ಧಾರವಾಡ ನಾಗರಿಕರ ಅನುಕೂಲಕ್ಕಾಗಿ, ಧಾರವಾಡ 71 ಕ್ಷೇತ್ರದ ಮಾನ್ಯ ಶಾಸಕರಾದ ಸನ್ಮಾನ್ಯ ವಿನಯ ಕುಲಕರ್ಣಿ,ಜನ ಸಂತತ್ವಪರ್ಕ ಕಾರ್ಯಾಲಯವನ್ನು, ತಾಲೂಕ ಪಂಚಾಯತ ಆವರಣದಲ್ಲಿ ಮ.ನಿ.ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶ್ರೀ ಮುರುಘಾಮಠ ಇವರ ಅಮೃತ ಹಸ್ತದಿಂದ ಉಧ್ಘಾಟಿಸಿದರು.ಈ ಸಂದರ್ಭದಲ್ಲಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು ಪೂಜೆ ಸಲ್ಲಿಸಿ ಮಾತನಾಡಿ,
ಈ ಕಾರ್ಯಲಯವನ್ನು ಸಾರ್ವಜನಿಕರ ಕುಂದುಕೊರೆತೆ ಆಲಿಸುವ ಹಿನ್ನೆಲೆಯಲ್ಲಿ ತೆರೆಯಲಾಗಿದ್ದು,ಇದರ ಸದುಪಯೋಗ ಪಡೆದುಕೊಳ್ಳಬೇಕು,
ಪಾರದರ್ಶಕ ಆಡಳಿತಕ್ಕಾಗಿ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.ಈ ಸಂಧರ್ಭದಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಅರವಿಂದ ಏಗನಗೌಡರ,ಈಶ್ವರ ಶಿವಳ್ಳಿ,ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಚನಬಸಪ್ಪ ಮಟ್ಟಿ,ಪಾಲಿಕೆ ಸದಸ್ಯರುಗಳಾದ. ರಾಜಶೇಖರ ಕಮತಿ,ದೀಪಾ ನೀರಲಕಟ್ಟಿ,ಸೂರವ್ವ ಪಾಟೀಲ,ಮುಖಂಡರುಗಳಾದ ಅಶೋಕ ಸೂರ್ಯವಂಶಿ,ಸಂಜೀವ ಲಕಮನಹಳ್ಳಿ,ಕಿಶೋರ ಬಡಿಗೇರ,ಮಡಿವಾಳಪ್ಪ ದಿಂಡಲಕೊಪ್ಪ,ಮಲ್ಲಿಕಾರ್ಜುನ ಆಯೆಟ್ಟಿ,ಮೈಲಾರಗೌಡ ಪಾಟೀಲ,ರೆಣುಕಾ ಕಳ್ಳಿಮನಿ,ಗೌರಮ್ಮ ಬಳೋಗಿ ಸೇರದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news





