Breaking News

ಸುದ್ದಿ

ಕಾರ್ ನ ಟೈರ್ ಸ್ಫೋಟ ಗೊಂಡು ಕಾರ್ ಪಲ್ಟಿ ಮಹಿಳೆ ಸಾವು

ಆನೇಕಲ್: ಕಾರ್ ನ ಟೈರ್ ಸ್ಪೋಟಗೊಂಡು ಕಾರ್ ಕೆರೆಗೆ ಪಲ್ಟಿಯಾಗಿರುವಂತಹ ಘಟನೆ ಬೆಂಗಳೂರು ಹೊರವಲಯದ ಜಿಗಣಿ ಕೆರೆಯ ಬಳಿಯಲ್ಲಿ ನಡೆದಿದೆ ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮಮತಾ ಮೃತ ದುರ್ದೈವಿಯಾಗಿದ್ದು ಆನೇಕಲ್ ತಾಲ್ಲೂಕಿನ ಜಿಗಣಿ ಕೆರೆ ಕಟ್ಟೆಯ ಮೇಲೆ ಮಮತಾ ಹಾಗು ಅವರ ಪತಿ ಆನಂದ್ ಸಾಂಟ್ರೋ ಕಾರಿನಲ್ಲಿ ಬರುತ್ತಿದ್ದಾಗ ಹಟಾತ್ ಕಾರ್ ನ ಟೈರ್ ಸ್ಪೋಟಗೊಂಡಿದೆ … ನಂತರ ಏಕಾಏಕಿ ಕಾರ್ ಪಲ್ಟಿ …

Read More »

ವರುಣ ದೇವನ ಮುನಿಸಿಗೆ ತತ್ತರಿಸುತ್ತಿರುವ ಜನತೆ

ಚಾಮರಾಜನಗರ: ವರುಣ ದೇವನ ಮುನಿಸಿನಿಂದ ಸಕಾಲಕ್ಕೆ ಮಳೆ ಬಾರದೆ ರಾಜ್ಯ ಬರದಿಂದ ತತ್ತರಿಸಿದೆ. ಕೆರೆ-ಕಟ್ಟೆ, ಜಲಾಶಯಗಳು ಬರಿದಾಗಿ ಬಣಗುಡುತ್ತಿವೆ, ಜನ ಜಾನುವಾರುಗಳು ನೀರಿಲ್ಲದೆ ಪರಿತಪಿಸುವಂತಾಗಿದೆ. ಇತ್ತಾ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದ ಜೀವನಾಡಿ ಎಂದೇ ಕರೆಯುವ ಸುವರ್ಣಾವತಿ-ಚಿಕ್ಕಹೊಳೆ ಜಲಾಶಯಗಳು ನೀರಿಲ್ಲದೆ ಸೊರಗಿವೆ. ನಿಧಾನಗತಿಯಲ್ಲಿ ಆರಂಭವಾಗಿರುವ ಮುಂಗಾರಿನ ನಡುವೆ ಜಲಾಶಯಗಳು ಬತ್ತುತ್ತಿರುವುದೇಕೆ? ಅದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಒಂದು ಕಾಲಕ್ಕೆ ಚಾಮರಾಜನಗರ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸುತ್ತಿದ್ದ ಜಿಲ್ಲೆಯ ಜೀವನಾಡಿ ಎಂದೇ …

Read More »

ಹಿರಿಯ ಮುಖಂಡರಾದ ಅದಾನಿಗೌಡ ನಿಧನ

ಮಂಡ್ಯ: ಜಿಲ್ಲೆಯ ಕಸಬಾ ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದ ಹಿರಿಯ ಮುಖಂಡರಾದ ಅಂದಾನಿಗೌಡ(85) ಅವರು ಇಂದು ನಿಧನ ಹೊಂದಿದ್ದಾರೆ.ಮೃತರು ಪತ್ನಿ ಜಯಮ್ಮ, ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸೋಮಣ್ಣ ಸೇರಿದಂತೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯು ಜುಲೈ 26ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸ್ವಗ್ರಾಮ ಗುಡ್ಡೇನಹಳ್ಳಿ ಗ್ರಾಮದಲ್ಲಿ ನಡೆದಿದೆಯೆಂದು ಕುಟುಂಬದ ಮೂಲಗಳು ತಿಳಿಸಿವೆ.ಮೃತರ ನಿಧನಕ್ಕೆ ತಾಲೂಕಿನ ವಿವಿಧ ಗಣ್ಯರು ತಮ್ಮ …

Read More »

ಇಂದಿನ ದಿನ ಭವಿಷ್ಯ.. ಯಾವ ರಾಶಿಗೆ ಯಾವ ಫಲ

ಮೇಷ: ಇಂದು ಅಲೆಯ ಹರಿವಿನೊಂದಿಗೆ ಮುನ್ನಡೆಯಿರಿ. ಇದು ನಿಮ್ಮ ಬಾಂಧವ್ಯಗಳಿಗೆ ಪೂರಕವಾದ ಸಲಹೆ. ಸಾಮಾನ್ಯ ನಿಯಮದಂತೆ ನೀವು ನಿಶ್ಚಯಾತ್ಮಕವಾಗಿರುತ್ತೀರಿ. ಈ ದಿನ ಉದಾರವಾಗಿರುವ ಮತ್ತು ನಿಮ್ಮ ಪ್ರೀತಿಪಾತ್ರರ ಬಯಕೆಗಳನ್ನು ಒಪ್ಪಿಕೊಳ್ಳುವ ದಿನ. ನೀವು ಆತ/ಆಕೆಗೆ ಪ್ರಪೋಸ್ ಮಾಡುವ ಸಾಧ್ಯತೆ ಇದೆ.ವೃಷಭ: ನಿಮಗೆ ಇಂದು ಕೊಂಚ ಆಕ್ರಮಣಶೀಲ ಮತ್ತು ಪ್ರಭಾವಿಯಾಗಿರುವ ಅಗತ್ಯವಿದೆ. ಆದರೆ, ನಿಮ್ಮ ಆಕ್ರಮಣಶೀಲತೆಯನ್ನು ಸತತವಾಗಿ ನಿಯಂತ್ರಣದಲ್ಲಿರಿಸಿಕೊಳ್ಳಿ. ನೀವು ಭೇಟಿಯಾಗುವ ಜನರೊಂದಿಗೆ ಸೌಹಾರ್ದತೆಯಿಂದಿರಿ. ಇಂದು ಯಾವುದೇ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳದೇ …

Read More »

ಕಬ್ಬಿನ ಗದ್ದೆಯಲ್ಲಿ ವ್ಯಕ್ತಿಯ ಶವ ಪತ್ತೆ

ಚಿಕ್ಕೋಡಿ: ದಿಗ್ಗೇವಾಡಿ ಗ್ರಾಮದ ಹಳ್ಳದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಶವ ಕಬ್ಬಿನ ಗದ್ದೆಯಲ್ಲಿ ಎಸೆದಿರುವ ಶವ ಪತ್ತೆಯಾಗಿದೆ. ರಾಯಬಾಗ ತಾಲೂಕಿ‌ನ ಕಂಚಕರವಾಡಿ ಗ್ರಾಮದ ನಿವಾಸಿ ಮಲ್ಲಪ್ಪ ಚೋಕಾಂವಿ ಶವಯಾಗಿ ಪತ್ತೆಯಾಗಿದ್ದಾರೆ. ಮೂರು ದಿನದ ಹಿಂದೆ ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತ ವಾಗಿದ್ದು,ಕಳೆದ ಮೂರು ದಿನದಿಂದ ಮನೆಯಲ್ಲಿ ಇರದ ಮಲ್ಲಪ್ಪ ಶವಯಾಗಿದ್ದಾರೆ. ಸ್ಥಳಕ್ಕೆ ರಾಯಬಾಗ ಪೊಲೀಸ್ ಸಿಬ್ಬಂಧಿಗಳು ಪರಿಶೀಲಿಸಿ ತನಿಖೆ ನಡೆಸಿದ್ದಾರೆ. ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕೂಡ್ಲಿಗಿ ಪೊಲೀಸ್ ಠಾಣೆ-ಕಥ೯ವ್ಯ ನೆಪದಲ್ಲಿ ಮಹಿಳೆಗೆ ಕಿರುಕುಳ..!

ಬಳ್ಳಾರಿ: ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಮಹಿಳೆಯೋವ೯ಳಿಗೆ ಕಥ೯ವ್ಯ ನೆಪದಲ್ಲಿ ಪೊಲೀಸ್ ಪೇದೆಯೊವ೯ ನಿರಂತರ ಕಿರುಕುಳ ನೀಡಿರುವ ಹಿನ್ನಲೆಯ ಆರೋಪದಡಿ ಪೊಲೀಸ್ ನ ಪೋಲಿ..ಗಿರಿವಿರುದ್ಧ ತೀವ್ರ ಆಕ್ರೋಶಗೊಂಡ ಸಾವ೯ಜನಿಕರು ಠಾಣೆಗೆ ಮುತ್ತಿಗೆ ಹಾಕಿರುವ ಘಟನೆ ಕೂಡ್ಲಿಗಿ ಪಟ್ಟಣದಲ್ಲಿ ಜರುಗಿದೆ.ದೂರುದಾರರ ಹೇಳಿಕೆ:ಕೂಡ್ಲಿಗಿ ಠಾಣೆಯಲ್ಲಿ ಕಥ೯ವ್ಯ ನಿವ೯ಹಿಸುತ್ತಿರುವ ಮಂಗಾಪುರ ಎಂ.ಎಂ.ಬಸವರಾಜಸ್ವಾಮಿ ಎಂಬ ಪೇದೆಯು ವಿಚಾರಣೆ ನೆಪದಲ್ಲಿ ತಮ್ಮ ಮನೆಗೆ ಬಂದು ತನ್ನ ಹಾಗೂ ತನ್ನ ಕುಟುಂಬ ಸದಸ್ಯರ ತೇಜೋವಧೆ ಮಾಡೋ ಉದ್ದೇಶದಿಂದ ತೀರಾ ದೌಜ೯ನ್ಯ …

Read More »

ನೀಲಗಿರಿ ಮರದ ತುಂಡುಗಳು ಬಿದ್ದು ವ್ಯಕ್ತಿ ಅಸ್ವಸ್ಥ

ದಾವಣಗೆರೆ: ನೀಲಗಿರಿ ಮರದ ತುಂಡುಗಳನ್ನು ಜೋಡಿಸುವ ವೇಳೆ ಇದ್ದಕ್ಕಿದ್ದಂತೆ ಮರದ ತುಂಡುಗಳು ಬಿದ್ದು ಇಬ್ಬರು ಅಸ್ವಸ್ಥರಾಗಿರುವ ಘಟನೆ ದಾವಣಗೆರೆ ನಗರದ ಬೊಂಬು ಬಜಾರ್ ಮಾರ್ಕೆಟ್ ನಲ್ಲಿ ನಡೆದಿದೆ. ಶಿವರಾಜ ಮತ್ತು ವೆಂಕಟೇಶ ಎಂಬುವವರ ಮೇಲೆ ಮರದ ತುಂಡುಗಳು ಬಿದ್ದಿವೆ.ಘಟನೆಯಿಂದ ಶಿವರಾಜ ಅಪಾಯದಿಂದ ಬಚಾವಾಗಿದ್ದು, ವೆಂಕಟೇಶ ಅವರ ಸ್ಥಿತಿ ಗಂಭೀರವಾಗಿದೆ.ಸ್ಥಳೀಯರು ಮತ್ತು ಆರ್ ಎಂ ಸಿ ಯಾರ್ಡ್ ಪೊಲೀಸರು ಕಾರ್ಯಾಚರಣೆ ಗಂಟೆ ಕಾಲ ತುಂಡುಗಳ ನಡುವೆ ಒದ್ದಾಡಿದ ವೆಂಕಟೇಶ್ ಅವರನ್ನು ರಕ್ಷಣೆ …

Read More »

ಗಣಿತ , ವಿಜ್ಞಾನ ವಿಷಯ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ

ಮಂಡ್ಯ: ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಪಟ್ಟಣದ ಆಶೀರ್ವಾದ ಪ್ರೌಢಶಾಲೆಯ ಆವರಣದಲ್ಲಿ ತಾಲ್ಲೂಕಿನ ಪ್ರೌಢಶಾಲೆಯ ಗಣಿತ ಮತ್ತು ವಿಜ್ಞಾನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.ವಿಜ್ಞಾನ ಮತ್ತು ಗಣಿತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಎನ್.ಟಿ.ಎಸ್.ಇ ಮತ್ತು ಎನ್.ಎಂ.ಎಂ.ಎಸ್ ಕಾರ್ಯಾಗಾರದಲ್ಲಿ ಗಣಿತ-ವಿಜ್ಞಾನ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ತರಬೇತಿ ಸಂಸ್ಥೆ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ NTSE ಮತ್ತು …

Read More »

ವಿಕಲಚೇತನರಿಗೆ ಸೌಲಭ್ಯಗಳನ್ನು ಒದಗಿಸುವಂತೆ ಕನ್ನಡ ಸೇನೆ ಆಗ್ರಹ

ಬಳ್ಳಾರಿ: ತಾಲೂಕಿನ ಬಹುತೇಕ ವಿಕಲಚೇತನರು ಸೌಲಭ್ಯಗಳಿಂದ ವಂಚಿತರಾಗಿದ್ದು.ಇದಕ್ಕೆ ಸಂಬಂಧಿಸಿದ ಇಲಾಖಾಧಿಕಾರಿಗಳ ನಿಲ೯ಕ್ಷ್ಯ ಕಾರಣವಾಗಿದ್ದು ಅವರ ವಿರುದ್ಧ ಸಂಬಂಧಿಸಿದ ಉನ್ನತಾಧಿಕಾರಿಗಳಲ್ಲಿ ದೂರು ಸಲ್ಲಿಸಲಾಗುವುದೆಂದು ಕನ್ನಡ ಸೇನೆ ರಾಜ್ಯ ಉಪಾಧ್ಯಕ್ಷ ಎಲ್.ಎಸ್.ಬಷೀರ್ ಅಹಮ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಮಟ್ಟದ ಇಲಾಖಾಧಿಕಾರಿಗಳು ಪರಿಶೀಲಿಸಿ ಶೀಘ೯ವೇ ವಿಕಲ ಚೇತನರಿಗೆ ಸೌಲಭಂಯಗಳನ್ನು ಸಮಪ೯ಕವಾಗಿ ಒದಗಿಸಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.ಅವರು ತಮ್ಮಲ್ಲಿಗೆ ನೆರವು ಕೋರಿಬಂದಿದ್ದ ಕೂಡ್ಲಿಗಿ ತಾಲೂಕಿನ ನಿಂಬಳ ಗೇರೆ ಗ್ರಾಮದ ವಿಕಲ ಚೇತನ ಇಸ್ಮಾಯಿಲ್ ರನ್ನೇ ನಿದಶ೯ನವನ್ನಾಗಿಸಿ ಮಾತನಾಡಿ ತಾಲೂಕಿನ …

Read More »

ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೈತ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣು

ಮಂಡ್ಯ: ಜಿಲ್ಲೆಯ ಬಂಡಬೋಯಿನಹಳ್ಳಿ ಗ್ರಾಮದಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೈತನೊಬ್ಬ ಗ್ರಾಮದ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗ್ರಾಮದ ಮೊಗಣ್ಣಗೌಡ ಅವರ ಪುತ್ರ ರಾಜಣ್ಣ(49)ಮೃತ ದುರ್ದೈವಿಯಾಗಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿನ್ನೆ ರಾತ್ರಿ 10ಗಂಟೆ ಸಮಯದಲ್ಲಿ ಗ್ರಾಮದ ಕಪಿಲೆಬಾವಿಗೆ ಬಿದ್ದುದನ್ನು ಗಮನಿಸಿದ ಪತ್ನಿ ಸವಿತ ಕೂಡಲೇ ಅಗ್ನಿಶಾಮಕ ಠಾಣೆಗೆ ವಿಚಾರ ಮುಟ್ಟಿಸಿದರು. 50 ಅಡಿಗಳಷ್ಟು ಆಳವಿರುವ ಬಾವಿಯಿಂದ ರಾಜಣ್ಣ ಅವರ ದೇಹವನ್ನು …

Read More »