ಮೈಸೂರು: ವಿಜಯ ದಶಮಿ ಹಿನ್ನೆಲೆಯಲ್ಲಿ ಅರಮನೆಯ ಶ್ವೇತ ವರಹ ದೇವಸ್ಥಾನದಲ್ಲಿ ವಜ್ರ ಮುಷ್ಟಿ ಕಾಳಗಕ್ಕೆ ತಯಾರಿ ನಡೆದಿದೆ. ಜಟ್ಟಿ ಕಾಳಗಕ್ಕೆ ಎರಡು ಜೋಡಿ ಜಟ್ಟಿಗಳು ಸಿದ್ಧರಾಗಿದ್ದಾರೆ. ಚನ್ನಪ್ಪಟ್ಟಣ ಪ್ರವೀಣ್ ಜಟ್ಟಿ, ಮೈಸೂರು ಪ್ರದೀಪ್ ಜಟ್ಟಿ ನಡುವೆ ಕಾಳಾಗ ನಡೆಯಲಿದೆ. ಮತ್ತು ಬೆಂಗಳೂರಿನ ಪ್ರಮೋದ್ ಜಟ್ಟಿ ,
ಚಾಮರಾಜನಗರ ವೆಂಕಟೇಶ್ ಜಟ್ಟಿ ನಡುವೆ ಕಾಳಗ ನಡೆಯಲಿದೆ. ವಿಜಯದಶಮಿ ದಿನ ಜಟ್ಟಿಗಳು ಚಾಮುಂಡೇಶ್ವರಿ ದೇವಿಗೆ ಶಿರಭಾಗದಿಂದ ರಕ್ತಾರ್ಪಣೆ ಮಾಡಲಿದ್ದಾರೆ. ಮಟ್ಟಿ ಮೇಲೆ ಜಟ್ಟಿ ರಕ್ತ ಬಿದ್ದ ಮೇಲೆ ವಿಜಯದಶಮಿ ಮೆರವಣಿಗೆ ನಡೆಯಲಿದೆ. ವಜ್ರಮುಷ್ಠಿ ಕಾಳಗದ ನಂತರ ರಾಜ ಯಧುವೀರ್ ಒಡೆಯರು ವಿಜಯ ಯಾತ್ರೆ ಹೊರಡಲಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





