admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ಬೆಂಗಳೂರು: ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ವಿಧಾನಸಭಾ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಲು ಅತೃಪ್ತ ಶಾಸಕರು ಮುಂಬಯಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಅಲ್ಲಿಂದ ನೇರವಾಗಿ ಸಿಗ್ನಲ್ ಫ್ರೀ ಸಾರಿಗೆ ವ್ಯವಸ್ಥೆಯಡಿ ವಿಧಾನಸೌಧಕ್ಕೆ ಆರು ಗಂಟೆ ಮೂರು ನಿಮಿಷಕ್ಕೆ ಆಗಮಿಸಿ ಸ್ಪೀಕರ್ ಕಚೇರಿಯನ್ನು ತಲುಪಿ ತಮ್ಮ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.ಭೈರತಿ ಬಸವರಾಜ್, ರಮೇಶ್ ಜಾರಕಿಹೊಳಿ, ಶಿವರಾಮ್ ಹೆಬ್ಬಾರ್, ಬಿಸಿ ಪಾಟೀಲ್, ಗೋಪಾಲಯ್ಯ, ನಾರಾಯಣ ಗೌಡ, ವಿಶ್ವನಾಥ್, ಮಹೇಶ್ …
Read More »
admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ಚಿಕ್ಕೋಡಿ: ಮೈತ್ರಿ ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ರಾಜ್ಯದಲ್ಲಿ ಸರ್ಕಾರ ಅತಂತ್ರಗೊಳ್ಳಲು ಕಾರಣರಾದ ಶಾಸಕರಲ್ಲಿ ಒಬ್ಬರಾದ ಕಾಂಗ್ರೆಸ್ ಪಕ್ಷದಬೆಳಗಾವಿ ಜಿಲ್ಲೆಯ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಮನೆಗೆ ಭದ್ರತೆಯನ್ನು ಒದಗಿಸಲಾಗಿದೆ.ರಾಜೀನಾಮೆಯಿಂದ ಆಕ್ರೋಶಗೊಂಡಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಶಾಸಕರು ರಾಜೀನಾಮೆ ಹಿಂಪಡೆಯುವಂತೆ ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಲಿದ್ದಾರೆ. ಈಹಿನ್ನೆಲೆಯಲ್ಲಿ ಬಿಗಿ ಪೋಲಿಸ್ ಭದ್ರತೆ ಒದಗಿಸಲಾಗಿದೆ. ಒಂದು ಕೆ ಎಸ್ ಆರ್ ಪಿ, ಒಂದು ಡಿ ಆರ್ ವ್ಯಾನ್ಸೇರಿದಂತೆ ನೂರಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿಯನ್ನು …
Read More »
admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ಕೋಲಾರ: ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ನೇತೃತ್ವದಲ್ಲಿಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನಗರದ ಕಾಲೇಜು ವೃತ್ತದಲ್ಲಿ ಮೋದಿ, ಅಮಿತ್ ಷಾ ವಿರುದ್ಧ ಘೋಷಣೆ ಕೂಗಿ ರಸ್ತೆ ತಡೆ ಮಾಡಲಾಯಿತು.ಆಪರೇಷನ್ ಕಮಲ ಮೂಲಕ ಶಾಸಕರ ಖರೀದಿಗೆ ಇಳಿದಿರುವ ಯಡಿಯೂರಪ್ಪ ವಿರುದ್ಧವೂ ಪ್ರತಿಭಟನಾನಿರತರು ಕಿಡಿ ಕಾರಿದರು.ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿಯೂ ಆಕ್ರೋಶ ಹೊರಹಾಕಿದರು.
Read More »
admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ಕೋಲಾರ: ಬಿಜೆಪಿ ಅಪರೇಷನ್ ಕಮಲದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಇಂದು ಕೋಲಾರದಲ್ಲಿಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನಗರದ ಕಾಲೇಜು ವೃತ್ತದಲ್ಲಿ ರಸ್ತೆ ತಡೆದು ಮೆಕ್ಕೆ ಸರ್ಕಲ್ ವರೆಗೂ ರ್ಯಾಲಿ ನಡೆಸಿ ಪ್ರತಿಭಟನೆ ಕೈಗೊಂಡರು. ಕಾಂಗ್ರೆಸ್ – ಜೆಡಿಎಸ್ ಶಾಸಕರಿಗೆ ಅಧಿಕಾರ ಹಾಗೂ ಹಣದ ಆಮೀಷ ತೋರಿಸುತ್ತಿದೆ. ಆಪರೇಷನ್ ಕಮಲ ನಿಲ್ಲಿಸದಿದ್ದರೆ ರಾಜ್ಯಾದಂತ ಹೋರಾಟ ಮಾಡೋದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಅಲ್ಲದೇ ಪ್ರತಿಭಟನಾ ರ್ಯಾಲಿಯಲ್ಲಿ ಮೋದಿ, ಅಮೀತ್ ಶಾ, ಯಡಿಯೂರಪ್ಪ ಹಾಗೂ ಬಿಜೆಪಿ …
Read More »
admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ಚಾಮರಾಜನಗರ: ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆ ಬಿಎಸ್ ಪಿ ಶಾಸಕ ಹಾಗೂ ಮಾಜಿ ಸಚಿವ ಎನ್.ಮಹೇಶ್ ಬೇಸರ ವ್ಯಕ್ತಪಡಿಸಿದ್ದಾರೆ.ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇವತ್ತು ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ರಾಜ್ಯ ರಾಜಕೀಯದ ಬೆಳವಣಿಗೆ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಇಳಿದಿದೆ ಎಂದರು. ರಾಜ್ಯದ ಜನರು ಶಾಸಕರ ಆಟ ನೋಡುತ್ತಿದ್ದಾರೆ. ತಕ್ಷಣ ಈ ಸಮಸ್ಯೆ ಬಗೆಹರಿಸಬೇಕು. ಸಮ್ಮಿಶ್ರ ಸರ್ಕಾರಕ್ಕೆ ನನ್ನದು ವಿಷಯಾಧಾರಿತ ಬಾಹ್ಯ ಬೆಂಬಲವಿದೆ. ಸದ್ಯಕ್ಕೆ ನಾನು ಸಮ್ಮಿಶ್ರ ಸರ್ಕಾರದ …
Read More »
admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ಹುಬ್ಬಳ್ಳಿ: ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ದೇವೇಗೌಡ್ರು ಭಿನ್ನರೊಂದಿಗೆ ಮಾತನಾಡಬೇಕು.ಇಲ್ಲವಾದರೆ ಸರ್ಕಾರ ಬಿಳೋದು ಗ್ಯಾರಂಟಿ ಎಂದು ಜೆಡಿಎಸ್ ಹಿರಿಯ ಮುಖಂಡ ಹಾಗೂ ಎಂ ಎಲ್ ಸಿ ಬಸವರಾಜ್ ಹೊರಟ್ಟಿ ಆತಂಕ ವ್ಯಕ್ತಪಡಿಸಿದರು.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ, ಸಿದ್ದರಾಮಯ್ಯ, ದೇವೇಗೌಡರು ಪರಿಸ್ಥಿತಿಯನ್ನು ತಿಳಿಗೊಳಿಸದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ.ಈ ಸ್ಪೀಕರ್ ಬಗ್ಗೆ ಹೇಳುವುದು ಕಷ್ಟ, ಸ್ಪೀಕರ್ ಟೆಂಪರ್ ಕಳೆದುಕೊಂಡು ಸಿಟ್ಟಿಗೆದ್ದರೆ ಶಾಸಕರ ರಾಜೀನಾಮೆ ಆಗೋದು ಪಕ್ಕಾ. ಸ್ಪೀಕರ್ ಏನಾದರೂ ಶಾಸಕರ …
Read More »
admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ಮಂಡ್ಯ : ಜಿಲ್ಲೆಯ ಕೆ.ಆರ್.ಪೇಟೆ ಶಾಸಕ ಡಾ.ನಾರಾಯಣಗೌಡ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಶಾಸಕರ ನಿವಾಸಕ್ಕೆ ಸಶಸ್ತ್ರ ಪೋಲಿಸರ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.ಸಬ್ ಇನ್ಸ್ ಪೆಕ್ಟರ್ ಆನಂದೇಗೌಡರ ನೇತೃತ್ವದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.ಜೆಡಿಎಸ್ ಅಭಿಮಾನಿಗಳಲ್ಲಿ ಹಾಗೂ ಕಾರ್ಯಕರ್ತರಲ್ಲಿ ನೀರವ ಮೌನ ಮನೆಮಾಡಿದೆ.
Read More »
admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ಮೈತ್ರಿ ಸರ್ಕಾರಕ್ಕೆ ಬಿಎಸ್ಪಿಯಿಂದಲೂ ಬೆಂಬಲ ವಾಪಸ್ ಸಾಧ್ಯತೆ..!ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ರೀತಿಯ ಸವಾಲುಗಳನ್ನು ಎದುರಿಸುತ್ತಲೇ ಬಂದಿದೆ. ಶಾಸಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವುದೇ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮೈತ್ರಿ ಪಕ್ಷಗಳ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಪಕ್ಷದಲ್ಲಿ ಎಷ್ಟೋ ಘಟಾನುಘಟಿ ಹಾಗೂ ಅನುಭವಿ ನಾಯಕರುಗಳಿದ್ದರೂ ಶಾಸಕರನ್ನು ಪಕ್ಷದಲ್ಲಿಯೇ ಮುಂದುವರೆಸಿಕೊಂಡು ಹೋಗುವಲ್ಲಿ ಮುಖಂಡರು ಎಡವಿದ್ದಾರೆ. ಇತ್ತೀಚೆಗಷ್ಟೇ ವಿಜಯನಗರ ಶಾಸಕರಾದ ಆನಂದ ಸಿಂಗ್ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ …
Read More »
admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ದಾವಣಗೆರೆ: ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ.ಇನ್ನೇರಡು ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ ಎಂದು ಶಾಸಕ ರೇಣುಕಾಚಾರ್ಯ ಭವಿಷ್ಯ ನುಡಿದರು.ದಾವಣಗೆರೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಭಾಧ್ಯಕ್ಷರು ಶಾಸಕರ ರಾಜೀನಾಮೆ ಅಂಗೀಕರಿಸಬೇಕು. ಇಲ್ಲದಿದ್ದರೆ, ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು. ಕಾಂಗ್ರೇಸ್,ಜೆಡಿಎಸ್ ಅಧಿಕಾರಕ್ಕೆ ಬಂದ್ರೂ ಜನಪರ ಕೆಲಸ ಮಾಡಿಲ್ಲ. ಹೀಗಾಗಿ ಸಿಎಂಗೆ ಗೌರವ ಇದ್ದರೆ ಕೂಡಲೇ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.ಬಿಜೆಪಿ ಪಕ್ಷ ಯಾವುದೇ ರೀತಿಯ ಆಪರೇಷನ್ ಮಾಡುವ ಅಗತ್ಯವಿಲ್ಲ. ರಾಷ್ಟ್ರೀಯ ನಾಯಕರು ಯಾರೂ …
Read More »
admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ಚಿಕ್ಕೋಡಿ : ಶಾಸಕರು ರಾಜಿನಾಮೆ ಕೊಟ್ಟ ತಕ್ಷಣ ಸರಕಾರ ಬೀಳುವದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಕುರಿತು ಸ್ಪೀಕರ್ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕೂ ಮೊದಲು ಅಧಿವೇಶನ ಪ್ರಾರಂಭವಾಗಲಿದೆ, ಅಧಿವೇಶನದಲ್ಲಿ ಅಂತಿಮ ತೀರ್ಮಾನವಾಗುತ್ತದೆ ಎಂದರು.೨೫ ಜನ ಶಾಸಕರು ರಾಜೀನಾಮೆ ವಿಚಾರ ಸುಳ್ಳು .ರಾಜೀನಾಮೆ ಕೊಟ್ಟವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ, ಪರಿಹಾರ ಮಾಡುವುದಕ್ಕೆ ವರಿಷ್ಠರಿದ್ದಾರೆ, ರಾಜೀನಾಮೆ ಕೊಟ್ಟವರೇ ಪಕ್ಷಕ್ಕೆ ವಾಪಸ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡೆಸಿದರು …
Read More »