BigTv News
August 24, 2023
ಕರ್ನಾಟಕ, ಕೊಡಗು, ಸುದ್ದಿ
ಕೊಡಗು: ಕನ್ನಡ ಚಿತ್ರರಂಗದಲ್ಲಿ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಮದುವೆ ಸಂಭ್ರಮ ಮನೆ ಮಾಡಿದೆ. ಪ್ರೀತಿಸಿ, ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಸಾಲಿಗೆ ಹೊಸದಾಗಿ ಹರ್ಷಿಕಾ ಭುವನ್ ಸೇರಿದ್ದಾರೆ. ಹೌದು, ಇಂದು ಕೊಡವ ಪದ್ಧತಿಯಂತೆ ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಗುರುಹಿರಿಯರ, ಕುಟುಂಬಸ್ಥರ, ಆಪ್ತರ ಸಮ್ಮುಖದಲ್ಲಿ ವಿವಾಹ ಶಾಸ್ತ್ರಗಳು ನೆರವೇರಿತು. ಕೊಡಗಿನ ವಿರಾಜ್ ಪೇಟೆಯಲ್ಲಿ ಅಮ್ಮತಿ ಕೊಡವ ಸಮಾಜದಲ್ಲಿ ಮದುವೆ ಜರುಗಿದೆ. ಕೊಡವ …
Read More »
BigTv News
August 24, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ನಾಳೆ ವರಮಾಲಕ್ಷ್ಮಿ ಹಬ್ಬ ಹಿನ್ನೆಲೆ ಹುಬ್ಬಳ್ಳಿಯ ನಗರದ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿದೆ. ಜನ ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ಮುಗಿಬಿದ್ದಿದ್ದಾರೆ. ಹೂವು, ಹಣ್ಣು ಬಾಳೆ ದಿಂಡು ಖರೀದಿ ಜೋರಾಗಿದೆ. ಶ್ರಾವಣ ಮಾಸದಲ್ಲಿ ದೊಡ್ಡ ಹಬ್ಬವೆಂದ್ರೆ ಅದು ವರಮಹಾಲಕ್ಷ್ಮಿ ಹಬ್ಬ. ಎಲ್ಲವೂ ದುಬಾರಿಯಾದರೂ ಖರೀದಿ ಜೋರಾಗಿದೆ, ಇನ್ನೂ ಕೆಲವರು ತಮ್ಮ ಅವಶ್ಯಕತೆಗೆ ತಕ್ಕಂತೆ ಖರೀದಿಸ್ಥಿದಾರೆ. ವ್ಯಾಪಾರಿಗಳಂತು ಭರ್ಜರಿ ವ್ಯಾಪಾರ ಮಾಡ್ತಿದಾರೆ. ಈ ಸಲವು ಸಂಭ್ರಮದ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿದ್ದರಾಗಿದ್ದಾರೆ..
Read More »
BigTv News
August 24, 2023
ಕರ್ನಾಟಕ, ಧಾರವಾಡ, ಸುದ್ದಿ
ಕುಂದಗೋಳ: ಕುಂದಗೋಳ ಮತಕ್ಷೇತ್ರದ ಇಂದಿರಾ ಗಾಂಧಿ ವಸತಿ ನಿಲಯಕ್ಕೆ ಶಾಸಕ ಎಂ.ಆರ್.ಪಾಟೀಲ್ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿನೆ ನಡೆಸಿದ್ದಾರೆ. ಕುಂದಗೋಳ ಮತಕ್ಷೇತ್ರದ ಹಾಸ್ಟೇಲ್ ವ್ಯವಸ್ಥೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮೊನ್ನೆಯಷ್ಟೇ ಸಭೆ ನಡೆಸಿ ಸುವ್ಯವಸ್ಥಿತ ವಾತಾವರಣ ನಿರ್ಮಾಣ ಮಾಡಲು ಸಲಹೆ ನೀಡಿದ್ದ ಅವರು ಇಂದಿರಾ ಗಾಂಧಿ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಮಕ್ಕಳ ಜೊತೆ ಚರ್ಚಿಸಿ ವಿದ್ಯಾಭ್ಯಾಸ ಹಾಗೂ ಹಾಸ್ಟೆಲ್ ವ್ಯವಸ್ಥೆ ಬಗ್ಗೆ …
Read More »
BigTv News
August 24, 2023
ಕರ್ನಾಟಕ, ಧಾರವಾಡ, ಸುದ್ದಿ
ಕುಂದಗೋಳ: ಗಂಗಾಧರ ಸಿದ್ಧಪ್ಪ ಪಾಣಿಗಟ್ಟಿ ಇವರನ್ನು ಧಾರವಾಡ ಜಿಲ್ಲೆಯ ಗ್ರಾಮೀಣ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷ ಅನಿಲಕುಮಾರ್ ಪಾಟೀಲ್ ಆಯ್ಕೆ ಮಾಡಿ ಆದೇಶ ನೀಡಿದ್ದಾರೆ. ಗಂಗಾಧರ ಪಾಣಿಗಟ್ಟಿ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.
Read More »
BigTv News
August 24, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಶಿಕ್ಷಣ, ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡ ಶಿಕ್ಷಕನಿಗೆ , ನಿವೃತ್ತಿ ವೇತನ ಕೊಡುವದಕ್ಕೆ ಲಂಚದ ಬೇಡಿಕೆ ಇಟ್ಟ ಕಾಲೇಜು ಶಿಕ್ಷಣ ಇಲಾಖೆಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುಬಾಸ ಜವರೆಡ್ಡಿ ಎಂಬ ನಿವೃತ್ತ ಶಿಕ್ಷಕ ನಿವೃತ್ತಿ ವೇತನ ಕೇಳಲು ಹೋದಾಗ ದುರ್ಗಾದಾಸ ಮಸೂತಿ ಮತ್ತು ನಾಗರಾಜ ಹೂಗಾರ ಎಂಬ ಅಧಿಕಾರಿಗಳು ಲಂಚ ಕೇಳಿದ್ದರು. ಇಂದು 15 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಇಬ್ಬರು ಲೋಕಾಯುಕ್ತರ ಕೈಗೆ ಸಿಕ್ಕು ಬಿದ್ದಿದ್ದಾರೆ.
Read More »
BigTv News
August 24, 2023
News, ಕರ್ನಾಟಕ, ಜಿಲ್ಲೆ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಬಾಹ್ಯಾಕಾಶದಲ್ಲಿ ಭಾರತದ ಹೆಮ್ಮೆಯ ಇಸ್ರೋ ಸಂಶೋಧನಾ ಸಂಸ್ಥೆಯು ಗಗನ ನೌಕೆಯನ್ನು 40 ದಿನಗಳ ನಂತರ ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಂ ಲ್ಯಾಂಡ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ ಸತತ ವಿಜ್ಞಾನಿಗಳ ಪರಿಶ್ರಮದಿಂದ ವಿಶ್ವದಾಖಲೆಯನ್ನು ಸೃಷ್ಟಿಸಿದ ಭಾರತ ಜಗತ್ತಿನ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆಭಾರತದ ಹೆಮ್ಮೆಯ ಇಸ್ರೋ ವಿಜ್ಞಾನಿ ತಂಡದವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆಂದು ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ತಿಳಿಸಿದರು.
Read More »
BigTv News
August 24, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಸುದ್ದಿ, ಹುಬ್ಬಳ್ಳಿ-ಧಾರವಾಡ
ನವಲಗುಂದ: ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದ ಎಸ್.ಡಿ.ಎಮ್.ಸಿ, ಎಸ್.ಜಿ.ಎಸ್ ಕರ್ನಾಟಕ ಪಬ್ಲಿಕ್ (ಪದವಿ ಪೂರ್ವ ಶಾಲೆಯವರು ಹಮ್ಮಿಕೊಂಡಿದ್ದ 2023-24 ನೇ ಸಾಲಿನ ಕಾಲೇಜಿನ ವಿವಿಧ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಎನ್.ಎಚ್.ಕೋನರಡ್ಡಿ, ಗ್ರಾಮದ ಮಠದ ಶ್ರೀ ಪೂಜ್ಯರು, ಶಾಲಾ ಕಾಲೇಜಿನ ಶಿಕ್ಷಕರು ಆಡಳಿತ ಮಂಡಳಿಯವರು, ಮುದ್ದು ವಿದ್ಯಾರ್ಥಿಗಳು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Read More »
BigTv News
August 24, 2023
News, ಕರ್ನಾಟಕ, ಜಿಲ್ಲೆ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಚಂದ್ರಯಾನ-3 ಸಕ್ಸಸ್ ಆಗಿದೆ ಭಾರತದ ಸಮಸ್ತ ಜನತೆ ವಿಕ್ರಂ ವಾಹನ ಚಂದ್ರನ ಮೇಲೆ ಲ್ಯಾಂಡ್ ಆಗುತ್ತಿದ್ದಂತೆ ಜನ ಸಿಳ್ಳೆ ಹಾಕಿ ಸಂಭ್ರಮಿಸಿದ್ದಾರೆ. ಇನ್ನು ಇದೇ ವೇಳೆ ಹುಬ್ಬಳ್ಳಿ ಧಾರವಾಡ ಕಮಿಷನರ್ ವ್ಯಾಪ್ತಿಯಲ್ಲಿ ಧಾರವಾಡ ಸಂಚಾರ ಠಾಣೆ ಪೊಲೀಸರು ಕಳೆದ ಹಲವಾರು ದಿನಗಳಿಂದ ಬೈಕ್ ಮೇಲೆ ವ್ಹಿಲ್ಲಿಂಗ್ ಮಾಡುತ್ತಾ ಸಂಚಾರ ಅಡಚಣೆ ಮಾಡುತ್ತಿದ್ದ ಪುಂಡನನ್ನು ಹಿಡಿದು ಆತನ ಬೈಕನ್ನು ಲ್ಯಾಂಡ್ ಮಾಡಿಸಿದ್ದಾರೆ. ವಿಕ್ರಮ ಲ್ಯಾಂಡರ್ ಸಕ್ಸಸ್ ಆದ ವೇಳೆ ವಿಲ್ಲಿಂಗ್ …
Read More »
BigTv News
August 23, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಬಾಗಲಕೋಟೆಯಲ್ಲಿ ಇತ್ತೀಚಿಗೆ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಪುತ್ಥಳಿ ತೆರವುಗೊಳಿಸಿದ್ದನ್ನು ಖಂಡಿಸಿ ಹಾಗೂ ಅದೇ ಸ್ಥಳದಲ್ಲಿಯೇ ಮರುಪ್ರತಿಷ್ಠಾಪನೆ ಮಾಡಬೇಕೆಂದು ಆಗ್ರಹಿಸಿ ಮರಾಠಾ ಶ್ರೀ ಭಾರತಿ ಮಠ ಟ್ರಸ್ಟ್ ಸಮಿತಿ ವತಿಯಿಂದ ನಗರದ ಮಿನಿವಿಧಾನ ಸೌಧದ ಆವರಣದಲ್ಲಿಂದು ಪ್ರತಿಭಟನೆ ನಡೆಸಲಾಯಿತು. ನಗರದ ತಾಲೂಕು ತಹಶಿಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬಳಿಕ, ಮರಾಠಾ ಶ್ರೀ ಭಾರತಿಮಠ ಅಧ್ಯಕ್ಷರಾದ ಸುನೀಲ್ ದಳವಿ ಮಾತನಾಡಿ, 16 ಅಡಿ ಎತ್ತರದ ಶ್ರೀ ಛತ್ರಪತಿ ಶಿವಾಜಿ …
Read More »
BigTv News
August 23, 2023
ಉತ್ತರ ಕನ್ನಡ, ಕರ್ನಾಟಕ, ಕಾರವಾರ, ಸುದ್ದಿ
ಕಾರವಾರ: ನೆರೆಯಿಂದ ಸೇತುವೆ ಕೊಚ್ಚಿಹೋಗಿ ಮೂರು ವರ್ಷಗಳೇ ಕಳೆದಿವೆ. ಸ್ಥಳಕ್ಕೆ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು ಭೇಟಿ ನೀಡಿ ತೆರಳಿದ್ದರೂ ಇದುವರೆಗೂ ಸೇತುವೆ ಮರು ನಿರ್ಮಾಣ ಮಾತ್ರ ಸಾಧ್ಯವಾಗಿಲ್ಲ. ಪರಿಣಾಮ ಗ್ರಾಮಸ್ಥರು ತಾತ್ಕಾಲಿಕವಾಗಿ ನಿರ್ಮಿಸಿಕೊಂಡ ಸೇತುವೆಯಲ್ಲೇ ಜೀವ ಕೈಯಲ್ಲಿ ಹಿಡಿದು ನಿತ್ಯ ಓಡಾಟ ನಡೆಸುವಂತಾಗಿದೆ. ನೂತನ ಸೇತುವೆ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಜೀವ ಕೈಯಲ್ಲಿ ಹಿಡಿದು ನದಿ ದಾಟಬೇಕಾದ ದುಃಸ್ಥಿತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೆಗ್ಗಾರು, ಕಲ್ಲೇಶ್ವರ ಹಾಗೂ ಹಳವಳ್ಳಿ ಗ್ರಾಮಸ್ಥರದ್ದಾಗಿದೆ. …
Read More »