Breaking News

ನನ್ನ ಯೋಗ್ಯತೆಗೆ ತಕ್ಕಂತೆ ಪ್ರಧಾನ ಮಂತ್ರಿಗಳು ಮತ್ತು ನನ್ನ ಪಕ್ಷ ನನಗೆ ಸ್ಥಾನಮಾನ ಕೊಟ್ಟಿದೆ ಭಗವಂತ ಖುಬಾ

ಹುಬ್ಬಳ್ಳಿ: ದೇಶದ ಯುವ ಪೀಳಿಗೆಗಳಿಗೆ ಸುಮಾರು 10 ಲಕ್ಷ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಉದ್ಯೋಗ ನೀಡುವ ಸಲುವಾಗಿ ರೋಜ್ ಗಾರ್ ಮೇಳ ಆರಂಭಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಹೊಸ ಹೊಸ ವಿಚಾರಗಳನ್ನು ತಿಳಿಸುತ್ತಿದ್ದಾರೆಂದು ಕೇಂದ್ರ ಸಚಿವ ಭಗವಂತ ಖುಬಾ ಹೇಳಿದರು.

ನಗರದ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೋದಿಯವರ ವ್ಯಕ್ತಿತ್ವದಿಂದ ಇವತ್ತು ದೇಶ ಆರ್ಥಿಕವಾಗಿ ಮುಂದೆ ಬರುತ್ತಿದೆ. ಬರುವಂತಹ ದಿನಗಳಲ್ಲಿ 2030-47 ರಲ್ಲಿ ಭಾರತ ಜಗತ್ತಿನಲ್ಲಿ ಆರ್ಥಿಕವಾಗಿ ಮೂರನೇ ಬಲಿಷ್ಠ ದೇಶವಾಗಿ ಹೊರಹೊಮ್ಮಲಿದೆ. ಈಗ ಎಲ್ಲರೂ ದುಡಿಯುತ್ತಿದ್ದಾರೆ. ಇದರಿಂದಾಗಿ ದೇಶ ಅತೀ ವೇಗವಾಗಿ ಬೆಳೆಯುತ್ತಿದೆ. ಇನ್ನು ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಯಾರ್ಯಾರು ಪರೀಕ್ಷೆ ಬರೆದಿದ್ದಾರೆ ಅವರಿಗೆಲ್ಲ ಯಾವುದೇ ರೀತಿಯ ತಾರತಮ್ಯ ಆಗದೇ ಉದ್ಯೋಗ ನೀಡಲಾಗುತ್ತಿದೆ ಎಂದರು.

ಇನ್ನು ಬ್ಯಾಂಕಿಂಗ್ ಗಳಲ್ಲಿ ಕರ್ನಾಟಕದವರಿಗೆ ಅನ್ಯಾಯವಾಗುತ್ತಿದೆ ಎಂಬ ಪ್ರಶ್ನೆಗೆ, ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಿ, ತಾವು ಕೂಡ ಉತ್ತೀರ್ಣರಾಗಬೇಕೆಂದು ಸಲಹೆ ಮತ್ತು ಕಿವಿ ಮಾತು ಹೇಳಿದರು. ಇನ್ನು ನನ್ನ ಯೋಗ್ಯತೆಗೆ ತಕ್ಕಂತೆ ಪ್ರಧಾನಿ ಮಂತ್ರಿಗಳು ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ನಾನು ಯಾವುದನ್ನೂ ಅಪೇಕ್ಷಿಸದೇ ಪಕ್ಷ ಒಂದಿಲ್ಲೊಂದು ಜವಾಬ್ದಾರಿ ಕೊಡ್ತಾ ಬಂದಿದೆ. ಅದನ್ನು ಪ್ರಾಮಾಣಿಕ ಮತ್ತು ನಿಷ್ಠೆಯಿಂದ ನಡೆಸ್ತಾ ಬಂದಿದ್ದೇನೆ ಎಂದರು.

ಇನ್ನು ಹಾಲಿ ಸಂಸದರಿಗೆ ಈ ಬಾರಿ ಟಿಕೆಟ್ ತಪ್ಪುತ್ತದೆ ಎಂಬ ಪ್ರಶ್ನೆಗೆ ಅದೆಲ್ಲ ಸುಳ್ಳು ಸುದ್ದಿ. ಬಿಜೆಪಿಯಲ್ಲಿ ಚುನಾವಣೆ ಬಂದಾಗ ಬದಲಾವಣೆ ಮಾಡುವುದು ಕಾಮನ್. ಅದೇ ನಮ್ಮ ಚುನಾವಣೆ ರಣತಂತ್ರ. ಜನರಿಗೆ ಗ್ಯಾರಂಟಿ ಟೋಪಿ ಹಾಕಿ ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಹಿಂದಾಗುತ್ತದೆ ಎಂದರು.

Share News

About BigTv News

Check Also

ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಮಹಿಳೆ ಬಲಿ..! ಕುತ್ತಿಗೆಗೆ ಸಿಲುಕಿದ ದಾರ, ಲ್ಯಾಬ್ ಟೆಕ್ನಿಷಿಯನ್ ದಾರುಣ ಸಾವು..!

News Audio ಸ್ಕೂಟಿಯಲ್ಲಿ ಲ್ಯಾಬ್‌ಗೆ ತೆರಳುತ್ತಿದ್ದಾಗ ಅವಘಡ | ರಸ್ತೆಯಲ್ಲೇ ತೀವ್ರ ರಕ್ತಸ್ರಾವ, ಮಾಂಜಾ ದಾರದ ಅಪಾಯಕ್ಕೆ ಮತ್ತೊಂದು ಜೀವ …

Leave a Reply

Your email address will not be published. Required fields are marked *