Breaking News

ಸುದ್ದಿ

ಅತೃಪ್ತ ಶಾಸಕರ ನಡೆ ಬೇಸರ ತರಿಸಿದೆ: ಧ್ರುವನಾರಾಯಣ

ಚಾಮರಾಜನಗರ:ರಾಜಕಾರಣದಲ್ಲಿ ಗೆದ್ದಂತಹ ಶಾಸಕರಿಗೆ ಪಕ್ಷ ನಿಷ್ಠೆ ಇರಬೇಕು. ಇತ್ತೀಚಿನ ಈ ಬೆಳವಣಿಗೆಗಳು ಬಹಳ ನೋವು ತರುವಂತಹದ್ದು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಹೇಳಿದ್ದಾರೆ.ಹನೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ಗೆದ್ದು ಅಧಿಕಾರಕ್ಕಾಗಿ ಹಪಹಪಿಸುವುದು ಸರಿಯಲ್ಲ,ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷಕ್ಕೆ ಗೌರವ ಕೊಡಬೇಕು. ಇದರಿಂದ ಜನರಿಗೂ ಸಹ ರಾಜಕಾರಣಿಗಳ ಮೇಲೆ ವಿಶ್ವಾಸ ಇರುತ್ತದೆ.ಮೂರು- ನಾಲ್ಕು ಬಾರಿ ಗೆದ್ದಿರುವವರಿಗೂ ಅಧಿಕಾರದ ಮೇಲೆ ಆಸೆ ಇರುತ್ತೆ, ಆದ್ರೂ ಪಕ್ಷಕ್ಕೆ ನಿಷ್ಠೆಯಿಂದ ಇದ್ದಾರೆ ಎಂದರು.ಅನಿಲ್ …

Read More »

ಮೈತ್ರಿಯ ಮತ್ತೊಂದು ವಿಕೆಟ್ ಪತನ ನಿರೀಕ್ಷೆ

ಚಿತ್ರದುರ್ಗ: ಕಳೆದ ಎರಡು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿರುವ ರಾಜೀನಾಮೆ ಪರ್ವಕ್ಕೀಗ ಮತ್ತೊಂದು ಮೈತ್ರಿ ವಿಕೆಟ್ ಬೀಳುವ ನಿರೀಕ್ಷೆ ಇದೆ.‌ ಚಳ್ಳಕೆರೆ ಕಾಂಗ್ರೇಸ್ ಶಾಸಕ ಟಿ.ರಘುಮೂರ್ತಿ ರಾಜೀನಾಮೆ ಸಿಗುವ ‌ಸಾಧ್ಯತೆ ಹೆಚ್ಚಾಗಿದೆ. ಚಿತ್ರದುರ್ಗ ಜಿಲ್ಲೆಯ ಮಾಜಿ ಸಚಿವ ಹೆಚ್. ಆಂಜನೇಯ ಅವರ ನಡತೆಗೆ ಬೇಸರಗೊಂಡ ರಘುಮೂರ್ತಿ ರಾಜೀನಾಮೆ ನೀಡಬಹುದೆಂಬ ಮಾಹಿತಿ ದೊರೆತಿದೆ. ‌ ಸಮುದಾಯದ ಕಡೆಗಣನೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವಂತೆ ತಮ್ಮದೇ ಸಮುದಾಯದ ಹೀರೋ ರಮೇಶ್ ಜಾರಕಿಹೊಳಿ ಆದೇಶದ …

Read More »

ಮುಂದೆಯೂ ಕುಮಾರಸ್ವಾಮಿಯೇ ಸಿಎಂ

ದಾವಣಗೆರೆ: ಸಿದ್ದರಾಮಯ್ಯ , ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುತ್ತಾರೆ ಎಂಬುದು ಸುಳ್ಳು. ಕುಮಾರಸ್ವಾಮಿ ಯೇ ಮುಂದೂವರೆಯುವ ಸಾಧ್ಯತೆ ಇದೆಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು. ‌ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕೀಯದಲ್ಲಿ ರಾಜೀನಾಮೆ‌ ಕುರಿತು ಇಷ್ಟೆಲ್ಲಾ ಬೆಳವಣಿಗೆಗಳು, ಗೊಂದಲಗಳು ನಡೆಯುತ್ತಿದ್ದರೂ ಯಾವುದೇ ಮುಖಂಡರು ನನಗೆ ಬೆಂಗಳೂರಿಗೆ ಬರಲು ಕರೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಸದ್ಯಕ್ಕೆ ಸರ್ಕಾರದಲ್ಲಿ ಏನು ಆಗುತ್ತಿದೆ ಎಂದು ಹೇಳಲು ಆಗುವುದಿಲ್ಲ ಎಂದರು.‌ಕುಮಾರಸ್ವಾಮಿ ಹಾಗೂ …

Read More »

ಹೆಣ್ಣು ಕೊಟ್ಟ ಅತ್ತೆಯ ಮೇಲೆ ಅಳಿಯನಿಂದ ಮಾರಣಾಂತಿಕ ಹಲ್ಲೆ

ದಾವಣಗೆರೆ; ಅಳಿಯನೇ ಅತ್ತೆಗೆ ಮಚ್ಚಿನಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದಾವಣಗೆರೆಯ ಹೊಂಡದ ವೃತ್ತದ ಬಳಿ ನಡೆದಿದೆ. ಹಲ್ಲೆಗೊಳಗಾದ ಮಹಿಳೆ ಭಾಗ್ಯ ಎಂದು ತಿಳಿದುಬಂದಿದೆ. ಆರೋಪಿ ಅಭಿರಾಜ್ ಅಲಿಯಾಸ ಚೋಟು ಎಂಬಾತನನ್ನು ಬಂಧಿಸಲಾಗಿದೆ. ಘಟನಾ ಸ್ಥಳಕ್ಕೆ ಗಾಂಧಿ ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಹಲ್ಲೆಗೆ ನಿಖರ ಕಾರಣ ತಿಳಿದಿಲ್ಲ. ಸಧ್ಯ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಮಹಿಳೆಯನ್ನು ಚೀಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Read More »

ಜು.11ರಂದು ಐಬಿಎಂಆರ್ ನಲ್ಲಿ ಉದ್ಯೋಗ ಮೇಳ

ಹುಬ್ಬಳ್ಳಿ: ಐಬಿಎಂಆರ್ ಕಾಲೇಜು ಹಾಗೂ ಆಕ್ಸ್‌ಫರ್ಡ್ ಪಾಲಿಟೆಕ್ನಿಕ್ ಸಹಯೋಗದಲ್ಲಿ ಜು.11 ರಂದು ಪ್ರಗತಿ -2019 ಉದ್ಯೋಗ ಮೇಳವನ್ನು ವಿದ್ಯಾನಗರದ ಐಬಿಎಂಆರ್ ಕಾಲೇಜ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಐಬಿಎಂಆರ್ ನಿರ್ದೇಶಕ ರೀಯಾಜ ಬಸರಿ ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ಬಿಸಿನೆಸ್ ಎಜುಕೇಶನ್ ಲ್ಲಿ ಗಣನೀಯ ಸೇವೆ ಸಲ್ಲಿಸುತ್ತಾ ಬಂದಿರುವ ಐಬಿಎಂಆರ್ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸೂಕ್ತ ಪ್ಲೇಸ್ ಮೆಂಟ್ ಮಾಡುವಂತ ಕಾರ್ಯವನ್ನು ಸುಮಾರು ಒಂಬತ್ತು ವರ್ಷಗಳಿಂದ ನಡೆಸುತ್ತಾ …

Read More »

ಕರುವನ್ನು ಬಲಿ ತೆಗೆದುಕೊಂಡ ಚಿರತೆ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕಾತರಕಿ ಗುಡ್ಲಾನೂರು ಗ್ರಾಮದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು,ಕರುವನ್ನು ತಿಂದು ಹೋಗಿರುವ ಘಟನೆ ಇಂದು ನಡೆದಿದೆ.‌ಚಿರತೆ ದಾಳಿಯಿಂದ ಕಂಗಾಲಾಗಿರುವ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಲು ಹರಸಾಹಸಪಡುತ್ತಿದ್ದಾರೆ.ಕೆಲ ದಿನಗಳ ಹಿಂದಿನಿಂದ ಊರ ಹೊರಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಈಗ ರಾತ್ರಿಯಾಗುತ್ತಿದ್ದಂತೆಯೇ ಊರೊಳಗಡೆ ನುಗ್ಗಿ ಸಣ್ಣ ಕರುಗಳನ್ನು ತಿಂದು ಹೋಗುತ್ತಿರುವುದು ಮಾಮೂಲಿಯಾಗಿದೆ.ಇದರಿಂದ ಸಾವ೯ಜನಿಕರು ಆತಂಕದಿಂದ ಬದುಕುತ್ತಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More »

ಮತ್ತೆ ಏರಿಕೆಯಾದ ಕೃಷ್ಣ ನದಿ ಒಳ ಹರಿವು

ಚಿಕ್ಕೋಡಿ: ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಮತ್ತೆ ಏರಿಕೆ ಕಂಡು ಬಂದಿದ್ದು, ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ ದೂಧಗಂಗಾ ನದಿಗಳ ಒಳ ಹರಿವು ಹೆಚ್ಚಳವಾಗಿದೆ. ಕೃಷ್ಣಾ ನದಿಗೆ ಸುಮಾರು ೨೨೦೦೦ ಸಾವಿರ ಕ್ಯೂಸೆಕ್ಸ ನೀರು ಹರಿದು ಬರುತ್ತಿದೆ. ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆಳ ಹಂತದ ಬೋಜ- ಕಾರದಗಾ, ಭೋಜವಾಡಿ- ಕಣ್ಣೂರ- ಮಲಿಕವಾಡ ದತವಾಡ ಸೇತುವೆಗಳು ಜಲಾವೃತಗೊಂಡಿವೆ.‌ ೩ ಸೇತುವೆಗಳು ಸಹ ದೂಧಗಂಗಾ ನದಿಗೆ …

Read More »

ನದಿ ನೀರಿಗೆ ಸಿಲುಕಿ ಎರಡು ಎತ್ತು ಸಾವು

ಚಿಕ್ಕೋಡಿ: ಕಳೆದ ಎರಡು ಮೂರು ದಿನಗಳಿಂದ ಕೃಷ್ಣಾ ನದಿಯ ನೀರಿನ ಒಳ ಹರಿವಿನಲ್ಲಿ ಹೆಚ್ಚಳವಾಗಿದ್ದು, ಕೃಷ್ಣಾ ನದಿ ನೀರಿನ ಸೆಳೆತಕ್ಕೆ ಸಿಲುಕಿ ಎರಡು ಎತ್ತುಗಳು ಮೃತಪಟ್ಟ ಧಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ನಡೆದಿದೆ. ಗುಂಡು ಲಾಲಸಿಂಗೆ ಎಂಬುವರಿಗೆ ಸೇರಿದ ಎತ್ತುಗಳು ಇವಾಗಿದ್ದು ನದಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ. ಸ್ಥಳಕ್ಕೆ ಅಥಣಿ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

Read More »

ಗ್ರಾ.ಪಂ.ಮಾಜಿ ಅಧ್ಯಕ್ಷ, ಪುತ್ರನ ಬರ್ಬರ ಹತ್ಯೆ

ಯಾದಗಿರಿ: ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಪುತ್ರನ ಬರ್ಬರ ಹತ್ಯೆ ಮಾಡಿರುವ ಘಟನೆಯಾದಗಿರಿ ಸಮೀಪದ ಹತ್ತಿಕುಣಿ ಗ್ರಾಮದ ಬಳಿ ನಡೆದಿದೆ.ಕಾಂಗ್ರೆಸ್ ಪಕ್ಷದ ಮುಖಂಡ, ಹತ್ತಿಕುಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶರಣಪ್ಪ ಗಡ್ಡೀಮನಿ ಪೂಜಾರಿ (55), ಪುತ್ರ ಮಹಾದೇವಪ್ಪ (29) ಕೊಲೆಯಾದ ದುರ್ದೈವಿಗಳು.ಯಾದಗಿರಿ ಸಮೀಪದ ಹತ್ತಿಕುಣಿ ಸಮೀಪದ ಹತ್ತಿಕುಣಿ ಭಾಗದಸರಕಾರಿ ತೋಟಗಾರಿಕೆ ಪ್ರದೇಶ ಹಾಗೂ ರಕ್ಷಿತ ಅರಣ್ಯ ಪ್ರದೇಶ ಬಳಿ ಕೊಲೆ ಸಂಭವಿಸಿದೆ.ಕೊಲೆಯಾದ ಶರಣಪ್ಪಗೆ ನಾಲ್ವರು ಪುತ್ರು ಹಾಗೂ …

Read More »

ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಮಾನತಿಗಾಗಿ ಆಗ್ರಹಿಸಿ ಪ್ರತಿಭಟನೆ

ಯಾದಗಿರಿ: ಜಿಲ್ಲೆಯ ಶಹಾಪುರ ನಗರದ ಸಾರ್ವಜನಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಮಾನತಿಗಾಗಿ ಆಗ್ರಹಿಸಿ ಬಹುಜನ ಅಂಬೇಡ್ಕರ್ ಸಂಘದ ವತಿಯಿಂದ ಶಹಾಪುರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 2018 -19 ನೆ ಸಾಲಿನ ಸೇರ್ಪಡೆ ಮತ್ತು ಲೆಕ್ಕ ಶೀರ್ಷಿಕೆ ಕ್ರಿಯೆ ಯೋಜನೆಯಲ್ಲಿ ತಾಲೂಕಿನ ಚಟ್ನಲ್ಲಿ, ಮದ್ದರಕಿ, ನಗನಟಗಿ, ತುಮಕುರು, ಹತ್ತಿಗೂಡುರೂ, ಹೀಗೆ ಹಲವಾರು ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಕಿಟಕಿ,ಬಾಗಿಲು,ನೆಲಸಮ ಹೀಗೆ ಹಲವಾರು ಕಾಮಗಾರಿಗಳಲ್ಲಿ 20 ಲಕ್ಷ ರೂಪಾಯಿ ಮೊತ್ತದ ಬಾರಿ ಗೋಲ್ಮಾಲ್ …

Read More »