Breaking News

ಹುಬ್ಬಳ್ಳಿ

ಮುಡಾ ಹಗರಣದಲ್ಲಿ ಸಿಎಂ ಹಾಗೂ ಅವರ ಪತ್ನಿ ಮೇಲೆ ಎಫ್ ಐ ಆರ್ ಆಗಿದೆ : ಶೆಟ್ಟರ್

ಹುಬ್ಬಳ್ಳಿ: ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ ಅವರಿಂದ ಕೇಂದ್ರ ಸಚಿವ ಕುಮಾರಸ್ವಾಮಿಗೆ ಹಂದಿ ಪದ ಬಳಕೆ ಮಾಡಿ ಪತ್ರ ಬರೆದ ವಿಚಾರ, ಕುಮಾರಸ್ವಾಮಿ ಕೇಂದ್ರ ಸಚಿವರು ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಂಪುಟ ದರ್ಜೆ ಖಾತೆ ಸಚಿವರು. ಮುಡಾ ಹಗರಣ ಆರಂಭ ಆದ ನಂತರ ಲೋಕಾಯುಕ್ತ ಪೊಲೀಸರಿಂದ ಎಫ್‌ ಐಆರ್ ಆರಂಭ ಆಗಿದೆ. ಒಬ್ಬ ಉನ್ನತ ಸ್ಥಾನದ ಅಧಿಕಾರದಲ್ಲಿದ್ದವರು ಹೀಗೆ ಮಾತನಾಡುವುದು ಸಮಂಜಸವಲ್ಲವೆಂದು ಹುಬ್ಬಳ್ಳಿಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಹೇಳಿದರು. ಇನ್ನು …

Read More »

ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಶೆಟ್ಟರ್

ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ರೆ ಅವರ ವ್ಯಕ್ತಿತ್ವಕ್ಕೆ ಒಳ್ಳೆಯದು. ಭಂಡತನ ಇದ್ರೆ ಏನು ಮಾಡೋಕಾಗುತ್ತೆ? ಎಂದು ಸಿಎಂ ಸಿದ್ದರಾಮಯ್ಯ ದಸರಾ ಉದ್ಘಾಟನೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಇನ್ನೇಲಾದ್ರೂ ಅರ್ಥ ಮಾಡಿಕೊಳ್ಳಬೇಕು. ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದೇನೆ ಅಂತ ಹೇಳ್ಕೊತಾರೆ. ನೈತಿಕತೆ ಬಗ್ಗೆ ಮಾತನಾಡ್ತಿದ್ರು. ಯಡಿಯೂರಪ್ಪ ಅವರ ಮೇಲೆ ಎಫ್‌ಐಆ‌ರ್ ಆದಾಗ ಏನು ಮಾತಾಡಿದ್ದಾರೆ ಅಂತ …

Read More »

ಬೀಗ ಹಾಕಿದ ಮನೆಗಳೇ ಟಾರ್ಗೆಟ್ : ಸೆರೆಯಾದ ಕಳ್ಳರು

ಹುಬ್ಬಳ್ಳಿ: ನಗರದಲ್ಲಿ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ, ಮನೆ ಕಳ್ಳತನ ಮಾಡುತ್ತಿದ್ದ ಮನೆಗಳ್ಳಿ ಹಾಗೂ ಕೃತ್ಯಕ್ಕೆ ಸಹಕರಿಸಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಅಶೋಕ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಗಂಗಾಧರನಗರದ ನಿವಾಸಿ ರತ್ನವ್ವ ಬಾಳಿಮೇಡ್ (45), ಕುಸುಗಲ್ ನಿವಾಸಿ ಮುತ್ತುಂಸಾಬ್ ಕುಂಬಿ (27) ಗುರುತಿಸಲಾಗಿದೆ. ಇವರಿಂದ 2.50 ಲಕ್ಷ ರೂ ಮೌಲ್ಯದ 50 ಗ್ರಾಂ ತೂಕದ 4 ಬಂಗಾರದ ಬಳೆಗಳು, 50 ಸಾವಿರ ಮೌಲ್ಯದ 10 ಗ್ರಾಂ ತೂಕದ …

Read More »

ಜನರ ಸಮಸ್ಯೆ ಆಲಿಸಿದ ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ನಿವಾಸದಲ್ಲಿಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಸಾರ್ವಜನಿಕರನ್ನು ಮುಕ್ತವಾಗಿ ಭೇಟಿಯಾಗುವ ಮೂಲಕ ಜನರ ಸಮಸ್ಯೆಗಳ ಆಲಿಸಿದರು. ಹುಬ್ಬಳ್ಳಿಯ ಮಯೂರಿ ಎಸ್ಟೇಟ್‌ನಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಸಾರ್ವಜನಿಕರು ಹಾಗೂ ವಿವಿಧ ಮೂಲೆಗಳಿಂದ ಆಗಮಿಸಿದ ಸಾರ್ವಜನಿಕರು, ಕೇಂದ್ರ ಸಚಿವರಿಗೆ ಮನವಿಗಳನ್ನು ಸಲ್ಲಿಕೆ ಮಾಡಿದ್ದು, ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.ಇನ್ನು ಮನವಿಯನ್ನು ಸ್ವೀಕರಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ತಕ್ಷಣವೇ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದು, ಜನರ …

Read More »

ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಜೋಶಿ

ಹುಬ್ಬಳ್ಳಿ : ಮರ್ಯಾದೆ ಇದ್ದರೆ ಸಿದ್ದರಾಮಯ್ಯ ದಸರಾ ಉದ್ಘಾಟನೆಗೆ ಹೋಗಬಾರದು.ಸಿದ್ದರಾಮಯ್ಯ ದಪ್ಪ ಚರ್ಮದವರು.ಅವರು ಏನು ಹೇಳಿದರೂ ಕೇಳಲ್ಲ.ಅವರ ಮೇಲೆ ಎಫ್ಐಆರ್ ದಾಖಲಾಗಿರುವುದರಿಂದ ದಸರಾ ಉದ್ಘಾಟನೆಗೆ ಹೋಗಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು. ನಗರದಲ್ಲಿ ಮಾತನಾಡಿದ ಅವರು,ಯಾವುದೇ ಕಡತಳಿಗೂ ಸಹಿ ಹಾಕಬಾರದು.ದಪ್ಪ ಚರ್ಮದವರಾಗಿರುವುದರಿಂದ ಇದೆಲ್ಲವನ್ನು ಕೇಳಲ್ಲ ಹೈಕಮಾಂಡ್ ಗೇ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ನೀವೂ ಬೇಲ್ ಮೇಲೆಯೇ ಇದ್ದೀರಿ ಅಂತ ಎಚ್ಚರಿಕೆ ಕೊಡ್ತಿದ್ದಾರೆ.ಅವರ ಪಕ್ಷದವರೇ ಆದ ಕೋಳಿವಾಡ ರಾಜೀನಾಮೆಗೆ …

Read More »

ವಿವಿಧ ಬೇಡಿಕೆಗಾಗಿ ಅ.4 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ

ಧಾರವಾಡ: ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ಸಂಘಗಳು, ಪಂಚಾಯತಿ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಅಕ್ಟೋಬರ್ 4 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಈ ಕುರಿತು ಪಿಡಿಓ ಸಂಘದ ಜಿಲ್ಲಾಧ್ಯಕ್ಷೆ ಪುಷ್ಪಾವತಿ ಮೇದಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪಂಚಾಯತಿ ಕಚೇರಿಯಿಂದ ಮೂಲಭೂತ ಸೌಕರ್ಯ ಹೊರತುಪಡಿಸಿ ಉಳಿದೆಲ್ಲಾ ಸೌಲಭ್ಯದಿಂದ ದೂರ ಉಳಿದು ಪ್ರತಿಭಟನೆ ನಡೆಸಲಾಗುವುದು. …

Read More »

ಸಿದ್ದರಾಮಯ್ಯ ಕಾಂಗ್ರೆಸ್ ನ ಕೊನೆಯ ಮುಖ್ಯಮಂತ್ರಿ: ಬಸನಗೌಡ ಪಾಟೀಲ ಯತ್ನಾಳ

ಹುಬ್ಬಳ್ಳಿ: ಸಿದ್ದರಾಮಯ್ಯ ಕಾಂಗ್ರೆಸ್ ನ ಕೊನೆಯ ಮುಖ್ಯಮಂತ್ರಿ, ಕೂಡಲೇ ವಿಧಾನ ಸಭೆಯನ್ನು ವಿಸರ್ಜನೆ ಮಾಡಿ ಸಿದ್ದರಾಮಯ್ಯ ನಂತರ ಯಾರು ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಆಗಲ್ಲ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಹಳ ಮಂದಿ ಸಿಎಂ ಪಾಳಿಯಲ್ಲಿದ್ದಾರೆ ಗೋರಿಗೆ ಹೋಗುವವರೂ ಸಹ ಪಾಳೆ ಹಚ್ಚಿದ್ದಾರೆ, ಕೋರ್ಟ್ ಆದೇಶ ಬಂದ ನಂತರ ಸಿದ್ದರಾಮಯ್ಯ ರಾಜೀನಾಮೆ ಕೊಡೋದು ಸೂಕ್ತ ಅಧಿಕಾರದಲ್ಲಿ ಇದ್ದರೆ ತನಿಖೆ ಮೇಲೆ ಪ್ರಭಾವ …

Read More »

ಸಿದ್ದರಾಮಯ್ಯಗೆ ರಾಜಿನಾಮೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಹುಬ್ಬಳ್ಳಿ: ಸಿದ್ದರಾಮಯ್ಯ ತಾವು ಮಾತಿಗೊಮ್ಮೆ ನಾನು ಹಿಂದುಳಿದವರ ಪರ, ಹಿಂದುಳಿದ ವರ್ಗಗಳ ನಾಯಕ ಎಂದು ಹೇಳುತ್ತಾರೆ ಆದರೆ ಹಿಂದುಳಿದ ವರ್ಗಗಳ ದುಡ್ಡನ್ನ ತೆಗೆದುಕೊಂಡು ರಾಜಕಾರಣ ಮಾಡಿದರು, ವಾಲ್ಮೀಕಿ ಹಗರಣದ ದುಡ್ಡನ್ನ ದುರುಪಯೋಗ ಮಾಡಿಕೊಂಡು ಅಂದ್ರಪ್ರದೇಶ ಹಾಗೂ ಬಳ್ಳಾರಿ ಕೊಟ್ಟಿದಾರೆ ಆದ್ದರಿಂದ ಅವರೆ ನೈತಿಕ ಹೊಣೆ ಹೊತ್ತು ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಶಾಸಕ ಎಮ್.ಆರ್.ಪಾಟೀಲ್ ಆಗ್ರಹಿಸಿದರು. ಬಿಜೆಪಿ ಪಕ್ಷದಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಒತ್ತಾಯ ಮಾಡಿದರು.

Read More »

ಸಿಎಂ ಸಾಚಾ ಆಗಿದ್ದರೇ ರಾಜೀನಾಮೆ ನೀಡಲಿ: ಶೆಟ್ಟರ್ ಕಿಡಿ

ಹುಬ್ಬಳ್ಳಿ: ಸಿಎಂ ಸಾಚಾ ಆಗಿದ್ದರೇ ರಾಜೀನಾಮೆ ನೀಡಲಿ. ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು. ಈ ಭಂಡತನ ಸರಿಯಲ್ಲಾ.. ಅಧಿಕಾರದಲ್ಲಿದ್ದು, ತನಿಖೆ ಎದುರಿಸುವುದು ನ್ಯಾಯ ಸಮ್ಮತವಾಗಲ್ಲ. ಈ ಭಂಡತನ ಮುಂದುವರಿದ್ರೆ ಜನ ದಂಗೆ ಎಳ ಬೇಕಾಗುತ್ತದೆ. ಕಾಂಗ್ರೆಸ್ ಹೈಕಮಾಂಡ್ ಈ ಕೂಡಲೇ ಸಿಎಂ …

Read More »

ಮೂಡಾ ಹಗರಣವನ್ನು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕೋನರಡ್ಡಿ

ಹುಬ್ಬಳ್ಳಿ: ಹೈಕೋರ್ಟ್ ರಾಜ್ಯಪಾಲರ ನಡೆಯನ್ನು ಎತ್ತಿ ಹಿಡಿದಿದ್ದು ಇದರ ವಿರುದ್ಧ ನ್ಯಾಯಾಲಯದಲ್ಲಿ ತೀರ್ಪು ಬಂದಿದೆ ಎನ್.ಎಚ್. ಶಾಸಕ ಕೋನರೆಡ್ಡಿ ಹೇಳಿದರು. ಹೈಕೋರ್ಟ್‌ ಮೂಡಾ ಹಗರಣವನ್ನು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು,ಒಂದು ನ್ಯಾಯಾಲಯದಲ್ಲಿ ಒಂದು ತೀರ್ಪು ಬಂದಾಗ ಮತ್ತೊಂದು ನ್ಯಾಯಾಲಯದಲ್ಲಿ ಹೋರಾಡಲು ಅವಕಾಶ ಇದೆ. ನಾವು ಹೋರಾಡುತ್ತೇವೆ ಎಂದರು.

Read More »