ಹುಬ್ಬಳ್ಳಿ: ಕುಡಿದು ಡ್ಯಾನ್ಸ್ ಮಾಡಲು ಹೋಗಿ ಯುವಕನೊಬ್ಬ ಜೀವ ಕಳೆದುಕೊಂಡು ಘಟನೆಹುಬ್ಬಳ್ಳಿಯ ಕೋರ್ಟ್ ವೃತ್ತದಲ್ಲಿರುವ ತೃಪ್ತಿ ಇಂಟರ್ನ್ಯಾಷನಲ್ ಹೋಟೆಲ್‌ನಲ್ಲಿ ನಡೆದಿದೆ.ಅರುಣಕುಮಾರ ನವಲೆ (30) ಪ್ರಾಣ ಕಳೆದುಕೊಂಡ ಯುವಕ. ಪುಣೆಯ ಮೂಲದ ಯುವಕ, ಗೆಳೆಯರೊಂದಿಗೆ ಕೆಲಸದ ನಿಮಿತ್ಯ ಹುಬ್ಬಳ್ಳಿಗೆ ಬಂದಿದ್ದ. ರೂಮ್‌ನಲ್ಲಿ ಯುವಕರು ಕುಡಿದು, ಡ್ಯಾನ್ಸ್ ಮಾಡುತ್ತಿದ್ದರು.ಡ್ಯಾನ್ಸ್ ಮಾಡುವ ವೇಳೆ ರೂಮ್‌ನ ಕಿಡಕಿಯಿಂದ ಯುವಕ ಆಯಾ ತಪ್ಪಿ ಕೆಳಗೆ ಬಿದ್ದಿದ್ದಾನೆ. ಹೋಟೆಲ್‌ನಲ್ಲಿ ನಾಲ್ಕನೇಯ ಮಹಡಿಯಿಂದ ಕೆಳಗೆ ಬಿದ್ದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಉಪನಗರ ಪೊಲೀಸರ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





