Breaking News

ಸುದ್ದಿ

ಮತ್ತೆ ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಚರ್ಚೆಯ ಹುಟ್ಟು….

ಬೆಂಗಳೂರು: ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಮಾವೇಶದಲ್ಲಿ ಪ್ರಮುಖ ಬೇಡಿಕೆಯೊಂದು ಈಗ ಮತ್ತೆ ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಚರ್ಚೆಯನ್ನು ಹುಟ್ಟುಹಾಕಿದೆ. ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಮಾನ್ಯತೆ ನೀಡಬೇಕು ಎಂದು ಸಮುದಾಯದ ಒಂದು ವರ್ಗ ಮತ್ತೆ ಒತ್ತಾಯಿಸಿದೆ. ಧರ್ಮದ ಅಂಕಣದಲ್ಲಿ ವೀರಶೈವ ಅಥವಾ ಲಿಂಗಾಯತ ಎಂದು ಬಳಸಲು ಸಮುದಾಯದ ಸದಸ್ಯರಿಗೆ ಮನವಿ ಸೇರಿದಂತೆ ಎಂಟು ನಿರ್ಣಯಗಳನ್ನು ಸಮಾವೇಶವು ಅಂಗೀಕರಿಸಿದೆ. ವೀರಶೈವ ಲಿಂಗಾಯತ …

Read More »

ಧಾರವಾಡ ಗಾಂಧೀಚೌಕ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಹಗಲು ರಾತ್ರಿ ಅಖಂಡ ದತ್ತನಾಮಸ್ಮರಣೆ…

ಧಾರವಾಡ: ಗಾಂಧೀಚೌಕ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶ್ರೀ ಶಾಲಿವಾಹನ ಶಕೆ 1945 ನೇ ಶೋಭನನಾಮ ಸಂವತ್ಸರ, ದಕ್ಷಿಣಾಯನ ಹೇಮಂತ ಋತು ಮಾರ್ಗ ಶೀರ್ಷ ಶುಕ್ಲ ಸಪ್ತಮಿ ಮಂಗಳವಾರ ದಿ 19 ರಿಂದ ಮಾರ್ಗಶೀರ್ಷ ಕೃಷ್ಣ ಪಕ್ಷ ಪ್ರತಿಪದಾ ಬುಧವಾರ ದಿನಾಂಕ 27 ರ ವರೆಗೆ ಶ್ರೀ ಮ।।ಜ ॥ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆ, ಶ್ರೀ ದತ್ತ ಯುವಕ ಮಂಡಳ, ಶ್ರೀ ದತ್ತ ಭಜನಾ ಮಂಡಳಿ ಹಾಗೂ ಹಾಲಗೇರಿ ಹನುಮಂತ ದೇವರ …

Read More »

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಅಲ್ಲಿಪುರ ಕ್ರಾಸ್‌ ಬಳಿ ಬಸ್ ಪಲ್ಟಿಯಾಗಿ ನಾಲ್ಕು ಮಕ್ಕಳು ಗಂಭೀರ ಗಾಯ…

ಹಾವೇರಿ: ಪ್ರವಾಸಕ್ಕೆ ಹೊರಟ್ಟಿದ್ದ ಸರ್ಕಾರಿ ಬಸ್ ಪಲ್ಟಿಯಾಗಿ ನಾಲ್ಕು ಮಕ್ಕಳು ಗಂಭೀರ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಅಲ್ಲಿಪುರ ಕ್ರಾಸ್‌ ಬಳಿ ನಡೆದಿದೆ. ಘಟನೆಯಲ್ಲಿ 45 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಮಕ್ಕಳನ್ನ ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಸಜ್ಜನಗುಡ್ಡದ ಸರ್ಕಾರಿ ಶಾಲೆ ಮಕ್ಕಳು ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡ ಮಕ್ಕಳನ್ನ ಸವಣೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ …

Read More »

ವಿಶೇಷ ಚೇತನ ವಿದ್ಯಾರ್ಥಿ ಪ್ರವೀಣಕುಮಾರ ಶಿವಪ್ಪ ಬಾಲಣ್ಣವರ ಅವನು ಪ್ರಥಮ ಸ್ಥಾನ…

ಲಕ್ಷ್ಮೇಶ್ವರ: 2023-24 ನೇ ಸಾಲಿನ ತುಮಕೂರಿನಲ್ಲಿ ನಡೆದ 22ನೇ ರಾಜ್ಯ ಮಟ್ಟದ ಮಹಾವಿದ್ಯಾಲಯಗಳ ನ್ಯಾಷನಲ್ ಪ್ಯಾರಾಲಿಂಪಿಕ್ಸ್‌ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಓಟದಲ್ಲಿ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಗ್ರಾಮದ ವಿಶೇಷ ಚೇತನ ವಿದ್ಯಾರ್ಥಿ ಪ್ರವೀಣಕುಮಾರ ಶಿವಪ್ಪ ಬಾಲಣ್ಣವರ ಅವನು ಪ್ರಥಮ ಸ್ಥಾನ ಪಡೆದು, ಮುಂದಿನ ತಿಂಗಳು ಗೋವಾ ರಾಜ್ಯದಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದು ರಾಜ್ಯಕ್ಕೆ, ಗದಗ ಜಿಲ್ಲಾಕ್ಕೆ ಹಾಗೂ ರಾಮಗೇರಿ ಗ್ರಾಮಕ್ಕೆ ಹೆಸರು ತಂದುಕೊಟ್ಟಿದ್ದಾಕ್ಕಾಗಿ ಗ್ರಾಮದ ಗುರು …

Read More »

ಬಿ. ಕೆ. ಹರಿಪ್ರಸಾದ್ ಮಾನಸಿಕ ಹಿಂಸೆ ಆಗಿದೆ: ಗೋವಿಂದ ಕಾರಜೋಳ.

ಹುಬ್ಬಳ್ಳಿ: ಬಿ.ಕೆ. ಹರಿಪ್ರಸಾದ್‌ ಮಾನಸಿಕ ಸ್ಥಿತಿ ಸರಿಯಿಲ್ಲ, ಬಿಜೆಪಿಯವರು ಗೋಡ್ಲೆ ಅನುಯಾಯಿಗಳು ಎಂಬ ಹೇಳಿಕೆ ವಿಚಾರವಾಗಿ ಬಿ. ಕೆ. ಹರಿಪ್ರಸಾದ್ ಕಾಂಗ್ರೆಸ್ ನಲ್ಲಿ ಲೆಕ್ಕಕ್ಕೆ ಇಲ್ಲದ ನಾಯಕ. ಕಾಂಗ್ರೆಸ್ ನಲ್ಲಿ ಅವರಿಗೆ ಮಾನಸಿಕ ಹಿಂಸೆ ಆಗಿದೆ. ಹಿಂಸೆ ತಾಳಲಾರದೆ ಈ ರೀತಿಯಾಗಿ ಮಾತಾಡ್ತಾ ಇದ್ದಾರೆಂದು ಹುಬ್ಬಳ್ಳಿಯಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರಿಗೆ ಬಹಳ ಬೆಲೆ ಕೊಡಬೇಕಾಗಿಲ್ಲ. ದೇಶಕ್ಕೆ ಯಾರು ಏನು …

Read More »

ಶಕ್ತಿ ಯೋಜನೆಯಿಂದ ನಷ್ಟಾಕ್ಕೊಳಗಾಗಿರುವ ಸಾರಿಗೆ ನಿಗಮಗಳಿಗೆ ಶಕ್ತಿ ತುಂಬುವ ಕೆಲಸ ಸರ್ಕಾರ ಮಾಡಿದೆ: ಸಿದ್ದರಾಮಯ್ಯ.

ಶಕ್ತಿ ಯೋಜನೆಯಿಂದ ನಷ್ಟಾಕ್ಕೊಳಗಾಗಿರುವ ಸಾರಿಗೆ ನಿಗಮಗಳಿಗೆ ಶಕ್ತಿ ತುಂಬುವ ಕೆಲಸ ಸರ್ಕಾರ ಮಾಡಿದೆ. ನಾಲ್ಕು ಸಾರಿಗೆ ನಿಗಮಗಳಾದ ಕೆ ಎಸ್ ಆರ್ ಟಿ ಸಿ, ಬಿ ಎಂ ಸಿ ಟಿ ಇತ್ಯಾದಿ ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರ 541 ಕೋಟಿ ತೆರಿಗೆ ವಿನಾಯಿತಿ ಘೋಷಿಸಿದೆ ಇದರಿಂದ ನಷ್ಟಾಕ್ಕೊಲಗಾಗಿರುವ ಸಾರಿಗೆ ಸಂಸ್ಥೆಗೆ ಸ್ವಲ್ಪ ರಿಲ್ಯಾಕ್ಸ್ ಮೂಡಿದೆ. ನಾಲ್ಕು ನಿಗಮಗಳಿಗೆ ಒಂದು ವರ್ಷದಲ್ಲಿ ಒಟ್ಟು 541.87 ಕೋಟಿ ರೂ ನಷ್ಟು ಮೋಟಾರು ವಾಹನ …

Read More »

ಆದಿ ದ್ರಾವಿಡ ಸಮಾಜದ ಪ್ರತೀ ಮನೆಯಿಂದ ಓರ್ವನನ್ನಾದರೂ ಪದವೀಧರರನ್ನಾಗಿಸುವ ಸಂಕಲ್ಪವನ್ನು ಸಮುದಾಯದ ಪ್ರತಿಯೊಬ್ಬರೂ ಮಾಡಬೇಕು…..

ಮಂಗಳೂರು: ಪರಮೇಶ್ವರ್ ಎಲ್ಲಾ ಸರಿ ಕಣ್ರೀ ಆದರೆ..ದಲಿತ. ಇಂತಹ ಕೀಳರಿಮೆಯನ್ನು ತೆಗೆದು ಹಾಕಬೇಕಾದಲ್ಲಿ ನಾವೆಲ್ಲಾ ಒಗ್ಗಟ್ಟಾಗಬೇಕು. ಒಗ್ಗಟ್ಟಾಗದಿದ್ದಲ್ಲಿ ತುಳಿತಕ್ಕೊಳಗಾದ, ಶೋಷಿತ ಸಮಾಜ ಹಾಗೆಯೇ ಮುಂದುವರಿಯುತ್ತದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆದ ರಾಜ್ಯ ಆದಿದ್ರಾವಿಡ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ರಕ್ಷಣೆಗೆ ಯಾರೂ ಬರುವುದಿಲ್ಲ. ಶಿಕ್ಷಣದಿಂದ ಮಾತ್ರ ಬಲಯುತರಾಗಲು ಸಾಧ್ಯ. ಆದ್ದರಿಂದ ಆದಿ ದ್ರಾವಿಡ ಸಮಾಜದ ಪ್ರತೀ ಮನೆಯಿಂದ ಓರ್ವನನ್ನಾದರೂ ಪದವೀಧರರನ್ನಾಗಿಸುವ …

Read More »

ಸಿಎಂ ಸಿದ್ದರಾಮಯ್ಯ ಅವರು ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುತ್ತಿದ್ದಾರೆ: ಆರ್‌.ಅಶೋಕ.

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಪೂರಕವಾಗಿ ನಿಲುತ್ತಿತ್ತಿಲ್ಲ. ಯಾವ ಯೋಜನೆಗಳಿಗೂ ಅಡಿಗಲ್ಲು ಹಾಕದೇ, ನಾಡಿನ ಜನರ ಮೇಲೆ ಕಲ್ಲು ಹಾಕಿದೆ. ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುತ್ತಿದ್ದಾರೆ. ಇನ್ನೂ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಹತಾಶರಾಗಿ ಹೀಗೆ ಮಾತನಾಡುತ್ತಿದ್ದಾರೆ ಎಂದು ಬ್ರಿಟೀಷರ ಬೂಟು ನೆಕ್ಕುವವರು ಹೇಳಿಕೆಗೆ ವಿಪಕ್ಷ ನಾಯಕ ಆರ್‌.ಅಶೋಕ ತಿರುಗೇಟು ಕೊಟ್ಟರು. ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯದ 7 ಕೋಟಿ …

Read More »

ನಿತಿನ್ ಗಡ್ಕರಿ ವಾಹನ ಸವಾರರಿಗೆ ಹೊಸ ವರ್ಷಕ್ಕೂ ಮುಂಚೆ ಶುಭ ಸುದ್ದಿ ನೀಡಿದ್ದಾರೆ….

ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಾಹನ ಸವಾರರಿಗೆ ಹೊಸ ವರ್ಷಕ್ಕೂ ಮುಂಚೆ ಶುಭ ಸುದ್ದಿ ನೀಡಿದ್ದಾರೆ. ಇನ್ನು ಮುಂದೆ ವಾಹನ ಸವಾರರು ಹೆದ್ದಾರಿಗಳಲ್ಲಿ ಬರುವ ಟೋಲ್‌ಗಳಲ್ಲಿ ಹಣ, ಇಲ್ಲವೇ ಫಾಸ್ಟ್‌ಟ್ಯಾಗ್‌ ಮೂಲಕ ಪಾವತಿಸುವ ವ್ಯವಸ್ಥೆ ಇರುವುದಿಲ್ಲ ಎಂದು ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಜಿಪಿಎಸ್‌ ಆಧಾರಿತ ಟೋಲ್ ತೆರಿಗೆ ಸಂಗ್ರಹಣೆಯ ಅನುಷ್ಠಾನವು ಮಾರ್ಚ್ 2024 ರಲ್ಲಿ ಪ್ರಾರಂಭವಾಗಲಿದೆ. ಇದಕ್ಕಾಗಿ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ ಸಿಸ್ಟಮ್‌ಗಾಗಿ …

Read More »

ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಕಡೆಗೆ ವಿಷಯ ತಿರುಗಿಸಿದ್ದಾರೆ….

ಬಾಲಿವುಡ್‌ನಲ್ಲಿ ಹಲವು ನಟರಿದ್ದರೂ ಯಾವಾಗಲು ಕಣ್ಣು ಹೋಗುವುದು ಮಾತ್ರ ಖಾನ್‌ಗಳ ಮೇಲೆ. ಸಲ್ಮಾನ್ ಖಾನ್, ಅಮೀರ್ ಖಾನ್, ಶಾರುಖ್ ಖಾನ್‌ರಿಗೆ ಫ್ಯಾನ್ಸ್‌ ಕೂಡ ಜಾಸ್ತಿ. ಹಾಗೇಯೆ ಈ ನಟರಲ್ಲಿ ಯಾರು ಹೆಚ್ಚು ಶ್ರೀಮಂತರು ಎಂಬ ಬಗ್ಗೆ ಹೆಚ್ಚು ಆಗ್ಗಾಗೆ ಚರ್ಚೆಗಳು ನಡೆಯುತ್ತವೆ. ಸದ್ಯಕ್ಕೆ ಈ ವಿಷಯ ಮತ್ತೆ ಮುನ್ನಲೆಗೆ ಬಂದಿದೆ. ಅದಕ್ಕೆ ಕಾರಣ ಕಾಫಿ ವಿತ್ ಕರಣ್ ಕಾರ್ಯಕ್ರಮ. ಕಾಫಿ ವಿತ್ ಕರಣ್ 8 ರ ಇತ್ತೀಚಿನ ಸಂಚಿಕೆಯಲ್ಲಿ ನಟ …

Read More »