Breaking News

ಧಾರವಾಡ

ವಕ್ಪ್ ಆಸ್ತಿಯ ಪ್ರಕರಣಗಳನ್ನು ಒಂದು ತಿಂಗಳಲ್ಲಿ ಪರಿಹರಿಸಿ: ಸಚಿವ ಜಮೀರ ಅಹ್ಮದ ಸೂಚನೆ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ 2453 ವಕ್ಫ ಆಸ್ತಿಗಳಿದ್ದು ಇವುಗಳಲ್ಲಿ 481 ಪ್ರಕರಣಗಳು ಮಾತ್ರ ವಿವಿಧ ಹಂತಗಳಲ್ಲಿ ಬಾಕಿ ಇವೆ. ಇವುಗಳನ್ನು ಬೇಗ ಪರಿಹರಿಸಬೇಕು. ಉಳಿದ ಜಿಲ್ಲೆಗಳಿಗೆ ಹೋಲಿಸಿದಾಗ ವಕ್ಪ ಆಸ್ತಿಗಳ ಸಮೀಕ್ಷೆ, ರಕ್ಷಣೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಉತ್ತಮ ಕೆಲಸವಾಗಿದೆ ಎಂದು ವಸತಿ, ವಕ್ಪ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಬಿ.ಝಡ್. ಜಮೀರ ಅಹ್ಮದ ಅವರು ಹೇಳಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಧಾರವಾಡ ಮತ್ತು ಉತ್ತರ ಕನ್ನಡ …

Read More »

ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

ಧಾರವಾಡ : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ರಾಜೀವಗಾಂಧಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಧಾರವಾಡ ಸಪ್ತಾಪುರ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2024 – 25 ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ ಸಿಂದಗಿ, ಮಂಜುನಾಥ ಅಡಿವೇರ, ರಾಧಾಕೃಷ್ಣನ್, ಜಿ. ಜಿ. ಹಿರೇಮಠ, ಬಸವರಾಜ ತಾಳಿಕೋಟಿ, ಶೋಭಾ …

Read More »

ವಿವಿಧ ಬೇಡಿಕೆಗಳಿಗಾಗಿ ತಹಶೀಲ್ದಾರ ಮುಖಾಂತರ ಸಿಎಂ ಮನವಿ ಸಲ್ಲಿಕೆ

ನವಲಗುಂದ: ನಿವೃತ್ತ ನೌಕರರ ವತಿಯಿಂದ ವಿವಿಧ ಬೇಡಿಕೆಗಳಿಗಾಗಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರು ಹಾಗೂ ನಿವೃತ್ತ ಶಿಕ್ಷಕರಾದ ಎನ್.ಎನ್.ಹಾಲಿಗೇರಿ 7 ನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಅನ್ಯಾಯವಾಗಿರುವ ನ್ಯೂನತೆಗಳನ್ನು ಸರಿಪಡಿಸಿ ಆರ್ಥಿಕ ಸೌಲಭ್ಯಗಳನ್ನು ಒದಗಿಸಬೇಕೆಂದು ಪರಿವರ್ತಿತ ಪಿಂಚಣೆ, ನಿವೃತ್ತಿ ಅಥವಾ ಮರಣ ಉಪಧಾನ ಮತ್ತು ಗಳಿಕೆ ರಜೆ ಸೌಲಭ್ಯವನ್ನು ನೀಡಬೇಕೆಂದು ಹೇಳಿದರು. ನಿವೃತ್ತಿ ನೌಕರರನ್ನು ಸರಕಾರ ಕಡೇಗಣಿಸಬಾರದು ನಮ್ಮ ಬೇಡಿಕೆಗಳನ್ನು ಆದಷ್ಟು …

Read More »

ನೀಲಮ್ಮನ ಕೆರೆಗೆ ಕೋನರಡ್ಡಿ ಭೇಟಿ

ನವಲಗುಂದ: ನಗರದ ಪ್ರತಿಷ್ಠಿತ ನೀಲಮ್ಮನ ಕೆರೆಯ ಅಭಿವೃದ್ಧಿ ಕಾರ್ಯ ಪ್ರಾರಂಭಗೊಂಡಿದ್ದು, ಶಾಸಕ ಎನ್.ಎಚ್.ಕೋನರಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಸಣ್ಣ ನೀರಾವರಿ ಕಾರ್ಯನಿರ್ವಾಹಕ ಅಭಿಯಂತರಾದ ಶಿಗ್ಗಾವಿ ಅವರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಶರಣು ಪೂಜಾರ ಸೇರಿದಂತೆ ಅನೇಕರು ಇದ್ದರು.

Read More »

ಸಂಪೂರ್ಣ ಫಲಿತಾಂಶಕ್ಕೆ ವಿದ್ಯಾರ್ಥಿ, ಶಿಕ್ಷಕ ಮತ್ತು ಪಾಲಕರ ಪಾತ್ರ ಮುಖ್ಯ; ಡಿಸಿ ದಿವ್ಯ ಪ್ರಭು

ಧಾರವಾಡ : ಸಮಗ್ರವಾದ ಶೈಕ್ಷಣಿಕ ಬದಲಾವಣೆ ಮತ್ತು ಪ್ರತಿ ಶಾಲೆ ಪ್ರಸಕ್ತ ವರ್ಷ ಸಂಪೂರ್ಣ ಫಲಿತಾಂಶ ಪಡೆಯುವಲ್ಲಿ ಶಾಲೆಯ ವಿದ್ಯಾರ್ಥಿ, ಶಿಕ್ಷಕ ಮತ್ತು ಪಾಲಕರ ಪಾತ್ರ ಮುಖ್ಯವಾಗಿದೆ. ಇದನ್ನು ಸಂಯೋಜಿಸಿ, ಗುರಿ ಸಾಧಿಸುವಲ್ಲಿ ಶಾಲೆಯ ಹೆಡ್ ಮಾಸ್ಟರ್ ಜವಾಬ್ದಾರಿ ಮಹತ್ವದ್ದಾಗಿದ್ದು, ಶಾಲೆಯನ್ನು ಪಕ್ಕಾ ಲೀಡ್ ಮಾಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಪ್ರೌಢಶಾಲಾ ಶಿಕ್ಷಕರ ಸಂಘಗಳ ಜಿಲ್ಲಾ ಪ್ರತಿನಿಧಿಗಳ ಸಭೆ ಉದ್ದೇಶಿಸಿ, …

Read More »

ಜನನ, ಮರಣಗಳನ್ನು ಕಡ್ಡಾಯವಾಗಿ ಜನನ ಮರಣ ಅಧಿನಿಯಮದಡಿ 21 ದಿನಗಳ ನಿಗಧಿತ ಅವಧಿಯೊಳಗೆ ನೋಂದಣಿ ಮಾಡಿ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ : ಜಿಲ್ಲೆಯ ಎಲ್ಲ ಸರಕಾರಿ, ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಜರುಗುವ ಜನನ, ಮರಣ ಘಟನೆಗಳನ್ನು ಕಡ್ಡಾಯವಾಗಿ ಜನನ ಮರಣ ಅಧಿನಿಯಮದಡಿ 21 ದಿನಗಳ ನಿಗಧಿತ ಅವಧಿಯೊಳಗೆ ನೋಂದಣಿ ಕಾರ್ಯ ಕೈಗೊಳ್ಳುವುದು ಯಾವುದೇ ತಡ ನೊಂದಣಿಗೆ ಅವಕಾಶ ನೀಡದೇ ಸಾರ್ವಜನಿಕರಿಗೆ ಜನನ ಮರಣದ ಮೊದಲನೇ ಪ್ರತಿಯನ್ನು ಉಚಿತವಾಗಿ ನೀಡುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸೂಚಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸಭೆ …

Read More »

ಶಾಲಾ ಮಕ್ಕಳ್ಳಿಗೆ ಶೂ ಮತ್ತು ಸಾಕ್ಸ್ ಉಚಿತವಾಗಿ ವಿತರಣೆ

ನವಲಗುಂದ: ರಾಜ್ಯ ಸರ್ಕಾರದ ವಿದ್ಯಾ ವಿಕಾಸ ಯೋಜನೆಯಡಿ ನಗರದ ಸರ್ಕಾರಿ ಮಾದರಿ ಕೇಂದ್ರ ಶಾಲೆ ನಂ-3ರಲ್ಲಿ ಶಾಲಾ ಮಕ್ಕಳಿಗೆ ಬಾಟಾ ಕಂಪನಿಯ ಶೂ ಮತ್ತು ಸಾಕ್ಸ್ ಉಚಿತವಾಗಿ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಮುತ್ತಪ್ಪ ಬಿಸನಾಳ, ಮಾಜಿ ಅಧ್ಯಕ್ಷ ಅಡಿವೆಪ್ಪ ಶಿರಸಂಗಿ, ಎಸ್‌.ಡಿ.ಎಂ.ಸಿ ಸದಸ್ಯರಾದ ಕಾಶೀಮಸಾಬ ಮಚಲಿಬಂದರ, ಬಾಬುಶ್ಯಾ ಮಕಾಂದಾರ, ಮಾಬುಸಾಬ ಯರಗುಪ್ಪಿ, ಮಲ್ಲಿಕಾರ್ಜುನ ಬೆಳವಡಿ, ಮುಖ್ಯ ಶಿಕ್ಷಕ ಎಸ್.ಎಸ್.ಜೋಶಿ, ನಿವೃತ್ತ ಮುಖ್ಯ ಶಿಕ್ಷಕ ಎನ್‌.ಎನ್‌. ಹಾಲಿಗೇರಿ, …

Read More »

ಐತಿಹಾಸಿಕ ಗುಡ್ಡ ನಾಶ ಮಾಡುತ್ತಿರುವವರ ವಿರುದ್ಧ ಕ್ರಮ ಜರಿಗಿದುವಂತೆ ಮನವಿ ಸಲ್ಲಿಕೆ

ನವಲಗುಂದ : ಅಕ್ರಮವಾಗಿ ಪಟ್ಟಣದ ಗುಡ್ಡದ ಮಣ್ಣು ಅಗೆದು ಐತಿಹಾಸಿಕ ಗುಡ್ಡ ನಾಶ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ಪೊಲೀಸ್ ಇಲಾಖೆ, ಪುರಸಭೆ ಹಾಗೂ ತಹಸೀಲ್ದಾರ್‌ಗೆ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮನವಿ ಸಲ್ಲಿಸಿದರು. ಈ ವೇಳೆ ಮಲ್ಲಿಕಾರ್ಜುನ ಸಂಕನಗೌಡ, ಪವನ ಪಾಟೀಲ, ಜಯಪ್ರಕಾಶ ಬದಾಮಿ, ವಿನಾಯಕ ದಾಡಿಭಾವಿ, ಸೋಮು ವಡ್ಡರ, ಮಲ್ಲಯ್ಯ ಸುಬೇದಾರಮಠ, ಕೃಷ್ಣ ಬೋವಿ

Read More »

ವೈದ್ಯಕೀಯ ಸಿಬ್ಬಂದಿ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದ ಖಂಡಿಸಿ ಪ್ರತಿಭಟನೆ

ಧಾರವಾಡ: ಪಶ್ಚಿಮ ಬಂಗಾಳದಲ್ಲಿ ವೈದ್ಯಕೀಯ ಸಿಬ್ಬಂದಿ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದ ಪ್ರಕರಣ ಖಂಡಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು. ವೈದ್ಯಕೀಯ ಸಿಬ್ಬಂದಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಪ್ರಕರಣ ಅಮಾನವೀಯ ಕೃತ್ಯವಾಗಿದೆ. ಮಹಿಳೆಯರಿಗೆ ರಕ್ಷಣೆ ನೀಡಬೇಕು, ಅಶ್ಲೀಲ ಸಿನಿಮಾ ಸಾಹಿತ್ಯ ನಿಷೇಧಿಸಿ ಎಂದು ಪ್ರತಿಭಟನಾ ನಿರತ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಸದಸ್ಯರು ಆಗ್ರಹಿಸಿದರು.

Read More »

ಎಂ.ಆ‌ರ್.ಪಾಟೀಲಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುತ್ತಪ್ಪ ಅಣ್ಣಿಗೇರಿ ನೇತೃತ್ವದಲ್ಲಿ ಸನ್ಮಾನ

ಕುಂದಗೋಳ : ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಲು ತಮ್ಮ ಸಹಕಾರ ನೀಡಿದ್ದಕ್ಕಾಗಿ ಶಾಸಕ ಎಂ.ಆ‌ರ್.ಪಾಟೀಲ ಅವರನ್ನೂ ಕುಂದಗೋಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುತ್ತಪ್ಪ ಅಣ್ಣಿಗೇರಿ ನೇತೃತ್ವದಲ್ಲಿ ಸನ್ಮಾನ ಮಾಡಲಾಯಿತು. ಕುಂದಗೋಳ ಪ್ರವಾಸಿ ಮಂದಿರದಲ್ಲಿ ಕುಂದಗೋಳ ತಾಲೂಕಿನ ಸರ್ಕಾರಿ ನೌಕರರ ಸಂಘದ ಸರ್ವರೂ ಒಟ್ಟಾಗಿ ಶಾಸಕರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಶಾಸಕರು ಮಾತನಾಡಿ ನೌಕರರ ಅಭಿವೃದ್ಧಿಗೆ ಶ್ರಮಿಸಿದ್ದೇವೆ, ನೌಕರರು ಸಾರ್ವಜನಿಕರಿಗೆ ಉತ್ತಮ …

Read More »