Breaking News

ಸುದ್ದಿ

ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಅಧಿಕಾರಿ.

ಆನೇಕಲ್: ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ತೆಕ್ಕೆಗೆ ಬೆಸ್ಕಾಂ ಅಧಿಕಾರಿಯೊಬ್ಬ ಬಿದ್ದಿರುವ ಪ್ರಕರಣ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮುತ್ತನಲ್ಲೂರು ಬೆಸ್ಕಾಂ ಕಾರ್ಯ ವಿಭಾಗದಲ್ಲಿ ನಡೆದಿದೆ.ವಿನೋದ್ ಸಹಾಯಕ ಅಭಿಯಂತಕ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.ಚಿಂತಾಲಾಮಡಿವಾಳಾ ಗ್ರಾಮದ ನಿವಾಸಿಯೊಬ್ಬರು ಕಂಬವನ್ನು ಸ್ಥಳಾಂತರ ಮಾಡುವ ಬಗ್ಗೆ 45.000 ಅಧಿಕಾರಿ ವಿನೋದ ಬೇಡಿಕೆ ಇಟ್ಟಿದ್ದ. ಈ ಹಿನ್ನೆಲೆಯಲ್ಲಿ 20.000 ಮುಂಗಡ ಹಣ ನೀಡುವಾಗ ಪೋಲಿಸರು ವಶಕ್ಕೆ ಪಡೆದಿದ್ದಾರೆ.

Read More »

ರೆಸಾರ್ಟ್ ರಾಜಕಾರಣದ ವಿರುದ್ದ ರೈತ ಸಂಘ ಪ್ರತಿಭಟನೆ

ಚಾಮರಾಜನಗರ: ಜನಪ್ರತಿನಿಧಿಗಳ ರೆಸಾರ್ಟ್ ರಾಜಕಾರಣದ ವಿರುದ್ದ ರಾಜ್ಯ ರೈತ ಸಂಘದ ಕಾರ್ಯಕರ್ತರು ಚಾಮರಾಜನಗರದಲ್ಲಿ ವಿನೂತನ ರೀತಿಯ ಛೀ…ಥೂ‌ ಚಳವಳಿ ನಡೆಸಿದರು.ಮೂರು ರಾಜಕೀಯ ಪಕ್ಷಗಳ ನಾಯಕರ ಭಾವಚಿತ್ರಕ್ಕೆ ಪೊರಕೆ ಹಾಗೂ ಚಪ್ಪಲಿ ಸೇವೆ ಮಾಡಿ ಪ್ರತಿಭಟನೆ ನಡೆಸಿದ ರೈತ ಕಾರ್ಯಕರ್ತರು, ಹೆದ್ದಾರಿ ತಡೆದು ಕೆಲಕಾಲ ಪ್ರತಿಭಟನೆ ನಡೆಸಿದರು.ಸಿದ್ದರಾಮಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಅಭಿವೃದ್ದಿ ಬಗ್ಗೆ ಚಿಂತಿಸದೆ ರೈತರ ಹಿತ ಕಡೆಗಣಿಸಿದ ಸರ್ಕಾರಕ್ಕೆ ಛೀ.. ಥೂ… ಘೋಷಣೆ …

Read More »

ವಿದ್ಯುತ್ ತಂತಿ ಬಿದ್ದು ವ್ಯಕ್ತಿ ದುರ್ಮರಣ

ಮಂಡ್ಯ: ಜಿಲ್ಲೆಯ ಶೀಳನೆರೆ ಹೋಬಳಿಯ ಟಿಬಿ ಮಂಚನಹಳ್ಳಿ ಬಳಿ ಕಾಲುವೆ ಪಕ್ಕದಲ್ಲಿ ಹನ್ನೊಂದು ಕೆವಿ ವಿದ್ಯುತ್ ತಂತಿ ಬಿದ್ದು ದರ್ಶನ್ (35) ಎಂಬ ವ್ಯಕ್ತಿ ಸಾವಿಗೀಡಾಗಿದ್ದಾರೆ .ತೆಂಡೇಕೆರೆ ಹೋಬಳಿಯಅಕ್ಕಿ ಮಂಚನಹಳ್ಳಿ ಗ್ರಾಮದವರಾಗಿದ್ದು ಸುಮಾರು ಮೂರು ಗಂಟೆಯಲ್ಲಿ ಟಿಬಿ ಮಂಚೇನಹಳ್ಳಿಗೆ ರೇಷನ್ ಕಾರ್ಡಿಗೆ ಹೆಬ್ಬೆಟ್ಟು ಕೊಡಲು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಹನ್ನೊಂದು ಕೆವಿ ತಂತಿ ಅವರ ಮೇಲಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ .ವಿಷಯ ತಿಳಿದರೂ ಸಹ ಯಾವುದೇ ಕೆಇಬಿ ಸ್ಥಳಕ್ಕೆ ಬಂದಿಲ್ಲ ಎಂದು …

Read More »

ನೇರ ವೇತನ ಪಾವತಿ ಪಟ್ಟಿ ಪ್ರಕಟಿಸಲು ಆಗ್ರಹ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ೭೬೨ ನೇರವೇತನ ಪಾವತಿ ತಾತ್ಕಾಲಿಕ ಪಟ್ಟಿ ಪ್ರಕಟವಾಗಿದ್ದು, ಕೂಡಲೇ ನೇರ ವೇತನ ಪಾವತಿ ಅಂತಿಮ ಪಟ್ಟಿ ಯನ್ನು ಪ್ರಕಟಿಸುವಂತೆ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ಪಂಗಡಗಳ ಪೌರಕಾರ್ಮಿ ಕರ ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.ಆಕ್ಷೇಪಣೆ ಸಲ್ಲಿಸುವ ಅವಧಿ ಮುಗಿದ ೨೪ಗಂಟೆಯೊಳಗೆ ಘನತ್ಯಾಜ್ಯ ವಸ್ತು ನಿರ್ವ ಹಣಾ ಕೇಂದ್ರ ಕಚೇರಿ ಎಸ್‌ಡಬ್ಲೂಎಂ ವಿಭಾಗಕ್ಕೆ ಆಕ್ಷೇಪಣೆ ಸಲ್ಲಿಸಲು ಜೂ.೧೭ರಂದು ಕಾರ್ಯನಿರ್ವಾಹಕ ಎಂಜಿನಿಯರ್ ಪತ್ರ …

Read More »

ಕೆರೆಯಲ್ಲಿ ಪ್ರತ್ಯಕ್ಷವಾದ ಕಾಡಾನೆಗಳು

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಸುಳ್ಳೇರಿ ಗ್ರಾಮದ ಕೆರೆಯಲ್ಲಿ ಇದ್ದಕ್ಕಿದ್ದಂತೆ ಕಾಡಾನೆಗಳು ಪ್ರತ್ಯಕ್ಷವಾಗಿವೆ.7 ಕಾಡಾನೆಗಳು ಕೆರೆಯಲ್ಲೆ ಬೀಡು ಬಿಟ್ಟಿವೆ.‌ಅಲ್ಲದೇ ತಡ ರಾತ್ರಿ ಗ್ರಾಮದ ರೈತರ ಜಮೀನಿಗಳಲ್ಲಿನ ಫಸಲು ತಿಂದು ಹಾಕುತ್ತಿವೆ. ಮುಂಜಾನೆಯಾದ್ರು ಕಾಡಿಗೆ ಹೋಗದೆ ಕೆರೆಯಲ್ಲೆ ಬೀಡು ಬಿಟ್ಟಿರುವ ಆನೆಗಳನ್ನು ಕಂಡು ಒಂದೆಡೆ ಭಯಭೀತರಾದರೆ ಮತ್ತೊಂದೆಡೆ ಆನೆಗಳನ್ನು ನೋಡಲು ಸಾರ್ವಜನಿಕರು ಮುಗಿಬಿದ್ದಿದ್ದರು.ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದರು.

Read More »

ಹೈಕೋರ್ಟ್ ಆದೇಶದನ್ವಯ ತೆರವು ಕಾರ್ಯಾಚರಣೆ ಮನೆ ಸಾಮಗ್ರಿಗಳನ್ನು ಹೊರಹಾಕಿ ತೆರವು

ಹುಬ್ಬಳ್ಳಿ: ಬಹಳ ದಿನಗಳಿಂದ ಜಾಗದ ಮಾಲೀಕರು ಮತ್ತು ಲೀಸ್ ಪಡೆದ ಜಾಗದಲ್ಲಿದ್ದ ನಿವಾಸಿಗಳ ನಡುವೆ ನಡೆದಿದ್ದ ತಿಕ್ಕಾಟಕ್ಕೆ ಹೈಕೋರ್ಟ್ ಅಂತ್ಯ ಹಾಡಿದ್ದು, ಈ ಮೂಲಕ ಲೀಸ್​​ನಲ್ಲಿದ್ದ ಜನರಿಗೆ ಮನೆ ಖಾಲಿ ಮಾಡುವಂತೆ ಸೂಚಿಸಿದೆ. ಇದರಿಂದ ಸುಮಾರು ವರ್ಷಗಳ‌ ಪ್ರಕರಣಕ್ಕೆ ತಾತ್ಕಾಲಿಕ ಅಂತ್ಯ ಸಿಕ್ಕಂತಾಗಿದ್ದು, ಇಂದು ಎಲ್ಲಾ ಮನೆ ಖಾಲಿ ಮಾಡಿಸಲಾಗಿದೆ.ನಗರದ ಹೊಸೂರು ಸರ್ಕಲ್ ಬಳಿಯ ಆರ್.ಬಿ.ಕುಲಕರ್ಣಿ ಚಾಳದ ವಿವಾದ ತಾತ್ಕಾಲಿಕವಾಗಿ ಅಂತ್ಯ ಕಂಡಿದೆ. ಈ ಹಿಂದೆ ಕುಲಕರ್ಣಿ ಎಂಬುವರು ಲೀಸ್​​ …

Read More »

ಹಸಿರು ಉಳಿಸಲು ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ

ಹುಬ್ಬಳ್ಳಿ: ಗಿಡ ಮರಗಳನ್ನು ನೆಟ್ಟು ಪೋಷಣೆ ಮಾಡುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಜನರು ಸ್ವಯಂ ಪ್ರೇರಣೆಯಿಂದ ಸಸಿಗಳನ್ನು ನೆಟ್ಟು ಸಂರಕ್ಷಣೆ ಮಾಡಬೇಕೆಂದು ಗ್ರೀನ್ ಕರ್ನಾಟಕ ಅಸೋಸಿಯೇಷನ್ ಮುಖಂಡ ವಿಠ್ಠಲ್​ ರೋಣದ ಕರೆ ಕೊಟ್ಟರು.ಗ್ರೀನ್ ಕರ್ನಾಟಕ ಅಸೋಸಿಯೇಷನ್ ಹಾಗೂ ನೃಪತುಂಗ ವಾಕರ್ಸ್ ಕ್ಲಬ್ ಆಶ್ರಯದಲ್ಲಿಂದು ನೃಪತುಂಗ ಬೆಟ್ಟದಲ್ಲಿ ಹಸಿರು ಉಳಿಸಿ ಬೆಳೆಸಿ ಜನಜಾಗೃತಿ ಹಾಗೂ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಈ ವೇಳೆ ಮಾತನಾಡಿದ ಅವರುವಿಠ್ಠಲ್​ ರೋಣದ, ಗಿಡ ಮರಗಳನ್ನು …

Read More »

ಕಟ್ಟಡ ಕುಸಿದರೂ ಇನ್ನೂ ನಿರ್ಲಕ್ಷ್ಯ ಧೋರಣೆ ತಳೆದಿರುವ ಪಾಲಿಕೆ

ಹುಬ್ಬಳ್ಳಿ:ಧಾರವಾಡ ಕಟ್ಟಡ ದುರಂತದ ಬಳಿಕವೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಕಾಣಿಸುತ್ತಿಲ್ಲ. ಪಾಲಿಕೆಗೆ ಸೇರಿದ ಕಟ್ಟಡವೊಂದು ಜಿಲ್ಲೆಯ ಜನನಿಬಿಡ ಪ್ರದೇಶದಲ್ಲಿದ್ದು, ಎಲ್ಲೆಂದರಲ್ಲಿ ಬಿರುಕು ಬಿಟ್ಟು ಬಲಿಗಾಗಿ ಕಾದು ಕುಳಿತಿದೆ.ಧಾರವಾಡ ಕಟ್ಟಡ ದುರಂತ 19 ಜನರ ಪ್ರಾಣ ಬಲಿ ತಗೆದುಕೊಂಡಿದೆ. ಈ ಘಟನೆ ನಂತರ ದುಸ್ಥಿತಿಯಲ್ಲಿರುವ ಕಟ್ಟಡಗಳನ್ನು ಗುರುತಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಆದರೆ ಇದ್ಯಾವುದಕ್ಕೂ ಅಧಿಕಾರಿಗಳು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನಗರದ ಮ್ಯಾಗೇರ ಓಣಿಯಲ್ಲಿ ಕಳೆದ 50-60 ವರ್ಷಗಳ …

Read More »

ಸರ್ಕಾರಿ ಕಚೇರಿಗೆ ದೌಡಾಯಿಸಿದ ಪುನುಗು ಬೆಕ್ಕು

ಧಾರವಾಡ:ಧಾರವಾಡದ ಉಪ ವಿಭಾಗಾಧಿಕಾರಿ ಕಚೇರಿಗೆ ಅಪರೂಪದ ಅತಿಥಿಯೊಂದರ ಆಗಮನವಾಗಿತ್ತು. ಇದನ್ನು ನೋಡಿದ ಜನ ಒಂದು ಕ್ಷಣ ಹೌಹಾರಿದರು. ಅಷ್ಟಕ್ಕೂ ಜನರಲ್ಲಿ ಕುತೂಹಲ ಮೂಡಿಸಿದ ಆ ಅತಿಥಿ ಯಾರು ಅಂದ್ರೆ ಅದು ಪುನುಗು ಬೆಕ್ಕು.ಇಂದು ಬೆಳ್ಳಂ ಬೆಳಗ್ಗೆ ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಪ್ರತ್ಯಕ್ಷಗೊಂಡ ಪುನುಗು ಬೆಕ್ಕು, ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ಕಚೇರಿ ಆವರಣದಲ್ಲೇ ಅತ್ತಿಂದಿತ್ತ ಓಡಾಡುತ್ತಿತ್ತು. ಕಚೇರಿಗೆ ಆಗಮಿಸಿದ ಜನರು ಈ ಅಪರೂಪದ ಅತಿಥಿಯನ್ನು ನೋಡಿ ಕಣ್ತುಂಬಿಕೊಂಡರು. …

Read More »

ಚಂದ್ರಗ್ರಹಣ ಹಿನ್ನಲೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪೂಜಾ ಸಮಯ ಬದಲಾವಣೆ

ಮಂಗಳೂರು: ನಾಳೆ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಳಿನ ಪೂಜಾ ಅವಧಿಯಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ. ರಾತ್ರಿ 7ಕ್ಕೆ ನಡೆಯುವ ಮಹಾಪೂಜೆಯನ್ನು ಸಂಜೆ 6.30ಕ್ಕೆ ನಡೆಸಲಾಗುತ್ತದೆ. 7 ಗಂಟೆಯ ಬಳಿಕ ಭಕ್ತರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶವಿಲ್ಲ. ಸಂಜೆಯ ಆಶ್ಲೇಷಾ ಬಲಿ ಸೇವೆ ಹಾಗೂ ರಾತ್ರಿಯ ಭೋಜನ ವ್ಯವಸ್ಥೆಯೂ ಇರುವುದಿಲ್ಲ. ಬೆಳಗ್ಗಿನಿಂದ ಮಧ್ಯಾಹದ ವರೆಗಿನ ಪೂಜಾ ಅವಧಿ ಮತ್ತು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.ಇನ್ನು …

Read More »