ನವದೆಹಲಿ : ಆರೋಗ್ಯ ಮತ್ತು ಜೀವ ವಿಮೆ ಕಂತುಗಳ ಮೇಲಿನ ತೆರಿಗೆ ದರವನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.
ಇಂದು ರಾಜಸ್ಥಾನದ ಜೈಸಲ್ಮೇರ್ ನಲ್ಲಿರುವ GST ಮಂಡಳಿ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 55ನೇ GST ಮಂಡಳಿ ಸಭೆ ನಡೆಸಲಿದ್ದಾರೆ.
ಈ ಸಭೆಯಲ್ಲಿ ವಿವಿಧ ರಾಜ್ಯಗಳ ಹಣಕಾಸು ಸಚಿವರು ಪಾಲ್ಗೊಳ್ಳಲಿದ್ದಾರೆ. 148 ವಸ್ತುಗಳ ದರ ಬದಲಾವಣೆ ಕುರಿತೂ ಮೀಟಿಂಗ್ನಲ್ಲಿ ಚರ್ಚೆ ನಡೆಯಲಿದೆ ಎಂದು ವರದಿಯಾಗಿದೆ.
ಇನ್ನು ಪ್ರಸ್ತುತ ಶೇ.18 ಇರುವ ಆಹಾರ ಡೆಲಿವರಿ ಮಾಡುವ ಸ್ವಿಗ್ಗಿ, ಜೋಮೆಟೊ ಮೇಲಿನ ತೆರಿಗೆ ದರವನ್ನೂ ಶೆ.5ಕ್ಕ ಕಡಿಗೊಳಿಸುವ ವಿಚಾರವೂ ಸಭೆಯಲ್ಲಿ ಪ್ರಸ್ತಾಪವಾಗುವ ನಿರೀಕ್ಷೆ ಇದೆ.
ಇದಲ್ಲದೇ ಹಿರಿಯ ನಾಗರಿಕರು ಪಾವತಿಸುತ್ತಿರುವ ಆರೋಗ್ಯ ವಿಮೆ ತೆರಿಗೆ ಮುಕ್ತವಾಗಬೇಕು ಎಂಬ ವಿಷಯವೂ ಚರ್ಚೆಗೆ ಬರಬಹುದು ಎನ್ನಲಾಗುತ್ತಿದೆ. ಇದೊರಂದಿಗೆ ಎಲೆಕ್ಟ್ರಿಕ್ ವಾಹನ ಸೇರಿ ಪೆಟ್ರೋಲ್, ಡೀಸೆಲ್ನ ಸಣ್ಣ ವಾಹನಗಳ ಮೇಲಿನ ಬೆಲೆಯನ್ನೂ ಶೆ.12ರಿಂದ ಶೇ.18ಕ್ಕೇರಿಸುವ ಕುರಿತಾಗಿಯೂ ಸಭೆಯಲ್ಲಿ ಚರ್ಚಿಸವು ಸಾಧ್ಯತೆಗಳೂ ಇವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

