ಹುಬ್ಬಳ್ಳಿ: ಮೊನ್ನೆ ತಾನೆ ಪುಷ್ಪ ಪಟದಾರೆ ಅನ್ನೋ ಮಹಿಳೆ ಗಂಡನ ಕೊಲೆ ಆದ ಹಿನ್ನೆಲೆ ಜೀವನದಲ್ಲಿ ಬೇಸತ್ತು ನವನಗರದ ಸಂಬಂಧಿಕರ ಮನೆಯಲ್ಲಿ ನೇಣಿಗೆ ಶರಣಾಗಿದ್ದರು.
ಈ ಘಟನೆ ಮಾಸುವ ಮುನ್ನ ಇನ್ನೊಬ್ಬ 27 ವರ್ಷದ ಅಶ್ವಿನಿ ವಾಲಿ ಅನ್ನೋ ಗೃಹಣಿ ತನ್ನ ಗಂಡನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಗಂಡನ ಕಿರುಕುಳ ಹಾಗೂ ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಈ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ ನವನಗರದಲ್ಲಿ ನಡೆದಿದೆ.

ಈ ಪ್ರಕರಣಕ್ಕೆ ಸಂಭಂದಿಸಿದಂತೆ ಮಹಿಳಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆಕೆಯ ಗಂಡ ಹಾಗೂ ಗಂಡನ ಅಣ್ಣನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಜೈಲಿಗೆ ಅಟ್ಟಿದ್ದಾರೆ. ಇನ್ನು ಅಶ್ವಿನಿ ಅತ್ತೆ ತಲೆ ಮಾಡಿಸಿಕೊಂಡಿದ್ದಾಳೆ ಅಂದು ತಿಳಿದುಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

