Breaking News

ಬಿ. ಕೆ. ಹರಿಪ್ರಸಾದ್ ಮಾನಸಿಕ ಹಿಂಸೆ ಆಗಿದೆ: ಗೋವಿಂದ ಕಾರಜೋಳ.

ಹುಬ್ಬಳ್ಳಿ: ಬಿ.ಕೆ. ಹರಿಪ್ರಸಾದ್‌ ಮಾನಸಿಕ ಸ್ಥಿತಿ ಸರಿಯಿಲ್ಲ, ಬಿಜೆಪಿಯವರು ಗೋಡ್ಲೆ ಅನುಯಾಯಿಗಳು ಎಂಬ ಹೇಳಿಕೆ ವಿಚಾರವಾಗಿ ಬಿ. ಕೆ. ಹರಿಪ್ರಸಾದ್ ಕಾಂಗ್ರೆಸ್ ನಲ್ಲಿ ಲೆಕ್ಕಕ್ಕೆ ಇಲ್ಲದ ನಾಯಕ. ಕಾಂಗ್ರೆಸ್ ನಲ್ಲಿ ಅವರಿಗೆ ಮಾನಸಿಕ ಹಿಂಸೆ ಆಗಿದೆ. ಹಿಂಸೆ ತಾಳಲಾರದೆ ಈ ರೀತಿಯಾಗಿ ಮಾತಾಡ್ತಾ ಇದ್ದಾರೆಂದು ಹುಬ್ಬಳ್ಳಿಯಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರಿಗೆ ಬಹಳ ಬೆಲೆ ಕೊಡಬೇಕಾಗಿಲ್ಲ. ದೇಶಕ್ಕೆ ಯಾರು ಏನು ಅಂತಾ ಗೊತ್ತು ಎಂದರು. ಅಲ್ಲದೇ ಬಿಜೆಪಿಯವರು ಬ್ರಿಟಿಷ್ ಬೂಟ್ ನೆಕ್ಕುವವರು ಎಂಬ ಹೇಳಿಕೆಗೆ ಕಿಡಿ ಕಾರಿದ್ದು, ಹರಿಪ್ರಸಾದ್ ಒಬ್ಬ ಹಿರಿಯ ರಾಜಕಾರಣಿ. ನಾಲಿಗೆ ಮೇಲೆ ಹಿಡಿತ ಇರಿಸಿಕೊಂಡು ಮಾತನಾಡಬೇಕು.

ಅವರ ಮಾತು ಅವರಿಗೆ ಗೌರವ ತರಲ್ಲ. ಅವರು ದೊಡ್ಡವರು ಆಗಲ್ಲ. ಅವರ ವ್ಯಕ್ತಿತ್ವ ಬೆಳೆಯಲ್ಲ. ಚಪ್ಪಲಿ ಬೂಟು ನೆಕ್ಕುವುದು ಎಂಬ ಹೇಳಿಕೆ ಸರಿಯಲ್ಲ. ಸಜ್ಜನರಿಗೆ ಆದರ್ಶವಾಗಿರಬೇಕು. ಇದು ಅವರ ಹೀನ ಸಂಸ್ಕೃತಿ ತೋರಿಸುತ್ತದೆ ಎಂದರು. ಇನ್ನು ಬಸನಗೌಡ ಪಾಟೀಲ್‌ ಯತ್ನಾಳ್ ಹೇಳಿಕೆ ವಿಚಾರ, ಬಸನಗೌಡ ಪಾಟೀಲ್‌ ಯತ್ನಾಳ್ ಒಬ್ಬ ಹಿರಿಯರು. ಪಕ್ಷದ ನಾಯಕರು ತೆಗೆದುಕೊಂಡ ತೀರ್ಮಾನಕ್ಕೆ ಗೌರವ ಕೊಡಬೇಕು.ಯುವಕರಿಗೆ ಆದ್ಯತೆ ಕೊಡಬೇಕು ಅಂತ ಮಾಡಿದ್ದಾರೆ. ನಾವು ಎಲ್ಲರೂ ಮಾರ್ಗದರ್ಶನ ಮಾಡಬೇಕು. ನಾನು ಎಲ್ಲ ನಾಯಕರ ಪರವಾಗಿ ಕೇಳಿಕೊಳ್ಳುವೆ. ಕಳೆದ ಚುನಾವಣೆಯಲ್ಲಿ ಸ್ವಲ್ಪ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದರು.

ವಿ. ಸೋಮಣ್ಣ ಕಾಂಗ್ರೆಸ್‌ ಸೇರ್ಪಡೆ ಆಗ್ತಾರೆ ಎಂಬ ವಿಚಾರ, ಯಾವುದೇ ಕಾರಣಕ್ಕೂ ಸೋಮಣ್ಣ ಕಾಂಗ್ರೆಸ್‌ ಸೇರಲ್ಲ. ಕಾಂಗ್ರೆಸ್‌ ಮುಳುಗುವ ಹಡಗು. ಪಂಚ ರಾಜ್ಯ ಚುನಾವಣೆ ಬಳಿಕ ಕಾಂಗ್ರೆಸ್‌ ಪರಿಸ್ಥಿತಿ ಏನಾಗಿದೆ. ಇನ್ನು ಇಂಡಿಯಾ ಒಕ್ಕೂಟ ವ್ಯವಸ್ಥೆಯಲ್ಲಿಯೇ ಸರಿಯಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಅಂತ ಚರ್ಚೆ ಆದಾಗ, ಇನ್ನಷ್ಟು ಬಿರುಕು ಇಂಡಿಯಾ ಒಕ್ಕೂಟದಲ್ಲಿ ಬಿಟ್ಟಿದೆ. ಲೋಕಸಭಾ ಚುನಾವಣೆ ಬರುವುದರೊಳಗಾಗಿ ಇಂಡಿಯಾ ಛಿದ್ರವಾಗಿ ಹೋಗುತ್ತದೆ ಎಂದರು.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *