Breaking News

ರಾಜಕೀಯ

ಹಠಮಾರಿತನದಿಂದ ಗೆದ್ದು ಸೋಲನ್ನು ಅನುಭವಿಸಿದ ರಮೇಶ ಜಾರಕಿಹೊಳಿ

ಬೆಳಗಾವಿ: ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡೂ ದಶಕಗಳಿಂದ ಬೇರುಮಟ್ಟದಲ್ಲಿ ಕಾಂಗ್ರೆಸ್ ಬೆಳೆಸಿ ಬೆಳಗಾವಿ ಜಿಲ್ಲೆಗೆ ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮಾಡಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ ಕೇವಲ ಬೆಳಗಾವಿ ತಾಲೂಕಿನ ಪಿಎಲ್ ಡಿ ಬ್ಯಾಂಕ್ ಚುನಾವಣೆಯ ಸಲುವಾಗಿ ತನ್ನ ಹಠಮಾರಿತನದಿಂದ ಸರಕಾರ ಪತನಗೊಳಿಸಿ ಗೆಲವು ಸಾಧಿಸಿದರೂ ಕೊನೆ ಗಳಿಯಲ್ಲಿ ಸೋಲುವಂತಾಯಿತು.ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿ ಬುನಾದಿ ಹಾಕಿಕೊಟ್ಟ ಶ್ರೇಯ ಗೋಕಾಕ ಸಾಹುಕಾರ ರಮೇಶ ಜಾರಕಿಹೊಳಿ ಅವರಿಗೆ ಸಲ್ಲುತ್ತದೆ. ದಶಕಗಳಿಂದಲೂ ಬೆಳಗಾವಿ …

Read More »

ರಾಜೀನಾಮೆ ನೀಡಿದ ಅತೃಪ್ತ ಶಾಸಕರಿಗೆ ತಕ್ಕ ಪಾಠ ಕಲಿಸಲು ಜೆಡಿಎಸ್ ನಿರ್ಧಾರ

ಬೆಂಗಳೂರು:ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ವಾತಾವರಣ ಕಂಡುಬಂದಿದೆ. ಮಧ್ಯಂತರ ಚುನಾವಣೆ ಎದುರಾದರೂ ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಬೇಕು ಎಂದು ಜೆಡಿಎಸ್ ನಾಯಕರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರ ಅಧ್ಯಕ್ಷತೆಯಲ್ಲಿ ಪಕ್ಷದ ನಾಯಕರ ಸಭೆ ನಡೆದಿದ್ದು, ವಿಧಾನಸಭೆಯಲ್ಲಿ ಸಮರ್ಥ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸಬೇಕು. ಜೆಡಿಎಸ್ ಪಕ್ಷವನ್ನು ಪ್ರಬಲವಾಗಿ ಸಂಘಟಿಸಲು ಎಲ್ಲಾ ನಾಯಕರು ಶ್ರಮಿಸಬೇಕು ಎಂದು ಸೂಚನೆ ನೀಡಲಾಗಿದೆ.ಇನ್ನು ಸರ್ಕಾರ ಪತನಗೊಂಡು ಅನಿಶ್ಚಿತ ವಾತಾವರಣ ನಿರ್ಮಾಣವಾಗಿರುವುದರಿಂದ …

Read More »

ಅವಧಿ ಮುಗಿಯುವವರೆಗೂ ಮೂರು ಶಾಸಕರು ಅನರ್ಹರು. ಉಳಿದವರ ಕುರಿತು ಕೆಲವೇ ದಿನಗಳಲ್ಲಿ ತೀರ್ಮಾನ

ಬೆಂಗಳೂರು: ಮೂವರು ಶಾಸಕರು ವಿಧಾನಸಭೆಯ ಈ ಅವಧಿ ಮುಗಿಯುವವರೆಗೂ ಅನರ್ಹರು ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.ಸರ್ಕಾರ ಬಿದ್ದು ಹೋಗುತ್ತದೆ ಎಂಬುದು ಸ್ಪಷ್ವವಾದ ಕ್ಷಣದಿಂದ ಇದ್ದ ಕುತೂಹಲಗಳು ಎರಡು. ಒಂದು, ಸ್ಪೀಕರ್ ಅವರ ನಡೆ ಏನಾಗಿರುತ್ತದೆ ಎಂಬುದು, ಅಂದರೆ ಯಾವ್ಯಾವ ಶಾಸಕರನ್ನು ಅನರ್ಹಗೊಳಿಸುತ್ತಾರೆ ಎಂಬ ವಿಚಾರ. ಎರಡನೆಯದ್ದು ಯಡಿಯೂರಪ್ಪನವರು ಕೂಡಲೇ ಮುಖ್ಯಮಂತ್ರಿಯಾಗುತ್ತಾರಾ ಇಲ್ಲವಾ ಎಂಬುದುಇದೀಗ ಮೊದಲನೆಯ ವಿಚಾರಕ್ಕೆ ಪಾಕ್ಷಿಕವಾಗಿ ತೆರೆ ಬಿದ್ದಿದೆ. ಸ್ಪೀಕರ್ ರಮೇಶ್ ಕುಮಾರ್ ಅವರು …

Read More »

ಅಮಂಗಳ ವಾರ ಮೈತ್ರಿ ಸರ್ಕಾರ ಪತನ! ಕುರ್ಚಿಯಿಂದ ಕೆಳಗಿಳಿದ ಕುಮಾರಸ್ವಾಮಿ

ಬೆಂಗಳೂರು: ಕರ್ನಾಟಕ ರಾಜ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಶ್ವಾಸ ಬಹು ಮತ ಪಡೆಯಲು ಫೇಲ್ ಆಗಿದ್ದು, ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮಂಗಳವಾರ ಸಂಜೆ ಪತನವಾಗಿದೆ.ಕಾಂಗ್ರೆಸ್ ಮತ್ತು ಜೆಡಿಎಸ್ ಅತೃಪ್ತ ಶಾಸಕರು ಮುಂಬೈನಲ್ಲಿದ್ದು, ಸರಕಾರ ಅಲ್ಪ ಮತಕ್ಕೆ ಕುಸಿದು ಸದನದಲ್ಲಿ ಕುಮಾರಸ್ವಾಮಿ ರಾಜೀನಾಮೆ ಘೋಷಣೆ ಮಾಡಿದ್ದಾರೆ.ಮ್ಯಾಜಿಕ್ ನಂಬರ್ 103 ಆಗಿದ್ದು ಬಿಜೆಪಿ 105 ಶಾಸಕರ ಬೆಂಬಲ ಹೊಂದಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪರ 99 ಶಾಸಕರು ಇದ್ದು ಕುಮಾರಸ್ವಾಮಿಗೆ ಸೋಲು …

Read More »

ಮೈತ್ರಿ ಸರ್ಕಾರದ ಪತನ ನಿಶ್ಚಿತ: ಈಶ್ವರಪ್ಪ ವಿಶ್ವಾಸ

ಕೋಲಾರ: ಮೈತ್ರಿ ಸರ್ಕಾರ ಸೋಮವಾರಕ್ಕೆ ಕೊನೆಯಾಗಲಿದೆ. ಹಾಗೂ ಬಿಜೆಪಿ ವಿಶ್ವಾಸ ಮತ ಯಾಚನೆ ಗೆಲ್ಲುವ ನಂಬಿಕೆಯಿದೆ ಎಂದು ಬಿಜೆಪಿ ಮುಖಂಡ ಕೆಎಸ್.ಈಶ್ವರಪ್ಪ ಹೇಳಿದರು.ಕೋಲಾರದಲ್ಲಿಂದು ಕುರುಡುಮಲೆ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಕುರುಡುಮಲೆಯ ಗಣಪತಿಯ ಆಶೀರ್ವಾದ ಬಿಜೆಪಿ ಮೇಲಿದೆ ಎಂದರು.‌ಬಳಿಕ ಮಾತನಾಡಿದ ಬಿಜೆಪಿ ಮುಖಂಡ ಸಿಟಿ.ರವಿ ಅವರು, ರಾಜ್ಯದಲ್ಲಿರುವುದು ದೋಸ್ತಿ ಸರ್ಕಾರವಲ್ಲ, ದುಶ್ಮನ್ ಗಳ ಸರ್ಕಾರ. ದೋಸ್ತಿಗಳು ಪರಸ್ಪರ ಮುಗಿಸಲು ಹೊರಟಿರುವುದು ಸ್ಪಷ್ಟ.ಈಗಿನದು ಆಪರೇಷನ್ ಕಮಲವಲ್ಲ, ರಾಜಕೀಯ …

Read More »

ಹೇಸಿಗೆ ಹುಟ್ಟಿಸಿದ ರಾಜ್ಯ ರಾಜಕೀಯ ಬೆಳವಣಿಗೆ

ಕೋಲಾರ: ಕರ್ನಾಟಕದಲ್ಲಿ ನಡೆಯತ್ತಿರುವ ಇಂದಿನ ರಾಜಕೀಯ ಬೆಳವಣಿಗೆ ಜನರಿಗೆ ಹೇಸಿಗೆ ಹುಟ್ಟಿಸಿದೆ. ನನ್ನ 5 ವರ್ಷದ ಮೊಮ್ಮಗ ಕೂಡ ಶಾಸಕರು ಕೋಟಿ ಕೋಟಿಗೆ ಸೇಲ್ ಆಗಿದ್ದಾರೆ ಹೌದು ಅಂತ ನನ್ನ ಕೇಳುತ್ತಾನೆ ಎಂದು ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಬೇಸರ ವ್ಯಕ್ತಪಡಿಸಿದರು. ಕೋಲಾರದಲ್ಲಿಂದು ತಾಲೂಕಿನ ದೊಡ್ಡ ಅಯ್ಯರು ಕೆರೆಗೆ ಕೆಸಿ ವ್ಯಾಲಿ ನೀರು ಹರಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಪಾಳಯದ ಕೆಲವು ಶಾಸಕರು ತೆಗೆದುಕೊಂಡ …

Read More »

ಸುಪ್ರೀಂ ತೀರ್ಪಿನ ಬಳಿಕ ಶಾಸಕರ ರಾಜೀನಾಮೆ‌ ಬಗ್ಗೆ ಚಿಂತನೆ

ಕೋಲಾರ: ಶಾಸಕರ ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವೀಕರಿಸಿರುವ ಸಾರ್ವಜನಿಕ ಅರ್ಜಿಗಳನ್ನ ವಿಚಾರಣೆ ನಡೆಸುವುದಿದೆ.ಸುಪ್ರೀಂ ಕೋರ್ಟ್ ತೀರ್ಪು ಬುಧವಾರ ಬಂದ ನಂತರ ಪ್ರತಿಕ್ರಿಯಿಸುವೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.‌ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನು ಆಧರಿಸಿ ನಾನು ವ್ಯಾಖ್ಯಾನಿಸುವುದಿಲ್ಲ.ಸದನದ ಎಲ್ಲರೂ ನನ್ನನ್ನು ಸ್ಪೀಕರ್ ಮಾಡಿದ್ದಾರೆ. ಸಂವಿಧಾನ ಬದ್ದವಾಗಿ ಕೆಲಸ ಮಾಡುತ್ತೇನೆ ಎಂದರು. ಐಎಂ ಎ ಪ್ರಕರಣದಲ್ಲಿ ಶಾಸಕ ರೋಷನ್ ಬೇಗ್ ಅರೆಸ್ಟ್ ವಿಚಾರ ಕುರಿತು ಪ್ರತಿಕ್ರಿಯಿಸಿ, ಸ್ಪೀಕರ್ ಕಚೇರಿಗೆ …

Read More »

ಸಂವಿಧಾನ ಬದ್ದವಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಸ್ಪೀಕರ್ ರಮೇಶ ಕುಮಾರ : ರಾಯರೆಡ್ಡಿ ವಿಶ್ವಾಸ

ಹುಬ್ಬಳ್ಳಿ: ರಾಜ್ಯದಲ್ಲಿ ಅತೃಪ್ತ ಶಾಸಕರು ರಾಜೀನಾಮೆಗೆ ಸಿದ್ದವಾಗಿದ್ದರೂ ಸಹ ಶಾಸಕರ ರಾಜೀನಾಮೆ ಕಾನೂನುಬದ್ದವಾಗಿಲ್ಲ.‌ ಈ ಕಾರಣದಿಂದಾಗಿಯೇ ಸ್ಪೀಕರ್ ರಮೇಶ ಕುಮಾರ ರಾಜೀನಾಮೆ ಅಂಗೀಕಾರ ಮಾಡುವುದಿಲ್ಲ ಎಂದು ಬಸವರಾಜ ರಾಯರೆಡ್ಡಿ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಸ್ಪೀಕರ್ ಸಂವಿಧಾನಬದ್ದವಾಗಿನಡೆಯುತ್ತಿದ್ದಾರೆ. ಸಂವಿಧಾನ ಪರಿಪಾಲನೆ ಮಾಡುತ್ತಿರುವ ಸ್ಪೀಕರ್ ನಡೆ ನೂರರಷ್ಟು ಸರಿಯಾಗಿದೆ ಎಂದು ರಾಜೀನಾಮೆ ಅಂಗೀಕರಿಸಲು ನಿರಾಕರಿಸುತ್ತಿರುವ ಸ್ಪೀಕರ್ ನಡೆಯನ್ನು ರಾಯರೆಡ್ಡಿ ಸಮರ್ಥಿಸಿಕೊಂಡರು. ಅಲ್ಲದೇ ಈಗಾಗಲೇ ಜಾರಿಯಾಗಿರುವ ವಿಪ್ ಕಾಯ್ದೆಯನ್ನು ಶಾಸಕರು ಪಾಲನೆ ಮಾಡದೇ ಇದ್ದ …

Read More »

ಮಹೇಶ್ ಕುಮಠಳ್ಳಿ ರಾಜಿನಾಮೆ ವಾಪಸ್ ಪಡೆಯಲು ಆಗ್ರಹಿಸಿ ಪ್ರತಿಭಟನೆ

ಚಿಕ್ಕೋಡಿ: ರಾಜ್ಯ ರಾಜಕಾರಣದಲ್ಲಿ ಅಲ್ಲೊಲ ಕಲ್ಲೋಲವನ್ನೆ ಸೃಷ್ಟಿಸಿರುವ ರಾಜಿನಾಮೆ ಪರ್ವ ದಿನಕ್ಕೊಂದು ತಿರುವು ಪಡೆಯುತ್ತಿದೆ.ಇದರ ಬೆನ್ನಲ್ಲೇ ಇಂದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಶಾಸಕ ಮಹೇಶ್ ಕುಮಠಳ್ಳಿ ತಮ್ಮ ರಾಜಿನಾಮೆ ವಾಪಸ್ ಪಡೆಯಬೆಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಅಥಣಿ ಮತಕ್ಷೇತ್ರದಲ್ಲಿ ಸುಮಾರು ಎಂಭತ್ತುಸಾವಿರ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಅವರನ್ನು ಆಯ್ಕೆ ಮಾಡಿದ್ದಾರೆ…ಆದರೆ ಸದ್ಯ ಮಹೇಶ್ ಕುಮಠಳ್ಳಿ ಮತದಾರರ ಹಿತ ಮರೆತು ದಿಢೀರ್ ರಾಜಿನಾಮೆ ನೀಡಿ …

Read More »

ಶಾಸಕರ ಅಣುಕು ಶವಯಾತ್ರೆ ನಡೆಸಿ ಪ್ರತಿಭಟನೆ

ರಾಮನಗರ: ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಸಾಮೂಹಿಕ ರಾಜೀನಾಮೆ ಹಿನ್ನಲೆ ಆಕ್ರೋಶಗೊಂಡು ಶಾಸಕರ ಅಣುಕು ಶವಯಾತ್ರೆ ನಡೆಸಿರುವ ಘಟನೆ ರಾಮನಗರ ಜಿಲ್ಲೆ‌ ಚನ್ನಪಟ್ಟ FCCಣದಲ್ಲಿ ನಡೆಯಿತು. ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರಿಂದ ಈ ವಿನೂತನ ಪ್ರತಿಭಟನೆ ನಡೆಸಿ ರಾಜೀನಾಮೆ ನೀಡಿದ ಶಾಸಕರ ಶವಯಾತ್ರೆ ಮೂಲಕ‌ ಆಕ್ರೋಶ ವ್ಯಕ್ತಪಡಿಸಿದರು. ನಗರದ ಕಾವೇರಿ ವೃತ್ತದಲ್ಲಿ ಶಾಸಕರ ಅಣುಕು ಶವಗಳಿಗೆ ರಾಜೀನಾಮೆ ನೀಡಿದ ಶಾಸಕರ ಭಾವಚಿತ್ರ ಅಂಟಿಸಿ‌ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ …

Read More »