admin
September 12, 2019
ಧಾರವಾಡ, ಸುದ್ದಿ
ಧಾರವಾಡ :ಬಡವರಿಗೆ ಕಡಿಮೆ ದರದಲ್ಲಿ ಉಪಾಹಾರ, ಊಟ ಸಿಗಲಿ ಎಂಬ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳನ್ನ ಆರಂಭಿಸಿತ್ತು. ಸರ್ಕಾರದ ಆಶಯವೇನೋ ಸರಿಯಿತ್ತು. ಆದರೆ, ಅದಕ್ಕೆ ಬೇಕಾದ ಅನುದಾನದ ವಿಚಾರದಲ್ಲಿ ಯಾವುದೇ ದೂರದೃಷ್ಟಿ ಇಲ್ಲದೇ ಕಾರಣ ಕ್ಯಾಂಟೀನ್ ಆರಂಭಿಸಿರುವ ಹಿನ್ನೆಲೆಯಲ್ಲಿ ಅವು ಬಂದ್ ಆಗೋ ಪರಿಸ್ಥಿತಿಗೆ ಬಂದು ತಲುಪಿವೆ.ಎಲ್ಲಾ ಜಿಲ್ಲೆಗಳಿಗಿಂತ ಕೊನೆಯದಾಗಿ ಆರಂಭಗೊಂಡ ಅವಳಿ ನಗರಗಳ ಇಂದಿರಾ ಕ್ಯಾಂಟೀನ್ಗಳಿಗೆ ಅನುದಾನ ವಿತರಣೆ ಮಾಡದ ಹಿನ್ನೆಲೆಯಲ್ಲಿ ಇಷ್ಟರಲ್ಲಿಯೇ ಬಂದ್ ಆಗುವ …
Read More »
admin
September 12, 2019
ಧಾರವಾಡ, ಸುದ್ದಿ
ಧಾರವಾಡ: ಗುರುಪೂರ್ಣಿಮೆ ನಿಮಿತ್ತವಾಗಿ ಧಾರವಾಡದ ಸಾಯಿನಗರದ ಸಾಯಿ ಬಾಬಾ ಮಂದಿರದಲ್ಲಿ ವಿಶೇಷ ಅಲಂಕಾರ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.ನಸುಕಿನ ಜಾವದಲ್ಲಿಯೇ ಆಗಮಿಸಿದ ಭಕ್ತರು ಶಿರಡಿ ಸಾಯಿಬಾಬಾ ದರ್ಶನ ಪಡೆದು ಪುನೀತರಾದರು. ಬಾಬಾ ಮೂರ್ತಿಗೆ ವಿಶೇಷ ಪೂಜೆ, ಕಾಕಡಾರತಿ, ದೂಪಾರತಿ…ಹೀಗೆ ಹಲವು ಕಾರ್ಯಕ್ರಮಗಳು ನಡೆದವು.ಸತ್ಯನಾರಾಯಣ ಪೂಜೆ ಮಾಡುವುದರ ಜೊತೆಗೆ, ಗುರುಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಿ ಧನ್ಯತಾಭಾವ ಮೆರೆದರು. ವಿಶೇಷವಾಗಿ ಭಕ್ತರಿಗೆ ಅನುಕೂಲವಾಗುವಂತೆ ಅನ್ನಬ್ರಹ್ಮಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಅನ್ನಬ್ರಹ್ಮ ಮೂರ್ತಿಯನ್ನು ಮಹಾರಾಷ್ಟ್ರ ಅಹ್ಮದನಗರದ ಸಂತೋಷ ರೋಹಾಳೆ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಗಳೂರು: ಮಂಗಳೂರಿನ ಸುರತ್ಕಲ್ ನ ಅಕ್ರಮ ಟೋಲ್‌ಗೇಟ್ ವಿರುದ್ಧ ಏಕಕಾಲದಲ್ಲಿ ಕಾಂಗ್ರೆಸ್ ಬೆಂಬಲಿತ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಮುಂಜಾನೆಯೇ ಟೋಲ್‌ಗೇಟ್ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಅಕ್ರಮ ಟೋಲ್ ವಸೂಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯು ಪ್ರತಿಭಟನೆ ನಡೆಸುವ ಸನಿಹದಲ್ಲೇ ಬಿಜೆಪಿಗರೂ ಕೂಡ ಪ್ರತಿಭಟನೆ ನಡೆಸಿ ಗಮನ ಸೆಳೆದರು. ಈ ವೇಳೆ ಮಾತನಾಡಿದ ಹೋರಾಟ ಸಮಿತಿಯ …
Read More »
admin
September 12, 2019
ಕರ್ನಾಟಕ, ಸುದ್ದಿ
ಆನೇಕಲ್: ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ತೆಕ್ಕೆಗೆ ಬೆಸ್ಕಾಂ ಅಧಿಕಾರಿಯೊಬ್ಬ ಬಿದ್ದಿರುವ ಪ್ರಕರಣ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮುತ್ತನಲ್ಲೂರು ಬೆಸ್ಕಾಂ ಕಾರ್ಯ ವಿಭಾಗದಲ್ಲಿ ನಡೆದಿದೆ.ವಿನೋದ್ ಸಹಾಯಕ ಅಭಿಯಂತಕ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.ಚಿಂತಾಲಾಮಡಿವಾಳಾ ಗ್ರಾಮದ ನಿವಾಸಿಯೊಬ್ಬರು ಕಂಬವನ್ನು ಸ್ಥಳಾಂತರ ಮಾಡುವ ಬಗ್ಗೆ 45.000 ಅಧಿಕಾರಿ ವಿನೋದ ಬೇಡಿಕೆ ಇಟ್ಟಿದ್ದ. ಈ ಹಿನ್ನೆಲೆಯಲ್ಲಿ 20.000 ಮುಂಗಡ ಹಣ ನೀಡುವಾಗ ಪೋಲಿಸರು ವಶಕ್ಕೆ ಪಡೆದಿದ್ದಾರೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಚಾಮರಾಜನಗರ: ಜನಪ್ರತಿನಿಧಿಗಳ ರೆಸಾರ್ಟ್ ರಾಜಕಾರಣದ ವಿರುದ್ದ ರಾಜ್ಯ ರೈತ ಸಂಘದ ಕಾರ್ಯಕರ್ತರು ಚಾಮರಾಜನಗರದಲ್ಲಿ ವಿನೂತನ ರೀತಿಯ ಛೀ…ಥೂ ಚಳವಳಿ ನಡೆಸಿದರು.ಮೂರು ರಾಜಕೀಯ ಪಕ್ಷಗಳ ನಾಯಕರ ಭಾವಚಿತ್ರಕ್ಕೆ ಪೊರಕೆ ಹಾಗೂ ಚಪ್ಪಲಿ ಸೇವೆ ಮಾಡಿ ಪ್ರತಿಭಟನೆ ನಡೆಸಿದ ರೈತ ಕಾರ್ಯಕರ್ತರು, ಹೆದ್ದಾರಿ ತಡೆದು ಕೆಲಕಾಲ ಪ್ರತಿಭಟನೆ ನಡೆಸಿದರು.ಸಿದ್ದರಾಮಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಅಭಿವೃದ್ದಿ ಬಗ್ಗೆ ಚಿಂತಿಸದೆ ರೈತರ ಹಿತ ಕಡೆಗಣಿಸಿದ ಸರ್ಕಾರಕ್ಕೆ ಛೀ.. ಥೂ… ಘೋಷಣೆ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಜಿಲ್ಲೆಯ ಶೀಳನೆರೆ ಹೋಬಳಿಯ ಟಿಬಿ ಮಂಚನಹಳ್ಳಿ ಬಳಿ ಕಾಲುವೆ ಪಕ್ಕದಲ್ಲಿ ಹನ್ನೊಂದು ಕೆವಿ ವಿದ್ಯುತ್ ತಂತಿ ಬಿದ್ದು ದರ್ಶನ್ (35) ಎಂಬ ವ್ಯಕ್ತಿ ಸಾವಿಗೀಡಾಗಿದ್ದಾರೆ .ತೆಂಡೇಕೆರೆ ಹೋಬಳಿಯಅಕ್ಕಿ ಮಂಚನಹಳ್ಳಿ ಗ್ರಾಮದವರಾಗಿದ್ದು ಸುಮಾರು ಮೂರು ಗಂಟೆಯಲ್ಲಿ ಟಿಬಿ ಮಂಚೇನಹಳ್ಳಿಗೆ ರೇಷನ್ ಕಾರ್ಡಿಗೆ ಹೆಬ್ಬೆಟ್ಟು ಕೊಡಲು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಹನ್ನೊಂದು ಕೆವಿ ತಂತಿ ಅವರ ಮೇಲಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ .ವಿಷಯ ತಿಳಿದರೂ ಸಹ ಯಾವುದೇ ಕೆಇಬಿ ಸ್ಥಳಕ್ಕೆ ಬಂದಿಲ್ಲ ಎಂದು …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ೭೬೨ ನೇರವೇತನ ಪಾವತಿ ತಾತ್ಕಾಲಿಕ ಪಟ್ಟಿ ಪ್ರಕಟವಾಗಿದ್ದು, ಕೂಡಲೇ ನೇರ ವೇತನ ಪಾವತಿ ಅಂತಿಮ ಪಟ್ಟಿ ಯನ್ನು ಪ್ರಕಟಿಸುವಂತೆ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ಪಂಗಡಗಳ ಪೌರಕಾರ್ಮಿ ಕರ ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.ಆಕ್ಷೇಪಣೆ ಸಲ್ಲಿಸುವ ಅವಧಿ ಮುಗಿದ ೨೪ಗಂಟೆಯೊಳಗೆ ಘನತ್ಯಾಜ್ಯ ವಸ್ತು ನಿರ್ವ ಹಣಾ ಕೇಂದ್ರ ಕಚೇರಿ ಎಸ್‌ಡಬ್ಲೂಎಂ ವಿಭಾಗಕ್ಕೆ ಆಕ್ಷೇಪಣೆ ಸಲ್ಲಿಸಲು ಜೂ.೧೭ರಂದು ಕಾರ್ಯನಿರ್ವಾಹಕ ಎಂಜಿನಿಯರ್ ಪತ್ರ …
Read More »
admin
September 12, 2019
ಕರ್ನಾಟಕ, ಸುದ್ದಿ
ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಸುಳ್ಳೇರಿ ಗ್ರಾಮದ ಕೆರೆಯಲ್ಲಿ ಇದ್ದಕ್ಕಿದ್ದಂತೆ ಕಾಡಾನೆಗಳು ಪ್ರತ್ಯಕ್ಷವಾಗಿವೆ.7 ಕಾಡಾನೆಗಳು ಕೆರೆಯಲ್ಲೆ ಬೀಡು ಬಿಟ್ಟಿವೆ.ಅಲ್ಲದೇ ತಡ ರಾತ್ರಿ ಗ್ರಾಮದ ರೈತರ ಜಮೀನಿಗಳಲ್ಲಿನ ಫಸಲು ತಿಂದು ಹಾಕುತ್ತಿವೆ. ಮುಂಜಾನೆಯಾದ್ರು ಕಾಡಿಗೆ ಹೋಗದೆ ಕೆರೆಯಲ್ಲೆ ಬೀಡು ಬಿಟ್ಟಿರುವ ಆನೆಗಳನ್ನು ಕಂಡು ಒಂದೆಡೆ ಭಯಭೀತರಾದರೆ ಮತ್ತೊಂದೆಡೆ ಆನೆಗಳನ್ನು ನೋಡಲು ಸಾರ್ವಜನಿಕರು ಮುಗಿಬಿದ್ದಿದ್ದರು.ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದರು.
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಬಹಳ ದಿನಗಳಿಂದ ಜಾಗದ ಮಾಲೀಕರು ಮತ್ತು ಲೀಸ್ ಪಡೆದ ಜಾಗದಲ್ಲಿದ್ದ ನಿವಾಸಿಗಳ ನಡುವೆ ನಡೆದಿದ್ದ ತಿಕ್ಕಾಟಕ್ಕೆ ಹೈಕೋರ್ಟ್ ಅಂತ್ಯ ಹಾಡಿದ್ದು, ಈ ಮೂಲಕ ಲೀಸ್ನಲ್ಲಿದ್ದ ಜನರಿಗೆ ಮನೆ ಖಾಲಿ ಮಾಡುವಂತೆ ಸೂಚಿಸಿದೆ. ಇದರಿಂದ ಸುಮಾರು ವರ್ಷಗಳ ಪ್ರಕರಣಕ್ಕೆ ತಾತ್ಕಾಲಿಕ ಅಂತ್ಯ ಸಿಕ್ಕಂತಾಗಿದ್ದು, ಇಂದು ಎಲ್ಲಾ ಮನೆ ಖಾಲಿ ಮಾಡಿಸಲಾಗಿದೆ.ನಗರದ ಹೊಸೂರು ಸರ್ಕಲ್ ಬಳಿಯ ಆರ್.ಬಿ.ಕುಲಕರ್ಣಿ ಚಾಳದ ವಿವಾದ ತಾತ್ಕಾಲಿಕವಾಗಿ ಅಂತ್ಯ ಕಂಡಿದೆ. ಈ ಹಿಂದೆ ಕುಲಕರ್ಣಿ ಎಂಬುವರು ಲೀಸ್ …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಗಿಡ ಮರಗಳನ್ನು ನೆಟ್ಟು ಪೋಷಣೆ ಮಾಡುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಜನರು ಸ್ವಯಂ ಪ್ರೇರಣೆಯಿಂದ ಸಸಿಗಳನ್ನು ನೆಟ್ಟು ಸಂರಕ್ಷಣೆ ಮಾಡಬೇಕೆಂದು ಗ್ರೀನ್ ಕರ್ನಾಟಕ ಅಸೋಸಿಯೇಷನ್ ಮುಖಂಡ ವಿಠ್ಠಲ್ ರೋಣದ ಕರೆ ಕೊಟ್ಟರು.ಗ್ರೀನ್ ಕರ್ನಾಟಕ ಅಸೋಸಿಯೇಷನ್ ಹಾಗೂ ನೃಪತುಂಗ ವಾಕರ್ಸ್ ಕ್ಲಬ್ ಆಶ್ರಯದಲ್ಲಿಂದು ನೃಪತುಂಗ ಬೆಟ್ಟದಲ್ಲಿ ಹಸಿರು ಉಳಿಸಿ ಬೆಳೆಸಿ ಜನಜಾಗೃತಿ ಹಾಗೂ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಈ ವೇಳೆ ಮಾತನಾಡಿದ ಅವರುವಿಠ್ಠಲ್ ರೋಣದ, ಗಿಡ ಮರಗಳನ್ನು …
Read More »