Breaking News

ಜಿಲ್ಲೆ

ಗಂಧದಗುಡಿ ಚಿತ್ರ ವಿಕ್ಷೀಸಿದ ಮಾಜಿ ಸಿಎಂಶಿವ

ಶಿವಮೊಗ್ಗ: ಸದಾ ರಾಜಕೀಯ ಜಜಾಂಟದಲ್ಲಿರುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಬಿಡುವು ಮಾಡಿಕೊಂಡು ಇಲ್ಲಿನ ಸಿಟಿ ಸೆಂಟ್ರಲ್ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ಪವರ್‌ಸ್ಟಾರ್ ಪುನೀತ್‌ ರಾಜ್​ಕುಮಾರ್ ಅವರ ಸಾಕ್ಷ್ಯಚಿತ್ರ ‘ಗಂಧದಗುಡಿ’ ವೀಕ್ಷಿಸಿದರು. ಪುತ್ರ ಬಿ.ವೈ.ರಾಘವೇಂದ್ರ ಮತ್ತು ಸೊಸೆ ತೇಜಸ್ವಿನಿ ರಾಘವೇಂದ್ರ ಅವರೊಂದಿಗೆ ಯಡಿಯೂರಪ್ಪ ಸಿನಿಮಾ ವೀಕ್ಷಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಎಸ್.ಎಸ್.ಜ್ಯೋತಿಪ್ರಕಾಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ಮತ್ತಿತರರು ಸಾಥ್ ನೀಡಿದರು. ಯಡಿಯೂಪ್ಪ ಅವರು ಮಾಲ್‌ಗೆ ಆಗಮಿಸುತ್ತಿದ್ದಂತೆ …

Read More »

ಜೆಡಿಎಸ್ ಮುಖಂಡ ಹೃದಯಾಘಾತದಿಂದ ಸಾವು

ಮೈಸೂರು: ಜೆಡಿಎಸ್ ಮುಖಂಡ ಕ್ಲಬ್​ನಲ್ಲಿ ಕಾರ್ಡ್ಸ್ ಆಡುವಾಗ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದ್ದು, ಈ ದೃಶ್ಯ ಕ್ಲಬ್​ನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ನೇಹಿತರೊಂದಿಗೆ ಕ್ಲಬ್​ನಲ್ಲಿ ಕಾರ್ಡ್ಸ್ ಆಡುತ್ತಿದ್ದ ಜೆಡಿಎಸ್ ಮುಖಂಡ ಕಮಟಗೇರಿಯ ನಿವಾದಿ ಅಶ್ವಥ್(55 ವರ್ಷ) ಕುಳಿತಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಕಾರ್ಡ್ಸ್ ಆಡುತ್ತಾ ಕುಸಿದು ಬಿದ್ದಿರುವ ವಿಡಿಯೋ ಕ್ಲಬ್​ನ ಸಿಸಿಟಿವಿಯಲ್ಲಿ ಸೆರೆಯಾಗಿರುವುದು ವೈರಲ್​ ಆಗುತ್ತಿದೆ.

Read More »

ಬಿಜೆಪಿಯನ್ನ ತೊಲಗಿಸಬೇಕು ಎಂಬುದೇ ಬಿಜೆಪಿಯವರ ಸಂಕಲ್ಪ : ಸಿದ್ದರಾಮಯ್ಯ

ಶಿವಮೊಗ್ಗ: ಬಿಜೆಪಿಯನ್ನ ತೊಲಗಿಸಬೇಕು ಎಂಬುದೇ ಬಿಜೆಪಿಯವರ ಸಂಕಲ್ಪ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂಕಲ್ಪ ಯಾತ್ರೆಯನ್ನು ಟೀಕಿಸಿದ್ದಾರೆ. ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಈ ಸಂಕಲ್ಪ ಯಾತ್ರೆಗೆ ಹಣ ನೀಡಿ ಜನರನ್ನು ಕರೆದುಕೊಂಡು ಬಂದಿದ್ದಾರೆ. ಅದಕ್ಕಾಗಿ ಕಾರ್ಯಕ್ರಮದಲ್ಲಿ ಜನರು ಕುಳಿತುಕೊಳ್ಳುತ್ತಿಲ್ಲ. ಬಿಜೆಪಿಯವರು ಅಂದ್ರೆ ಡೋಂಗಿಗಳು, ಸುಳ್ಳು ಹೇಳುವವರು ಎಂದು ವ್ಯಂಗ್ಯವಾಡಿದ್ದಾರೆ. ‘ಬಿಜೆಪಿಯವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇಲ್ಲ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಆರ್‌ಎಸ್‍ಎಸ್ …

Read More »

ಕೆಎಸ್​ಆರ್​ಟಿಸಿ ಬಸ್ಸಿನ ಚಕ್ರ ಹರಿದು ಬಾಲಕ ಸಾವು

ಮೈಸೂರು: ಕೆಎಸ್​ಆರ್​ಟಿಸಿ ಬಸ್ಸಿನ ಚಕ್ರ ಹರಿದು ಬಾಲಕ ಸಾವನ್ನಪ್ಪಿರುವ ಘಟನೆ ನಂಜನಗೂಡು ಪಟ್ಟಣದ ಹಳೆ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. 14 ವರ್ಷದ ಪ್ರಜ್ವಲ್ ಮೃತ ಬಾಲಕ. ನಂಜನಗೂಡು-ಹುಲ್ಲಹಳ್ಳಿ-ಹಂಪಾಪುರಕ್ಕೆ ಸಂಚರಿಸುವ ಸಾರಿಗೆ ಬಸ್ ಇದಾಗಿತ್ತು. ನಂಜೀಪುರ ಗ್ರಾಮದ ಪ್ರಕಾಶ್ ಮತ್ತು ಪುತ್ರ ಪ್ರಜ್ವಲ್ ಇಬ್ಬರೂ ಗ್ರಾಮಕ್ಕೆ ತೆರಳುವಾಗ ದುರ್ಘಟನೆ ಸಂಭವಿಸಿದೆ. ಬಸ್ ಸಂಚರಿಸುವ ಸಮಯದಲ್ಲಿ ಮುಂದಿನ ಬಾಗಿಲಿನಿಂದ ಇಳಿಯುತ್ತಿದ್ದಾಗ ಪ್ರಜ್ವಲ್ ಕೆಳಗೆ ಬಿದ್ದಿದ್ದಾನೆ. ಹಿಂಬದಿಯ ಚಕ್ರ ಆತನ ಹೊಟ್ಟೆಯ ಮೇಲೆ …

Read More »

ಕೇವಲ ಹರ್ಷ ಸಹೋದರಿ ಅಶ್ವಿ‌ನಿ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಶಿವಮೊಗ್ಗಕ್ಕೆ ರಕ್ಷಣೆ ನೀಡಲು ಇಲಾಖೆ ಸಿದ್ಧವಿದೆ : ಎಸ್ಪಿ

‘ ಶಿವಮೊಗ್ಗ: ಕೆಲವು ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಬಜರಂಗ ದಳದ ಕಾರ್ಯಕರ್ತ ಹರ್ಷ ಅವರ ಕುಟುಂಬದ ಸದಸ್ಯರಿಗೆ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದಾರೆಂಬ ಆರೋಪದ ಬಗ್ಗೆ ತನಿಖೆ ನಡೆಸಲಾಗಿದೆ. ಆದರೆ ಈವರೆಗೆ ಬೆದರಿಕೆ ಹಾಕಿರುವುದಕ್ಕೆ ಪೂರಕವಾದ ಅಂಶಗಳು ಕಂಡುಬಂದಿಲ್ಲ ಎಂದು ಶಿವಮೊಗ್ಗ ಎಸ್ಪಿ ಜಿ.ಕೆ. ಮಿಥುನ್‌ ಕುಮಾರ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇವಲ ಹರ್ಷ ಸಹೋದರಿ ಅಶ್ವಿ‌ನಿ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಶಿವಮೊಗ್ಗಕ್ಕೆ ರಕ್ಷಣೆ ನೀಡಲು ಇಲಾಖೆ …

Read More »

ಮುಂದಿನ ಮೂರು ತಿಂಗಳು ಭಾರತ ಸೇರಿದಂತೆ ಇಡೀ ಜಗತ್ತಿಗೆ ಭಾರೀ ಕಂಟಕಹಾ

ಹಾಸನ : ಮುಂದಿನ ಮೂರು ತಿಂಗಳು ಭಾರತ ಸೇರಿದಂತೆ ಇಡೀ ಜಗತ್ತಿಗೆ ಭಾರೀ ಕಂಟಕ ಕಾದಿದೆ ಎಂದು ಕೋಡಿ ಮಠದ ಸ್ವಾಮೀಜಿ ಮತ್ತೆ ಭವಿಷ್ಯ ನುಡಿದಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಳ್ಳಿಯಲ್ಲಿರುವ ಕೋಡಿ ಮಠದಲ್ಲಿ ಮಾತನಾಡಿದ ಅವರು, ಕಾರ್ತಿಕ, ಮಾರ್ಗಶಿರದಿಂದ ತೊಡಗಿ ಜನವರಿ ಪ್ರಥಮ ಭಾಗದವರೆಗೆ ಭಾರಿ ಲೋಕ ಕಂಟಕವಿದೆ. ಅದು ಭೂ ಕಂಟಕದ ರೂಪದಲ್ಲಿರಬಹುದು, ಪ್ರಾದೇಶಿಕವಾಗಿಯೂ ಸಂಘರ್ಷವಿರಬಹುದು, ಪ್ರಾಕೃತಿಕಾಗಿಯೂ ಇರಬಹುದು, ರಾಜ ಬೀದಿಯೂ ಇರಬಹುದು ಎಂದು ಹೇಳಿದರು. …

Read More »

ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿಗೆ ಜೀವಾವಧಿ ಶಿಕ್ಷೆಮ

ಮಂಗಳೂರು; 2015ರಲ್ಲಿ ನಡೆದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಗೆ ಮಂಗಳೂರು ಜಿಲ್ಲಾ ಹೆಚ್ಚುವರಿ ಹಾಗೂ ಸೆಷನ್ಸ್‌ ಕೋರ್ಟ್‌ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. ಬಜ್ಪೆಯ ಸಿದ್ಧಾರ್ಥನಗರದ ನಿವಾಸಿ ಪ್ರವೀಣ್‌ ಸಲ್ಯಾನ್‌ ಶಿಕ್ಷೆಗೊಳಗಾದ ಅಪರಾಧಿ. ಈತ 2015ರಲ್ಲಿ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಹಿನ್ನೆಲೆಯಲ್ಲಿ ಆ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಳು. ಅಪರಾಧಿ ಜಿಲ್ಲಾ ಸಶಸ್ತ್ರ ಮೀಸಲುಪಡೆಯಲ್ಲಿ ಕಾನ್ಸ್‌ಟೇಬಲ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ. ಫೇಸ್‌ಬುಕ್‌ ಮೂಲಕ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ …

Read More »

ಅ. 22ರಂದು ‘ಸಾವರ್ಕರ್ ಸಾಮ್ರಾಜ್ಯ’ ಕಾರ್ಯಕ್ರಮ

ಶಿವಮೊಗ್ಗ: ಅಕ್ಟೋಬರ್ 22ರ ಶನಿವಾರ ಸಂಜೆ 5 ಗಂಟೆಗೆ ವಿಜ್ಞಾನ ಮೈದಾನದಲ್ಲಿ ‘ಸಾವರ್ಕರ್ ಸಾಮ್ರಾಜ್ಯ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 1944ರಲ್ಲಿ ವೀರ್ ಸಾವರ್ಕರ್ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ ನೆನಪಿಗಾಗಿ ‘ಸಮಗಮ’ ಮತ್ತು ‘ಶ್ರೀಗಂಧ’ ಸಂಘಟನೆಗಳು ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿವೆ. “ಹೆಚ್ಚಿನ ಜನರು ಸಾವರ್ಕರ್ ಅವರನ್ನು ಗೌರವಿಸುತ್ತಾರೆ, ಆದರೆ ಕೆಲವರು ಅವರನ್ನು …

Read More »

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾಯಿ ಚಾಮುಂಡೇಶ್ವರಿ ಅನುಗ್ರಹ, ಆಶೀರ್ವಾದದಿಂದ ಅಧಿಕಾರಕ್ಕೆ ಬರುತ್ತದೆ

ಮೈಸೂರು:  ಹೆಚ್.ಡಿ  ಕುಟುಂಬ ಸಮೇತ ತಾಯಿ ಚಾಮುಂಡಿ ಬೆಟ್ಟಕ್ಕೆ ದೇವಿಯ ದರ್ಶನ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾಯಿ ಚಾಮುಂಡೇಶ್ವರಿ ಅನುಗ್ರಹದಿಂದ ಹಾಗೂ ಜನರ ಆಶೀರ್ವಾದದಿಂದ ನಾವು ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರು. ದೇವಿಯ ದರ್ಶನ ಪಡೆದಿದ್ದೇವೆ. ಪೂರ್ಣ ಪ್ರಮಾಣದ ಸರ್ಕಾರ ಅಸ್ತಿತ್ವಕ್ಕೆ ತರುವಂತೆ ಬೇಡಿದ್ದೇನೆ ಎಂದರು. ಇನ್ನು ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೇ ಬಗ್ಗೆ ಸುಳಿವು ನೀಡಿದ್ದಾರೆ. ನಿಖಿಲ್‌ ಜೆಡಿಎಸ್‌ ಪಕ್ಷದ ಶಾಸಕರ 126 …

Read More »

ಪವರ್ ಸ್ಟಾರ್ ಮೊದಲ ಪುಣ್ಯ ಸ್ಮರಣೆ : 3 ಸಾವಿರ ಜನರಿಗೆ ಬಾಡೂಟಶಿ

ಶಿವಮೊಗ್ಗ:  ನಗರದಲ್ಲಿ ಅಭಿಮಾನಿಗಳಿಂದ ನಟ ಪುನೀತ್ ರಾಜಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಮಾಡಲಾಯಿತು. ಮೂರು ಸಾವಿರ ಜನರಿಗೆ ಬಾಡೂಟ ಬಡಿಸಿ, ಯುವಕರು ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಿದರು. ವಿದ್ಯಾನಗರದ ಯಾಲಕಪ್ಪನಕೇರಿಯ ಶ್ರೀ ವೀರಕೇಸರಿ ಯುವಕರ ಸಂಘದ ವತಿಯಿಂದ ನಟ ಪುನೀತ್ ರಾಜಕುಮಾರ್ ಮೊದಲ ವರ್ಷದ ಪುಣ್ಯ ಸ್ಮರಣೆ ಮಾಡಲಾಯಿತು. ಬಿ.ಹೆಚ್.ರಸ್ತೆ ಪಕ್ಕದಲ್ಲೇ ವಿದ್ಯಾನಗರದಲ್ಲಿ ವಿವಿಧ ಹೂವುಗಳಿಂದ ಅಲಂಕೃತ ಮಂಟಪ ನಿರ್ಮಿಸಲಾಗಿತ್ತು. ಅದರಲ್ಲಿ ನಟ ಪುನೀತ್ ರಾಜಕುಮಾರ್ …

Read More »