admin
September 12, 2019
ಕರ್ನಾಟಕ, ಸುದ್ದಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕುಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು,ಪುತ್ತೂರು, ಕಡಬ, ಬೆಳ್ತಂಗಡಿ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ಒಂದು ದಿನದ ರಜೆ ನೀಡಲಾಗಿದೆ.ಪದವಿ ಮತ್ತು ನಂತರದ ತರಗತಿಗಳು ಎಂದಿನಂತೆ ನಡೆಯಲಿವೆ . ಬಂಟ್ವಾಳ ತಾಲ್ಲೂಕಿನ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಮುಂದುವರೆದ ಬಾರೀ ಮಳೆಯಿಂದಾಗಿ ಚಿಕ್ಕೋಡಿ ಭಾಗದ ಜನ ತತ್ತರಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು, ರಾಯಬಾಗ ತಾಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿಗ್ರಾಮ ಪಂಚಾಯತಿ ಒಳಗಡೆ ನೀರು ನುಗ್ಗಿದೆ.ಎಸ್ ಡಿ ಆರ್ ಎಪ್, ಭಾರತೀಯ ಸೇನೆ, ಪೊಲೀಸ್ ಇಲಾಖೆ ಸೇರಿ ಕಾರ್ಯಾಚರಣೆ ಮುಂದುವರೆದಿದ್ದು,ಬಾವನ ಸೌಂದತ್ತಿಯಲ್ಲಿ ೨೦ ಕ್ಕೂ ಹೆಚ್ಚು ಕುಟುಂಬಗಳನ್ನು ರಕ್ಷಣೆ ಮಾಡಿದ್ದಾರೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಜಿಲ್ಲೆಯ ಅಗಸರಹಳ್ಳಿ ಗ್ರಾಮದ ರವಿಕುಮಾರ್ ರಾಣಿ ದಂಪತಿಗಳ ಪುತ್ರಿ ಕೆ.ಆರ್.ಪೇಟೆ ಪಟ್ಟಣದ ಪ್ರಿಯದರ್ಶಿನಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹೇಮಾವತಿ(7) ಮೃತ ದುರ್ದೈವಿಯಾಗಿದ್ದಾರೆ.ಈಕೆಯ ಸಹೋದರಿ ಪ್ರೇರಣ(5)ಕೂಡ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಜೆಎಸ್ ಎಸ್ ಆಸ್ಪತ್ರೆಯಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಹೇಮಾವತಿ ಮತ್ತು ಪ್ರೇರಣಾ ಸಹೋದರಿಯರು ಚಿಕಿತ್ಸೆ ಪಡೆಯುತ್ತಿದ್ದರು.ವೈದ್ಯರ ಸಲಹೆ ಮೇರೆಗೆ ಅಪೋಲೋ ಆಸ್ಪತ್ರೆಯಲ್ಲಿ ಸ್ಥಳಾಂತರಿಸಿ ಚಿಕಿತ್ಸೆ ಪಡೆಯುತ್ತಿದ್ದರು.ಇಂದು ಮುಂಜಾನೆ ಹೇಮಾವತಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರೆ …
Read More »
admin
September 12, 2019
ಕರ್ನಾಟಕ, ಸುದ್ದಿ
ಯಾದಗಿರಿ ಗುರುಮಠಕಲ್ :ನನ್ನ ಸ್ಚಗ್ರಾಮವಾಗಿರುವ ಕಂದಕೂರು ಗ್ರಾಮದಲ್ಲಿ ಜರುಗುವ ಕೊಂಡ್ಯೆಮ್ಮಾಯಿ ಜಾತ್ರೆಯು ತುಂಬಾವಿಶಿಷ್ಟವಾಗಿದೆ, ಆದ್ದರಿಂದ ನೆರೆಯ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದು ಶಾಸಕನಾದ ನಾನು ಗ್ರಾಮದ ಅಭಿವೃದ್ಧಿಗೆ ಬದ್ಧನಾಗಿದ್ದೆÃನೆ ಎಂದು ಶಾಸಕ ನಾಗನಗೌಡ ಕಂದಕೂರ ಬರವಸೆ ನೀಡಿದರು.ಹತ್ತಿರದ ಕಂದಕೂರಿನಲ್ಲಿ ಸೋಮವಾರ ಜರುಗಿದ ಗ್ರಾಮದೇವತೆ ಕೊಂಡ್ಯೆಮ್ಮಾಯಿಒ ಜಾತ್ರೆಯಲ್ಲಿ ರ‍್ಶನಪಡೆದು ಮಾತನಾಡಿದ ಅವರು, ಈಗಾಗಲೆ ದೇವಸ್ಥಾನದ ಅಭಿವೃದ್ಧಿಗಾಗಿ ರೂ.೧ ಕೋಟಿ ಅನುದಾನವನ್ನು ನೀಡಲಾಗಿದೆ, ಪ್ರವಾಸಿ ಕೇಂದ್ರವಾಗಿ ಬೆಟ್ಟವನ್ನು ಅಬಿವೃದ್ಧಿಪಡಿಸುವುದು, ಮೂಲಸೌರ‍್ಯಗಳನ್ನು ಕಲ್ಪಿಸುವುದು, ಉದ್ಯಾನವನದ ನರ‍್ಮಾಣ, …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಸಾಲದ ಬಾಧೆ ತಾಳಲಾರದೆ ಮಂಡ್ಯ ಜಿಲ್ಲೆ ಮುರುಕನಹಳ್ಳಿ ಗ್ರಾಮದ ರಾಮೇಗೌಡರ ಪುತ್ರನಾದಪ್ರಗತಿಪರ ರೈತ ಎಂ.ಆರ್.ಯೋಗೇಶ್ (45) ಆತ್ಮಹತ್ಯೆಗೆ ಶರಣಾಗಿದ್ದಾರೆ.ಮಂಡ್ಯ ಜಿಲ್ಲೆ ಮುರುಕನಹಳ್ಳಿ ಗ್ರಾಮದ ಹೊರವಲಯದ ತೋಟಗಾರಿಕೆ ಫಾರಂ ಬಳಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೃಷಿ ಚಟುವಟಿಕೆಗಳಿಗೆ ಹಾಗೂ ತಮ್ಮ ಮಗಳ ಮದುವೆಗೆ 10ಲಕ್ಷರೂಪಾಯಿಗಳಿಗೂ ಹೆಚ್ಚಿನ ಸಾಲ ಮಾಡಿದ್ದರು ಎನ್ನಲಾಗಿದೆ.ಇಂದು ಬೆಳಿಗ್ಗೆ ಮುಂಜಾನೆ ಎದ್ದು ಜಮೀನಿಗೆ ಹೋದಾಗ ಮನನೊಂದಿದ್ದ ಯೋಗೇಶ್ ಅಲ್ಲಿಯೇ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಗ್ರಾಮಾಂತರ ಠಾಣೆಯ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಗಳೂರು: ನಿರಂತರ ಮಳೆಯಿಂದಾಗಿದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ನದಿಗಳ ಹರಿವು ಮಟ್ಟ ಹೆಚ್ಚಳ ಹೆಚ್ಚಾಗಿದೆ.ಬಂಟ್ವಾಳ ನೇತ್ರಾವತಿ ನದಿ ನೀರಿನ ಮಟ್ಟ 7.7 ಮೀ.ಹಾಗೂವಉಪ್ಪಿನಂಗಡಿ ನೇತ್ರಾವತಿ ನದಿ ನೀರಿನ ಮಟ್ಟ 28.2 ಮೀ. ಮಟ್ಟಕ್ಕೆ ತಲುಪಿದೆ.ಅಲ್ಲದೇ ಉಪ್ಪಿನಂಗಡಿ ಕುಮಾರಧಾರ ನದಿ ನೀರಿನ ಮಟ್ಟ 21.0 ಮೀ., ಗುಂಡ್ಯ ನದಿ ನದಿ ನೀರಿನ ಮಟ್ಟ 4.8 mtr(80.8 MSL) ಗೆ ಹೆಚ್ಚಳವಾಗಿದೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕೋಡಿ: ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿಪಂಚಗಂಗಾ ನದಿ ನೀರಿನಿಂದ ರಾಷ್ಟ್ರೀಯ ಹೆದ್ದಾರಿ 4 ಸಂಪೂರ್ಣ ಜಲಾವೃತ್ತಗೊಂಡಿದೆ. ಬೆಂಗಳೂರು-ಪೂಣೆ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಮಹಾರಾಷ್ಟ್ರದ ಕೊಲ್ಲಾಪುರ ಬಳಿ, ನಿಪ್ಪಾಣಿಯ ಯಮಗರ್ಣಿ ಬಳಿ ಹೆದ್ದಾರಿಗೆ ನೀರು ಹರಿದು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಈ ಹೆದ್ದಾರಿಯಲ್ಲಿ ನಿತ್ಯ ಲಕ್ಷಾಂತರ ವಾಹನಗಳು ಓಡಾಡುತ್ತವೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಅಂಗನವಾಡಿ ಕೇಂದ್ರದಲ್ಲಿ ಹೋಬಳಿಯ ಎಲ್ಲಾ ಪಲಾನುಭಾವಿಗಳಿಗೆ ಬಾಂಡ್ ವಿತರಿಸುವುದಾಗಿ ಎಲ್ಲರೂ ಮಕ್ಕಳೊಂದಿಗೆ ಅಂಗನವಾಡಿ ಕೇಂದ್ರಕ್ಕೆ 9 ಗಂಟೆಗೆ ಹಾಜರಾಗಬೇಕು ಎಂದು ಅಧಿಕಾರಿಗಳು ತಿಳಿದಿದ್ದಾರೆ.ಆದರೆ ಜಿಡಿ ಜಿಡಿ ಮಳೆಯಲ್ಲಿಯೋ ಮಕ್ಕಳೊಂದಿಗೆ ಬಂದಿರುವ ತಾಯಿ ಮಕ್ಕಳಿಗೆ ಸಕಾಲಕ್ಕೆ ಅಧಿಕಾರಿಗಳು ಬಂದು ಭಾಗ್ಯಲಕ್ಷ ಬಾಂಡ್ ವಿತ್ತರಿಸದ ಕಾರಣ ಆಕ್ರೋಷ ವ್ಯೆಕ್ತಪಡಿಸಿದರು.ಅದಿಕಾರಗಳನ್ನು ಪೋನ್ ಮೂಲಕ ಸಂಪರ್ಕಿಸಿದಾಗ ಬೇಜವ್ದಾರಿ ಉತ್ತರ ನೀಡಿ ನೀವೇನು ನಮ್ಮಗೆ ಸಂಬಳ ಕೊಡುವುದಿಲ್ಲ ಬರುವವರೆಗೂ ಕಾಯಿರಿ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಜಿಲ್ಲೆಯ ಶ್ರೀ ಚನ್ನಬಸವೇಶ್ವರ ಕಲ್ಲುಮಠದ ಶ್ರೀ ಡಾ.ವಿರೂಪಾಕ್ಷರಾಜಯೋಗಿಗಳು ವೀರಶೈವ ಲಿಂಗಾಯತರತ್ನ ಸಂಶೋಧನಾ ಕೃತಿಯನ್ನು ಹೊರತಂದಿದ್ದು ವೀರಶೈವ ಲಿಂಗಾಯತ ಒಂದೇ ಧರ್ಮವಾಗಿದ್ದು ಧರ್ಮವಿಭಜನೆಗೆ ಮುಂದಾಗಿರುವ ದ್ರೋಹಿಗಳು ಬಹಿರಂಗ ಚರ್ಚೆಗೆ ಬಂದರೆ ದಾಖಲೆಗಳ ಸಮೇತವಾಗಿ ಒಂದೇ ಧರ್ಮವೆಂದು ಸಾಬೀತು ಪಡಿಸುತ್ತೇನೆ ಎಂದು ಶ್ರೀವಿರೂಪಾಕ್ಷ ರಾಜಯೋಗಿಗಳು ಸವಾಲು ಹಾಕಿದ್ದಾರೆ. ವೀರಶೈವ ಧರ್ಮದ ಬಗ್ಗೆ ಹೇಳಿಕೆ ನೀಡಿರುವ ಪೇಜಾವರ ಶ್ರೀಗಳ ನಿರ್ಧಾರವನ್ನು ಸ್ವಾಗತಿಸಿರುವ ರಾಜಯೋಗಿಗಳು ಮಾಜಿಸಚಿವ ಎಂ.ಬಿ.ಪಾಟೀಲ್ ಧರ್ಮದ್ರೋಹಿಯಾಗಿದ್ದಾರೆ. ವೀರಶೈವ ಧರ್ಮವನ್ನು ವೀರಶೈವ ಲಿಂಗಾಯತ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ : ಜಿಲ್ಲೆಯ ಪಟ್ಟಣದ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದಿಂದ ಸಧ್ಯದಲ್ಲಿಯೇ ನಡೆಯಲಿರುವ ಉಪಚುನಾವಣೆಯಲ್ಲಿ ಬಿಎಸ್ ಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಹೋರಾಟ ನೀಡಲಾಗುವುದು. ದೇಶದ ಅತೀ ದೊಡ್ಡ 3ನೇ ಪಕ್ಷವಾಗಿರುವ ಬಿ.ಎಸ್.ಪಿ ಅಭ್ಯರ್ಥಿಯನ್ನು ತಾಲ್ಲೂಕಿನ ಪ್ರಜ್ಞಾವಂತ ಮತದಾರರು ಗೆಲ್ಲಿಸಿ ಆಶೀರ್ವದಿಸಬೇಕು ಎಂದು ರಾಜ್ಯ ಬಿಎಸ್ ಪಿ ಪ್ರಧಾನ ಕಾರ್ಯದರ್ಶಿ ಡಾ.ಕೃಷ್ಣಮೂರ್ತಿ ಮನವಿ ಮಾಡಿದರು.ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ಪಿ ಪಕ್ಷವು ಜೆಡಿಎಸ್ ಪಕ್ಷದೊಂದಿಗೆ ಸ್ಥಾನ ಹೊಂದಾಣಿಕೆ …
Read More »