
ಹುಬ್ಬಳ್ಳಿ: ನಿಹಾ ಎಂಬ ಮಹಿಳೆ ನಗರದ ವೈದ್ಯರೊಬ್ಬರಿಗೆ ಕರೆ ಮಾಡಿ ಸಲುಗೆ ಬೆಳೆಸಿಕೊಂಡು ವಿಡಿಯೋ ಕರೆ ರೆಕಾರ್ಡಿಂಗ್ ಮಾಡಿಕೊಂಡು ಎಲ್ಲರಿಗೂ ಕಳುಹಿಸುವುದಾಗಿ ಬೆದರಿಸಿ 3. 61 ಲಕ್ಷ ರೂ ವರ್ಗಾಯಿಸಿಕೊಂಡು ವಂಚಿಸಿದ್ದಾಳೆ.ಇಲ್ಲಿನ ವಿದ್ಯಾನಗರ ಪ್ರಭಾತ್ ಕಾಲನಿಯ ವೈದ್ಯರೊಬ್ಬರಿಗೆ ನಿಶಾ ಎಂಬ ಹೆಸರಿನ ಯುವತಿ ಅ.22 ರಿಂದ ಸೆ.12 ರ ನಡುವೆ ವೈದ್ಯರಿಗೆ ಕರೆ ಮಾಡಿದ್ದಳು. ವಾಟ್ಸ್ ಆಪ್ ಸಂದೇಶ ಹಾಗೂ ವಿಡಿಯೋ ಕರೆಗಳ ಮೂಲಕ ಸಂಪರ್ಕಿಸಿದ್ದಳು. ಆ ವೇಳೆ ಅವರೊಂದಿಗೆ ಅತ್ಯಂತ ಪ್ರೀತಿಯಿಂದ ಮಾತನಾಡಿ, ಅದನ್ನು ವಿಡಿಯೊ ಸ್ಟೀನ್ ರೆಕಾರ್ಡಿಂಗ್ ಮಾಡಿ ಅವರಿಗೆ ಕಳುಹಿಸಿದ್ದಾಳೆ. ಅದನ್ನು ಎಲ್ಲರಿಗೂ ಕಳುಹಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡಿದ್ದಾಳೆ. ನಂತರ ಸಂಜೀವ ಎಂಬಾತ ಕರೆ ಮಾಡಿ, ತಾನು ಯೂಟ್ಯೂಬ್ ಚಾನೆಲ್ ರಿಪೋರ್ಟರ್’ ಎಂದು ಮತ್ತೊಬ್ಬ ವಿಕ್ರಮ ಎಂಬಾತ ದೆಹಲಿ ಕೈಂ ಬ್ಯಾಂಚ್ ಅಧಿಕಾರಿ ಎಂದು ಕೇಳಿ ಮತ್ತಷ್ಟು ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಕುರಿತು ಹುಬ್ಬಳ್ಳಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





