Breaking News

ಜಿಲ್ಲೆ

ಬಸ್ಸುಗಳಿಗಾಗಿ ಸಾರ್ವಜನಿಕ ಹೋರಾಟ

ಹುಬ್ಬಳ್ಳಿಯ ಬಸ್ಸ ನಿಲ್ದಾಣದಲ್ಲಿ ಬ್ಯಾಹಟ್ಟಿ ಗ್ರಾಮದ ಬಸ್ ಬಾರದ ವಿಷಯವಾಗಿ ಪ್ರಯಾಣಿಕರು ನಿಯಂತ್ರಕರೊಂದಿಗೆ ಜಗಳವಾಡುತ್ತಿರುವ ಬಗ್ಗೆ ಸಹಾಯವಾಣಿಗೆ ಕರೆ ಬಂದಿದ್ದು ತಕ್ಷಣ ಹೊಯ್ಸಳ 09 ದವರು ಸ್ಥಳಕ್ಕೆ ತೆರಳಿ ಪ್ರಯಾಣಿಕರಿಗೆ ಸೂಕ್ತ ತಿಳಿಹೇಳಿ ಬೇರೆ ಬಸ್ ವ್ಯವಸ್ಥೆ ಮಾಡಿಸಿ ಸಮಸ್ಯೆ ಬಗೆಹರಿಸಿರುತ್ತಾರೆ. ಹುಬ್ಬಳ್ಳಿಯ ಹಳೇ ಬಸ್ಸ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ,

Read More »

ತೋಳದಾಳಿಗೆ ಬಲಿಯಾದ ಕುರಿಗಳು , ನರಗುಂದ ತಾಲ್ಲೂಕಿನ ಸುರಕೋಡ ಗ್ರಾಮದಲ್ಲಿ ಘಟನೆ ,

ಗದಗ ತೋಳದ ದಾಳಿಗೆ 15 ಕುರಿ ಮರಿಗಳು ಮೃತಪಟ್ಟಿದ್ದಾವೆ, ಎಂದು ವರದಿಯಾಗಿದೆ ಹೌದು ಗದಗ ಜಿಲ್ಲೆ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ಘಟನೆ ನಡೆದಿದ್ದು ಕುರಿ ದಡ್ಡಿಯಲ್ಲಿದ್ದ ಮರಿಗಳ ಮೇಲೆ ತೋಳ ದಾಳಿ ಮಾಡಿದೆ,ಸುರಕೋಡ ಗ್ರಾಮದ ಕಲ್ಲಪ್ಪ ಮಜ್ಜಗಿ ಎಂಬ ಕುರಿಗಾಯಿಗೆ ಸೇರಿದ ಕುರಿಮರಿಗಳು ಕುರಿಮರಿಗಳ ಸಾವು ಕಂಡು ಕಂಗಾಲಾದ ಕುರಿಗಾಯಿಗಳು,ನರಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ ಸಂಭವಿಸಿದೆ

Read More »

ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸರಕಾರದಿಂದ ಅನ್ಯಾಯ ,ಡಿ.ಕೆ.ಶಿವಕುಮಾರ್ ಆಕ್ರೋಶ

ಮೈಸೂರು: ‘ನಾವು ಕೇಂದ್ರ ಸರ್ಕಾರದಿಂದ ಅಕ್ಕಿಯನ್ನು ಉಚಿತವಾಗೇನೂ ಕೇಳಿರಲಿಲ್ಲ. ಆದರೆ, ಕೊಡುವುದಿಲ್ಲ ಎಂದು ಹೇಳಿದೆ. ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟವನ್ನೇ ರೂಪಿಸುತ್ತೇವೆ. ಈ ಬಗ್ಗೆ ಶುಕ್ರವಾರ ಬೆಂಗಳೂರಿನಲ್ಲಿ ಮಾಹಿತಿ ನೀಡುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗುರುವಾರ ಬಂದಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.‘ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿಯನ್ನು ಜುಲೈ 1ರಿಂದ ಕೊಡಬೇಕೆಂದು ತೀರ್ಮಾನಿಸಿದ್ದೇವೆ. ನಮ್ಮ ಬಳಿ ಅಕ್ಕಿ ಇಲ್ಲ ಎಂದು ಕೇಂದ್ರ …

Read More »

ಲಿಂಗಾಯತರನ್ನು OBC ಮೀಸಲಾತಿಗೆ ಸೇರಿಸಲು ಬೃಹತ್ ಮಠಾಧೀಶರ ಸಭೆ

ಹುಬ್ಬಳ್ಳಿ: ವೀರಶೈವ ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು, ಇಡೀ ಕರ್ನಾಟಕದ ಮಠಾಧೀಶರು ಒಗ್ಗೂಡಿ ಬೃಹತ್ ಸಭೆ ಮಾಡುತ್ತಾ, ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ.. ಹೌದು… ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಬೃಹತ್ ಸಭೆ ವೇದಿಕೆಯನ್ನು ಹಮ್ಮಿಕೊಂಡಿದ್ದ, ವೀರಶೈವ ಲಿಂಗಾಯತ ಮಠಾಧೀಶರು, ಎಲ್ಲ ವೀರಶೈವ ಲಿಂಗಾಯತರನ್ನು ಓಬಿಸಿ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು. ಈ ಬೃಹತ್ ಮಠಾಧೀಶರ ಸಭೆಗೆ ದಿವ್ಯ ಸಾನಿಧ್ಯವನ್ನು ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಕಾಶಿ …

Read More »

ಜನ ಸಂಪರ್ಕ ಕಾರ್ಯಾಲಯ ಉದ್ಘಾಟನೆ

ಧಾರವಾಡ ನಾಗರಿಕರ ಅನುಕೂಲಕ್ಕಾಗಿ, ಧಾರವಾಡ 71 ಕ್ಷೇತ್ರದ ಮಾನ್ಯ ಶಾಸಕರಾದ ಸನ್ಮಾನ್ಯ ವಿನಯ ಕುಲಕರ್ಣಿ,ಜನ ಸಂತತ್ವಪರ್ಕ ಕಾರ್ಯಾಲಯವನ್ನು, ತಾಲೂಕ ಪಂಚಾಯತ ಆವರಣದಲ್ಲಿ ಮ.ನಿ.ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶ್ರೀ ಮುರುಘಾಮಠ ಇವರ ಅಮೃತ ಹಸ್ತದಿಂದ ಉಧ್ಘಾಟಿಸಿದರು.ಈ ಸಂದರ್ಭದಲ್ಲಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು ಪೂಜೆ ಸಲ್ಲಿಸಿ ಮಾತನಾಡಿ, ಈ ಕಾರ್ಯಲಯವನ್ನು ಸಾರ್ವಜನಿಕರ ಕುಂದುಕೊರೆತೆ ಆಲಿಸುವ ಹಿನ್ನೆಲೆಯಲ್ಲಿ ತೆರೆಯಲಾಗಿದ್ದು,ಇದರ ಸದುಪಯೋಗ ಪಡೆದುಕೊಳ್ಳಬೇಕು, ಪಾರದರ್ಶಕ ಆಡಳಿತಕ್ಕಾಗಿ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.ಈ ಸಂಧರ್ಭದಲ್ಲಿ ಬ್ಲಾಕ್ …

Read More »

ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನವನಕ್ಕೆ ಮಹಾಪೌರ ಈರೇಶ ಅಂಚಟಗೇರಿ ಭೇಟಿ.

ಧಾರವಾಡ : ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನವನಕ್ಕೆ ಮಹಾಪೌರ ಈರೇಶ ಅಂಚಟಗೇರಿ ಬುಧವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿ, ಉದ್ಯಾನವನದಲ್ಲಿನ ಅವ್ಯವಸ್ಥೆ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಭೇಟಿ ವೇಳೆ ವಾಯುವಿಹಾರಕ್ಕೆ ಬಂದ ಸಾರ್ವಜನಿಕರ ಅಹವಾಲು ಆಲಿಸಿದ ಅವರು. ಉದ್ಯಾನವನದಲ್ಲಿನ ಪಾದಚಾರಿ ಮಾರ್ಗ, ಮರ ಮತ್ತು ಬಳ್ಳಿಗಳ ಪೋಷಣೆ ಕೊರತೆ, ಹಾಳಾದ ವಿದ್ಯುದ್ದೀಪಗಳ ಕಂಬ, ಅಲ್ಲಲ್ಲಿ ಕಸದ ಸಂಗ್ರಹ, ನೀರು ಕಾಣದ ಶೌಚಾಲಯ, ಬೀದಿ ನಾಯಿಗಳ ತಿರುಗಾಟ ಇನ್ನಿತರ …

Read More »

ಎಸ್.ಡಿ.ಎಮ್.ಮಹಾವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ

ಧಾರವಾಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ’ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ ಧಾರವಾಡವು ಪ್ರತಿಷ್ಠಿತ. ಇನ್ಸಿಟ್ಯೂಷನ್ ಆಫ್ ಎಲೆಕ್ಟ್ರಿಕ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ( ಐ. ಇ.ಇ.ಇ.) ಇಂಟನ್ಯಾ೯ಷನಲ್ ಕಾನ್ಪರೆನ್ಸ್ ಆನ್ ಅಪ್ಲೈಡ್ ಇಂಟೆಲಿಜೆನ್ಸ್ ಮತ್ತು ಸಸ್ಪೈನಬಲ್ ಕಂಪ್ಯೂಟರ್ ( ICATS , 2003 ) .. ಅನ್ವಯಿಕ ಬುದ್ಧಿವಂತಿಕೆ ಮತ್ತು ಸುಸ್ತಿರ ಹಪ್ಯೂಟಿಂಗ್ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ ( ICATS -2023) ವನ್ನು ಇನ್ನಿಟ್ಯೂಷನ್ ಆಫ್ ಎಲೆಕ್ನಿಕಲ್ ಅಂಡ ಎಲೆಕ್ಟ್ರಾನಿಕ್ಸ್ …

Read More »

ಗೋಕುಲ್ ರಸ್ತೆಯಲ್ಲಿರು ಇಂಡಸ್ಟ್ರಿಯಲ್ ನಗರದಲ್ಲಿ ಬೃಹತ್ ಪ್ರತಿಭಟನೆ

ಹುಬ್ಬಳ್ಳಿ: ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಾಗಿದ್ದು, ಇದರಿಂದ ಕೈಗಾರಿಕೋದ್ಯಮಕ್ಕೆ ದೊಡ್ಡ ಮಟ್ಟದ ನಷ್ಟವಾಗಿದೆ. ಸಧ್ಯ ವಿದ್ಯುತ್ ದರ ಹೆಚ್ಚಳವನ್ನು ಖಂಡಿಸಿ, ಉತ್ತರ ಕರ್ನಾಟಕದ ಸಣ್ಣ ಕೈಗಾರಿಕೆಗಳ ಸಂಘದಿಂದ ನಗರದ ಗೋಕುಲ್ ರಸ್ತೆಯಲ್ಲಿರು ಇಂಡಸ್ಟ್ರಿಯಲ್ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್ ದರದಿಂದ, ಸಣ್ಣ ಕೈಗಾರಿಕೆಗಳು ಬೆಳೆಯಲು ಸಾಧ್ಯವೇ ಆಗದೆ ಇರೊದರಿಂದ, ಜೊತೆಗೆ ಕೇವಲ ಬೆಲೆ ಏರಿಕೆ ದೊಡ್ಡ ಕಾರ್ಯ ಎನ್ನುವಂತಾಗಿದ್ದು, ಆದ್ದರಿಂದ ಸಣ್ಣ ಕೈಗಾರಿಕೆಗಳು ನೆಲ ಕಚ್ಚುತ್ತಿವೆ. …

Read More »

ಆಟೋ ರಿಕ್ಷಾದಲ್ಲಿ ಬಿಟ್ಟು ಹೋದ ಹಣವನ್ನು ಪೋಲಿಸ್ ಠಾಣೆಗೆ ನೀಡಿದ ಪ್ರಮಾಣಿಕ ಆಟೋ ಚಾಲಕ

ಧಾರವಾಡದ ಶಿವಾನಂದ ನಗರದ ಆಟೋ ಚಾಲಕರಾದ ಶ್ರೀ. ಅಲಿ J ಅತ್ತಾರ ಎಂಬುವವರು ತಮ್ಮ ಆಟೋದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಬ್ಯಾಗ್, ಬ್ಯಾಗಿನಲ್ಲಿದ್ದ 20 ಗ್ರಾಂ ಚಿನ್ನಾಭರಣ ಮತ್ತು 1020/- ರೂ ಹಣವನ್ನು ಧಾರವಾಡ ಶಹರ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದು, ಅವುಗಳನ್ನು ಶಹರ ಠಾಣೆಯ Head Constable ಶ್ರೀ S.S ನಸ್ರೇಕರ (HC-1550) ರವರ ಸಮ್ಮುಖದಲ್ಲಿ ಮೂಲ ವಾರಸುದಾರರಾದ ಶ್ರೀ ಶರತ್. ಬುಡ್ಡಣ್ಣವರ ಎಂಬುವವರಿಗೆ ಹಸ್ತಾಂತರ ಮಾಡಿದರು.

Read More »

ಧಾರವಾಡ: ಕಾಂಗ್ರೆಸ್ ಸರ್ಕಾರ ಶಿಕ್ಷಕರ ಬೇಡಿಕೆ ಈಡೇರಿಸಬೇಕು ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎಸ್.ಬಿ. ಕೇಸರಿ ಆಗ್ರಹ

ಧಾರವಾಡ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಕ್ಷಕ ಸಂಘದ ಅಧ್ಯಕ್ಷರು , ಈ ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಹಲವಾರು ಭಾರಿ ಹೋರಾಟ ಮಾಡುತ್ತಲೇ ಶಿಕ್ಷಕರ ಬೇಡಿಕೆ ಈಡೇರಿಸಲು ಆಗ್ರಹಿಸಿದರು. ಯಾವುದೇ ಪ್ರಯೋಜನವಾಗಿಲ್ಲ , ಈಗ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೊಟ್ಟ ಮಾತಿನಂತೆ ನಡೆಯಬೇಕು ಶಿಕ್ಷಕರ ಬೇಡಿಕೆ ಈಡೇರಿಸುವ ಮೂಲಕ ಶಿಕ್ಷಕರ ಸಮಸ್ಯೆ ನಿವಾರಣೆ ಮಾಡಬೇಕು ಎಂದು ಎಸ್.ಬಿ.ಕೇಸರಿ ಅವರು ಆಗ್ರಹಿಸಿದರು, ಹಳೆ ಪಿಂಚಣಿ ಯೋಜನೆ ಜಾರಿ, …

Read More »