Breaking News

ಜಿಲ್ಲೆ

ಧಾರವಾಡ ತಡಕೋಡ ಅವ್ಯವಸ್ಥೆ ಕಾಮಗಾರಿ ಗ್ರಾಮಸ್ಥರು ಆಕ್ರೋಶ

ಧಾರವಾಡ :ತಾಲೂಕಿನ ತಡಕೋಡ ಗ್ರಾಮದಲ್ಲಿ ಕೈಗೊಂಡಿರುವ ಜೆ ಜೆ ಎಂ ಕುಡಿಯುವ ನೀರಿನ ಯೋಜನೆಯುಕಾಮಗಾರಿಯು ಅವ್ಯವಸ್ಥೆಯಿಂದ ಕೂಡಿದ್ದು ಏಲ್ಲಿ ಬೇಕಾದಲ್ಲಿ ರಸ್ತೆಗಳನ್ನು ಅಗೆದಿದ್ದರಿಂದ ಸಾರ್ವಜನಿಕರಿಗೆ ಅತೀವ ತೊಂದರೆ ಆಗುವದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಸದಸ್ಯರಾದ ಭೀಮಪ್ಪ ಕಾಸಾಯಿ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಪಂಚಾಯತ್ ಸಿ.ಇ.ಓ ಗಳಾದ ಶ್ರೀಮತಿ ಕೆ ಟಿ ಸ್ವರೂಪ್ ಕೌರ್ ಅವರಿಗೆ ಮನವಿ ಅಪಿ೯ಸಿದರು. ಗ್ರಾಮದ ಸರಕಾರಿ ಶಾಲೆಗಳ ದುಸ್ಥಿತಿ ಮತ್ತು ಪ್ರೌಡಶಾಲೆಗೆ. …

Read More »

ಸಿಬಿಟಿ ಬಳಿ ಅಪರಿಚಿತ ಹೆಣ ಪತ್ತೆ, ಯಾರು ಇವರು? ಗುರುತಿಗಾಗಿ ಪೋಲಿಸರ ಹುಡುಕಾಟ

ಧಾರವಾಡ: ನಗರದ ಸಿಬಿಟಿ ಬಳಿಯ ಅಂಜುಮನ್ ಕಾಂಪ್ಲೆಕ್ಸ್ ಎದುರಿನ ಆಕಳವಾಡಿ ಅಂಗಡಿ ಮುಂದಿನ ಫುಟ್‌ಪಾತ್‌ನಲ್ಲಿ ಅಪರಿಚಿತ ವ್ಯಕ್ತಿಯೋರ್ವ ಸಾವಿಗೀಡಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಧಾರವಾಡ ಶಹರ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ಅಪರಿಚಿತ ವ್ಯಕ್ತಿಯ ಮಾಹಿತಿ ಪತ್ತೆ ಹಚ್ಚಲು ಪ್ರಕಟಣೆಯನ್ನ ಹೊರಡಿಸಿದ್ದಾರೆ. ಸಾರ್ವಜನಿಕರು ಸಾವಿಗೀಡಾಗಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದರೇ ಪೊಲೀಸರಿಗೆ ತಿಳಿಸಲು ಕೋರಲಾಗಿದೆ.

Read More »

ನವಲಗುಂದದಲ್ಲಿ ನೆರೆ ವೀಕ್ಷಿಸಿ ಜನರೊಂದಿಗೆ ಚರ್ಚೆಸಿದ ಸಚಿವ ಲಾಡ್

ಧಾರವಾಡ ಮುಂಗಾರು ಮಳೆ ಆರಂಭವಾದಗಲು ನವಲಗುಂದ ತಾಲೂಕಿನ ಜನತೆ ಪ್ರವಾಹದ ಭೀತಿ ಎದುರಿಸುತ್ತಾರೆ ಏಕೆಂದರೆ ಇಲ್ಲಿನ ಬೆಣ್ಣೆ ಹಳ್ಳ ಹಾಗೂ ತುಪ್ಪರಿ ಹಳ್ಳದ ಆರ್ಭಟ ಅಷ್ಟು ಜೋರಾಗಿರುತ್ತದೆ ಕಳೆದ ಹತ್ತು ದಿನಗಳಿಂದ ಧಾರವಾಡ ಜಿಲ್ಲೆಯಲ್ಲಿ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದ್ದು ನವಲಗುಂದ ಭಾಗದ ಜನತೆ ಮತ್ತೆ ಪ್ರವಾಹದ ಭೀತಿ ಎದುರಿಸುವಂತಾಗಿದೆ. ಇಂದು ನವಲಗುಂದ ತಾಲೂಕಿನ ಯಮನೂರು ಗ್ರಾಮದ ಬಳಿ ಇರುವ ಬೆಣ್ಣೆ ಹಳ್ಳದ ನೀರಿನ ತೀವ್ರತೆಯನ್ನು ಧಾರವಾಡ ಜಿಲ್ಲಾ ಉಸ್ತುವಾರಿ …

Read More »

ಸಿಕ್ಕ ಮೊಬೈಲ್ ಪೊಲೀಸ್ ಠಾಣೆಗೆ ತಂದುಕೊಟ್ಟು ಆಟೋ ಚಾಲಕ

ಧಾರವಾಡ: ಇತ್ತೀಚೆಗೆ ಮೊಬೈಲ್ ಸಿಕ್ಕರೆ ಸಾಕು ಅದರಲ್ಲಿನ ಸಿಮ್ ತೆಗೆದೊಗೆದು ತಾವೇ ಬಳಸಿಕೊಳ್ಳುವವರ ಮಧ್ಯೆ ಇಲ್ಲೊಬ್ಬ ಆಟೋ ಚಾಲಕ ತನಗೆ ಸಿಕ್ಕ ಸ್ಮಾರ್ಟ್‌ ಫೋನ್‌ನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ಧಾರವಾಡದ ಆಟೋ ಚಾಲಕ ಪ್ರಕಾಶ ಎಂಬುವವರಿಗೆ ಆಟೋ ನಿಲ್ದಾಣದ ಬಳಿ ಸ್ಮಾರ್ಟ್ ಫೋನ್ ಸಿಕ್ಕಿತ್ತು. ಕೂಡಲೇ ಅದನ್ನು ಅವರು ಧಾರವಾಡದ ಉಪನಗರ ಠಾಣೆಗೆ ತಂದು ಪೊಲೀಸರಿಗೆ ಒಪ್ಪಿಸಿ, ಫೋನ್ ಮಾಲೀಕರಿಗೆ ಅದನ್ನು ಮರಳಿಸುವಂತೆ ಮನವಿ …

Read More »

ಬೆಣ್ಣೆಹಳ್ಳ ಸೇತುವೆ ಪ್ರದೇಶಕ್ಕೆ ಲಾಡ್ ಭೇಟಿ

ಧಾರವಾಡ ಮಾನ್ಯ ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಸಂತೋಷ್ ಲಾಡ್ ಅವರು, ಜಿಲ್ಲೆಯ ಹೆಮ್ನೂರ್‌ ಗ್ರಾಮದ ಬೆಣ್ಣೆಹಳ್ಳ ಸೇತುವೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ಎನ್‌ ಎಚ್‌ ಕೋನರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ನದಿಗಳು ಭಾರಿ ಪ್ರಮಾಣದಲ್ಲಿ ಹರಿಯುತ್ತಿವೆ. ಸೇತುವೆಗಳ ಮೇಲೆ ಸಂಚರಿಸುವಾಗ ಸಾರ್ವಜನಿಕರು ಎಚ್ಚರ ವಹಿಸುವುದು ಅಗತ್ಯ ಎಂದು ಲಾಡ್ ಅವರು ತಿಳಿಸಿದರು.

Read More »

ಶಿವಮೊಗ್ಗದ ಅಥ್ಲೆಟಿಕ್‌ ರೈಲಿಗೆ ಸಿಲುಕಿ ಆತ್ಮಹತ್ಯೆ…

ಶಿವಮೊಗ್ಗ: ಶಿವಮೊಗ್ಗದ ವಿನೋಬ ನಗರದ ಬಳಿ ಬೆಳಿಗ್ಗೆ ಶಿವಮೊಗ್ಗ-ತಾಳಗುಪ್ಪ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ವಿಶ್ವನಾಥ್‌ 2012ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.ಅವರ ಪುತ್ರ ಬೆಂಗಳೂರಿನಲ್ಲಿ ನೆಲೆಸಿದ್ದು,ಮಗನ ಮನೆಗೆ ತೆರಳಿದ್ದ ಅವರು ಎರಡು ದಿನಗಳ ಹಿಂದಷ್ಟೇ ಶಿವಮೊಗ್ಗಕ್ಕೆ ವಾಪಾಸ್‌ ಬಂದಿದ್ದರು ಎಂದು ತಿಳಿದುಬಂದಿದೆ. ಸೋಮವಾರ ತಮ್ಮ ಸಹೋದರಿಗೆ ಕರೆ ಮಾಡಿದ್ದ ಅವರು ಯಾವುದೊ ಸರಿ ಇಲ್ಲ. ನಿಮ್ಮ ಬಳಿ ಬಂದು ಮಾತನಾಡಬೇಕು ಎಂದು ಹೆಳಿದ್ದರು ಎನ್ನಲಾಗಿದೆ. ಈ ಬಗ್ಗೆ ರೈಲ್ವೆ ಪೊಲಿಸ್‌ ಠಾಣೆಯಲ್ಲಿ ದೂರು …

Read More »

ನಿರಂತರ ಮಳೆಗೆ ಕುಸಿದ ಮನೆಯ ಮೇಲ್ಬಾವಣಿ

ನವಲಗುಂದ: ನವಲಗುಂದ ತಾಲೂಕಿನಲ್ಲಿ ಕಳೆದ ಒಂದು ವಾರಗಳಿಂದ ಸತತ ಸುರಿಯುತ್ತಿರುವ ಮಳೆ ಜನ ಜೀವನವನ್ನೇ ಹೈರಾನ್ ಮಾಡಿದೆ. ಮಳೆ ಆಗಾಗ ಜೋರು ಮಳೆ ಹಾಗೂ ನಿರಂತರ ಜಿಟಿಜಿಟಿಯಾಗಿ ಮಳೆ ಸುರಿಸುತ್ತಿರುವುದು ಹಳೆಯ ಮಣ್ಣಿನ ಗೋಡೆಯ ಮನೆಗಳು ಸತತ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಬೆಳವಟಗಿ ಗ್ರಾಮದ ಮಂಜುಳಾ ಜಾವೂರ ಎಂಬುವರ ಮನೆ ಮೇಲ್ಟಾವಣಿ ಕುಸಿದು ಬಿದ್ದಿದೆ ಇದರಿಂದ ಆ ಬಡ ಕುಟುಂಬ ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಇನ್ನು ತಾಲೂಕಿನಲ್ಲಿ …

Read More »

ಕೆಪಿಎಸ್ ಸಿಗೆ ಸುಧಾರಣೆ ಅಗತ್ಯವಾಗಿದೆ : ಶೆಟ್ಟರ್

ಹುಬ್ಬಳ್ಳಿ: ಹಗರಣಗಳು ಇಲ್ಲದೇ ಯಾವುದೇ ನೇಮಕಾತಿ ನಡೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಗಬ್ಬೆದ್ದು ಹೋಗಿರುವ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್​ಸಿ)ದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಹೇಳಿದರು. ಸವಾಯಿ ಗಂಧರ್ವ ಸಭಾಭವನದಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಎಲ್ಲ ಒಳಪಂಗಡಗಳ ಸಮಾಜದ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ …

Read More »

ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದ ಶಿರಸ್ತೇದಾರ್….

ಶಿವಮೊಗ್ಗ: ತಾಲೂಕು ಕಚೇರಿ ಕಟ್ಟಡದಲ್ಲಿರುವ ಶಿರಸ್ತೇದಾರ್ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಒಂದೂವರೆ ಲಕ್ಷ ರೂ. ಹಣ ಸ್ವೀಕರಿಸುವಾಗ ಶಿರಸ್ತೇದಾರ್ ಅವರು ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದಾರೆ. ಹಕ್ಕು ದಾಖಲೆ ಶಾಖೆ ಶಿರಸ್ತೇದಾರ್ ಜಿ. ಅರುಣ್ ಕುಮಾರ್ ಅವರ ಮೇಲೆ ಲೋಕಾಯುಕ್ತ ದಾಳಿಯಾಗಿದ್ದು, ಲೋಕಾಯುಕ್ತ ಪೊಲೀಸರು ಪರಿಶೀಲನೆ‌ ನಡೆಸುತ್ತಿದ್ದಾರೆ. ಸಂದರ್ಭದಲ್ಲಿ ದಾಳಿ ನಡೆಸಿದರ ಬಗ್ಗೆ ಮಾತನಾಡಿದ ಲೋಕಾಯುಕ್ತ ಎಸ್ಪಿ ವಾಸುದೇವ್ ಅವರು, ಹನುಮಂತ ಬನ್ನಿಕೋಡ್ ಎಂಬುವರಿಗೆ …

Read More »

ಹುಮನಾಬಾದ್ : ಮಳೆಗೆ ಐದು ಮನೆ ಗೋಡೆ ಕುಸಿತ

ಬೀದರ್,ಹುಮನಾಬಾದ್: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ಸಂಜೆ ಸುರಿದ ಮಳೆಗೆ ‌ 5 ಮನೆಗಳ ಗೋಡೆ ಕುಸಿದಿವೆ ಎಂದು ತಹಶೀಲ್ದಾರ್ ಅಂಜುಂ ಲಸ್ಕರ್ ತಿಳಿಸಿದರು. ತಾಲ್ಲೂಕಿನ ಸೀತಾಳಗೇರಾ ಗ್ರಾಮ ಸೇರಿದಂತೆ ಒಟ್ಟು ಐದು ಮನೆಗಳ ಗೋಡೆ ಕುಸಿದಿವೆ. ಶನಿವಾರ ತಾಲ್ಲೂಕಿನಾದ್ಯಂತ ಮೋಡ ಕವಿದ ವಾತಾವರಣವಿತ್ತು. ಹುಮನಾಬಾದ್ ಪಟ್ಟಣದಲ್ಲಿ 14 ಮಿ.ಮೀ, ದುಬಲಗುಂಡಿಯಲ್ಲಿ 6 ಮಿ.ಮೀ. ಹಳ್ಳಿಖೇಡ್ ಬಿ. ಪಟ್ಟಣದಲ್ಲಿ 14.2 ಮಿ.ಮೀ ಮಳೆ ದಾಖಲಾಗಿದೆ.

Read More »