ಅಂತ್ಯ ಸಂಸ್ಕಾರ ಮುಗಿಸಿ ಗ್ರಾಮಕ್ಕೆ ಮರಳುತ್ತಿದ್ದ ಸಂದರ್ಭದಲ್ಲಿ ಹಿರೇಹಾಳ ಬಳಿ ವಾಹನವೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು ,ಘಟನೆಯಲ್ಲಿ ತಾಲೂಕಿನ ಡ.ಸ. ಹಡಗಲಿ ಗ್ರಾಮದ ಕಾರು ಚಾಲಕ ಮಂಜುನಾಥ ಮಾರನಬಸರಿ (35), ಬಸನಗೌಡ ಪಾಟೀಲ (66) ಮತ್ತು ಸಂಗಮ್ಮ ಪಾಟೀಲ (55) ಮೃತಪಟ್ಟಿದ್ದಾರೆ. …
Read More »
admin
February 2, 2022
Breaking News, ಕರ್ನಾಟಕ
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಂಸತ್ ಸದಸ್ಯರಾಗಿದ್ದ ಹನುಮಂತ ಗೌಡ ಭೀಮನಗೌಡ ಪಾಟೀಲ ಹೃದಯಾಘಾತದಿಂದ ನಿಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನಲ್ಲಿರುವ ರಡ್ಡೇರ ತಿಮ್ಮಾಪುರದ ತಮ್ಮ ಸ್ವಗ್ರಾಮದಲ್ಲಿ ಹೃದಯಾಘಾತಕ್ಕೊಳಗಾಗಿದ್ದರು, ಅವರನ್ನು ತಕ್ಷಣವೇ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ಸೇರಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
Read More »