Breaking News

ಜಿಲ್ಲೆ

ಮಂಗಾರು ಮಳೆಗಾಗಿ ಗುರ್ಜಿ ಪೂಜೆಗೆ ಮುಂದಾದ ರೈತರು ?

ಧಾರವಾಡ ಮುಂಗಾರು ಮಳೆ ದಿನೇ ದಿನೇ ಭಾರಿ ಹಿನ್ನಡೆ ಉಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ರೈತ ಕುಲ ಅಕ್ಷರಶಃ ಚಿಂತೆಗೆ ಈಡಾಗಿ ಇದೀಗ ಮಳೆಗಾಗಿ ಗುರ್ಜಿ ಪೂಜೆ ಚೌಡಮ್ಮನ ಮೊರೆ ಹೋಗಿದ್ದಾರೆ. ಈಗಾಗಲೇ ಸಂಪೂರ್ಣ ಬಿತ್ತನೆ ಕಾರ್ಯ ಮುಗಿಸಬೇಕಿದ್ದ ರೈತರು ಮುಂಗಾರು ಮಳೆ ಅಭಾವದ ಕಾರಣ ಬೀಜ ಗೊಬ್ಬರ ದಾಸ್ತಾನು ಮಾಡಿ ಮಳೆಯಿಲ್ಲದೆ ಬಿತ್ತನೆ ಇಲ್ಲದೆ ಸಂಕಷ್ಟದಲ್ಲಿ ಗುರ್ಜಿ ಪೂಜೆ ಕೈಗೊಂಡು ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ. ಕುಂದಗೋಳ ತಾಲೂಕಿನ ಸಂಶಿ ಗ್ರಾಮದ …

Read More »

ಕೆಲಗೇರಿ ಕೆರೆ ಶುದ್ಧೀಕರಣ ಮಾಡಲು ಮನವಿ

ಧಾರವಾಡ ಜಯ ಕರ್ನಾಟಕ ಜನಪರ ವೇದಿಕೆಯಿಂದ, ಸರ್ ಎಂ, ವಿಶ್ವೇಶ್ವರಯ್ಯ ನಿರ್ಮಿತ ಶತಮಾನ ಕಂಡ ಧಾರವಾಡದ ಐತಿಹಾಸಿಕ ಪ್ರಸಿದ್ಧವಾದ ಅತಿ ವಿಸ್ತಾರವುಳ್ಳ ಕೆಲಗೇರಿ ಕೆರೆಯು ಇದು ನಗರಕ್ಕೆ ಕಳಸವಿದ್ದಂತೆ ಆದರೆ ಇತ್ತೀಚಿಗೆ ಕೆರೆಯು ಶುದ್ಧೀಕರಣ ಘಟಕದಿಂದ ಚರಂಡಿ ನೀರು ಮಲೀನಗೊಂಡು ಕೆರೆಯಲ್ಲಿರುವ ಜಲಚರ ಸಂತತಿ ನಾಶಗೋಳ್ಳುತ್ತದ್ದಾವೆ,ಹಾಗೂ ಸಾರ್ವಜನಿಕರಿಗೆ ವಾಯು ವಿಹಾರ ತಾಂಡವಾಗಿದ್ದ ಸ್ಥಳ ಈಗ ತ್ಯಾಜ್ಯ ವಸ್ತುಗಳ ಮಲೀನ ನೀರಿನಿಂದಾಗಿ ಧ್ರುವಾ೯ಸನೆ ಬರುತ್ತಿದ್ದು ಸಾಮಾನ್ಯ ಜನರು ಹತ್ತಿರ ಸುಳಿದಂತಾಗಿದೆ,ಆದಕಾರಣ ವೇದಿಕೆಯ …

Read More »

ಬಡ ಯುವಕ ಶೈಕ್ಷಣಿಕ ಬದುಕಿಗೆ ಕೆ.ಎಲ್.ರಾಹುಲ್ ಬೆಳಕು

ಹುಬ್ಬಳ್ಳಿ ಕೋಟಿ ಕೋಟಿ ಹಣ ಇದ್ದವರಲ್ಲಿ ದಾನ ಮಾಡುವವರ ಸಂಖ್ಯೆ ಸಾಕಷ್ಟು ವಿರಳ. ಆದರೆ ಇಲ್ಲೊಬ್ಬ ಹೃದಯವಂತ ಆಟಗಾರ ನಿಜಕ್ಕೂ ಕಷ್ಟದ ಬದುಕಿನ ಕಣ್ಣೀರು ಒರೆಸುವ ಕಾರ್ಯ ಮಾಡಿದ್ದಾನೆ. ಹುಬ್ಬಳ್ಳಿಯ ಯುವಕರ ಸಹಾಯದಿಂದ ಮಹತ್ವದ ಕಾರ್ಯ ಸಾಧನೆಯಾಗಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ.. ಕೆ.ಎಲ್. ರಾಹುಲ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭಾರತ ತಂಡದ ಖ್ಯಾತ ಕ್ರಿಕೆಟ್ ಆಟಗಾರ. ಸಾಕಷ್ಟು ಜನ ಅಭಿಮಾನಿಗಳನ್ನು ಹೊಂದಿರುವ ಕೆ.ಎಲ್‌.ರಾಹುಲ್ …

Read More »

ನನ್ನ ಯೋಗ್ಯತೆಗೆ ತಕ್ಕಂತೆ ಪ್ರಧಾನ ಮಂತ್ರಿಗಳು ಮತ್ತು ನನ್ನ ಪಕ್ಷ ನನಗೆ ಸ್ಥಾನಮಾನ ಕೊಟ್ಟಿದೆ ಭಗವಂತ ಖುಬಾ

ಹುಬ್ಬಳ್ಳಿ: ದೇಶದ ಯುವ ಪೀಳಿಗೆಗಳಿಗೆ ಸುಮಾರು 10 ಲಕ್ಷ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಉದ್ಯೋಗ ನೀಡುವ ಸಲುವಾಗಿ ರೋಜ್ ಗಾರ್ ಮೇಳ ಆರಂಭಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಹೊಸ ಹೊಸ ವಿಚಾರಗಳನ್ನು ತಿಳಿಸುತ್ತಿದ್ದಾರೆಂದು ಕೇಂದ್ರ ಸಚಿವ ಭಗವಂತ ಖುಬಾ ಹೇಳಿದರು. ನಗರದ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೋದಿಯವರ ವ್ಯಕ್ತಿತ್ವದಿಂದ ಇವತ್ತು ದೇಶ ಆರ್ಥಿಕವಾಗಿ ಮುಂದೆ ಬರುತ್ತಿದೆ. ಬರುವಂತಹ ದಿನಗಳಲ್ಲಿ 2030-47 ರಲ್ಲಿ ಭಾರತ ಜಗತ್ತಿನಲ್ಲಿ ಆರ್ಥಿಕವಾಗಿ ಮೂರನೇ ಬಲಿಷ್ಠ …

Read More »

ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಮುಂದಾಗಲಿ

ಧಾರವಾಡ : ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯದ ಸರ್ಕಾರಿ ನೌಕರರ ಬೇಡಿಕೆ ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾಧ್ಯಕ್ಷ ಎಸ್.ಎಫ್ ಸಿದ್ದನಗೌಡರ ಆಗ್ರಹಿಸಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ. ಹೊಸ ಪಿಂಚಣಿ ಯೋಜನೆ ರದ್ದು ಪಡಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಅದರಂತೆ ಏಳನೇ ವೇತನ ಆಯೋಗ …

Read More »

ಕಾಂಗ್ರೆಸ್ ಸರ್ಕಾರ ಜವಾಬ್ದಾರಿ ಇಲ್ಲದ ಸರ್ಕಾರ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ಹುಬ್ಬಳ್ಳಿ: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್  ಸರ್ಕಾರ ಜವಾಬ್ದಾರಿ ಇಲ್ಲದ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅಸಮಾಧಾನ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ತಿಂಗಳು ಹತ್ತಿರ ಬಂದಿದೆ. ರಾಜ್ಯಕ್ಕೆ ನೈಸರ್ಗಿಕ ಆಪತ್ತು ಬರುತ್ತಿವೆ. ಮಾನ್ಸೂನ್ ಮಳೆ ತಡವಾಗಿದ್ದರಿಂದ ಬಿತ್ತನೆ ಕೂಡ ತಡವಾಗಿ ಆಗುತ್ತಿದೆ. ಮಾನ್ಸೂನ್ ಮಳೆ ಸಕಾಲಕ್ಕೆ ಬಾರದಿದ್ದರೆ ರೈತರಿಗೆ ಬಹಳಷ್ಟು ಕಷ್ಟವಾಗುತ್ತದೆ. ಮತ್ತೊಂದು ಕಡೆ ಭೀಕರ ಚಂಡಮಾರುತದ ಸೂಚನೆ ಸಹ ಬರುತ್ತಿವೆ. …

Read More »

ಧಾರವಾಡ: ಗೋವನಕೊಪ್ಪ ಹೊರವಲಯದಲ್ಲಿ ರೂಪಾ ಸವದತ್ತಿ ಕೊಲೆ ಪ್ರಕರಣ, ಓರ್ವ ಕೊಲೆ ಆರೋಪಿ ಬಂಧನ.

ಧಾರವಾಡ ಕಳೆದ ಶುಕ್ರವಾರದಂದು ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದ ಹೊರವಲಯದಲ್ಲಿ ರೂಪಾ ಸವದತ್ತಿಯ ಮಹಿಳೆಯ ಹತ್ಯೆಗೆ ಸಂಬಂಧಿಸಿದಂತೆ ಓರ್ವ ಆರೋಒಇಯನ್ನು ಬಂಧನ ಮಾಡುವಲ್ಲಿ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಹತ್ಯೆಯಾದ ರೂಪಾ ಮೈದುನ ರಾಕೇಶ ಬಂಧಿತ ಆರೋಪಿಯಾಗಿದ್ದಾನೆ. ಇನ್ನೂ ಹತ್ಯೆಯಾದ ರೂಪಾ ಸವದತ್ತಿ ಆರೋಪಿ ರಾಕೇಶಗೆ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ ಹಾಗೂ ನನಗೆ ಸಮಯ ನೀಡುತ್ತಿಲ್ಲ ಎಂಬ ಬೇಸರಗೊಂಡು ಮಹಿಳೆಯನ್ನು ಹತ್ಯೆ ಮಾಡಿರುವುದಾಗಿ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ …

Read More »

ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮುಂದಾದ ಸಚಿವರು

ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ವಿಶೇಷ ಒತ್ತು ನೀಡಲಾಗುವುದು ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ ಹೇಳಿದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಮ್ಮನ ಗುಡ್ಡ, ಬನಶಂಕರಿ ಮತ್ತು ದುರ್ಗಮ್ಮ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಬರುತ್ತಾರೆ. ಇಂತಹ ಜನಸಾಮಾನ್ಯರ ಶ್ರದ್ಧಾ ಕೇಂದ್ರಗಳು ಪ್ರವಾಸಿ ತಾಣಗಳ ರೀತಿಯಲ್ಲೇ ಇವೆ. ಅವುಗಳ ಅಭಿವೃದ್ಧಿಗೆ ಗಮನ ಹರಿಸಲಾಗುವುದು ಎಂದರು.ಈ ಭಾಗದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳ ಬೆಳವಣಿಗೆಗೆ ನಿರೀಕ್ಷ …

Read More »

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಸಂತೋಷ ಲಾಡ್

ಹುಬ್ಬಳ್ಳಿ: ಕಾರ್ಮಿಕ ಸಚಿವ ಸಂತೋಷ ಲಾಡ್ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ. ತೀವ್ರ ಪೈಪೋಟಿ ನಡುವೆ ಕಲಘಟಗಿ ಶಾಸಕ ಸಂತೋಷ್ ಲಾಡ್ ಸಚಿವರಾಗಿದ್ದಾರೆ. ಆದರೆ, ಇದೀಗ ಜಿಲ್ಲಾ ಉಸ್ತುವಾರಿ ಸಚಿವರು ಯಾರಾಗುತ್ತಾರೆ ಎಂಬ ಕುತೂಹಲ, ಚರ್ಚೆ ಜಿಲ್ಲೆಯಲ್ಲಿ ಜೋರಾಗಿತ್ತು. ಧಾರವಾಡ ಜಿಲ್ಲೆಯ ಉಸ್ತುವಾರಿ ಆಗಲು ಪ್ರಥಮ ಬಾರಿಗೆ ಸಚಿವೆಯಾಗಿರುವ ಬೆಳಗಾವಿ ಜಿಲ್ಲೆಯ ಲಕ್ಷ್ಮೀ ಹೆಬ್ಬಾಳ‌ ಆಸಕ್ತಿ ವಹಿಸಿದ್ದರು. ಆದರೆ ಈಗ ಸಂತೋಷ ಲಾಡ್ ಅವರಿಗೆ ಧಾರವಾಡ ಫೇಡಾ ಬಿದ್ದಿರುವುದು …

Read More »

ಗೋವನಕೊಪ್ಪದಲ್ಲಿ ಒಂಟಿ ಮಹಿಳೆಯ ಬರ್ಬರ ಕೊಲೆ

ಧಾರವಾಡ: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದ ಹೊರವಲಯದಲ್ಲಿ ನಡೆದಿದೆ. ರೂಪಾ ಸವದತ್ತಿ ಎಂಬುವವರೇ ಹತ್ಯೆಗೀಡಾದ ಮಹಿಳೆ ನಿನ್ನೆ ಮನೆಯಿಂದ ಹೊರಗಡೆ ಹೋಗಿದ್ದ ರೂಪಾ ರಾತ್ರಿಯಾದರೂ ಮನೆಗೆ ಮರಳಿ ಬಂದಿರಲಿಲ್ಲ. ಅವರಿಗಾಗಿ ಮನೆಯವರು ಶೋಧ ಕೂಡ ನಡೆಸಿದ್ದರು. ಆದರೆ, ಇಂದು ಬೆಳಿಗ್ಗೆ ರೂಪಾ ಅವರ ಶವ ಗೋವನಕೊಪ್ಪ ಗ್ರಾಮದ ಹೊರವಲಯದಲ್ಲಿ ಪತ್ತೆಯಾಗಿದೆ.ಯಾರು ಕೊಲೆ ಮಾಡಿದವರು ಹಾಗೂ ಏತಕ್ಕಾಗಿ …

Read More »