admin
November 26, 2021
Breaking News, ಕರ್ನಾಟಕ, ದೇಶ-ವಿದೇಶ, ಬೆಂಗಳೂರು
ಚೆನ್ನೈ: ತಮಿಳುನಾಡಿನ ತೂತುಕುಡಿ ಸೇರಿದಂತೆ ತಿರುಚೆಂದೂರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. ಅಷ್ಟೇ ಅಲ್ಲದೇ ರಾಮನಾಥಪುರಂ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಗುರುವಾರ ಭಾರಿ ಮಳೆಯಾಗಿದೆ. ಇಂದು ಮತ್ತು ನಾಳೆ ಚೆನ್ನೈಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ‘ಆರೆಂಜ್’ ಅಲರ್ಟ್ ಘೋಷಿಸಿದೆ. ರಾಮನಾಥಪುರಂ ಜಿಲ್ಲಾಧಿಕಾರಿ ಪರಮಕುಡಿ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಗ್ಗು ಪ್ರದೇಶಗಳ ಪರಿಸ್ಥಿತಿ ಕುರಿತು ಸಭೆ ನಡೆಸಿದರು. ಆರ್.ಎಸ್. ಮಂಗಳಂ ಕಂದಾಯ ಮತ್ತು …
Read More »
admin
November 22, 2021
Breaking News, ಕರ್ನಾಟಕ, ಕ್ರಿಕೆಟ್, ದೇಶ-ವಿದೇಶ
ತಮಿಳುನಾಡು ತಂಡ ಚಾಂಪಿಯನ್ ನವದೆಹಲಿ : ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್ನ ಕೊನೆಯ ಎಸೆತದಲ್ಲಿ ಶಾರುಖ್ ಖಾನ್ ಸಿಡಿಸಿದ ಅದ್ಭುತ ಸಿಕ್ಸರ್ ನೆರವಿನಿಂದ ಕರ್ನಾಟಕ ವಿರುದ್ಧ ತಮಿಳುನಾಡು4 ವಿಕೆಟ್ಗಳ ರೋಚಕ ಜಯ ಸಾಧಿಸಿ ಸತತ 2ನೇ ಹಾಗೂ ಒಟ್ಟಾರೆ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಆರಂಭಿಕರ ವೈಫಲ್ಯದ ಹೊರತಾಗಿಯೂ 20 ಓವರ್ಗಳಲ್ಲಿ …
Read More »
admin
November 16, 2021
Breaking News, ದೇಶ-ವಿದೇಶ, ರಾಜಕೀಯ ಸುದ್ದಿ
ಸುಲ್ತಾನ್ಪುರ್ (ಉತ್ತರಪ್ರದೇಶ): ದೇಶದಲ್ಲಿಯೇ ಅತೀ ಉದ್ದದ ಎಕ್ಸ್ಪ್ರೆಸ್ ಮಾರ್ಗ ಉತ್ತರಪ್ರದೇಶದ ಪೂರ್ವಾಂಚಲ ಎಕ್ಸ್ಪ್ರೆಸ್ ಹೆದ್ದಾರಿಯನ್ನು (Purvanchal Expressway) ಉದ್ಘಾಟನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಹಿಂದಿನ ಸರ್ಕಾರದ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು. ಉತ್ತರ ಪ್ರದೇಶದ ಸುಲ್ತಾನ್ಪುರ್ದಲ್ಲಿ ನಿರ್ಮಾಣವಾಗಿರುವ 340 ಕಿಲೋಮೀಟರ್ ಉದ್ದದ ಪೂರ್ವಾಂಚಲ ಎಕ್ಸ್ಪ್ರೆಸ್ ಹೆದ್ದಾರಿಗೋಸ್ಕರ 22,500 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರಧಾನಿ ಮೋದಿ ಅದರ ಉದ್ಘಾಟನೆ ಮಾಡಿದರು. ಸುಮಾರು 1 ಗಂಟೆಗೂ ಅಧಿಕ ಕಾಲ ಮಾತನಾಡಿದ ಪ್ರಧಾನಿ …
Read More »
admin
November 16, 2021
Breaking News, ಅಪರಾಧ, ಕರ್ನಾಟಕ, ದೇಶ-ವಿದೇಶ
ನವದೆಹಲಿ : ಇಲ್ಲಿನ ದಾಬ್ರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಯುವತಿಯನ್ನು ಕೊಲೆ ಮಾಡಿ ಚರಂಡಿಗೆ ಬಿಸಾಡಿದ್ದಲ್ಲದೇ ಮುಖ ಮತ್ತು ಗುಪ್ತಾಂಗಗಳನ್ನು ಸುಟ್ಟು (Girl private parts burnt) ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಅತ್ಯಾಚಾರ ಮತ್ತು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಯುವತಿಯನ್ನು ಕೊಲೆ ಮಾಡಿದ ಬಳಿಕ ದೇಹವನ್ನು ಚರಂಡಿಯಲ್ಲಿ ಬಿಸಾಡಲಾಗಿದೆ. ಅಲ್ಲದೇ, ಯುವತಿಯ ಗುರುತು ಪತ್ತೆ ಆಗಬಾರದೆಂದು ದುಷ್ಕರ್ಮಿಗಳು ಮುಖವನ್ನು ಜಜ್ಜಿದ್ದಲ್ಲದೇ, ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೇ, …
Read More »
admin
November 16, 2021
Breaking News, News, ದೇಶ-ವಿದೇಶ, ಸಿನಿಮಾ
ಬಿಹಾರ್ : ಬಿಹಾರದ ಲಖಿಸರಾಯ್ ಎಂಬಲ್ಲಿ ಟ್ರಕ್ ಮತ್ತು ಖಾಸಗಿ ವಾಹನವೊಂದರ ಮಧ್ಯ ಭೀಕರ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ 6 ಜನರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಇನ್ನು ಇವರೆಲ್ಲರವೂ ದಿವಂಗತ, ಬಾಲಿವುಡ್ ನಾಯಕ ನಟ ಸುಶಾಂತ್ ಸಿಂಗ್ ರಾಜಪೂತ್ ಕುಟುಂಬಕ್ಕೆ ಸೇರಿದವರು ಎಂದು ಹೇಳಲಾಗಿದೆ. ಇವರೆಲ್ಲವೂ ಪಟ್ನಾದಲ್ಲಿ ನಡೆದಿದ್ದ ಅಂತೀಮ ಸಂಸ್ಕಾರದ ಕಾರ್ಯಕ್ರಮವನ್ನ ಪೂರೈಸಿಕೊಂಡು ಹುಟ್ಟೂರಿಗೆ ವಾಪಸಾಗುತ್ತಿದ್ದರು. ಬಿಹಾರದ ಲಖಿಸರಾಯ್ ಪ್ರದೇಶದಲ್ಲಿ ಮಂಗಳವಾರ ಬೆಳಗಿನ ಜಾವ ಈ ಬೀಕರ ಅಪಘಾತ …
Read More »
admin
September 12, 2019
ದೇಶ-ವಿದೇಶ, ಸುದ್ದಿ
ಮೇಷ: ಇಂದು, ಮತ್ತೊಂದು ಒತ್ತಡದ ದಿನ. ನೀವು ಕಛೇರಿಯಲ್ಲಿ ಮತ್ತು ಮನೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಜ್ಜಾಗಿದ್ದೀರಿ. ನಿಮ್ಮ ಮೇಲಧಿಕಾರಿಗಳು ನಿಮಗೆ ಕೆಲ ರಿಯಾಯಿತಿಗಳನ್ನು ನೀಡಬಹುದು, ಮತ್ತು ಇದು ವಿಷಯಗಳನ್ನು ಕೊಂಚ ಸುಲಭಗೊಳಿಸುತ್ತದೆ. ನೀವು ಹಿರಿಯರಿಂದ ಮೌಲ್ಯಯುತ ಮಾರ್ಗದರ್ಶನ ಪಡೆಯುತ್ತೀರಿ.ವೃಷಭ: ಇಂದು ನಿಮ್ಮ ವೃತ್ತಿಯಲ್ಲಿ ಪ್ರಗತಿಯ ಸಾಧ್ಯತೆ ಇದೆ. ಆದರೆ ಈ ಪ್ರಗತಿ ನೀವು ನಿರೀಕ್ಷಿಸಿದ ದಿಕ್ಕಿನಲ್ಲಿ ಇಲ್ಲ. ಹಣಕಾಸಿನ ಅವಕಾಶಗಳು ಮತ್ತು ಯಶಸ್ಸು ನಿಮ್ಮ ಬಾಗಿಲು ತಟ್ಟುತ್ತವೆ. ನೀವು ಭೌತಿಕ …
Read More »
admin
September 12, 2019
ದೇಶ-ವಿದೇಶ, ಸುದ್ದಿ
ಹೈದರಾಬಾದ್: ಮಾಜಿ ಶೆಟ್ಲರ್ ಹಾಗೂ ಭಾರತದ ಯಶಸ್ವಿ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಗಾಡಿಯಂ ಸ್ಪೋರ್ಟೋಪಿಯಾ ಎಂಬ ಭಾರತದ ಮೊದಲ ವಿಶ್ವಮಟ್ಟದ ಕ್ರೀಡಾ ಶಾಲೆಯನ್ನು 18 ಎಕರೆ ಪ್ರದೇಶದಲ್ಲಿ ತೆರೆಯುವ ಮೂಲಕ ಕ್ರೀಡಾಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದ್ದಾರೆ.ಕ್ರೀಡೆ ಮಕ್ಕಳಲ್ಲಿ ಶಿಸ್ತು ಕಲಿಸುವುದರ ಜೊತೆಗೆ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಗೋಪಿಚಂದ್ರ ಈ ಕ್ರೀಡಾ ಅಕಾಡೆಮಿ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಮಹತ್ವ ನೀಡಿ ವಿಶ್ವಮಟ್ಟದ ಕ್ರೀಡಾಪಟುಗಳನ್ನು ತಯಾರು …
Read More »
admin
September 12, 2019
ದೇಶ-ವಿದೇಶ, ಸುದ್ದಿ
ನವದೆಹಲಿ: ಕೇಂದ್ರ ಮಾಜಿ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ (67) ಅವರು ಹೃದಯಾಘಾತದಿಂದ ಮಂಗಳವಾರ ರಾತ್ರಿ ವಿಧಿವಶರಾಗಿದ್ದಾರೆ.ಸುಷ್ಮಾ ಸ್ವರಾಜ್ ಅವರ ಆರೋಗ್ಯದಲ್ಲಿ ಮಂಗಳವಾರ ರಾತ್ರಿ ಏರುಪೇರು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ತಕ್ಷಣವೇ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಸುಷ್ಮಾ ಸ್ವರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿಯ ಅನೇಕ ನಾಯಕರು ಏಮ್ಸ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
Read More »
admin
September 12, 2019
ದೇಶ-ವಿದೇಶ, ಸುದ್ದಿ
.ವಿದೇಶಾಂಗ ಸಚಿವೆ ಮತ್ತು ಬಿಜೆಪಿ ಸ್ಟಾಲ್ವರ್ಟ್ ಸುಷ್ಮಾ ಸ್ವರಾಜ್ ಹೃದಯಾಘಾತದಿಂದ ನಿಧನರಾದರು. ಸುಷ್ಮಾ ಸ್ವರಾಜ್ ಅವರು 2016 ರಲ್ಲಿ ಮೂತ್ರಪಿಂಡ ಕಸಿ ಮಾಡಿಸಿ ಕೊಂಡಿದ್ದರು ಮತ್ತು ಆರೋಗ್ಯದ ಕಾರಣಗಳಿಗಾಗಿ ಈ ವರ್ಷದ ಆರಂಭದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆಯಿಂದ ಹೊರಗುಳಿದಿದ್ದರು. ಮಾಜಿ ವಿದೇಶಾಂಗ ಸಚಿವೆ ಮತ್ತು ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಮಂಗಳವಾರ ರಾತ್ರಿ ನಿಧನರಾದರು. ವಯಸ್ಸು 67. ಬಿಜೆಪಿಯ ಹಿರಿಯ ಮುಖಂಡರಾದ ಸುಷ್ಮಾರವರನ್ನು ರಾತ್ರಿ 9: 30 ರ …
Read More »
admin
September 12, 2019
ದೇಶ-ವಿದೇಶ, ಸುದ್ದಿ
ಲಂಡನ್:ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನ ಕೇವಲ 85ರನ್ಗಳಿಗೆ ಆಲೌಟ್ ಮಾಡಲು ಮೂಲಕ ಗೆಲುವಿನ ಕೇಕೆ ಹಾಕುವ ಉತ್ಸಾಹದಲ್ಲಿದ್ದ ಐರ್ಲೆಂಡ್ ತಂಡಕ್ಕೆ 2ನೇ ಇನ್ನಿಂಗ್ಸ್ನಲ್ಲಿ ತಿರುಗೇಟು ನೀಡಿರುವ ಆಂಗ್ಲ ಪಡೆ 143ರನ್ಗಳ ಗೆಲುವು ದಾಖಲು ಮಾಡಿದೆ.ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡಗಳಿಸಿದ್ದ 85ರನ್ಗಳಿಗೆ ಪ್ರತ್ಯುತ್ತರವಾಗಿ ಐರ್ಲೆಂಡ್ 207ರನ್ಗಳಿಕೆ ಮಾಡಿತ್ತು. ಆದರೆ 2ನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 303ರನ್ಗಳಿಕೆ ಮಾಡಿ ಎದುರಾಳಿ ತಂಡದ ಗೆಲುವಿಗಾಗಿ 182 ರನ್ಗಳ ಗುರಿ ನೀಡಿತ್ತು. …
Read More »