Breaking News

ಹಠಮಾರಿತನದಿಂದ ಗೆದ್ದು ಸೋಲನ್ನು ಅನುಭವಿಸಿದ ರಮೇಶ ಜಾರಕಿಹೊಳಿ

ಬೆಳಗಾವಿ: ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡೂ ದಶಕಗಳಿಂದ ಬೇರುಮಟ್ಟದಲ್ಲಿ ಕಾಂಗ್ರೆಸ್ ಬೆಳೆಸಿ ಬೆಳಗಾವಿ ಜಿಲ್ಲೆಗೆ ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮಾಡಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ ಕೇವಲ ಬೆಳಗಾವಿ ತಾಲೂಕಿನ ಪಿಎಲ್ ಡಿ ಬ್ಯಾಂಕ್ ಚುನಾವಣೆಯ ಸಲುವಾಗಿ ತನ್ನ ಹಠಮಾರಿತನದಿಂದ ಸರಕಾರ ಪತನಗೊಳಿಸಿ ಗೆಲವು ಸಾಧಿಸಿದರೂ ಕೊನೆ ಗಳಿಯಲ್ಲಿ ಸೋಲುವಂತಾಯಿತು.ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿ ಬುನಾದಿ ಹಾಕಿಕೊಟ್ಟ ಶ್ರೇಯ ಗೋಕಾಕ ಸಾಹುಕಾರ ರಮೇಶ ಜಾರಕಿಹೊಳಿ ಅವರಿಗೆ ಸಲ್ಲುತ್ತದೆ. ದಶಕಗಳಿಂದಲೂ ಬೆಳಗಾವಿ ಜಿಲ್ಲೆಯಲ್ಲಿ ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಬೆಳಗಾವಿಯನ್ನು ಗುರುತು ಮಾಡಿದ್ದು ಗೋಕಾಕ ವಿಧಾನ ಸಭಾ ಕ್ಷೇತ್ರ. ಬೆಳಗಾವಿ ತಾಲೂಕಿನ ಒಂದು ಸಣ್ಣ ಪಿಎಲ್ ಡಿ ಬ್ಯಾಂಕ್ ಚುನಾವಣೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ರಾಜಕೀಯದ ಭವಿಷ್ಯದಲ್ಲಿ ಇಷ್ಟೊಂದು ಗಂಭೀರವಾಗಿ ಪರಿಣಾಮ ಬಿರುತ್ತದೆ ಎಂದು ಯಾರೂ ಊಹಿಸಿರಲಿಲ್ಲ.ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಅಬಕಾರಿ ಸಚಿವರಾಗಿದ್ದ ಸತೀಶ ಜಾರಕಿಹೊಳಿ ಅವರು ಬೇರೆ ಖಾತೆ ನೀಡುವಂತೆ ಪಟ್ಟು‌ ಹಿಡಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಸತೀಶ ಜಾರಕಿಹೊಳಿ ನಡುವೆ ಸಂಧಾನ ಮಾಡಿಸಲು ಮುಂದಾಗಿದ್ದು ಇದೇ ಗೋಕಾಕ ಸಾಹುಕಾರ ರಮೇಶ ಜಾರಕಿಹೊಳಿ. ಕೊನೆಯ ಗಳಿಗೆಯಲ್ಲಿ ಕಾಂಗ್ರೆಸ್ ಸರಕಾರದ ಸಚಿವ ಸಂಪುಟದಲ್ಲಿ ಸತೀಶ ಜಾರಕಿಹೊಳಿ ಅವರನ್ನು ಕೈ ಬಿಟ್ಟು ಮೊದಲ ಬಾರಿಗೆ ಗೋಕಾಕ‌ ಶಾಸಕ ರಮೇಶ ಜಾರಕಿಹೊಳಿಗೆ ಸಿದ್ದು ಸಚಿವ ಸಂಪುಟದಲ್ಲಿ ಸಣ್ಣ ಕೈಗಾರಿಕೆ ಇಲಾಖೆಯ ಸಚಿವ ಸ್ಥಾನ ನೀಡಲಾಯಿತು. ಅದನ್ನು ಸಮರ್ಥವಾಗಿ ನಿಭಾಯಿಸಿ 2018ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿಯಿಂದ ಅತಿ ಹೆಚ್ಚು ಕಾಂಗ್ರೆಸ್ ಗೆಲವು ಸಾಧಿಸುವಲ್ಲಿ ರಮೇಶ ಜಾರಕಿಹೊಳಿ ಶ್ರಮಿಸಿದ ಫಲದಿಂದ ಸಮ್ಮಿಶ್ರ ಸರಕಾರದಲ್ಲಿ ಪೌರಾಢಳಿತ ಸಚಿವ ಸ್ಥಾನ ಒಲಿದು ಬಂತು.ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ದಶಕಗಳಿಂದ ಬಿಜೆಪಿ ವಶದಲ್ಲಿದ್ದ ಕ್ಷೇತ್ರ ಕಾಂಗ್ರೆಸ್ ಪಾಲಾಯಿತು. ಬೆಳಗಾವಿ ತಾಲೂಕಿನ ಪಿಎಲ್ ಡಿ ಬ್ಯಾಂಕ್ ನಲ್ಲಿ ಮಾಸ್ಟರ್ ಮೈಂಡ್ ಸತೀಶ ಜಾರಕಿಹೊಳಿ ಅವರ ಹಿಡಿಯದಲ್ಲಿತ್ತು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕಿಯಾಗುತ್ತಿದ್ದಂತೆ ಪಿಎಲ್ ಡಿ ಬ್ಯಾಂಕ್ ಶತಾಯ ಗತಾಯ ತಮ್ಮ ಬೆಂಬಲಿಗರಿಗೆ ಅಧ್ಯಕ್ಷ ಗಾದಿ ನೀಡುವಂತೆ ಒಂದೇ ಪಕ್ಷದ ಎರಡೂ ನಾಯಕರ ನಡುವೆ ಲಾಭಿ ಜೋರಾಗಿ‌ ನಡೆಯಿತು.ರಾಜ್ಯದಲ್ಲಿ ಸಮ್ಮಿಶ್ರ ಸರಕಾರವಿದ್ದರೂ ಆಡಳಿತ ಪಕ್ಷದಲ್ಲಿದ್ದುಕೊಂಡು ಸರಕಾರದ ವಿರುದ್ದವೇ ಪ್ರತಿಭಟನೆ ಮಾಡುವುದು ಸರಿಯಲ್ಲ. ಬೆಳಗಾವಿ ತಾಲೂಕಿನ ಪಿಎಲ್ ಡಿ ಬ್ಯಾಂಕ್ ಚುನಾವಣೆ ಹಿಂದಿನಿಂದ ಹೇಗೆ ನಡೆದುಕೊಂಡು ಬಂದಿದೆಯೋ ಹಾಗೆ ನಡೆಯಬೇಕೆಂದು ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ ಜಾರಕಿಹೊಳಿ ವಾದವಾಗಿತ್ತು. ಆದರೆ ಪಟ್ಟು ಸಡಿಸದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಸ್ಥಾನ ನೀಡುವಂತೆ ಜಿದ್ದಿಗೆ ಬಿದ್ದ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರಕಾರ ಅಂದೇ ಪತನವಾಗುತ್ತದೆಯೋ ಎಂಬ ಗುಮಾನಿ ಜೋರಾಗಿ ನಡೆದಿತ್ತು.ಬೆಳಗಾವಿಯ ಸಣ್ಣ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಸಹೋದರ ಸತೀಶ ಜಾರಕಿಹೊಳಿಗೆ ಹಿ‌ನ್ನಡೆಯಾಗಬಾರದು ಎಂದು ಹೈಕಮಾಂಡ್ ವರೆಗೂ ಸದ್ದು ಮಾಡಿದ್ದ ರಮೇಶ ಜಾರಕಿಹೊಳಿ ಹಠಕ್ಕೆ ಕೊನೆಗೆ ಇದನ್ನು ಇತ್ಯರ್ಥ ಪಡಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬೆಳಗಾವಿಗೆ ಆಗಮಿಸಿ ಮುಲಾಮ ಹಚ್ಚಿದರೂ ಸಾಹುಕಾರನ್ ಬಂಡಾಯ ಮಾತ್ರ ಶಮನವಾಗಲಿಲ್ಲ.ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ ಹಸ್ತಕ್ಷೇಪ, ಸಹೋಸರ ಸತೀಶ ಜಾರಕಿಹೊಳಿಗೆ ಆದ ಅವಮಾನಕ್ಕೆ ರಮೇಶ ಜಾರಕಿಹೊಳಿ ಸಮ್ಮಿಶ್ರ ಸರಕಾರ ಪತನಕ್ಕೆ ಮಹೂರ್ತ ಇಟ್ಟಿದ್ದು ಗುಟ್ಟಾಗಿ ಉಳಿದಿಲ್ಲ.ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಸುಭದ್ರ ಕೋಟೆಯಾಗಿತ್ತು. ಎಲ್ಲಿಯವರೆಗೂ ಜಾರಕಿಹೊಳಿ ಸಹೋದರು ಹಾಗೂ ಶಾಸಕಿ ಹೆಬ್ಬಾಳ್ಕರ್ ಅವರ ಸಣ್ಣ ಪಿಎಲ್ ಡಿ ಬ್ಯಾಂಕ್ ಚುನಾವಣೆಯ ಸರಕಾರದ ಪತನಕ್ಕೆ ಕಾರಣವಾಯಿತಲ್ಲದೆ, ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲಕಚ್ಚುವಂತಾಯಿತು ಎಂದು ಕಾಂಗ್ರೆಸ್ ವಲಯದಲ್ಲಿ ಗುಸು ಗುಸು ಮಾತುಗಳು ಪ್ರಾರಂಭವಾಗಿವೆ.ಗುರುವಿನ ಹಾದಿ ಹಿಡಿದ ಮಹೇಶ:ರಮೇಶ ಜಾರಕಿಹೊಳಿ ನಮ್ಮ ರಾಜಕೀಯ ಗುರುಗಳು. ಅವರ ಮಾತಿಗೆ ನಾನು ಬದ್ದನಾಗಿರುತ್ತೇನೆ ಎಂದು ಹೇಳಿಕೆ ನೀಡಿ ಆಗೋಮ್ಮೆ ಈಗೊಮ್ಮೆ ಕಾಂಗ್ರೆಸ್ ಗೆ ಕಣ್ಣಾ ಮುಚ್ಚಾಲೆ ಆಡುತ್ತಿದ್ದ ಅಥಣಿಯ ಶಾಸಕ‌ ಮಹೇಶ ಕುಮುಠಳ್ಳಿ ಸಹ ಅನರ್ಹಗೊಂಡು, ಗುರುವಿಗೆ ತಕ್ಕ‌ ಶಿಷ್ಯರಾಗಿದ್ದಾರೆ.

Share News

About admin

Check Also

Featured Video Play Icon

ಗ್ಯಾರಂಟಿ ನೀಡಿರುವ ಕಾಂಗ್ರೆಸ್ಸಿನ ಸರ್ಕಾರಕ್ಕೆ ಗ್ಯಾರಂಟಿಯೇ ಇಲ್ಲ: ಕೇಂದ್ರ ಸಚಿವ ಜೋಶಿ ಕಿಡಿ..

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಕಾಂಗ್ರೆಸ್ ಸರ್ಕಾರಕ್ಕೇ ಗ್ಯಾರಂಟಿ‌ ಇಲ್ಲ.ಡಿ.ಕೆ.ಶಿವಕುಮಾರ ಹಾಗೂ ಸಿದ್ಧರಾಮಯ್ಯ ಕಚ್ಚಾಡುತ್ತಿದ್ದಾರೆ. ಹೆಚ್ಚಿನ‌ ಡಿಸಿಎಂಗಳನ್ನು ಮಾಡಿ‌ …

Leave a Reply

Your email address will not be published. Required fields are marked *

You cannot copy content of this page