Breaking News

ಸಾಲದ ಬಾಧೆ ತಾಳಲಾರದೆ ಪ್ರಗತಿಪರ ರೈತ ನೇಣಿಗೆ ಶರಣು.

ಮಂಡ್ಯ: ಸಾಲದ ಬಾಧೆ ತಾಳಲಾರದೆ ಮಂಡ್ಯ ಜಿಲ್ಲೆ ಮುರುಕನಹಳ್ಳಿ ಗ್ರಾಮದ ರಾಮೇಗೌಡರ ಪುತ್ರನಾದಪ್ರಗತಿಪರ ರೈತ ಎಂ.ಆರ್.ಯೋಗೇಶ್ (45) ಆತ್ಮಹತ್ಯೆಗೆ ಶರಣಾಗಿದ್ದಾರೆ.ಮಂಡ್ಯ ಜಿಲ್ಲೆ ಮುರುಕನಹಳ್ಳಿ ಗ್ರಾಮದ ಹೊರವಲಯದ ತೋಟಗಾರಿಕೆ ಫಾರಂ ಬಳಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೃಷಿ ಚಟುವಟಿಕೆಗಳಿಗೆ ಹಾಗೂ ತಮ್ಮ ಮಗಳ ಮದುವೆಗೆ 10ಲಕ್ಷರೂಪಾಯಿಗಳಿಗೂ ಹೆಚ್ಚಿನ ಸಾಲ ಮಾಡಿದ್ದರು ಎನ್ನಲಾಗಿದೆ.ಇಂದು ಬೆಳಿಗ್ಗೆ ಮುಂಜಾನೆ ಎದ್ದು ಜಮೀನಿಗೆ ಹೋದಾಗ ಮನನೊಂದಿದ್ದ ಯೋಗೇಶ್ ಅಲ್ಲಿಯೇ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಗ್ರಾಮಾಂತರ ಠಾಣೆಯ ಪೋಲಿಸರಿಗೆ ಗ್ರಾಮದ ಮುಖಂಡ ಸುದ್ಧಿಯನ್ನು ಮುಟ್ಟಿಸಿದ್ದು ಸಬ್ ಇನ್ಸ್ ಪೆಕ್ಟರ್ ಆನಂದೇಗೌಡ ಸ್ಥಳಕ್ಜೆ ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.ಮೃತರ ಬಂಧುಗಳ ಆಕ್ರಂಧನವು ಮುಗಿಲು ಮುಟ್ಟಿದೆ.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *