Breaking News

ಸುದ್ದಿ

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರನನ್ನು ಸೆರೆ ಹಿಡಿದ ಖಾಕಿ ಪಡೆ.

ಹುಬ್ಬಳ್ಳಿ; ಮೊಬೈಲ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ದಂಧೆ‌ ನಡೆಸುತ್ತಿದ್ದ ಬುಕ್ಕಿಯೊಬ್ಬನನ್ನು ಬಂಧಿಸುವಲ್ಲಿ‌ ಹುಬ್ಬಳ್ಳಿ ಪೋಲೀಸರು ಯಶಸ್ವಿಯಾಗಿದ್ದಾರೆ.ಖಚಿತ ಮಾಹಿತಿಯ ದೊರೆತ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಹುಬ್ಬಳ್ಳಿ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.ಹಳೇ ಹುಬ್ಬಳ್ಳಿ ಅರವಿಂದ ನಗರದ ನಿವಾಸಿ ಮನೋಹರ ರಾಯಭಾಗ ಬಂಧಿತ ಆರೋಪಿ.ಬಂಧಿತನಿಂದ 3000 ರೂ., ಎರಡು ಮೊಬೈಲ್ ವಶಕ್ಕೆ‌ ಪಡೆಯಲಾಗಿದೆ.ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಇಬ್ಬರ ಪ್ರಾಣ ತೆಗೆದುಕೊಂಡ ಬುಲೆರೋ, ಲಾರಿ ಅಪಘಾತ

ಮಂಗಳೂರು: ಮಹೀಂದ್ರಾ ಬೊಲೆರೋ ಹಾಗೂ ಲಾರಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆ ಸೋಮವಾರ ತಡರಾತ್ರಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿಯಲ್ಲಿ ಸಂಭವಿಸಿದೆ.ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಹಾಗೂ ಬೊಲೆರೋ ನಡುವೆ ನೆಲ್ಯಾಡಿಯ ಬೆಥನಿ ವಿದ್ಯಾಸಂಸ್ಥೆಯ ಬಳಿ ಹಳ್ಳ ಸೇತುವೆ ಸಮೀಪ ಮುಖಾಮುಖಿ ಢಿಕ್ಕಿಯಾಗಿದೆ. ಘಟನೆಯಲ್ಲಿ ಬೊಲೆರೋದಲ್ಲಿದ್ದ ಸತ್ತಾರ್ ಮೊರಂಕಾಲ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಸಾಂಮ್ಸನ್ ಹಾಗೂ ಸೈರಸ್ …

Read More »

ಗಂಡನಿಂದ ದೂರಾಗಿ ತಮ್ಮನ ಮನೆಗೆ ಹೋಗಿ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ನೋವೇನಿತ್ತು?

ಬೆಂಗಳೂರು: ಗಂಡನ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬಳು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ನಲ್ಲಸಂದ್ರದಲ್ಲಿ ಸೋಮವಾರ ಸಂಜೆ ನಡೆದಿದೆ.ಗೀತಾ(30) ಮೃತಪಟ್ಟ ಮಹಿಳೆ. ವೃತ್ತಿಯಲ್ಲಿ ಬಿಎಂಟಿಸಿ ಡ್ರೈವರ್ ಆಗಿರುವ ಭೀಮಣ್ಣ 14 ವರ್ಷಗಳ ಹಿಂದೆ ಗೀತಾಳನ್ನು ವರಿಸಿದ್ದ. ಮೂಲತಃ ಬೀದರ್​ನವರಾಗಿದ್ದ ದಂಪತಿ, 5 ವರ್ಷಗಳ ಹಿಂದೆ ನಗರದ ನಲ್ಲಸಂದ್ರದಲ್ಲಿ ವಾಸವಿದ್ದರು.ಕಳೆದ ಮೂರು ದಿನಗಳ ಹಿಂದೆ ಪತಿ ಭೀಮಣ್ಣ, ಗೀತಾಳಿಗೆ ಹಲ್ಲೆ ಮಾಡಿದ್ದ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಗೀತಾ ಗಂಡನ …

Read More »

ಜಿಲ್ಲಾ ‌ಆರೋಗ್ಯ ಅಧಿಕಾರಿ ರವಿಶಂಕರ್ ಅಮಾನತ್ತು.

ಚಿಕ್ಕಬಳ್ಳಾಪುರ: ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರು ಅಮಾನತು ಮಾಡಿದ್ದಾರೆ.ರವಿಶಂಕರ್ ಆಡಳಿತ ವೈಖರಿ ಖಂಡಿಸಿ, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆರೋಗ್ಯ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಹರೀಶ್‌ ಅವರು ಜಿಲ್ಲಾಧಿಕಾರಿ ಮತ್ತು ಆರೋಗ್ಯ ಇಲಾಖೆ ಆಯುಕ್ತರಿಗೆ ಮತ್ತು ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಸತ್ಯನಾರಾಯಣರೆಡ್ಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ರೆಡ್ಡಪ್ಪ ಅವರು ಜಿಲ್ಲಾಧಿಕಾರಿ …

Read More »

ಬಸ್ ಕಂಡಕ್ಟರ್ ಮೇಲೆ‌ ಹಲ್ಲೆ ನಡೆಸಿ ಸಾವಿರಾರು ರೂಪಾಯಿ ದೋಚಿದ ದರೋಡೆಕೋರರು.

ಉಡುಪಿ : ಉಡುಪಿಯಿಂದ ಶಿವಮೊಗ್ಗ ಕ್ಕೆ ತೆರಳುತ್ತಿದ್ದ ಬಸ್ಸೊಂದನ್ನ ಗುಂಪೊಂದು ಅಡ್ಡಗಟ್ಟಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ಕಂಡಕ್ಟರ್ ಬಳಿಯಿದ್ದ ಸಾವಿರಾರು ರೂಪಾಯಿ ಹಣವನ್ನು ದೋಚಿದ ಘಟನೆ ಅಂಗುಂಬೆ -ತೀರ್ಥಹಳ್ಳಿ ಬಳಿಯ ಮಂಡಗದ್ದೆ ಬಳಿ ನಡೆದಿದೆ.ನಿಶಾನ್ ಟ್ರಾವೆಲ್ಸ್ ಎನ್ನುವ ಬಸ್ಸು ಮಧ್ಯಾಹ್ನ ೩.೧೫ ಕ್ಕೆ ಉಡುಪಿಯಿಂದ ಹೊರಟ್ಟಿತ್ತು.ಹೆಬ್ರಿ ಸೀತಾನದಿ ಬಳಿ ಕಾರೊಂದರಲ್ಲಿ ಬಂದಿದ್ದ ಗುಂಪು ಸ್ಥಳೀಯರಿಗೆ ಹಲ್ಲೆ ನಡೆಸುತ್ತಿದ್ದ ನ್ನು‌ ಕಂಡು ಚಾಲಕ ಬಸ್ಸು ನಿಲ್ಲಿಸಿದ್ದಾನೆ.ಈ ಸಂಧರ್ಭದಲ್ಲಿ ಕಂಡಕ್ಟರ್ ಗಣೇಶ್ …

Read More »

ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ.

ಆನೇಕಲ್: ನಗ್ನ ಸ್ಥಿತಿಯಲ್ಲಿ ವ್ಯಕ್ತಿಯ ಕೊಳೆತ ಶವವು ಬೆಂಗಳೂರು ಹೊರವಲಯ ಆನೇಕಲ್ನ ನಾರಾಯಣಪುರದ ಮನೆಯೊಂದರಲ್ಲಿ ಪತ್ತೆಯಾಗಿದೆ. ಚೌಡಪ್ಪ (45) ಮೃತ ದುರ್ದೈವಿ. ಮೃತ ಚೌಡಪ್ಪ ನಾರಾಯಣ ಪುರದ ಮನೆಯಲ್ಲಿ ಒಬ್ಬನೇ ಇರುತ್ತಿದ್ದ.‌ ಒಂದು ವರ್ಷದ ಹಿಂದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಾಗಿನಿಂದ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ. ಹಾಗೂ ಇದ್ದ ಒಬ್ಬ ಮಗನು ಸಹ ಬೇರೊಂದು ಮನೆಯಲ್ಲಿ ವಾಸಿಸುತ್ತಿದ್ದ.‌ ವ್ಯಕ್ತಿ‌ ಒಮ್ಮಿಂದೊಮ್ಮೆಲೆ ಶವವಾಗಿ ಪತ್ತೆಯಾಗಿರುವದು ಅನುಮಾನಕ್ಕೆ ಎಡೆ ಮಾಡಿದೆ. ಕಳೆದ ಎರಡು ದಿನಗಳಿಂದ …

Read More »

ಮೊಬೈಲ್ ಟವರ್ ಮೇಲಿನಿಂದ ಹಾರಿ ಯುವಕ ಆತ್ಮಹತ್ಯೆ.‌

ಮಂಡ್ಯ: ಮಂಡ್ಯ ಪಟ್ಟಣದ ಸಿಂದಘಟ್ಟ ಗ್ರಾಮದಲ್ಲಿ ಮೊಬೈಲ್ ಟವರ್ ಮೇಲಿನಿಂದ ಕೆಳಕ್ಕೆ ಹಾರಿ ಪುಟ್ಟಯ್ಯ ಅವರ ಪುತ್ರ ವಿಜಯಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.ಸಿಂದಘಟ್ಟ ಗ್ರಾಮದ ಗ್ರಾಮಪಂಚಾಯಿತಿ ಮಾಜಿಸದಸ್ಯೆ ಗೌರಮ್ಮ ಅವರ ಪುತ್ರನಾದ ವಿಜಯಕುಮಾರ್(29) ಇಂದು ಮುಂಜಾನೆ ಮೊಬೈಲ್ ಟವರ್ ಹತ್ತಿ ಕೆಳಕ್ಕೆ ಹಾರಿದಾಗ ಕೈಕಾಲುಗಳು ಮುರಿದಿದ್ದವು..ಕೂಡಲೇ ರಕ್ತಸ್ರಾವ ದಿಂದ ಬಳಲುತ್ತಿದ್ದ ಈತನನ್ನು ಗ್ರಾಮದ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಸಾವಿಗೆ ಶರಣಾಗಿದ್ದನುಎಂದು ಗ್ರಾಮದ ಮುಖಂಡ ಎಪಿಎಂಸಿ ನಿರ್ದೇಶಕ ಸೋಮಸುಂದರ್ ತಿಳಿಸಿದ್ದಾರೆ. ವಿಜಯಕುಮಾರ್ ಆತ್ಮಹತ್ಯೆಗೆ …

Read More »

ಶಾಸಕ ನಾರಾಯಣಗೌಡ ಆಪರೇಷನ್ ಕಮಲಕ್ಕೆ ತುತ್ತಾಗಿಲ್ಲ.

ಮಂಡ್ಯ: ಶಾಸಕ ನಾರಾಯಣಗೌಡರು ಬಿಜೆಪಿ ಆಪರೇಷನ್ ಗೆ ಯಾವುದೇ ಕಾರಣಕ್ಕೂ ತುತ್ತಾಗಿಲ್ಲ ಎಂದು ಜೆಡಿಎಸ್ ಜಿಪಂ ಸದಸ್ಯ ಎಚ್.ಟಿ.ಮಂಜು ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯ ಜಾನಕಿರಾಮ್ ಸ್ಪಷ್ಟನೆ ನೀಡಿದರು.ಕೆ.ಆರ್.‌ಪೇಟೆಯ ಶಾಸಕ ನಾರಾಯಣಗೌಡ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಟಿವಿ ಮಾದ್ಯಮಗಳು ಬಿಜೆಪಿ ಆಪರೇಷನ್ ತುತ್ತಾಗಿದ್ದಾರೆ ಎಂದು ಟಿವಿ ಮಾಧ್ಯಮಗಳು ವದಂತಿ ಹಬ್ಬಿಸುತ್ತಿದ್ದಾರೆ‌. ಇಂತಹ ವದಂತಿಗಳನ್ನು ಮಾಧ್ಯಮಗಳು ಪ್ರಸಾರ ಮಾಡಬಾರದು. ಶಾಸಕರೊಂದಿಗೆ ನಾನು ಕೂಡ ದೂರವಾಣಿ ಮೂಲಕ ಕರೆ ಮಾಡಿ …

Read More »

ಸಾರ್ವಜನಿಕ ಜೀವನದಲ್ಲಿ ಗೌರವದಿಂದ ಸಾಯಲು ಬಯಸುವೆ: ಸ್ಪೀಕರ್ ರಮೇಶ

ಕೋಲಾರ: ಸಾರ್ವಜನಿಕ ಜೀವನದಲ್ಲಿ ನಾನು ಗೌರವದಿಂದ ಸಾಯೋದಿಕ್ಕೆ ಇಷ್ಟಪಡುತ್ತೇನೆ.‌ ಈಗಾಗಲೇ ಅಧಃಪತಕ್ಕಿಳಿದಿರುವ ರಾಜಕಾರಣಕ್ಕೆ ನನ್ನನ್ನು ತಳ್ಳಲು ಯಾಕೆ ಪ್ರಯತ್ನ ಮಾಡ್ತೀರಿ ಎಂದು ಮಾಧ್ಯಮಗಳ ವಿರುದ್ದ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ‌ಕೋಲಾರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಬದುಕಿದೆ ಮೂರು ಕಾಸು ಮರ್ಯಾದೆ ಉಳಿದಿಲ್ಲವಾಗಿದೆ ಎಂದು ಕಿಡಿ ಕಾರಿದರು.ಮೈತ್ರಿ ಶಾಸಕರ ರಾಜೀನಾಮೆ ವಿಚಾರವಾಗಿ ಮಾತನಾಡಿ, ಈಗಾಗಲೇ ಕಚೇರಿಯಲ್ಲಿ ಸ್ವೀಕೃತವಾಗಿರುವ ಶಾಸಕ ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ನಿಯಮಾನುಸಾರ ಕ್ರಮ …

Read More »

ಯಡ್ಡಿ ವಿರುದ್ಧ ರಾಯರಡ್ಡಿ ಕಿಡಿ

ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅರ್ಜಂಟ್ ಆಗಿ ಮುಖ್ಯಮಂತ್ರಿ ಆಗಬೇಕೆಂದು ದುರಾಸೆ ಪಡುತ್ತಿದ್ದಾರೆ. ಅದು ಸಾಧ್ಯವಿಲ್ಲ ಅಲ್ಲದೇ ಮೈತ್ರಿ ಸರ್ಕಾರ ಪತನವಾಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದ ಮುಖಂಡರು ಬಹುಮತ ಇಷ್ಟರಲ್ಲಿ ಹೋಗುತ್ತೇ ಸರ್ಕಾರ ಪತನವಾಗುತ್ತದೇ ಎಂದು ಹೇಳಿಕೆ ನೀಡುತ್ತಿದ್ದಾರೆ ಅದು ಅವರು ಮುರ್ಖತನದ ಮಾತಾಗಿದೆ ಎಂದರು.ನಾನು ರಾಜಕೀಯವಾಗಿ ಮಾತನಾಡುತ್ತಿಲ್ಲ ನಿಯಮ, ಕಾನೂನು, ಸಾಧ್ಯತೆ ಹಾಗೂ …

Read More »