Breaking News

ಸುದ್ದಿ

ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು….

ಹುಬ್ಬಳ್ಳಿ: ಏಳನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಇಲ್ಲದಿದ್ದರೆ ಎರಡನೇ ಬಾರಿ ಶೇ.ಮೂವತ್ತರಷ್ಟು ಮಧ್ಯಂತರ ಪರಿಹಾರ ಘೋಷಣೆ ಮಾಡಬೇಕೆಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ ಸಜ್ಜನ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರ ಏಳನೇ ವೇತನ ಆಯೋಗವು ರಚನೆಯಾಗಿ ಒಂದು ವರ್ಷವಾಗುತ್ತಿದೆ. ಅಂದು ಆಯೋಗದ ಅನುಷ್ಠಾನಕ್ಕಾಗಿ ಹೋರಾಟಕ್ಕೆ ಇಳಿದ ಮೇಲೆ ಅಂದಿನ ರಾಜ್ಯ ಸರ್ಕಾರ ಶೇ. ೧೭ ರಷ್ಟು …

Read More »

ಅಕ್ಕಿಭಾಗ್ಯ ಯೋಜನೆ: ಇನ್ನೂ ಕೆಲ ತಿಂಗಳುಗಳು ಅಕ್ಕಿ ಬದಲು ಖಾತೆಗೆ ಹಣ ಹಾಕಲಾಗುವುದು

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪೂರೈಕೆ ಕೊರತೆ ಕಾಡುತ್ತಿರುವ ಹಿನ್ನೆಲೆ ಇನ್ನೂ ಕೆಲವು ತಿಂಗಳುಗಳು ಅಕ್ಕಿ ಬದಲು ಖಾತೆಗೆ ಹಣ ಹಾಕಲಾಗುವುದು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಕೆಎಫ್​ಸಿಸಿಐ) ಅಧ್ಯಕ್ಷರಾದ ರಮೇಶ್​ ಚಂದ್ರ ಲಹೋಟೆಯವರು ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಹಿನ್ನೆಲೆ ಅಕ್ಕಿ ಉತ್ಪಾದನೆಯಲ್ಲಿ ಕುಂಠಿತವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಂದರೇ ಶೇ.14 ರಷ್ಟು ಅಕ್ಕಿ ಉತ್ಪಾದನೆಯಲ್ಲಿ ಕುಂಠಿತವಾಗುವ …

Read More »

ಪ್ರೇತ ಸಿನಿಮಾ ಆಡಿಯೋ ಲಾಂಚ್ ಇತ್ತೀಚೆಗಷ್ಟೆ ಅದ್ಧೂರಿಯಾಗಿ ನೆರವೇರಿದೆ..

ಪ್ರೇತ ಸಿನಿಮಾ ಮೂಲಕ ಕಲಾಕರ್ ಹರೀಶ್ ರಾಜ್ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವುದು ಗೊತ್ತೇ ಇದೆ. ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಈ ಚಿತ್ರದ ಆಡಿಯೋ ಲಾಂಚ್ ಇತ್ತೀಚೆಗಷ್ಟೆ ಅದ್ಧೂರಿಯಾಗಿ ನೆರವೇರಿದೆ. ಬೆಂಗಳೂರಿನ ಜೆಸಿ ನಗರದಲ್ಲಿ ನಡೆದ ದಸರಾ ಸಂಭ್ರಮದಲ್ಲಿ ಸಚಿವರಾದ ಬೈರತಿ ಸುರೇಶ್ ತಮ್ಮದೇ ಕ್ಷೇತ್ರದ ಕಲಾವಿದರಾದ ಹರೀಶ್ ರಾಜ್ ನಟನೆಯ ಪ್ರೇತ ಸಿನಿಮಾದ ಆಡಿಯೋ ಲಾಂಚ್ ಮಾಡಿ ಶುಭ ಹಾರೈಸಿದ್ದಾರೆ. ಈ ವೇಳೆ ಕಾಂತಾರದ ಚೆಲುವೆ …

Read More »

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯಲ್ಲಿ ದುರಾಡಳಿತವಿದೆ: ರಾಬಿನ್‌ ಉತ್ತಪ್ಪ.

ನವದೆಹಲಿ: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಯಲ್ಲಿ ದುರಾಡಳಿತವಿದೆ ಎಂದು ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಪ್ರತಿಭೆಗಳನ್ನು ಬೆಳೆಯಲು ಬಿಡಲ್ಲ ಎಂದು ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಹಿರಿಯ ಕ್ರಿಕೆಟಿಗರನ್ನು ಕಡೆಗಣಿಸಿದ ರೀತಿ, ಹಲವರು ವಲಸೆ ಹೋಗುವಂತೆ ಮಾಡಿದ್ದರ ಬಗ್ಗೆ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಬಹಳಷ್ಟು ಪ್ರತಿಭೆಗಳು ದುರಾಡಳಿತಕ್ಕೆ ಬಲಿಯಾಗಿದ್ದಾರೆ. ಕೊನೆ ಬಾರಿ(2014-15)ರಣಜಿ ಟ್ರೋಫಿ ಗೆದ್ದ ತಂಡದಲ್ಲಿದ್ದ ಆಟಗಾರರು ವಿಭಜನೆಗೊಂಡು ಬೇರೆಡೆ ವಲಸೆ ಹೋಗಿದ್ದಾರೆ. …

Read More »

ನಟಿ ಕಾವ್ಯಾ ಶಾಸ್ತ್ರಿ ಕೂಡ ಬಿಗ್ ಬಾಸ್ ಬಗ್ಗೆ ಇದೀಗ ಅಸಮಾಧಾನ ಹೊರ ಹಾಕಿದ್ದಾರೆ….

ಬಿಗ್ ಬಾಸ್ ಕನ್ನಡ ಸೀಸನ್ 10 ಪ್ರಾರಂಭವಾಗಿ ಮೂರು ವಾರ ಕಳೆದಿದ್ದು, ಈ ವಾರ ಸಂಪೂರ್ಣ ಗಲಾಟೆಯಲ್ಲೇ ಬಿಗ್ ಬಾಸ್ ನಡೆಯುತ್ತಿದ್ದು, ಸ್ಪರ್ಧಿಗಳು ತೀರಾ ಕೆಳಮಟ್ಟದ ಪದಗಳನ್ನು ಬಳಸಿ ಜಗಳವಾಡುತ್ತಿದ್ದು, ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಹಲವು ಮಂದಿ ಈ ಬಾರಿಯ ಬಿಗ್ ಬಾಸ್‌ ಮನೆಯಲ್ಲಿನ ಘಟನೆಗಳು, ಸ್ಪರ್ಧಿಗಳ ಬಗ್ಗೆ ಬೇಸರ ಹೊರಹಾಕಿದ್ದಾರೆ. ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿ, ನಟಿ ಕಾವ್ಯಾ ಶಾಸ್ತ್ರಿ ಕೂಡ ಬಿಗ್ ಬಾಸ್ ಬಗ್ಗೆ …

Read More »

ವಿದ್ಯುತ್‌ ದರ ಹೆಚ್ಚಳವಾಗಿದೆ: ಯಡಿಯೂರಪ್ಪ.

ಬೆಂಗಳೂರು: ವಿದ್ಯುತ್‌ ದರ ಹೆಚ್ಚಳವಾಗಿದೆ ಎಂಬ ಯಡಿಯೂರಪ್ಪ ಅವರ ಹೇಳಿಕೆ ಹಿಂದಿನ ಬಿಜೆಪಿ ಸರ್ಕಾರವನ್ನೇ ಕುರಿತು ಟೀಕೆ ಮಾಡಿದಂತಿದೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಈ ಸಂಬಂಧ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ ಮೂಲಕ ಅವರು ಯಡಿಯೂರಪ್ಪ ಅವರ ಆರೋಪಗಳಿಗೆ ಉತ್ತರ ನೀಡಿದ್ದಾರೆ. ಕೆಇಆರ್‌ಸಿ ಮಾರ್ಚ್‌ ತಿಂಗಳಿನಲ್ಲಿ ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಹಿಂದಿನ ಬಿಜೆಪಿ ಸರ್ಕಾರದ ಮುಂದೆ ಮಂಡಿಸಿತ್ತು, ಈ ಪ್ರಸ್ತಾವನೆಗೆ ಬಿಜೆಪಿ ಸರ್ಕಾರ ಅನುಮತಿ ನೀಡಿದ್ದರಿಂದ ಮೇ. 12 …

Read More »

ಕೆಎಸ್‌ಆರ್‌ಟಿಸಿ ಬಸ್‌ ಜಮೀನಿಗೆ ನುಗ್ಗಿದೆ…..

ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಒಂದು ಹವಾ ಇಟ್ಟಿವೆ, ಹಾಗೇ ಹೊರ ರಾಜದಲ್ಲೂ ಕೆಎಸ್‌ಆರ್‌ಟಿಸಿ ಬಸ್ ಅಂದ್ರೆ ಒಂದು ಬೆಲೆ ಇದೆ. ಆ ಲೆಕ್ಕಾಚಾರದಲ್ಲಿ ನೋಡುವುದಾದರೆ, ಕನ್ನಡಿಗರ ನಾಡಿನ ಬಸ್‌ಗಳು ಉತ್ತಮ ಗುಣಮಟ್ಟ ಕೂಡ ಕಾಯ್ದುಕೊಂಡಿವೆ. ಆದ್ರೆ ಹೀಗೆ ಉತ್ತಮ ಹೆಸರು ಪಡೆದಿರುವ ಕೆಎಸ್‌ಆರ್‌ಟಿಸಿ ಸಂಸ್ಥೆಗೆ, ಕೆಲವು ಚಾಲಕರು ಮಾತ್ರ ಸಮಸ್ಯೆ ಮಾಡುತ್ತಿದ್ದಾರೆ. ತಮ್ಮ ಮನಸ್ಸಿಗೆ ಬಂದಂತೆ ಬಸ್ ಓಡಿಸಿ, ಪ್ರಯಾಣಿಕರ ಜೀವ ಬಾಯಿಗೆ ಬರಿಸುತ್ತಿದ್ದಾರೆ. ಅಂದಹಾಗೆ ಇಂಥದ್ದೇ ಘಟನೆಯೊಂದು ಇಂದು …

Read More »

ಕಂಗನಾ ರನೌತ್ ಅವರಿಗೆ ಈ ವರ್ಷ ಕೂಡ ಖುಷಿ ಸಿಕ್ಕಿಲ್ಲ….

ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ಈ ವರ್ಷ ಕೂಡ ಖುಷಿ ಸಿಕ್ಕಿಲ್ಲ. ಅವರು ಅಭಿನಯಿಸಿದ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗುತ್ತಿವೆ. ಅದರ ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ ‘ತೇಜಸ್’ ಸಿನಿಮಾ ಕೂಡ ಪ್ಲಾಪ್ ಆಗಿದೆ. ಇದೇ ಬೇಸರದಲ್ಲಿದ್ದಾರೆ ನಟಿ ಕಂಗನಾ ರನೌತ್. ಕಳೆದ ವಾರ ಬಿಡುಗಡೆಯಾದ ತೇಜಸ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಲು ವಿಫಲವಾಗಿದೆ. ಇದೇ ಬೇಸರದಲ್ಲಿ ನಟಿ ಕಂಗನಾ ರನೌತ್ ಅವರು ಗುಜರಾತ್‌ನ ದ್ವಾರಕಾಧೀಶ್ವರ …

Read More »

ಐದು ವರ್ಷ ನಮ್ಮದೇ ಸರ್ಕಾರ ಇರಲಿದೆ….

ಬೆಂಗಳೂರು: ರಾಜ್ಯದಲ್ಲಿ ಪೂರ್ಣಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ರಾಜ್ಯ ಕಾಂಗ್ರೆಸ್‌ ನಲ್ಲಿ ಎರಡೂವರೆ ವರ್ಷಗಳ ನಂತರ ಸಿಎಂ ಬದಲಾಗುತ್ತಾರೆ ಎಂಬ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆ ಎಳೆದಿದ್ದು, ಐದು ವರ್ಷ ನಮ್ಮದೇ ಸರ್ಕಾರ ಇರಲಿದೆ. ನಾನೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ತಿಳಿಸಿದ್ದಾರೆ. ಈ ಕುರಿತು ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಹಾಗೂ ಶಾಸಕ ಬಿ ವೈ ವಿಜಯೇಂದ್ರ ಟ್ವೀಟ್‌ …

Read More »

ತಮಗೆ ಮಂಜೂರಾದ ಸರ್ಕಾರಿ ಅಧಿಕೃತ ನಿವಾಸಕ್ಕೆ ಪೂಜೆ…

ಬೆಂಗಳೂರು: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರಿಂದು ತಮಗೆ ಮಂಜೂರಾದ ಸರ್ಕಾರಿ ಅಧಿಕೃತ ನಿವಾಸಕ್ಕೆ ಪೂಜೆ ಸಲ್ಲಿಸಿ, ಗೃಹ ಪ್ರವೇಶಿಸಿದರು. ಗಾಲ್ಫ್ ಕ್ಲಬ್‌ ಹತ್ತಿರವಿರುವ ಸೆವೆನ್‌ ಮಿನಿಸ್ಟರ್ಸ್ ಕ್ವಾಟರ್ಸ್‌ ನಲ್ಲಿರುವ ಸರ್ಕಾರಿ ಮನೆ ಸಚಿವ ಸಂತೋಷ್‌ ಲಾಡ್‌ ಅವರಿಗೆ ಮಂಜೂರಾಗಿದೆ.ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು, ಮುಖಂಡರು, ಅಭಿಮಾನಿಗಳು ಭಾಗಿಯಾಗಿ ಸಚಿವರಿಗೆ ಶುಭ ಹಾರೈಸಿದರು.

Read More »