Breaking News

ಹುಬ್ಬಳ್ಳಿ

ಮರವೇರಿ ಕುಳಿತು ಆತಂಕ ಸೃಷ್ಟಿಸಿದ ಆಗಂತುಕ

ಹುಬ್ಬಳ್ಳಿ: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಮರವೇರಿ ಕುಳಿತು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಗರದ ಬಾಸೆಲ್ ಮಿಶನ್ ಶಾಲೆ ಬಳಿ ನಡೆದಿದೆ.ಮಾನಸಿಕ ಅಸ್ವಸ್ಥ ಎನ್ನಲಾದ ವ್ಯಕ್ತಿ ಏಕಾಏಕಿ ಶಾಲೆಯ ಪಕ್ಕದ ಮರವೇರಿ ಕುಳಿತು ಕೆಳಗೆ ಇಳಿಯಲು ಹಿಂದೇಟು ಹಾಕಿದ.‌‌ ಇದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ನಂತರ ಈ ಬಗ್ಗೆ ಸ್ಥಳೀಯರು ಉಪನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮರವೇರಿದ್ದ ವ್ಯಕ್ತಿಗೆ ಕೆಳಗೆ ಇಳಿಯಲು ತಿಳಿಸಿದ್ದಾರೆ. ಆದರೆ …

Read More »

ಮಳೆಯಿಂದಾಗಿ ಮನೆ ಕುಸಿದು ವ್ಯಕ್ತಿ ಗಂಭೀರ ಗಾಯ

ಹುಬ್ಬಳ್ಳಿ: ನಗರದಲ್ಲಿ ಸುರಿದ ಮಳೆಗೆ ಮನೆ ಕುಸಿದ ಪರಿಣಾಮ ಓರ್ವನಿಗೆ ಗಂಭೀರ ಗಾಯವಾಗಿದ್ದು, ಅಪಾರ ಪ್ರಮಾಣದ ವಸ್ತುಗಳು ಹಾನಿಯಾದ ಘಟನೆ ಹೆಗ್ಗೇರಿಯ ಜೆಪಿನಗರದಲ್ಲಿ ನಡೆದಿದೆ.ಕಾಟವೆ ಎಂಬುವರಿಗೆ ಸೇರಿದ್ದ ಮನೆ ಇದ್ದಾಗಿದ್ದು, ನಗರದಲ್ಲಿ ಎರಡು ದಿನಗಳ‌ ಹಿಂದೆ ಸುರಿದ ಮಳೆಗೆ ಮನೆಯ ಗೋಡೆಗಳೆಲ್ಲಾ ಏಕಾಏಕಿ ಕುಸಿದಿವೆ. ಆ ಸಮಯದಲ್ಲಿ ಮನೆಯಲ್ಲಿದ್ದ ಪುಂಡಲೀಕ ಕಾಟವೆ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಮನೆಯ ಕುಸಿತದಿಂದ ಮನೆಯಲ್ಲಿದ್ದ ವಸ್ತುಗಳೆಲ್ಲಾ ನಜ್ಜುಗುಜ್ಜಾಗಿವೆ. ಇದರಿಂದ ಅಪಾರ …

Read More »

ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ, 3100 ದಂಡ

ಹುಬ್ಬಳ್ಳಿ:- ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪೋಲಿಸ ಇಲಾಖೆ ಸಹಯೋಗದೊಂದಿಗೆ ಹಳೇ ಹುಬ್ಬಳ್ಳಿ ಪೋಲಿಸ ಠಾಣಾ ವ್ಯಾಪ್ತಿಯ ತಂಬಾಕು ಉತ್ಪನ್ನಗಳ ಅಂಗಡಿಗಳ ಮೇಲೆ ದಾಳಿ ನಡೆಸಿ ಒಟ್ಟು 20 ಪ್ರಕರಣಗಳನ್ನು ದಾಖಲಿಸಿ 3200 ರೂ ದಂಡ ವಿಧಿಸಿದ್ದಾರೆ.ಸದರಿ ದಾಳಿಯು ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಆದೇಶದ ಮಾಡಿದ್ದು, ಹಳೇಹುಬ್ಬಳ್ಳಿ ಪೋಲಿಸ್ ಠಾಣೆಯ ವ್ಯಾಪ್ತಿಯ ಪ್ರದೇಶಗಳಲ್ಲಿನ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ಮೇಲೆ …

Read More »

ನೇರ ವೇತನ ಪಾವತಿ ಪಟ್ಟಿ ಪ್ರಕಟಿಸಲು ಆಗ್ರಹ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ೭೬೨ ನೇರವೇತನ ಪಾವತಿ ತಾತ್ಕಾಲಿಕ ಪಟ್ಟಿ ಪ್ರಕಟವಾಗಿದ್ದು, ಕೂಡಲೇ ನೇರ ವೇತನ ಪಾವತಿ ಅಂತಿಮ ಪಟ್ಟಿ ಯನ್ನು ಪ್ರಕಟಿಸುವಂತೆ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ಪಂಗಡಗಳ ಪೌರಕಾರ್ಮಿ ಕರ ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.ಆಕ್ಷೇಪಣೆ ಸಲ್ಲಿಸುವ ಅವಧಿ ಮುಗಿದ ೨೪ಗಂಟೆಯೊಳಗೆ ಘನತ್ಯಾಜ್ಯ ವಸ್ತು ನಿರ್ವ ಹಣಾ ಕೇಂದ್ರ ಕಚೇರಿ ಎಸ್‌ಡಬ್ಲೂಎಂ ವಿಭಾಗಕ್ಕೆ ಆಕ್ಷೇಪಣೆ ಸಲ್ಲಿಸಲು ಜೂ.೧೭ರಂದು ಕಾರ್ಯನಿರ್ವಾಹಕ ಎಂಜಿನಿಯರ್ ಪತ್ರ …

Read More »

ಹೈಕೋರ್ಟ್ ಆದೇಶದನ್ವಯ ತೆರವು ಕಾರ್ಯಾಚರಣೆ ಮನೆ ಸಾಮಗ್ರಿಗಳನ್ನು ಹೊರಹಾಕಿ ತೆರವು

ಹುಬ್ಬಳ್ಳಿ: ಬಹಳ ದಿನಗಳಿಂದ ಜಾಗದ ಮಾಲೀಕರು ಮತ್ತು ಲೀಸ್ ಪಡೆದ ಜಾಗದಲ್ಲಿದ್ದ ನಿವಾಸಿಗಳ ನಡುವೆ ನಡೆದಿದ್ದ ತಿಕ್ಕಾಟಕ್ಕೆ ಹೈಕೋರ್ಟ್ ಅಂತ್ಯ ಹಾಡಿದ್ದು, ಈ ಮೂಲಕ ಲೀಸ್​​ನಲ್ಲಿದ್ದ ಜನರಿಗೆ ಮನೆ ಖಾಲಿ ಮಾಡುವಂತೆ ಸೂಚಿಸಿದೆ. ಇದರಿಂದ ಸುಮಾರು ವರ್ಷಗಳ‌ ಪ್ರಕರಣಕ್ಕೆ ತಾತ್ಕಾಲಿಕ ಅಂತ್ಯ ಸಿಕ್ಕಂತಾಗಿದ್ದು, ಇಂದು ಎಲ್ಲಾ ಮನೆ ಖಾಲಿ ಮಾಡಿಸಲಾಗಿದೆ.ನಗರದ ಹೊಸೂರು ಸರ್ಕಲ್ ಬಳಿಯ ಆರ್.ಬಿ.ಕುಲಕರ್ಣಿ ಚಾಳದ ವಿವಾದ ತಾತ್ಕಾಲಿಕವಾಗಿ ಅಂತ್ಯ ಕಂಡಿದೆ. ಈ ಹಿಂದೆ ಕುಲಕರ್ಣಿ ಎಂಬುವರು ಲೀಸ್​​ …

Read More »

ಹಸಿರು ಉಳಿಸಲು ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ

ಹುಬ್ಬಳ್ಳಿ: ಗಿಡ ಮರಗಳನ್ನು ನೆಟ್ಟು ಪೋಷಣೆ ಮಾಡುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಜನರು ಸ್ವಯಂ ಪ್ರೇರಣೆಯಿಂದ ಸಸಿಗಳನ್ನು ನೆಟ್ಟು ಸಂರಕ್ಷಣೆ ಮಾಡಬೇಕೆಂದು ಗ್ರೀನ್ ಕರ್ನಾಟಕ ಅಸೋಸಿಯೇಷನ್ ಮುಖಂಡ ವಿಠ್ಠಲ್​ ರೋಣದ ಕರೆ ಕೊಟ್ಟರು.ಗ್ರೀನ್ ಕರ್ನಾಟಕ ಅಸೋಸಿಯೇಷನ್ ಹಾಗೂ ನೃಪತುಂಗ ವಾಕರ್ಸ್ ಕ್ಲಬ್ ಆಶ್ರಯದಲ್ಲಿಂದು ನೃಪತುಂಗ ಬೆಟ್ಟದಲ್ಲಿ ಹಸಿರು ಉಳಿಸಿ ಬೆಳೆಸಿ ಜನಜಾಗೃತಿ ಹಾಗೂ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಈ ವೇಳೆ ಮಾತನಾಡಿದ ಅವರುವಿಠ್ಠಲ್​ ರೋಣದ, ಗಿಡ ಮರಗಳನ್ನು …

Read More »

ಕಟ್ಟಡ ಕುಸಿದರೂ ಇನ್ನೂ ನಿರ್ಲಕ್ಷ್ಯ ಧೋರಣೆ ತಳೆದಿರುವ ಪಾಲಿಕೆ

ಹುಬ್ಬಳ್ಳಿ:ಧಾರವಾಡ ಕಟ್ಟಡ ದುರಂತದ ಬಳಿಕವೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಕಾಣಿಸುತ್ತಿಲ್ಲ. ಪಾಲಿಕೆಗೆ ಸೇರಿದ ಕಟ್ಟಡವೊಂದು ಜಿಲ್ಲೆಯ ಜನನಿಬಿಡ ಪ್ರದೇಶದಲ್ಲಿದ್ದು, ಎಲ್ಲೆಂದರಲ್ಲಿ ಬಿರುಕು ಬಿಟ್ಟು ಬಲಿಗಾಗಿ ಕಾದು ಕುಳಿತಿದೆ.ಧಾರವಾಡ ಕಟ್ಟಡ ದುರಂತ 19 ಜನರ ಪ್ರಾಣ ಬಲಿ ತಗೆದುಕೊಂಡಿದೆ. ಈ ಘಟನೆ ನಂತರ ದುಸ್ಥಿತಿಯಲ್ಲಿರುವ ಕಟ್ಟಡಗಳನ್ನು ಗುರುತಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಆದರೆ ಇದ್ಯಾವುದಕ್ಕೂ ಅಧಿಕಾರಿಗಳು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನಗರದ ಮ್ಯಾಗೇರ ಓಣಿಯಲ್ಲಿ ಕಳೆದ 50-60 ವರ್ಷಗಳ …

Read More »

ಮೆಟ್ರೋ ಉದ್ಯೋಗಿಗಳ ಕಥೆ ಆಧಾರಿತ ಜರ್ಕ್ ಚಿತ್ರ 26 ರಂದು ಬಿಡುಗಡೆ

ಹುಬ್ಬಳ್ಳಿ: ಬೆಂಗಳೂರು ಮೆಟ್ರೋದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕಥೆಯನ್ನು ಆಧರಿಸಿದ “ಜರ್ಕ್” ಚಿತ್ರ ಇದೇ ತಿಂಗಳು 26ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಮಹಾಂತೇಶ್ ಮದಕರಿ ಹೇಳಿದರು.ನಗರದ ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ಊರಿನಿಂದ ಬೆಂಗಳೂರಿಗೆ ಬರುವ ಹುಡುಗನಿಗೆ ಆಗುವ ಅನುಭವದ ಪರಿಕಲ್ಪನೆಯೇ ಚಿತ್ರದ ಕಥೆಯಾಗಿದೆ. ಆಕ್ಷನ್ ಹಾಗೂ ಸಸ್ಪೆನ್ಸ್ ಕಥೆ ಜೊತೆಗೆ ಉತ್ತಮ ಸಂದೇಶ ಹಾಗೂ ಸಮಾಜದ ಅಂಕು ಡೊಂಕುಗಳನ್ನು ತಿದ್ದುವಂತಹ ಸನ್ನಿವೇಶಗಳನ್ನು ಒಳಗೊಂಡಿದೆ. ಈ …

Read More »

ಬಿಹಾರಿ ಜನಾಂಗಕ್ಕೆ ಮಹಾನಗರ ಪಾಲಿಕೆ ಟೆಂಡರ್ ನೀಡದಂತೆ ಆಗ್ರಹಿಸಿ ಪ್ರತಿಭಟನೆ

ಹುಬ್ಬಳ್ಳಿ: ಬಿಹಾರಿ ಮೂಲದ ಜನರಿಗೆ ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಯಾವುದೇ ಟೆಂಡರ್‍ಗಳನ್ನು ನೀಡಬಾರದು ಎಂದು ಆಗ್ರಹಿಸಿ ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸೇನೆ ವತಿಯಿಂದ ಅಧ್ಯಕ್ಷರಾದ ಗಂಗಾಧರ ಪೆರೂರ ನೇತೃತ್ವದಲ್ಲಿಂದು ನಗರದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ಬಳಿಕ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಶೌಚಾಲಯ ನಿರ್ವಹಣೆ ಟೆಂಡರ್ ಕರೆದಿದ್ದು, 1-2 ಟೆಂಡರ್‍ನಲ್ಲಿ ಸ್ಥಳೀಯ ಹೆಸರನ್ನು ಕಿತ್ತು ಹಾಕಿ ಹಣದ ಆಮಿಷಕ್ಕೆ …

Read More »

ಕುಡಿದ ಮತ್ತಲ್ಲಿ ಡ್ಯಾನ್ಸ್ ಮಾಡಿ ಜೀವ ಕಳೆದುಕೊಂಡ ಯುವಕ

ಹುಬ್ಬಳ್ಳಿ: ಕುಡಿದು ಡ್ಯಾನ್ಸ್ ಮಾಡಲು ಹೋಗಿ ಯುವಕನೊಬ್ಬ ಜೀವ ಕಳೆದುಕೊಂಡು ಘಟನೆಹುಬ್ಬಳ್ಳಿಯ ಕೋರ್ಟ್ ವೃತ್ತದಲ್ಲಿರುವ ತೃಪ್ತಿ ಇಂಟರ್ನ್ಯಾಷನಲ್ ಹೋಟೆಲ್‌ನಲ್ಲಿ ನಡೆದಿದೆ.ಅರುಣಕುಮಾರ ನವಲೆ (30) ಪ್ರಾಣ ಕಳೆದುಕೊಂಡ ಯುವಕ. ಪುಣೆಯ ಮೂಲದ ಯುವಕ, ಗೆಳೆಯರೊಂದಿಗೆ ಕೆಲಸದ ನಿಮಿತ್ಯ ಹುಬ್ಬಳ್ಳಿಗೆ ಬಂದಿದ್ದ. ರೂಮ್‌ನಲ್ಲಿ ಯುವಕರು ಕುಡಿದು, ಡ್ಯಾನ್ಸ್ ಮಾಡುತ್ತಿದ್ದರು.ಡ್ಯಾನ್ಸ್ ಮಾಡುವ ವೇಳೆ ರೂಮ್‌ನ ಕಿಡಕಿಯಿಂದ ಯುವಕ ಆಯಾ ತಪ್ಪಿ ಕೆಳಗೆ ಬಿದ್ದಿದ್ದಾನೆ. ಹೋಟೆಲ್‌ನಲ್ಲಿ ನಾಲ್ಕನೇಯ ಮಹಡಿಯಿಂದ ಕೆಳಗೆ ಬಿದ್ದ ಪರಿಣಾಮ ಯುವಕ ಸ್ಥಳದಲ್ಲೇ …

Read More »