Breaking News

ವೀಲಿಂಗ್ ಮಾಡುವವನನ್ನು ಬಂಧಿಸಿ ವಿಶೇಷವಾಗಿ ಟ್ವೀಟ್ ಮಾಡಿದ ಪೊಲೀಸರು..!

ಹುಬ್ಬಳ್ಳಿ: ಚಂದ್ರಯಾನ-3 ಸಕ್ಸಸ್ ಆಗಿದೆ ಭಾರತದ ಸಮಸ್ತ ಜನತೆ ವಿಕ್ರಂ ವಾಹನ ಚಂದ್ರನ ಮೇಲೆ ಲ್ಯಾಂಡ್ ಆಗುತ್ತಿದ್ದಂತೆ ಜನ ಸಿಳ್ಳೆ ಹಾಕಿ ಸಂಭ್ರಮಿಸಿದ್ದಾರೆ. ಇನ್ನು ಇದೇ ವೇಳೆ ಹುಬ್ಬಳ್ಳಿ ಧಾರವಾಡ ಕಮಿಷನರ್ ವ್ಯಾಪ್ತಿಯಲ್ಲಿ ಧಾರವಾಡ ಸಂಚಾರ ಠಾಣೆ ಪೊಲೀಸರು ಕಳೆದ ಹಲವಾರು ದಿನಗಳಿಂದ ಬೈಕ್ ಮೇಲೆ ವ್ಹಿಲ್ಲಿಂಗ್ ಮಾಡುತ್ತಾ ಸಂಚಾರ ಅಡಚಣೆ ಮಾಡುತ್ತಿದ್ದ ಪುಂಡನನ್ನು ಹಿಡಿದು ಆತನ ಬೈಕನ್ನು ಲ್ಯಾಂಡ್ ಮಾಡಿಸಿದ್ದಾರೆ.

ವಿಕ್ರಮ ಲ್ಯಾಂಡರ್ ಸಕ್ಸಸ್ ಆದ ವೇಳೆ ವಿಲ್ಲಿಂಗ್ ಮಾಡುತ್ತಿದ್ದವನನ್ನು ಕೂಡ ಹುಬ್ಬಳ್ಳಿ ಧಾರವಾಡ ಪೊಲೀಸರು ಲ್ಯಾಂಡ್ ಮಾಡಿಸಿದರು. ಈ ಬಗ್ಗೆ ಹುಬ್ಬಳ್ಳಿ ಧಾರವಾಡ ನಗರ ಪೊಲೀಸರು ವಿಶೇಷವಾಗಿ ಟ್ವಿಟ್ ಮಾಡಿದ್ದಾರೆ. ಆವತ್ತು ಎರಡು ಘಟನೆಗಳು ನಡೆದವು.ಒಂದು ‘ನಮ್ಮ ಹೆಮ್ಮೆಯ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಲ್ಯಾಂಡ್ ಆಯ್ತು’..ಇನ್ನೊಂದು ಘಟನೆಯೆಂದರೆ ಬೈಕ್ ನ ಚಕ್ರವನ್ನು ಮೇಲೆತ್ತಿ wheeling ಮಾಡುತ್ತಿದ್ದವನನ್ನು ಹಿಡಿದು ಆತನನ್ನು ನೆಲಕ್ಕೆ ಲ್ಯಾಂಡ್ ಮಾಡಿಸಲಾಯ್ತು.

ಈ ರೀತಿ ವಿಶೇಷವಾಗಿ ಟ್ವಿಟ್ ಮುಖಾಂತರ ಜಾಗೃತಿ ಮೂಡಿಸಿದ ಪೊಲೀಸರು ಬೈಕ್ ಸಮೇತ ಯುವಕನನ್ನು ವಶಕ್ಕೆ ಪಡೆದು ಪೊಲೀಸರು ಪುಂಡನಿಗೆ ಪಾಠ ಕಲಿಸಿದ್ದಾರೆ. ಧಾರವಾಡ ಸಂಚಾರ ಠಾಣೆ ಪೊಲೀಸರು ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಚಂದ್ರಯಾನ- 3 ಯೋಜನೆ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆದ ಸಂಭ್ರಮದಲ್ಲೇ ಅವಳಿ ನಗರ ಪೊಲೀಸರು ಈ ರೀತಿ ವಿಶೇಷವಾಗಿ ಟ್ವಿಟ್ ಮುಖಾಂತರ ಜನರ ಗಮನ ಸೆಳೆದಿದ್ದಾರೆ

Share News

About BigTv News

Check Also

ಎನಿ ಕಂಡೀಶನ್… ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ ಎಂಟ್ರಿ! ಬೆಳಗ್ಗೆಯೇ ಅಧಿಕಾರ ಸ್ವೀಕಾರ…!

ಭೂಷಣ್ ಬೋರ್ಸೆ ಹೆಗಲಿಗೆ ಅವಳಿ ನಗರದ ಖಾಕಿ ಹೊಣೆ! ನಾಳೆಯಿಂದ ಹುಬ್ಬಳ್ಳಿ–ಧಾರವಾಡಕ್ಕೆ ಹೊಸ ಕಮಿಷನರ್! ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ …

Leave a Reply

Your email address will not be published. Required fields are marked *