Breaking News

ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ, 3100 ದಂಡ

ಹುಬ್ಬಳ್ಳಿ:- ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪೋಲಿಸ ಇಲಾಖೆ ಸಹಯೋಗದೊಂದಿಗೆ ಹಳೇ ಹುಬ್ಬಳ್ಳಿ ಪೋಲಿಸ ಠಾಣಾ ವ್ಯಾಪ್ತಿಯ ತಂಬಾಕು ಉತ್ಪನ್ನಗಳ ಅಂಗಡಿಗಳ ಮೇಲೆ ದಾಳಿ ನಡೆಸಿ ಒಟ್ಟು 20 ಪ್ರಕರಣಗಳನ್ನು ದಾಖಲಿಸಿ 3200 ರೂ ದಂಡ ವಿಧಿಸಿದ್ದಾರೆ.ಸದರಿ ದಾಳಿಯು ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಆದೇಶದ ಮಾಡಿದ್ದು, ಹಳೇಹುಬ್ಬಳ್ಳಿ ಪೋಲಿಸ್ ಠಾಣೆಯ ವ್ಯಾಪ್ತಿಯ ಪ್ರದೇಶಗಳಲ್ಲಿನ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ಮೇಲೆ ಮತ್ತು ಬಾರ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ಕೋಟ್ಟಾ ಕಾಯ್ದೆ -2003 ರ ಅಡಿಯಲ್ಲಿ ದಾಳಿ ಮಾಡಿ, ಸೆಕ್ಷನ್ – 4 ಪ್ರಕಾರ 12 ಪ್ರಕರಣ ದಾಖಲಿಸಿ 2100 ದಂಡ ಹಾಗೂಮತ್ತು ಸೆಕ್ಷನ್ -6 ಎ ಅಡಿಯಲ್ಲಿ 8 ಪ್ರಕರಣ ದಾಖಲಿಸಿ 1100 ದಂಡ ವಿಧಿಸಲಾಗಿದ್ದು, ಕೊಟ್ಟಾ 2003 ರ ಕಾಯ್ದೆ ಸೆಕ್ಷನ್ 4 ಹಾಗೂ 6 ಎ ಮೂಲಕ ನಾಮಫಲಕಗಳನ್ನು ವಿತರಿಸಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಮತ್ತು ಅಂಗಡಿ ಮಾಲೀಕರಿಗೆ ಅರಿವು ಮೂಡಿಸಿಧರು. ಈ ಸಂದರ್ಭದಲ್ಲಿ ಜಿಲ್ಲಾ ಸಲಹೆಗಾರರಾದ ಎಮ್.ಐ.ಕಲ್ಲಪ್ಪನವರ, ಪಾಲಿಕೆಯ ಜೋನ್ 10 ರ ಅಧಿಕಾರಿಯಾದ ಕಾಂಬ್ಳೇ, ಪಾಲಿಕೆ ಸಿಬ್ಬಂದಿಗಳು ಮತ್ತು ಪೋಲಿಸ ಇಲಾಖೆಯ ಸಿಬ್ಬಂದಿ ವರ್ಗ ದಾಳಿಯಲ್ಲಿ ಇತರರು ಇದ್ದರು.

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *