Breaking News

ಸುದ್ದಿ

ಹರಿಹರ ತಾಲೂಕಿನ ಕೋಮಾರನಹಳ್ಳಿ ಗ್ರಾಮದ ಲಕ್ಷ್ಮೀ ರಂಗನಾಥಸ್ವಾಮಿ ದೇವರ ಕಾರ್ಣಿಕ….

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಕೋಮಾರನಹಳ್ಳಿ ಗ್ರಾಮದ ಲಕ್ಷ್ಮೀ ರಂಗನಾಥಸ್ವಾಮಿ ದೇವರ ಕಾರ್ಣಿಕ ಪ್ರಸಿದ್ಧಿ ಪಡೆದಿದ್ದು, ಪ್ರತಿ ನಾಗರಪಂಚಮಿ ಹಬ್ಬದ ಬಳಿಕ ಜರಗುವ ಕಾರ್ಣಿಕವನ್ನು ಭಕ್ತರು ಭಕ್ತಿಯಿಂದ ನಂಬುತ್ತಾರೆ. ಪ್ರತಿ ವರ್ಷದಂತೆ ಸೋಮವಾರ ನಡೆದ ಕಾರ್ಣಿಕದಲ್ಲಿ ಲಕ್ಷ್ಮೀ ರಂಗನಾಥ ಸ್ವಾಮಿ ದೇವರು ಮುತ್ತಿನ ರಾಶಿಗೆ ಸರ್ಪ ಸುತ್ತಿತಲೆ, ಸರ್ಪಕ್ಕೆ ಹದ್ದುಕಾದೀತಲೇ ಎಚ್ಚರ ಎಂದು ನುಡಿಯವ ಮೂಲಕ ಸಂದೇಶವನ್ನು ರವಾನಿಸಿದ್ದಾರೆ. ಹರಳಹಳ್ಳಿ ಅಂಜನೇಯಸ್ವಾಮಿ ಪೂಜಾರಿ ಅವಿವಾಹಿತ ವ್ಯಕ್ತಿ ಈ ಕಾರ್ಣಿಕವನ್ನು ನುಡಿದಿದ್ದಾರೆ. …

Read More »

ಹುಟ್ಟಿದ ಕೆಲವೇ ಕ್ಷಣಗಳಲ್ಲಿ ನಡೆದಾಡಿದ ನವಜಾತ ಶಿಶು..!

ನವಜಾತ ಮಗು ನರ್ಸ್ ಸಹಾಯದಿಂದ ಒಂದು ಕಾಲನ್ನು ಮೇಲಕ್ಕೆತ್ತಿ ನಂತರ ಮತ್ತೊಂದನ್ನು ಮೇಲೆತ್ತುತ್ತಾ ನಡೆದಾಡಿದಿದೆ. ಹೌದು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮಗುವೊಂದು ನಡೆದಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬ್ರೆಜಿಲ್‍ನ ನಿವಾಸಿಯಾದ ಅರ್ಲೆಟ್ ಅರೆಂಟಿಸ್ ಎಂಬವರು ಈ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ ಈ ವಿಡಿಯೋದಲ್ಲಿ ಮಗು ನಡೆದಿರುವುದು ದೊಡ್ಡ ಪವಾಡವೇನಲ್ಲ ಎಂದು ಹೇಳಲಾಗಿದೆ. ರೋಚೆಸ್ಟರ್ ಮೆಡಿಕಲ್ ಸೆಂಟರ್ ವಿಶ್ವವಿದ್ಯಾಲಯದ ಪ್ರಕಾರ, ಈ ನಡಿಗೆ ಪವಾಡವೇನಲ್ಲ. …

Read More »

ಭಾರತದ ಯುವ ಸ್ಟಾರ್​ ಬ್ಯಾಟರ್​ ನಿತೀಶ್​ ರಾಣ ಉತ್ತರ ಪ್ರದೇಶಕ್ಕಾಗಿ ದೇಶೀಯ ಕ್ರಿಕೆಟ್​ ಆಡುವುದಾಗಿ ಘೋಷಿಸಿಕೊಂಡಿದ್ದಾರೆ..

ನವದೆಹಲಿ: ಭಾರತದ ಯುವ ಸ್ಟಾರ್​ ಬ್ಯಾಟರ್​ ನಿತೀಶ್​ ರಾಣ ತಮ್ಮ ರಾಜ್ಯವನ್ನು ಬಿಟ್ಟು ಪಕ್ಕದ ಉತ್ತರ ಪ್ರದೇಶಕ್ಕಾಗಿ 2023 -24ರ ದೇಶೀಯ ಕ್ರಿಕೆಟ್​ ಆಡುವುದಾಗಿ ಘೋಷಿಸಿಕೊಂಡಿದ್ದಾರೆ. ಈ ವರ್ಷದ ಐಪಿಎಲ್​ನಲ್ಲಿ ಶ್ರೇಯಸ್​ ಅಯ್ಯರ್​ ಅವರ ಅನುಪಸ್ಥಿತಿಯಲ್ಲಿ ನಿತೀಶ್​ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು ಮುನ್ನಡೆಸಿದ್ದರು. ಉತ್ತರ ಪ್ರದೇಶದ ತಂಡದಲ್ಲಿ ಕೆಕೆಆರ್​ನ ಸಹ ಆಟಗಾರ ಎಡಗೈ ಬ್ಯಾಟರ್​ ರಿಂಕು ಸಿಂಗ್​ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷದಿಂದ ಉತ್ತರ ಪ್ರದೇಶದಲ್ಲಿ ಆರಂಭವಾಗುತ್ತಿರುವ ಯುಪಿಟಿ20 …

Read More »

ಬಾಲಿವುಡ್​ ಬೆಡಗಿ ಕತ್ರಿನಾ ಕೈಫ್​ ಟೈಗರ್​ 3 ಚಿತ್ರೀಕರಣದಲ್ಲಿ ಬ್ಯುಸಿ…

ಮುಂಬೈ: ಬಾಲಿವುಡ್​ ಬೆಡಗಿ ಕತ್ರಿನಾ ಕೈಫ್​ ಸದ್ಯ ತಮ್ಮ ಮುಂಬರುವ ಬಹು ನಿರೀಕ್ಷಿತ ಚಿತ್ರ ‘ಟೈಗರ್​ 3’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಟ ಸಲ್ಮಾನ್​ ಜೊತೆಗೆ ನಟಿಸುತ್ತಿರುವ ಈ ಚಿತ್ರ ಆ್ಯಕ್ಷನ್​ ಥ್ರಿಲ್ಲರ್​ ಆಗಿದ್ದು, ಈ ವರ್ಷ ಬಿಡುಗಡೆ ಆಗಲು ಸಜ್ಜಾಗಿದೆ. ಈ ಸಿನಿಮಾದ ಹಾಡಿನ ಶೂಟಿಂಗ್​ನಲ್ಲಿ ನಟಿ ಹೆಜ್ಜೆ ಹಾಕಿದ್ದು, ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕೊರಿಯಾಗ್ರಾಫ್​ ಹೇಳಿಕೊಟ್ಟಂತೆ ನಟಿ ಕತ್ರಿನಾ ಕೈಫ್​ ಹೆಜ್ಜೆ ಹಾಕಲು …

Read More »

ಸರ್ಕಾರಿ ಅಧಿಕಾರಿಯೊಬ್ಬರು ತನ್ನ ಮೃತ ಸ್ನೇಹಿತನ ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾಚಾರ…..

ನವದೆಹಲಿ: ದೆಹಲಿ ಸರ್ಕಾರಿ ಅಧಿಕಾರಿಯೊಬ್ಬರು ತನ್ನ ಮೃತ ಸ್ನೇಹಿತನ ಅಪ್ರಾಪ್ತ ಪುತ್ರಿಯ ಮೇಲೆ ಹಲವು ತಿಂಗಳುಗಳ ಕಾಲ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. 2020 ಮತ್ತು 2021ರ ನಡುವೆ ಅತ್ಯಾಚಾರದ ಪ್ರಕರಣ ನಡೆದಿದೆ ಎನ್ನಾಗಿದೆ. ಬುರಾರಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿ ಅಧಿಕಾರಿಯ ವಿರುದ್ಧ ಆಗಸ್ಟ್ …

Read More »

ಎಚ್ಚೆತ್ತ ಅಧಿಕಾರಿಗಳು ​ಕೊನೆಗೂ ಈ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ….

ಚಿಕ್ಕಮಗಳೂರು : ಕಳೆದ ಎರಡು ದಿನಗಳಿಂದ ಈ ಟಿವಿ ಭಾರತ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಾರ್ಲೆ ಹಾಗೂ ಜೇಡಿಕೊಂಡ ಎಂಬ ಕುಗ್ರಾಮಗಳಲ್ಲಿ ಯಾವುದೇ ರೀತಿಯ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೇ ಜನರು ಪರದಾಟ ನಡೆಸುತ್ತಿದ್ದ ಸುದ್ದಿಯೊಂದನ್ನು ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ​ಕೊನೆಗೂ ಈ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಲ್ಲ ಮೂಲ ಸೌಕರ್ಯ ನೀಡುವ ಭರವಸೆ ನೀಡಿದ್ದಾರೆ. ಪಟ್ಟಣದಿಂದ ತುಂಬಾ ದೂರ ಇರುವಂತಹ …

Read More »

ಮುಸ್ಲಿಂ ಮಹಿಳೆಯಿಂದ ಶ್ರದ್ಧೆಯಿಂದ ಗಣೇಶ ವಿಗ್ರಹ ತಯಾರಿಕೆ

ಹುಬ್ಬಳ್ಳಿ :ಗೌರಿಗಣೇಶ ಹಬ್ಬಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇದ್ದು, ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಈಗಾಗಲೇ ಗಣೇಶ ಮೂರ್ತಿಗಳ ತಯಾರಿಕೆ ಕೆಲಸ ಭರದಿಂದ ಸಾಗಿದೆ. ನಗರದ ಗೋಪನಕೊಪ್ಪದಲ್ಲಿ ನಡೆಯುವ ಸುಪ್ರಸಿದ್ಧ ಗಣೇಶೋತ್ಸವಕ್ಕೆಂದು ತರಹೇವಾರಿ‌ ಗಣೇಶ ಮೂರ್ತಿಗಳು ಸಿದ್ಧವಾಗುತ್ತಿವೆ. ಅದೇ ಕಾಯದಲ್ಲಿರುವ ಮುಸ್ಲಿಮ್ ಮಹಿಳೆಯೊಬ್ಬರು ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ವಿಘ್ನ ನಾಶಕ‌ ಗಣಪನ ಆಕರ್ಷಕ ಮೂರ್ತಿಗಳನ್ನು ತಯಾರಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಮುಸ್ಲೀಮ್ ಧರ್ಮೀಯರಾದ ಸುಮನ್ ಹಾವೇರಿಯವರು …

Read More »

ಹುಬ್ಬಳ್ಳಿಯಲ್ಲಿ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಇಬ್ಬರು ಲಾರಿ ಚಾಲಕರು ಗಂಭೀರವಾಗಿ ಗಾಯ

ಹುಬ್ಬಳ್ಳಿ: ಹುಬ್ಬಳ್ಳಿ -ಧಾರವಾಡ ಬೈಪಾಸ್‌ನಲ್ಲಿ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಲಾರಿ ಚಾಲಕರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ತಾರಿಹಾಳ ಬ್ರಿಡ್ಜ್ ಬಳಿ ನಡೆದಿದೆ. ಕೊಲ್ಲಾಪುರದಿಂದ ಸರಕು ಹೇರಿಕೊಂಡು ಬರುತ್ತಿದ್ದ ಲಾರಿ ಹಾಗೂ ಹಾವೇರಿಯಿಂದ ಮುಂಬೈಗೆ ಸರಕು ಸಾಗಾಟ ಮಾಡುತ್ತಿದ್ದ ಲಾರಿ ನಡುವೆ ಈ ಅಪಘಾತ ನಡೆದಿದ್ದು, ಬೇರೆ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಈ ಅವಘಡ ನಡೆದಿದೆ. ಘಟನೆಯಲ್ಲಿ ಇಬ್ಬರು ಲಾರಿ ಚಾಲಕರಿಗೆ ಗಂಭೀರ …

Read More »

ಕಿಂಗ್​ ಕೊಹ್ಲಿ, ರನ್​ ಮಷಿನ್​, ದಾಖಲೆಗಳ ವೀರ ಎಂದೆಲ್ಲ ಕರೆಸಿಕೊಳ್ಳುವ ವಿರಾಟ್​ ಕೊಹ್ಲಿ ಇಂದಿಗೆ 15 ವರ್ಷ ಕಂಪ್ಲೀಟ್…

ಹೈದರಾಬಾದ್​: “ಕಿಂಗ್​ ಕೊಹ್ಲಿ, ರನ್​ ಮಷಿನ್​, ದಾಖಲೆಗಳ ವೀರ” ಎಂದೆಲ್ಲ ಕರೆಸಿಕೊಳ್ಳುವ ವಿರಾಟ್​ ಕೊಹ್ಲಿ ಇಂದಿಗೆ 15 ವರ್ಷಗಳ ಹಿಂದೆ ಭಾರತ ಬಿ ತಂಡದಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಶ್ರಿಲಂಕಾದ ವಿರುದ್ಧ ಆಡಿದ್ದರು. ಅಂದು 19ರ ಪೋರ ಬ್ಯಾಟ್​ ಹಿಡಿದು ಮೈದಾನಕ್ಕೆ ಬಂದಾಗ ಅವರ ಬ್ಯಾಟಿಂಗ್​ ಶೈಲಿ ಮತ್ತು ಅವರ 19 ವರ್ಷದೊಳಗಿನವರ ಪಂದ್ಯದ ಆಟವನ್ನು ಕಂಡವರು ಭಾರತದ ಫ್ಯೂಚರ್​ನ ಸ್ಟಾರ್​ ಆಟಗಾರ ಎಂದಿದ್ದರು. ಇಂದು ಕ್ರಿಕೆಟ್​ ಜಗತ್ತಿನ ಸ್ಟಾರ್​ …

Read More »

ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ನಂತರ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಿರುವ ಜೆಡಿಎಸ್ ಸಭೆ….

ಬೆಂಗಳೂರು : ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ನಂತರ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಿರುವ ಜೆಡಿಎಸ್, ಮುಂದಿನ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸುವುದು, ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಜೆಡಿಎಸ್​ನ ನೂತನ ಕಮಿಟಿ ರಚಿಸಿದೆ. ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ನಡೆದ ನಾಯಕರ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿ.ಎಂ.ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷರಾಗಿ ಜಿ.ಟಿ.ದೇವೇಗೌಡ ಹಾಗೂ ಸಂಚಾಲಕರಾಗಿ ಮಾಜಿ ಶಾಸಕ ವೈ.ಎಸ್.ವಿ.ದತ್ತರನ್ನು …

Read More »