Breaking News

ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೈತ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣು

ಮಂಡ್ಯ: ಜಿಲ್ಲೆಯ ಬಂಡಬೋಯಿನಹಳ್ಳಿ ಗ್ರಾಮದಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೈತನೊಬ್ಬ ಗ್ರಾಮದ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗ್ರಾಮದ ಮೊಗಣ್ಣಗೌಡ ಅವರ ಪುತ್ರ ರಾಜಣ್ಣ(49)ಮೃತ ದುರ್ದೈವಿಯಾಗಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿನ್ನೆ ರಾತ್ರಿ 10ಗಂಟೆ ಸಮಯದಲ್ಲಿ ಗ್ರಾಮದ ಕಪಿಲೆಬಾವಿಗೆ ಬಿದ್ದುದನ್ನು ಗಮನಿಸಿದ ಪತ್ನಿ ಸವಿತ ಕೂಡಲೇ ಅಗ್ನಿಶಾಮಕ ಠಾಣೆಗೆ ವಿಚಾರ ಮುಟ್ಟಿಸಿದರು. 50 ಅಡಿಗಳಷ್ಟು ಆಳವಿರುವ ಬಾವಿಯಿಂದ ರಾಜಣ್ಣ ಅವರ ದೇಹವನ್ನು ಅಗ್ನಿಶಾಮಕ ಸಿಬ್ಬಂದಿಗಳು ಹೊರತೆಗೆಯುವ ವೇಳೆಗೆ ರಾಜಣ್ಣ ಅವರು ಮೃತರಾಗಿದ್ದರು. ಕುಟುಂಬದ ಸದಸ್ಯರ ರೋಧನವು ಮುಗಿಲು ಮುಟ್ಟಿತ್ತು.ಭಾರೀ ಸಾಹಸದಿಂದ ಮೃತದೇಹವನ್ನು ಬಾವಿಯೊಳಗಿನಿಂದ ಹೊರತೆಗೆದ ಅಗ್ನಿಶಾಮಕ ಠಾಣಾಧಿಕಾರಿ ಶ್ರೀನಿವಾಸರಾವ್ ಮತ್ತು ಸಿಬ್ಬಂಧಿಗಳ ಕಾರ್ಯದಕ್ಷತೆಯನ್ನು ಗ್ರಾಮಸ್ಥರು ಕೊಂಡಾಡಿದ್ದಾರೆ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *