Breaking News

ಸುದ್ದಿ

ವರದಕ್ಷಿಣೆ ಕಿರಕುಳಕ್ಕೆ ಮಹಿಳೆ ನೇಣಿಗೆ ಶರಣು..

ಹುಬ್ಬಳ್ಳಿ: ಮೊನ್ನೆ ತಾನೆ ಪುಷ್ಪ ಪಟದಾರೆ ಅನ್ನೋ ಮಹಿಳೆ ಗಂಡನ ಕೊಲೆ ಆದ ಹಿನ್ನೆಲೆ ಜೀವನದಲ್ಲಿ ಬೇಸತ್ತು ನವನಗರದ ಸಂಬಂಧಿಕರ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಈ ಘಟನೆ ಮಾಸುವ ಮುನ್ನ ಇನ್ನೊಬ್ಬ 27 ವರ್ಷದ ಅಶ್ವಿನಿ ವಾಲಿ ಅನ್ನೋ ಗೃಹಣಿ ತನ್ನ ಗಂಡನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಗಂಡನ ಕಿರುಕುಳ ಹಾಗೂ ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಈ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ ನವನಗರದಲ್ಲಿ ನಡೆದಿದೆ. ಈ …

Read More »

ಯುವಕನೊಬ್ಬ ಪೊಲೀಸ್ ಠಾಣೆಯಲ್ಲಿಯೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ..

ಹುಬ್ಬಳ್ಳಿ: ಯುವಕನೊಬ್ಬ ಪೊಲೀಸ್ ಠಾಣೆಯಲ್ಲಿಯೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಿನ್ನೆ ಗುರುವಾರ ಸಾಯಂಕಾಲ ನಡೆದಿದೆ. ಹಳೇ ಹುಬ್ಬಳ್ಳಿಯ ಇಂಡಿ ಪಂಪ್ ಸರ್ಕಲ್ ಬಳಿಯಲ್ಲಿನ ಬಿರಿಯಾನಿ ಹೌಸ್ ಮಾಲೀಕರ ಜೊತೆ ರಾಘವೇಂದ್ರ ಎಂಬ ಯುವಕನ ನಡುವೆ ಮಾತಿಗೆ ಮಾತು ಬೆಳೆದು ಅತಿರೇಕಕ್ಕೆ ಹೋದ ಪರಿಣಾಮ ಬಿರಿಯಾನಿ ಹೌಸ್ ಮಾಲೀಕರು ರಾಘವೇಂದ್ರನನ್ನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ಪೊಲೀಸರು …

Read More »

ಹುಬ್ಬಳ್ಳಿಯ ಉಪನಗರ ಪೊಲೀಸರ ಬರ್ಜರಿ ಬೇಟೆ…

ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮಿಷನ್ ಕಂಪೌಂಡ ಹತ್ತಿರ ಮನೆಯೊಂದರಲ್ಲಿ ಕಳ್ಳತನವಾಗಿತ್ತು. ಕಳ್ಳರು ಒಟ್ಟು 3,20,000/- ಕಿಮ್ಮತ್ತಿನ 71 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 1,00,000/- ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಆರೋಪಿಯ ಪತ್ತೆಗಾಗಿ ಪೊಲೀಸ ಆಯುಕ್ತರಾದ ಲಾಬೂರಾಮ ಹಾಗೂ ಉಪ ಪೊಲೀಸ್‌ ಆಯುಕ್ತರ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಲಾಗಿತ್ತು. ಆರೋಪಿತನ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸ ತಂಡ, ಆರೋಪಿ ಆದ ಬಳ್ಳಾರಿ …

Read More »

ವೈದ್ಯರೊಬ್ಬರಿಗೆ ವೀಡಿಯೋ ಕಾಲ್ ಮಾಡಿ ಬ್ಲಾಕ್ ಮೇಲ್..!

ಹುಬ್ಬಳ್ಳಿ: ನಿಹಾ ಎಂಬ ಮಹಿಳೆ ನಗರದ ವೈದ್ಯರೊಬ್ಬರಿಗೆ ಕರೆ ಮಾಡಿ ಸಲುಗೆ ಬೆಳೆಸಿಕೊಂಡು ವಿಡಿಯೋ ಕರೆ ರೆಕಾರ್ಡಿಂಗ್ ಮಾಡಿಕೊಂಡು ಎಲ್ಲರಿಗೂ ಕಳುಹಿಸುವುದಾಗಿ ಬೆದರಿಸಿ 3. 61 ಲಕ್ಷ ರೂ ವರ್ಗಾಯಿಸಿಕೊಂಡು ವಂಚಿಸಿದ್ದಾಳೆ.ಇಲ್ಲಿನ ವಿದ್ಯಾನಗರ ಪ್ರಭಾತ್ ಕಾಲನಿಯ ವೈದ್ಯರೊಬ್ಬರಿಗೆ ನಿಶಾ ಎಂಬ ಹೆಸರಿನ ಯುವತಿ ಅ.22 ರಿಂದ ಸೆ.12 ರ ನಡುವೆ ವೈದ್ಯರಿಗೆ ಕರೆ ಮಾಡಿದ್ದಳು. ವಾಟ್ಸ್ ಆಪ್ ಸಂದೇಶ ಹಾಗೂ ವಿಡಿಯೋ ಕರೆಗಳ ಮೂಲಕ ಸಂಪರ್ಕಿಸಿದ್ದಳು. ಆ ವೇಳೆ ಅವರೊಂದಿಗೆ …

Read More »

ಹುಬ್ಬಳ್ಳಿಯಲ್ಲಿ ಕಾರು ಪಲ್ಟಿ, ಮೂವರು ದುರ್ಮರಣ, ಓರ್ವ ಮಹಿಳೆ ಸ್ಥಿತಿ ಗಂಭೀರ..!

ಹುಬ್ಬಳ್ಳಿ: ಕಾರು ಪಲ್ಟಿಯಾಗಿ ಮೂವರು ದುರ್ಮರಣಕ್ಕೀಡಾದ ಘಟನೆ ಹುಬ್ಬಳ್ಳಿ ತಾಲೂಕಿನ ವರೂರ ಗ್ರಾಮದ ಗಣೇಶ ಹೋಟೆಲ್ ಬಳಿ ಮಂಗಳವಾರ ತಡರಾತ್ರಿ ನಡೆದಿದೆ. ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆಯಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣತಪ್ಪಿ ಪಲ್ಟಿಯಾಗಿದೆ. ದಾವಣಗೆರೆ ಮೂಲದ ಚಾಲಕ ಶಾರೂಖ್ (27), ಸೋಹೆಲ್​(26) ಮತ್ತು ಚಿಕ್ಕಮಗಳೂರು ಜಿಲ್ಲೆ ಆಲ್ದೂರಿನ ಎಚ್.ಕೆ. ಸುಶೀಲಾ (38) ಮೃತರು. ಅವಲಕ್ಕಿ ವ್ಯಾಪಾರ ಮಾಡಿಕೊಂಡಿದ್ದ ಇವರು ದಾವಣಗೆರೆಯಿಂದ ಮಂಗಳವಾರ ರಾತ್ರಿ ಹುಬ್ಬಳ್ಳಿ …

Read More »

ಹುಬ್ಬಳ್ಳಿಯ ನವನಗರದ ಪೊಲೀಸರಿಗೆ ಸನ್ಮಾನ..!

ನವನಗರ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರದೇಶಗಳ, ಗಣೇಶೋತ್ಸವದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದ ಹಾಗೇ ವ್ಯವಸ್ಥಿತವಾಗಿ ಬಂದೋಬಸ್ತ್ ನೀಡಿ ಹಬ್ಬವನ್ನು ಸಂಪೂರ್ಣ ಯಶಸ್ವಿಗೊಳಿಸಿದ ನವನಗರ ಪೊಲೀಸ್ ಠಾಣೆ ಸಿಪಿಐ ಬಿ ಎಸ್ ಮಂಟೂರ ಹಾಗೂ ಪಿಎಸ್ಐ ಬಿ ಎನ್ ಸಾತಣ್ಣವರ ಇವರಿಗೆ ನವನಗರದ ನಿವಾಸಿಗಳು ಸನ್ಮಾನ ಮಾಡಿ ಅಭಿನಂದಿಸಿ ಗೌರವವನ್ನು ಸಲ್ಲಿಸಿದರು.ಹಾಗೂ ನವನಗರ ಠಾಣೆಯ ಎಲ್ಲ ಪೊಲೀಸ್ ಸಿಬ್ಬಂದಿಗಳಿಗೆ ಹೂ ಗುಚ್ಚ ನೀಡಿವ ಮೂಲಕ ಗೌರವಿಸಿದರು. ಈ ಸಂದರ್ಭದಲ್ಲಿ …

Read More »

ಗಣೇಶ ವಿಸರ್ಜನೆ ವೇಳೆ ವ್ಯಕ್ತಿಗೆ ಚಾಕು ಇರಿತ, ದುಷ್ಕರ್ಮಿ ಪರಾರಿ..!

ಧಾರವಾಡ: ಗಣೇಶ ಮೆರವಣಿಗೆ ಸಂದರ್ಭದಲ್ಲಿ ಯುವಕನೋರ್ವನಿಗೆ ಚಾಕುವಿನಿಂದ ಇರಿದ ದುಷ್ಕರ್ಮಿ ನಂತರ ಸ್ಥಳದಿಂದ ಕಾಲ್ಕಿತ್ತ ಘಟನೆ ಕೆಲಗೇರಿ ಆಂಜನೇಯ ನಗರದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಪ್ರಜ್ವಲ್ ಎಂಬುವವರ ಕಣ್ಣು ಹುಬ್ಬಿನ ಮೇಲೆ ಇರಿದು ಗಾಯಗೊಳಿಸಲಾಗಿದೆ. ಗಂಭೀರ ಗಾಯಗೊಂಡಿರುವ ಪ್ರಜ್ವಲ್​ನನ್ನು ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿದೆ. ಕೆಲಗೇರಿ ಆಂಜನೇಯ ನಗರದಲ್ಲಿ 11ನೇ ದಿನದ ಗಣೇಶ ನಿಮಜ್ಜನಾ ಮೆರವಣಿಗೆಯಲ್ಲಿ ಘಟನೆ ನಡೆಯಿತು. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ದೊಡ್ಡ ಪ್ರಮಾಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಅಂತರ ರಾಜ್ಯ ಆರೋಪಿಗಳ ಬಂಧನ..!

ಹುಬ್ಬಳ್ಳಿ: ಗಾಂಜಾ ಸಾಗಾಟ ಮಾಡುತಿದ್ದ ಅಂತರ ರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಸಿಇಎನ್ ಠಾಣೆ ಪೊಲೀಸರು ಯಶಸ್ವಿ ಆಗಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪೂರ್ ಹತ್ತಿರ ಸಿಇಎನ್ ಪೊಲೀಸರು ಪೆಟ್ರೋಲಿಂಗ ಮಾಡುತ್ತಿರುವಾಗ ಆಂದ್ರಪ್ರದೇಶ ಮೂಲದ ಇನ್ನೋವಾ ಕಾರೊಂದು ಸಂಶಯಾಸ್ಪದವಾಗಿ ನಿಂತುರುದನ್ನು ಕಂಡು ಪೊಲೀಸರು ಕಾರನ್ನು ಪರಿಶೀಲಿಸುತ್ತಾರೆ, ಆಗ ಕಾರಿನಲ್ಲಿ ದೊಡ್ಡ ಪ್ರಮಾಣದ ಗಾಂಜಾ ಸಾಗಿಸುತ್ತಿರುವುದು ಕಂಡು ಬಂದಿದೆ. ಕೂಡಲೇ ಸಿಇಎನ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್‌ ಹಾಗೂ ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಕಾರಿನಲ್ಲಿದ್ದ ಬರೋಬ್ಬರಿ …

Read More »

ಪೊಲೀಸ ಪೇದೆಗಳಿಬ್ಬರು ಶವವಾಗಿ ಪತ್ತೆ…!

ಗಜೇಂದ್ರಗಡದಲ್ಲಿ ಬಂದೋಬಸ್ತ ಕರ್ತವ್ಯ ಮುಗಿಸಿಕೊಂಡು ಬರುವಾಗ ಮುಂಡರಗಿ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಪೇದೆಗಳು ರಾತ್ರಿ ಸುರಿದ ಮಳೆಗೆ ಹಳ್ಳವೊಂದು ದಾಟುವಾಗ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು ದುರ್ವಿಧಿ ಇಂದು ಶವದ ರೂಪದಲ್ಲಿ ಪತ್ತೆಯಾಗಿದ್ದಾರೆ.

Read More »

ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನ…!

ಹುಬ್ಬಳ್ಳಿ: ಮನನೊಂದ ಯುವಕನೊಬ್ಬ ತನ್ನ ಕುತ್ತಿಗೆಗೆ ತಾನೇ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯ ಗಿರಣಿಚಾಳದಲ್ಲಿ ನಡೆದಿದೆ.ಗಿರಣಿಚಾಳದ ನಿರೂಪಾದಿ ಬಂಡಾರಿ ಎಂಬ ಯುವಕ ತನ್ನ ಮನೆಯಲ್ಲಿ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಮನೆಯ ಅಕ್ಕಪಕ್ಕದವರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲ ದಿನಗಳ ಹಿಂದೆ ಒಂದೇ ಬೈಕನಲ್ಲಿ ತನ್ನ ಸ್ನೇಹಿತನ ಜೊತೆಗೆ ಹೋಗುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸ್ನೇಹಿತನನ್ನು ಕಳೆದುಕೊಂಡಿದ್ದಾನೆ ಹಾಗೂ ಮದುವೆಗೆ ಹೆಣ್ಣು ಸಿಕ್ಕಿಲ್ಲ …

Read More »