admin
September 12, 2019
ಕರ್ನಾಟಕ, ಸುದ್ದಿ
ಚಿತ್ರದುರ್ಗ: ಬೇರೆ ಇಲಾಖೆ ನೌಕರರನ್ನು ರೆವೆನ್ಯೂ ಇಲಾಖೆಗೆ ವರ್ಗಾವಣೆ ಮಾಡುವುದನ್ನು ವಿರೋಧಿಸಿ ಮತ್ತು ವಾರಕ್ಕೊಂದು ರಜೆ ಖಡ್ಡಾಯವಾಗಿ ನೀಡ ಬೇಕೆಂದು ಆಗ್ರಹಿಸಿ ಗ್ರಾಮ ಲೆಕ್ಕಾಧಿಕಾರಿ ಸಂಘದಿಂದ ಗ್ರಾಮಲೆಕ್ಕಾಧಿಕಾರಿಗಳು ಇಂದು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಚಿತ್ರದುರ್ಗ ಜಿಲ್ಲೆಯ ಆರೂತಾಲೂಕಿನ ಸಿಬ್ಬಂದಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
Read More »
admin
September 12, 2019
ಕರ್ನಾಟಕ, ಸುದ್ದಿ
ಯಾದಗಿರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಸಿಎಂ ಆಗಲಿ ಎಂದು ಹಾರೈಸಿ ಯಾದಗಿರಿಯಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ನಡೆಸಿದ್ದಾರೆ.ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಮಹಾಂತೇಶ್ವರ ಮಂದಿರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಮಾಗನೂರ ನೇತೃತ್ವದಲ್ಲಿ ಬಿ.ಎಸ್.ವೈ ಸಿಎಂ ಆಗಲು ಪೂಜೆ ನಡೆಸಲಾಯಿತು. ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪೂಜೆಯಲ್ಲಿ ಭಾಗವಹಿಸಿ ಬಿ.ಎಸ್.ವೈ ಸಿಎಂ ಅಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕು ಘಟಕದ ವತಿಯಿಂದ ಆಗಸ್ಟ್ 3ರಂದು ಹಮ್ಮಿಕೊಂಡಿರುವ ಬಸವ ಜಯಂತಿ, ಪ್ರತಿಭಾ ಪುರಸ್ಕಾರ, ಹಾಗೂ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತಮ್ಮ ವಿರೋಧವಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಹಾಗೂ ವೀರಶೈವ ಮಹಾಸಭಾ ಮುಖಂಡ ಮಾಧವಪ್ರಸಾದ್ ಹಾಗೂ ತಾಲ್ಲೂಕು ವೀರಶೈವ ಮಹಾಸಭಾದ 13ಮಂದಿ ನಿರ್ದೇಶಕರು ತಿಳಿಸಿದ್ದಾರೆ.ಪಟ್ಟಣದ ಕೆಂಗೇಗೌಡ ವಾಣಿಜ್ಯ ಕಟ್ಟಡದಲ್ಲಿರುವ. ಹಳೆ ವೀರಶೈವ ಮಹಾಸಭಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಆಗಸ್ಟ್ 3ರಂದು ನಡೆಯುವ ಸಮಾರಂಭವನ್ನು …
Read More »
admin
September 12, 2019
ಕರ್ನಾಟಕ, ಸುದ್ದಿ
ಕೋಲಾರ: ಆಪರೇಷನ್ ಕಮಲದ ಬಗ್ಗೆ ಸಿಎಂ ಕುಮಾರಸ್ವಾಮಿ ಜಾಗ್ರತೆ ವಹಿಸಲಿಲ್ಲ ಎಂದುಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವರ್ಷದ ಹಿಂದೆ ಆಪರೇಷನ್ ಕಮಲದ ಬಗ್ಗೆ ಹೇಳಿದ್ದರೂ ಕುಮಾರಸ್ವಾಮಿ ಗಮನಕೊಡಲಿಲ್ಲ.ಬಿಜೆಪಿ ಕುತಂತ್ರದ ಬಗ್ಗೆ ಎಚ್ಚರಿಕೆ ತೆಗೆದುಕೊಂಡಿದ್ರೆ ಈಗಿನ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.-ಬಿಜೆಪಿ ಮುಖಂಡರು ಐದು ಕೋಟಿ ರುಪಾಯಿ ಕೊಟ್ಟಿದ್ದ ಬಗ್ಗೆ ಕುಮಾರಸ್ವಾಮಿಗೆ ಮೊದಲೆ ತಿಳಿಸಿದ್ದೆ.ಎಲ್ಲರಲ್ಲೂ ವಿಶ್ವಾಸವಿಟ್ಟಿದ್ದ ಕುಮಾರಸ್ವಾಮಿ ನಡವಳಿಕೆ ಈ ಪರಿಸ್ಥಿತಿಗೆ ತಂದಿದೆ ಎಂದು ತಿಳಿಸಿದರು.
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದಆರೋಗ್ಯವಂತ ಮಕ್ಕಳ ಸ್ಪರ್ಧೆ ನಡೆಯಿತು.ಸ್ಪರ್ಧೆಯಲ್ಲಿ ವಿಜೇತರಾದ ಮೂವರು ಮಕ್ಕಳಿಗೆ ನಗಧು ಬಹುಮಾನವನ್ನು ವಿತರಿಸಿದ ಹಿರಿಯ ಪುರಸಭೆ ಸದಸ್ಯೆ ಮಹಾದೇವಿನಂಜುಂಡ ಮಾತನಾಡಿ ತಾಯಂದಿರು ಮಕ್ಕಳ ಆರೋಗ್ಯದ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಆರೋಗ್ಯ ಇಲಾಖೆಯು ಉಚಿತವಾಗಿ ನೀಡುತ್ತಿರುವ ಲಸಿಕೆಗಳನ್ನು ಮಕ್ಕಳಿಗೆ ಕಡ್ಡಾಯವಾಗಿ ಕೊಡಿಸುವ ಮೂಲಕ ಮಕ್ಕಳ ಆರೋಗ್ಯ ಸಂವರ್ಧನೆಗೆ ಮುಂದಾಗಬೇಕು ಎಂದು ಮನವಿ ಮಾಡಿದ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚನ್ನಬಸವಯ್ಯನ ಹಟ್ಟಿಯಲ್ಲಿ ಬಿಸಿ ಊಟದಲ್ಲಿ ಹಲ್ಲಿ ಬಿದ್ದದ್ದರಿಂದ 30 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ ರಾಗಿದ್ದಾರೆ.ಅಸ್ವಸ್ಥ ಮಕ್ಕಳಿಗೆ ನಾಯಕನ ಹಟ್ಟಿ ಪಿಹೆಚ್ಸಿ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕೋಡಿ :ಚಲಿಸುತ್ತಿದ್ದ ಒಮಿನಿ ವಾಹನದಲ್ಲಿ ದಿಡೀರ್ ಬೆಂಕಿ ಕಾಣಿಸಿಕೊಂಡಿರುವ ಘಟನೆ ಸದಲಗಾ ಪಟ್ಟಣದಲ್ಲಿ ನಡೆದಿದೆ. ನೋಡ-ನೊಡುತ್ತಿದ್ದಂತೆಯೆ ಓಮಿನಿ ವಾಹನ ಹೊತ್ತಿ ಉರಿದಿದ್ದು, ಪ್ರಯಾಣಿಕರು ಬೆಂಕಿ ಹತ್ತುತ್ತಿದ್ದಂತೆಯೆ ಹೊರಬಂದು ಬಚಾವ್ ಆಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸುತ್ತಲೂ ಜನ ನಿಂತು ನೊಡುವಾಗಲೇ ವಾಹನದ ಗ್ಯಾಸ್ ಸಿಲಿಂಡರ್ ಬ್ಲಾಸ್ಟ ಆಗಿದೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಬೆಳಗಾವಿ: ನಗರದಲ್ಲಿ ಪ್ರತಿಷ್ಠಿತ ಕಾಲೇಜ್ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ೨ ಪ್ರತ್ಯೆಕ ಜಾಲವನ್ನು ಪತ್ತೆ ಹಚ್ಚುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದು, ೮ ಜನರನ್ನು ಇಂದು ಬಂಧಿಸಿದ್ದಾರೆ. ಟ್ರಕ್ ಚಾಲಕ ಅಖಿಲಅಹ್ಮದ್ ಕುತಬುದ್ದೀನ್ ಮುನವಳ್ಳಿ ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರಗಳಿಂದ ಮಾದಕ ದ್ರವ್ಯ ತರುತ್ತಿದ್ದ. ಆತೀಪ್ ನಜೀರ್ ಅಹಮ್ಮದ್ ಚಚಡಿ ಹಾಗೂ ಸಲ್ಮಾನ್ ಪತ್ತೆ ಖಾನ್ ಮಾರಾಟ ಮಾಡುತ್ತಿದ್ದರು. ಸೂರಜ್ ಕಲ್ಲಪ್ಪ ಅಗಸರ್ ಹಾಗೂ ಅಮೀರ್ ಅಬ್ದುಲ್ ಲತೀಫ್ ಬೇಗ್ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿತ್ರದುರ್ಗ: ಅಪಘಾತವಾಗಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಒರ್ವ ಸ್ಥಳದಲ್ಲೇ ಸಾವು, ಮೂರು ಮಂದಿಗೆ ಗಂಭೀರ ಗಾಯಗೊಂಡಿದ್ದಾರೆ. ಚಿತ್ರದುರ್ಗ ಹೊರವಲಯದ ಕುಂಚಿಗನಾಳ್ ಬಳಿ ಘಟನೆ ನಡೆದಿದೆ. ಇದೇ ಲಾರಿಗೆ ಇನ್ನೋವಾ ಕಾರು ಡಿಕ್ಕಿಯಾಗಿ 4 ಮಂದಿ ಮೃತ ಪಟ್ಟಿದ್ದರು.ಲಾರಿ ಸ್ಥಳಾಂತರಿಸದೇ ಇದಿದ್ದರಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಹುಬ್ಬಳ್ಳಿ ನಿವಾಸಿ ಅರುಣ್, (19) ಮೃತ ದುರ್ಧೈವಿ. ಶಿರಿಶಾ, ಪವನ್, ಸದಾನಂದ ಗಂಭೀರ ಗಾಯಾಳುಗಳು.ಗಾಯಾಳುಗಳಿಗೆ ಚಿತ್ರದುರ್ಗ ಜಿಲ್ಲಾ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಗಳೂರು: ಮಂಗಳೂರಿನಲ್ಲಿ ಮತ್ತೆಮಳೆ ಚುರುಕುಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದಲೂ ಎಡೆಬಿಡದೆ ಮಳೆ ಸುರಿಯುತ್ತಿದ್ದು ಇಂದು ದಿನವಿಡೀ ಮಳೆಯಾಗುವ ಸಾಧ್ಯತೆ ಇದೆ. ಮಂಗಳೂರು ನಗರದಲ್ಲಿ ಮಳೆ ವ್ಯಾಪಕವಾಗಿ ಸುರಿಯುತ್ತಿರುವ ಹಿನ್ನೆಲೆ ರಸ್ತೆಯಲ್ಲಿ ನೀರು ತುಂಬಿ ಸಂಚಾರಕ್ಕೆ ಅಡ್ಡಿ ಉಂಟಾಯ್ತು. ಇನ್ನೂ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಯ್ತು. ನೇತ್ರಾವತಿ, ಕುಮಾರಧಾರ ನದಿ ನೀರಿನ ಮಟ್ಟ ಏರಿಕೆಯಾಗಿದ್ದು ನದಿ ಪ್ರದೇಶದಲ್ಲಿ ವಾಸಿಸುವ ಜನರ್ರಿಗೆ ಹಾಗೂ …
Read More »