admin
September 12, 2019
ಜಿಲ್ಲೆ, ಯಾದಗಿರಿ
ಸಿಎಂ ಅವರು ಚಂಡರಕಿ ಗ್ರಾಮದ ಶತಮಾನದ ಶಾಲೆಯಲ್ಲಿ ವಾಸ್ತವ್ಯ ಮಾಡಿರುವ ಸವಿ ನೆನಪಿಗಾಗಿ ಸಸಿ ನೆಟ್ಟು ನೀರು ಹಾಕಿದ್ರು. ಇದ್ದಕ್ಕು ಮುನ್ನ ಸಿಎಂ ಬೆಳಿಗ್ಗೆ ದಿನಪತ್ರಿಕೆಗಳನ್ನು ಓದುವ ಮೂಲಕ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸುದ್ದಿ ಹಾಗೂ ರಾಜಕೀಯ ಸುದ್ದಿಗಳು ಓದಿದ್ದರು.ಸಚಿವ ಸಾರಾ ಮಹೇಶ್,ರಾಜಶೇಖರ ಪಾಟೀಲ, ಬಂಡೆಪ್ಪ ಕಾಶೆಂಪುರ,ಶಾಸಕ ನಾಗನಗೌಡ ಕಂದಕೂರ ಅವರು ಹಾಗೂ ಅಧಿಕಾರಿಗಳ ಜೊತೆ ಜಿಲ್ಲೆಯ ಪ್ರಮುಖ ಸಮಸ್ಯೆ ಪರಿಹಾರದ ಬಗ್ಗೆ ಚರ್ಚೆ ನಡೆಸಿದರು.ಖಾಸಾಮಠಕ್ಕೆ ಭೇಟಿ ನೀಡಿ ದೇವರ …
Read More »
admin
September 12, 2019
ಜಿಲ್ಲೆ, ಧಾರವಾಡ
ಹುಬ್ಬಳ್ಳಿ:ಕುಂದಗೋಳದ ಎಲ್ಲ ವರ್ಗದ ಜನರು ನಮಗೆ ಆಶೀರ್ವಾದ ಮಾಡಿ ಕೆಲಸ ಮಾಡಲು ಶಕ್ತಿ ನೀಡಿದ್ದಾರೆ. ಅವರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳುವುದು ಹಾಗೂ ಅವರ ಋಣವನ್ನು ತೀರಿಸುವುದು ನನ್ನ ಕರ್ತವ್ಯ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.ಕುಂದಗೋಳ ತಾಲೂಕು ವಿವಿಧ ಕಾಮಗಾರಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬೆಳಕ್ಕೆ ಆಗಮಿಸಿದ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿ, ಕುಂದಗೋಳ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಶ್ರಮಿಸುತ್ತೇನೆ …
Read More »
admin
September 12, 2019
ಜಿಲ್ಲೆ, ಧಾರವಾಡ
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತ ಎಂಬ ದೇವೇಗೌಡರ ಹೇಳಿಕೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಡಿಕೆ ಶಿವಕುಮಾರ್ ಅವರು ಉತ್ತರಿಸಿದ್ದು ಹೀಗೆ ನಮ್ಮ ಸರ್ಕಾರ ಸುಭದ್ರ ಸರ್ಕಾರ. ನಮ್ಮ ಪಕ್ಷ ಕುಮಾರಸ್ವಾಮಿ ಅವರನ್ನು ಐದು ವರ್ಷ ಮುಖ್ಯಮಂತ್ರಿಯನ್ನಾಗಿ ಮಾಡಲು ತೀರ್ಮಾನಿಸಿ ಮೈತ್ರಿ ಮಾಡಿಕೊಂಡಿದ್ದೇವೆ. ಬಿಜೆಪಿಯವರು ನಮ್ಮ ಸರ್ಕಾರವನ್ನು ತೆಗೆಯಲು ಪಾಪ ಬಹಳ ಪ್ರಯತ್ನ ಪಡುತ್ತಿದ್ದಾರೆ. ಈಗ ಇತ್ತೀಚೆಗೆ ಯಡಿಯೂರಪ್ಪನವರು ನಾವು ಸರ್ಕಾರ ಬೀಳಿಸಲು ಯಾವುದೇ ಪ್ರಯತ್ನ ಮಾಡುವುದಿಲ್ಲ …
Read More »
admin
September 12, 2019
ಜಿಲ್ಲೆ, ಧಾರವಾಡ
ಹುಬ್ಬಳ್ಳಿ : ‘ನೀರಿಗೆ ನೀರು’ ಎಂಬ ಷರತ್ತು ಮುಂದಿಟ್ಟಿರುವ ಮಹಾರಾಷ್ಟ್ರ ಸಚಿವರ ಜತರ ಚರ್ಚಿಸುವ ಮೊದಲು ವಸ್ತುಸ್ಥಿತಿಯನ್ನು ನಾಳೆ ತಾವೇ ಖುದ್ದು ಅಧ್ಯಯನ ಮಾಡುವುದಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಉಭಯ ರಾಜ್ಯಗಳ ಜಲ ಸಂಪನ್ಮೂಲ ಸಚಿವರು ಚರ್ಚೆ ನಡೆಸಬೇಕು ಎನ್ನುವುದು ಮಹಾರಾಷ್ಟ್ರ ಸಿಎಂ ಸಲಹೆ. ಜತೆಗೆ ಕರ್ನಾಟಕ ಈಗಾಗಲೇ ಕುಡಿಯುವ ಉದ್ದೇಶಕ್ಕೆ ಬಿಡುಗಡೆ ಮಾಡಿರುವ ನೀರು ತಲುಪಿಲ್ಲ ಎನ್ನುವುದು ಅದರ ದೂರು. ಹೀಗಾಗಿ ಖುದ್ದು ಸ್ಥಳ ಪರಿಶೀಲನೆ …
Read More »
admin
September 12, 2019
ಚಾಮರಾಜನಗರ, ಜಿಲ್ಲೆ
ಚಾಮರಾಜನಗರದ ನಗರಸಭೆ ನಿರ್ಲಕ್ಷ್ಯವನ್ನು ಖಂಡಿಸಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಮುಂದೆ ತಮಟೆ ಚಳುವಳಿ ನಡೆಸಿದ ಪ್ರತಿಭಟನಾಕಾರರು ನಗರಸಭೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಶ್ರೀನಿವಾಸಗೌಡ, ಪಟ್ಟಣದಲ್ಲಿ ಹಲವಾರು ದಿನಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಜನಸಾಮಾನ್ಯರು ಹಾಗೂ ವಾಹನ ಸವಾರರು ಓಡಾಟ ನಡೆಸಲು ತೊಂದರೆಯಾಗುತ್ತಿದೆ. ಅಲ್ಲದೇ ಒಳಚರಂಡಿ ಕಾಮಗಾರಿ ಸರಿಯಾದ ರೀತಿಯಲ್ಲಿ ಆಗದೇ ಅಲ್ಲಲ್ಲಿ ಗುಂಡಿಗಳು ಬಾಯಿ ತೆರೆದು ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗಿದೆ …
Read More »
admin
September 12, 2019
ಜಿಲ್ಲೆ, ಬೆಂಗಳೂರು
ತನ್ನ ಲಾಠಿಯನ್ನೇ ಕೊಳಲನ್ನಾಗಿ ಮಾಡಿ ಸುಂದರವಾಗಿ ನುಡಿಸುವ ಪೋಲೀಸ್ ಹೆಡ್ ಕಾನ್ಸ್ ಟೇಬಲ್ಚಂದ್ರಕಾಂತ್ ಹುಟ್ಗಿ ಅವರನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ADGP ಭಾಸ್ಕರ್ ರಾವ್ ಕರೆಸಿಕೊಂಡು ಅವರಕಚೇರಿಯಲ್ಲಿ ಚಂದ್ರಕಾಂತ್ ನುಡಿಸಿದ ಗಾಯನವನ್ನು ಕೇಳಿ ಖುಷಿಪಟ್ಟರು. ಅಷ್ಟಕ್ಕೂ ಈ ರೀತಿ ಗಾಯನ ನುಡಿಸಲು ಆರಂಭಿಸಿದ್ದದು, ಅದು ಚುನಾವಣಾ ಕರ್ತವ್ಯಕ್ಕೆಂದು ಚಿಕ್ಕಮಗಳೂರಿನ ಪ್ರಸಿದ್ಧ ತಾಣಗಳಲ್ಲಿ ಒಂದಾದ ದತ್ತಪೀಠಕ್ಕೆ ಭದ್ರತೆಗೆ ತೆರಳಬೇಕಿತ್ತು. ಕರ್ತವ್ಯದಲ್ಲಿದ್ದಾಗ ನಾಲ್ಕೈದು ಗಂಟೆ ಒಂದೇ ಕಡೆ ಕುಳಿತುಕೊಳ್ಳಬೇಕಿತ್ತು. ಆಗ ಸುಮ್ಮನೆ ಕುಳಿತುಕೊಳ್ಳಲು ಚಂದ್ರಕಾಂತ …
Read More »
admin
September 12, 2019
ಜಿಲ್ಲೆ, ಬೆಳಗಾವಿ
ಕಳೆದ ಮೂರು ತಿಂಗಳಿಂದ ಬತ್ತಿ ಹೊದ ಕೃಷ್ಣಾ ನದಿ… ಇನ್ನೊಂದು ಕಡೆ ಜನಿ ನೀರಿಗೂ ತತ್ವಾರ… ನೀರಿಗಾಗಿ ಅಲೆಯುತ್ತಿರುವ ಜನ ಮತ್ತು ಜಾನುವಾರು…ಅಲ್ಲಲ್ಲಿ ನಡೆಯುತ್ತಿರುವ ಪ್ರತಿಭಟನೆ ಗಳು…ಇವುಗಳ ನಡುವೆಕೃಷ್ಣಾ ನದಿಗೆ ಕೂಡಲೇ ನೀರು ಹರಿಸಲು ಆಗ್ರಹಿಸಿ ಸ್ವಯಮ್ ಘೋಷಿತ ಸ್ವಾಮೀಜಿ ಒಬ್ಬರು ಮುಳ್ಳಿನ ಮರ ಏರಿದ್ದಾರೆ ಅರೆ ಅದೆಲ್ಲಿ ಅಂತಿರಾ ಈ ಸ್ಟೋರಿ ನೋಡಿ…..ಹೀಗೆ ತಂಡೋಪ ತಂಡವಾಗಿ ನಿಬ್ಬೆರಗಾಗಿ ನೋಡುತ್ತ ನೀಮತಿರುವ ಜನ… ಇನ್ನೊಂದು ಕಡೆ ಮುಳ್ಳಿನ ಮರ ಏರಿ …
Read More »
admin
September 12, 2019
ಜಿಲ್ಲೆ, ಬೆಳಗಾವಿ
ಧಾರಾಕಾರ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋದ ಮಹಿಳೆ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿತ್ತೂರ ಗ್ರಾಮದಲ್ಲಿ ನಡೆದಿದೆ. ಕಿತ್ತೂರ ಗ್ರಾಮದ ರೇಣವ್ವ ಚಿಂತಾಲ 50 ಮೃತ ಮಹಿಳೆ. ಸವದತ್ತಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಇದರಿಂದ ಕಿತ್ತೂರ ಗ್ರಾಮದ ಹಳ್ಳದಲ್ಲಿ ರಭಸದಿಂದ ನೀರು ಹರಿದಿದೆ.ಕಟ್ಟಿಗೆ ಆರಿಸಲು ಹೋದಾಗ ರೇಣವ್ವ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಸ್ಥಳಕ್ಕೆ ಸ್ಥಳಿಯ ಪೋಲಿಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದರು.
Read More »
admin
September 12, 2019
ಜಿಲ್ಲೆ, ರಾಯಚೂರು
ರಾಯಚೂರು:. ಸಾಲಬಾಧೆ ತಾಳಲಾರದೆ ರೈತ ಸಾವಿಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನರಕಲದಿನ್ನಿ ಗ್ರಾಮದಲ್ಲಿ ನಡೆದಿದೆ.ಬಸವರಾಜ ಜಾವೂರ (35) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ನಾಗರಗಾಳ ಪಿಕೆಜಿಬಿ ಬ್ಯಾಂಕ್ನಲ್ಲಿ ಸುಮಾರು 3 ಲಕ್ಷ ರೂ. ಸಾಲ ಮಾಡಿದ್ದ ಎಂದು ತಿಳಿದುಬಂದಿದೆ. ರೈತ ಸತತ ಬರಗಾಲದಿಂದ ತತ್ತರಿಸಿ ಹೋಗಿದ್ದು, ಸಾಲ ಮರುಪಾವತಿ ಮಾಡಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.ಈ ಸಂಬಂಧ ಲಿಂಗಸೂಗೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ …
Read More »
admin
September 12, 2019
ಕೋಲಾರ, ಜಿಲ್ಲೆ
KOLAR:-ಕೋಲಾರದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆ ನಡೆಯುತ್ತಿದ್ದು, ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಯೋಗ ದಿನ ಆಯೋಜಿಸಿದೆ. ಜಿಲ್ಲಾಡಳಿತದೊಂದಿಗೆ ಹಲವು ಸಂಘ ಸಂಸ್ಥೆಗಳು ಸಹಯೋಗದೊಂದಿಗೆ ದೀಪ ಬೆಳಗಿಸುವ ಮೂಲಕ ಜಿಲ್ಲಾದಿಕಾರಿ ಮಂಜುನಾಥ್ ಯೋಗ ದಿನಕ್ಕೆ ಚಾಲನೆ ನೀಡಿದರು. ಯೋಗ ದಿನಾಚರಣೆಯಲ್ಲಿ ನೂರಾರು ವಿದ್ಯಾರ್ಥಿಗಳು, ಯೋಗಪಟುಗಳು ಭಾಗಿಯಾಗಿದ್ದರು. ಸಾಮೂಹಿಕ ಯೋಗ ಪ್ರದರ್ಶನವನ್ನು ಯೋಗಪಟುಗಳು ನಡೆಸಿದರು. ಡಿಸಿ ಮಂಜುನಾಥ್, ಸಿಇಓ ಜಗದೀಶ್, ಎಸ್ಪಿ ಕಾರ್ತಿಕ್ ರೆಡ್ಡಿ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.
Read More »