admin
September 12, 2019
ಕರ್ನಾಟಕ, ಸುದ್ದಿ
ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದ ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ಬಸ್ ನಲ್ಲಿಯೇ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ.ಬೆಂಗಳೂರಿನಿಂದ ಮಧ್ಯಾಹ್ನ 2 ಘಂಟೆಗೆ ಹೊರಟಿದ್ದ ವೋಲ್ವೋ ಬಸ್ ನಲ್ಲಿದ್ದ ಗೋಪಾಲ್ ಭಂಡಾರಿಯವರು ಮಂಗಳೂರಿನ ಬಸ್ ನಿಲ್ದಾಣ ತಲುಪಿದ ನಂತರವೂ ಇಳಿಯದ್ದನ್ನು ಕಂಡ ನಿರ್ವಾಹಕರು ಪೊಲೀಸ್ ರಿಗೆ ತಿಳಿಸಿದ್ದಾರೆ. ಇದೀಗ ವೆನ್ಲೋಕ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕಬಳ್ಳಾಪುರ: ಕುಡಿದ ಮತ್ತಿನಲ್ಲಿ ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಾಲೂಕಿನಲ್ಲಿ ನಡೆದಿದೆ.ತಂದೆಯ ಹೇಯ ಕೃತ್ಯದಿಂದ 5 ವರ್ಷದ ಬಾಲಕಿ ತೀವ್ರ ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತನ್ನ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಗ್ರಾಮದಿಂದ ಪರಾರಿಯಾಗಿದ್ದು ಕುಡಿದ ಅಮಲಿನಲ್ಲಿ ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ ಮಾಡಿರುವುದಾಗಿ ತಿಳಿದು ಬಂದಿದೆ. ತಂದೆಯೇ ಅತ್ಯಾಚಾರ ನಡೆಸಿದ್ದಾನೆ ಎಂದು ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಠಾಣೆಗೆ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿತ್ರದುರ್ಗ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಬಡ ವಿದ್ಯಾರ್ಥಿಗಳಿಗೆ ಸರಕಾರಿ ಬಸ್ ನಲ್ಲಿ ಉಚಿತ ಪಾಸ್ ನೀಡುವಂತೆ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನಾ ಮೆರವಣಿಗೆ ಮಾಡಿದರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ಮತ್ತು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಯನ್ನು ಕೈಗೊಂಡು ಸರಕಾರದ ಗಮನ ಸೆಳೆದರು.ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗೆ ಮನವಿ ನೀಡುವ ಮೂಲಕ ಕೊನೆಗೊಂಡಿತು.
Read More »
admin
September 12, 2019
ಕರ್ನಾಟಕ, ಸುದ್ದಿ
ಕೋಲಾರ: ಕಿಡಿಗೇಡಿಗಳಿಂದ ರೇಷ್ಮೆ ಬೆಳೆದ ಮನೆಗೆ ಬೆಂಕಿ, ರೈತನಿಗೆ ಲಕ್ಷಾಂತರ ನಷ್ಟವಾಗಿರುವ ಘಟನೆ ಮುಳಬಾಗಲು ತಾಲೂಕಿನ ಬೇವಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.ಗ್ರಾಮದ ರೈತ ರಾಮಕೃಷ್ಣಪ್ಪ ಎಂಬುವರಿಗೆ ಸೇರಿದ ರೇಷ್ಮೆ ಮನೆ ಸುಟ್ಟು ಭಸ್ಮವಾಗಿದೆ.ಕಿಡಿಗೇಡಿಗಳು 600 ಚಂದ್ರಂಕಿಯಲ್ಲಿ ರೇಷ್ಮೆ ಬೆಳೆ ಸಮೇತ ಬೆಂಕಿ ಹಾಕಿ ಸುಟ್ಟಿದ್ದಾರೆ.ಚಂದ್ರಂಕಿ, ರೇಷ್ಮೆ ಬೆಳೆ, ಮನೆ ಸೇರಿ 15 ಲಕ್ಷ ಕ್ಕೂ ಹೆಚ್ಚು ನಷ್ಟ ಉಂಟಾಗಿದೆ.ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಮೊಳಕಾಲ್ಮುರು: ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡಬೇಕು ಹಾಗೂ ಬದಲಿನ ಶಿಕ್ಷಕರ ನೇಮಕ ನಡೆಸಬೇಕೆಂದು ಆಗ್ರಹಿಸಿ ಮೊಣಕಾಲ್ಮೂರು ತಾಲ್ಲೂಕಿನ ಗಡಿ ಭಾಗವಾದ ಹುಚ್ಛಂಗಿ ದುರ್ಗದ ಸ್ಥಳೀಯರು ಪ್ರತಿಭಟನೆ ನಡೆಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಗಿಲು ಹಾಕಿ ಊರಿನ ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ಶಾಲೆಗೆ ಸಂಪೂರ್ಣ ಶಿಕ್ಷಕರು ಬರುವರೆಗೂ ಹಾಗೂ ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡುವರೆಗೂ ಶಾಲೆಯ ಬಾಗಿಲು ತೆಗೆಯುವದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು. ಹಾಗೂ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿತ್ರದುರ್ಗ: ಆಗಸ್ಟ್ 10 ರೊಳಗಾಗಿ ವಿವಿ ಸಾಗರಕ್ಕೆ ನೀರು ಹರಿಸದಿದ್ದರೆ ರಾಜೀನಾಮೆ ನೀಡುವದಾಗಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಮುಗಿಸಲು ಆಗ್ರಹಿಸಿ ಕೈಗೊಂಡಿದ್ದ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಮಾತು ತಪ್ಪುವುದಿಲ್ಲ. ನಾನು ಕೂಡಾ ರೈತನ ಮಗ ಎಂದರು. ಜುಲೈ 30 ರ ವೇಳೆಗೆ ಮಳೆ ಆಗುತ್ತೆ. ಆನಂತರ ವಾಣಿ ವಿಲಾಸ ಸಾಗರಕ್ಕೆ …
Read More »
admin
September 12, 2019
ಕರ್ನಾಟಕ, ಸುದ್ದಿ
ಬೆಂಗಳೂರು: ಕೊಲೆ ಪ್ರರಕರಣದ ಒಂದರಲ್ಲಿ ಜೀವವಾಧಿ ಶಿಕ್ಷೆಗೆ ಗುರಿಯಾದ ಖ್ಯಾತ ರೆಸ್ಟೋರೆಂಟ್ ‘ಶರವಣ ಭವನ’ದ ಮಾಲೀಕರಾದ ಪಿ.ರಾಜಗೋಪಾಲ್ ಸಧ್ಯದಲ್ಲೇ ಜೈಲು ಸೇರಲಿದ್ದಾರೆ. ಬೆಂಗಳೂರಿನ ಪರಿಚಯ ಇರುವ ಎಷ್ಟೋ ಮಂದಿ ಅರೆ ಇದೇನಪ್ಪ ಅಲ್ಲಿ ನೆನ್ನೆ ತಾನೆ ದೋಸೆ ತಿಂದೆ ಅಂತ ಎಷ್ಟೋ ಜನಕ್ಕೆ ಅನಿಸದೆ ಇರದು ಓ ಯಾವುದೋ ಚೆಕ್ ಬೌನ್ಸ್ ಅಥವಾ ಹಣಕಾಸಿನ ವ್ಯವಹಾರನೂ! ಇರಬಹುದು ಅನ್ಕೊಂಡ್ರೆ ಅದು ಭ್ರಮೆ ಕಾರಣ ಇಲ್ಲಿದೆ ನೋಡಿ ಸನತ್ ಕುಮಾರ ಕೊಲೆಗೆ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಾಸನ ಜಿಲ್ಲಾ ಘಟಕದ ವತಿಯಿಂದ ನಡೆದ ರಾಜ್ಯ ಮಟ್ಟದ ಅಖಿಲ ಕರ್ನಾಟಕ ಪ್ರಥಮ ಕವಿ-ಕಾವ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾದ ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಅವರು ಬೋರಾ ನಾಯಕ ಅವರಿಗೆ ಜಾನಪದ ವಿದ್ವಾಂಸ ಹಾಗೂ ಚಲನಚಿತ್ರ ಗೀತ ರಚನಕಾರರಾದ ಡಾ. ಎಸ್.ಕೆ. ಕರೀಂಖಾನ್ ಸಾಹಿತ್ಯ ಮತ್ತು ಸಾಂಸ್ಕೃತಿಕಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿದರು.ಇದೇ ವೇಳೆ ಹಾಸನ ತಾಲ್ಲೂಕು ಕಸಾಪ ಅಧ್ಯಕ್ಷರಾದ ಜಿ.ಓ. ಮಹಾಂತಪ್ಪ ಅವರಿಗೆ ‘ಸಮಾಜಸೇವಾ …
Read More »
admin
September 12, 2019
ಕರ್ನಾಟಕ, ಸುದ್ದಿ
ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸುಣ್ಣಘಟ್ಟ ಗ್ರಾಮದ ಬಳಿ ಹಸು ಸಾಗಿಸುತ್ತಿದ್ದ ವಾಹನವನ್ನ ಅಡ್ಡಗಟ್ಟಿದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಫ್ರದಾನ ಕಾರ್ಯದರ್ಶಿ ಸುರೇಶ್ , ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳನ್ನ ಇಡಿದು ಪೋಲಿಸರಿಗೆ ಒಪ್ಪಿಸಿದ್ದು, ಮೂವತಕ್ಕು ಹೆಚ್ಚು ಹಸುಗಳನ್ನ ರಕ್ಷಣೆಮಾಡಲಾಗಿದೆ. ಈ ಸಂಬಂದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಪಾಗಿದ್ದು. ಪರಾರಿಯಾಗಿರುವ ಮತ್ತಿಬ್ಬರ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕೋಡಿ: ಸಾಲ ಭಾದೆ ತಾಳಲಾರದೇ ರೈತನೊಬ್ಬ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ. ಮಹಾದೇವ ಅಂಭಿ ೪೮ ನೇಣಿಗೆ ಶರಣಾಗಿರುವ ರೈತ.ಖಾಸಗಿ ಸರ್ಕಾರಿ ಬ್ಯಾಂಕ್ ಕೈಗಡ ಸೇರಿದಂತೆ ೧೦ ಲಕ್ಷ ಸಾಲ ಮಾಡಿದ್ದ ರೈತ ಸಾಲವನ್ನು ತೀರಿಸಲಾಗದೇ ಇಂದು ಬೆಳಗಿನ ಜಾವ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಅಂಕಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »