Breaking News

ಧಾರವಾಡ

ಕುಂದಗೋಳ ಎಪಿಎಂಸಿ ಕಚೇರಿ ಸಿಬ್ಬಂದಿ ಇಲ್ಲದೇ ಖಾಲಿ ಖಾಲಿ

ಕುಂದಗೋಳ : ಕುಂದಗೋಳ ಎಪಿಎಂಸಿ ಕಚೇರಿ ಸಿಬ್ಬಂದಿ ಇಲ್ಲದೇ ಖಾಲಿ ಖಾಲಿಯಾಗಿದೆ.ರೈತರ ಏಳೆ ವರ್ತಕರ ವಹಿವಾಟು ಗಮನಿಸಿ ತನ್ನ ವ್ಯಾಪ್ತಿಯ ವಾಣಿಜ್ಯ ಮಳಿಗೆ ಮತ್ತು ಗೋದಾಮುಗಳ ಮೇಲೆ ನಿಗಾ ಇಡಬೇಕಾದವರು ಯಾರು‌ ಇಲ್ಲದಂತಾಗಿದೆ. ಕುಂದಗೋಳ ಪಟ್ಟಣದಲ್ಲಿ 23 ಎಕರೆ ವಿಸ್ತೀರ್ಣ ಹಾಗೂ ಸಂಶಿ ಉಪ ಎಪಿಎಂಸಿ 2 ಎಕರೆ ವಿಸ್ತೀರ್ಣ ಹೊಂದಿರುವ ಮಾರುಕಟ್ಟೆಗೆ ಸರ್ಕಾರದ ಅಧಿಸೂಚನೆ ಪ್ರಕಾರ 13 ಜನ ಅಧಿಕಾರಿ, ಸಿಬ್ಬಂದಿ ಬೇಕು. ಆದ್ರೇ ! ಕರ್ತವ್ಯದಲ್ಲಿ ಇರೋದು …

Read More »

ಕುಂದಗೋಳದಲ್ಲಿ ಪ್ರಧಾನಿ ಹುಟ್ಟುಹಬ್ಬ ಆಚರಣೆ

ಕುಂದಗೋಳ : ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದ ಬಸವೇಶ್ವರ ದೇವರಿಗೆ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಂಗನವಾಡಿ ಮಕ್ಕಳಿಗೆ ಮೋದಿ ಹೆಸರಿನಲ್ಲಿ ಅಂಕಲಿಪಿ ಹಾಗೂ ಸಿಹಿ ವಿತರಿಸುವ ಮೂಲಕ ದೇಶದ ಪ್ರಧಾನಿ ಜನ್ಮದಿನವನ್ನು ಹಳ್ಳಿಯಲ್ಲಿ ವಿಶೇಷವಾಗಿ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳು ಉಪಸ್ಥಿತರಿದ್ದರು.

Read More »

ವಿಶ್ವಕರ್ಮರು ರೈತರ ಬೆನ್ನೆಲುಬು : ಕೋನರಡ್ಡಿ

ನವಲಗುಂದ: ವಿಶ್ವಕರ್ಮರು ರೈತರ ಬೆನ್ನೆಲುಬು ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಅವರ ಅವಶ್ಯಕತೆ ಇರುತ್ತದೆ. ಆದರೆ ಆರ್ಥಿಕ ಪರಿಸ್ಥಿತಿ ತಕ್ಕಂತೆ ಉತ್ತಮ ಗುಣಮಟ್ಟದಲ್ಲಿ ಇಲ್ಲಾ ಆದ್ದರಿಂದ ಸರಕಾರದ ಸೌಲಭ್ಯಗಳನ್ನು ಪಡೆಯಿರಿ ವಿಶ್ವಕರ್ಮರು ಅತಿ ಶ್ರಮಿಕ ಜೀವಿಗಳು ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು. ಅವರು ತಹಶೀಲ್ದಾರರ ಕಾರ್ಯಾಲಯದಲ್ಲಿ ನೆಡೆದ ತಾಲೂಕಿನ ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿ ಉದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಮಾಜದ ತಾಲೂಕು ಅಧ್ಯಕ್ಷ ಗಂಗಾಧರ …

Read More »

ವಿಶ್ವಕರ್ಮ ಸಮುದಾಯದ ಐತಿಹಾಸಿಕ ಸ್ಮಾರಕಗಳು ಮಂದಿರಗಳಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಮೂಲ್ಯ: ಬಸವರಾಜ ಹೊರಟ್ಟಿ

ಧಾರವಾಡ : ವಿಶ್ವಕರ್ಮರು ವಿಶ್ವದ ಮೊದಲ ಶಿಲ್ಪಿಗಳು. ಅವರ ಕ್ರಿಯಾಶೀಲತೆ, ಸೃಜನಶೀಲತೆ ವಿಶೇಷವಾದದ್ದು. ಆದರೆ ಇಂದಿನ ವಿಜ್ಞಾನ,ತಂತ್ರಜ್ಞಾನಗಳ ಬೆಳವಣಿಗೆಯಿಂದಾಗಿ ಸಮುದಾಯದ ಸೃಜನಶೀಲತೆ, ಕ್ರಿಯಾಶೀಲತೆ ಮರೆಯಾಗುತ್ತಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದರು. ಅವರು ನಗರದ ಆಲೂರು ವೆಂಕಟರಾವ್ ಸಾಂಸ್ಕøತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಭಗವಾನ ಭಗವಾನ ಶ್ರೀ ವಿಶ್ವಕರ್ಮ ಜಯಂತಿಯ ಅಂಗವಾಗಿ ಭಗವಾನ ಶ್ರೀ ವಿಶ್ವಕರ್ಮ ಅವರ …

Read More »

ಬಾಲಮಂದಿರದ ಮಕ್ಕಳನ್ನ ಸಮಾಜದ ಮುಖ್ಯ ವಾಹಿನಿಗೆ ತನ್ನಿ :ಸಂಗಮೇಶ ಬಬಲೇಶ್ವರ

ಧಾರವಾಡ : ಬಾಲಮಂದಿರದ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ನಾಗರೀಕ ಸಮಾಜದಲ್ಲಿರುವ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ, ಆ ಒಂದು ಪ್ರಯತ್ನದ ಭಾಗವಾಗಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ರಾಜ್ಯಮಟ್ಟದ ಮಕ್ಕಳ ಕಥಾ ಕಮ್ಮಟವನ್ನು ನಾಡಿನ ಬಾಲ ಮಂದಿರದ ಮಕ್ಕಳಿಗಾಗಿ ಏರ್ಪಡಿಸಿದ್ದೇವೆ. ಐದು ದಿನಗಳ ಕಾಲ ನಿಸರ್ಗದ ಮಡಿಲಲ್ಲಿ ಮಕ್ಕಳ ವ್ಯಕ್ತಿತ್ವ ಅರಳಲಿ ಎನ್ನುವ ಸದಾಶಯದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ, ಇಂಥ ಮಕ್ಕಳ ಸೇವೆ ಮಾಡುವ ಸೌಭಾಗ್ಯ ನನಗೆ ದೊರೆತಿದ್ದು …

Read More »

ರಸ್ತೆ ಅಭಿವೃದ್ಧಿ ಕಾಮಗಾರಿಕೆಗೆ ಪೂಜೆ

ಅಣ್ಣಿಗೇರಿ: ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮಸ್ಥರ ಬಹುದಿನ ಬೇಡಿಕೆಯಾದ ಮಂಟೂರ – ಬಂಡಿವಾಡ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು ಸಾರ್ವಜನಿಕರು ಈ ರಸ್ತೆಯನ್ನು ಅಭಿವೃದ್ಧಿ ಮಾಡಿಸುವಂತೆ ಶಾಸಕರಾದ ಕೋನರಡ್ಡಿ ಅವರ ಹತ್ತಿರ ಮನವಿ ಮಾಡಿದ್ದು ಸಾರ್ವಜನಿಕರ ಮನವಿಯ ಮೆರೆಗೆ ಇಂದು ಮಂಟೂರ-ಬಂಡಿವಾಡ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕ ಕೋನರಡ್ಡಿ ಅವರು ನೇರವೆರಿಸಿ ಚಾಲನೆ ನೀಡಿದ್ದರು.

Read More »

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಮಾನವ ಸರಪಳಿ ಯಶಸ್ವಿ

ಧಾರವಾಡ : ಸಂವಿಧಾನ, ಪ್ರಜಾಪ್ರಭುತ್ವ, ಮಾನವ ಹಕ್ಕು, ಶಿಕ್ಷಣ ಕ್ಷೇತ್ರಗಳಲ್ಲಿ ಸದಾ ತನ್ನದೇ ಆದ ಛಾಪು ಮೂಡಿಸುವ ಧಾರವಾಡ ಜಿಲ್ಲೆ ಇಂದಿನ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಭಾಗವಹಿಸುವ ಮೂಲಕ ರಾಜ್ಯಕ್ಕೆ ಪ್ರಥಮ ದಾಖಲೆ ನಿರ್ಮಿಸಿದೆ. ಇಂದಿನ ಮಾನವ ಸರಪಳಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸರಕಾರಿ ನೌಕರರು, ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಸೇರಿದಂತೆ ಸುಮಾರು 95 ಸಾವಿರ ಮಂದಿ ಪಾಲ್ಗೊಂಡು ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಿದರು. ಪ್ರಜಾಪ್ರಭುತ್ವ ದಿನಾಚರಣೆಗೆ ರಾಜ್ಯದ 31 ಜಿಲ್ಲೆಗಳಿಂದ …

Read More »

ಬೃಹತ್ ಮಾನವ ಸರಪಳಿ: ಧಾರವಾಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ

ಧಾರವಾಡ : ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವ ದೊರೆಯುವಂತೆ ಮಾಡಿದ್ದಾರೆ. ಪ್ರತಿಯೊಬ್ಬರೂ ದೇಶದ ಏಕತೆಯನ್ನು ಕಾಪಾಡಿಕೊಂಡು ಹೋಗಬೇಕು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋμï ಲಾಡ್ ಹೇಳಿದರು. ಇಂದು ಕರ್ನಾಟಕ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೃಹತ್ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಜಾಪ್ರಭುತ್ವವು ಸ್ವಾತಂತ್ರ್ಯ, …

Read More »

ಪಠ್ಯಕ್ರಮಗಳಲ್ಲಿ ಹಿಂದಿ ಭಾಷೆ ಹೇರಿಕೆಯನ್ನು ನಿಲ್ಲಿಸಬೇಕು ಎಂದು ಪ್ರತಿಭಟನೆ

ಧಾರವಾಡ: ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕರ್ನಾಟಕದದಲ್ಲಿರುವ ಕೇಂದ್ರ ಸರ್ಕಾರದ ಕಚೇರಿಗಳು ಮತ್ತು ಶಾಲಾ ಪಠ್ಯಕ್ರಮಗಳಲ್ಲಿ ಹಿಂದಿ ಭಾಷೆ ಹೇರಿಕೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಂವಿಧಾನದ 343 ರಿಂದ 351ನೇ ವಿಧಿ ರದ್ದುಪಡಿಸಿ ಎಲ್ಲ ಭಾಷೆಗಳಿಗೆ ಒಕ್ಕೂಟದ ದೃಷ್ಟಿಯಿಂದ ಸಮಾನ ಎಂದು ಸಾರಬೇಕು. ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಕೇಂದ್ರ ಸರ್ಕಾರಿ ಇಲಾಖೆಗಳು ಮತ್ತು ಉದ್ಯಮಗಳಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು, ಪತ್ರ ವ್ಯವಹಾರ …

Read More »

ಸೆ. 21 ರಿಂದ ರೈತರ ಜಾತ್ರೆ ಪ್ರಾರಂಭ

ಧಾರವಾಡ: ಪ್ರಸಕ್ತ ವರ್ಷ ಕೂಡ ಈ ರೈತರ ಜಾತ್ರೆ ಸೆಪ್ಟೆಂಬರ್ 21 ರಿಂದ ಆರಂಭಗೊಳ್ಳಲಿದೆ. ಸೆ.21 ರಂದು ಬೀಜ ಮೇಳ ಆರಂಭವಾದರೆ ಸೆ.22ಕ್ಕೆ ಕೃಷಿ ಮೇಳಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಈ ಕೃಷಿ ಮೇಳದ ಉದ್ಘಾಟನೆಗೆ ಆಗಮಿಸಲಿದ್ದಾರೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್‌.ಪಾಟೀಲ ಹೇಳಿದರು. ಪ್ರಸಕ್ತ ವರ್ಷ ಈ ಕೃಷಿ ಮೇಳವನ್ನು ಹವಾಮಾನ ವೈಪರಿತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ಎಂಬ …

Read More »